ಹಣಕಾಸು ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್‌ ಲೈನ್ ಶಿಕ್ಷಣವು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ: ಆರ್ಥಿಕ ಸಮೀಕ್ಷೆ 2020-21

ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್‌ ಫೋನ್‌ ಹೊಂದಿರುವ ಶಾಲಾ ವಿದ್ಯಾರ್ಥಿಗಳ ಪ್ರಮಾಣವು 2018 ರಲ್ಲಿದ್ದ 36.5% ರಿಂದ 2020 ರಲ್ಲಿ 61.8% ಕ್ಕೆ ಏರಿದೆ

Posted On: 29 JAN 2021 3:43PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಶಾಲಾ ಶಿಕ್ಷಣವು ದೊಡ್ಡ ಪ್ರಮಾಣದಲ್ಲಿ ಪ್ರಗತಿಯನ್ನು ಕಂಡಿತು ಎಂದು ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2020-21 ಹೇಳಿದ್ದಾರೆ. ಅಕ್ಟೋಬರ್ 2020 ರಲ್ಲಿ ಬಿಡುಗಡೆಯಾದ ವಾರ್ಷಿಕ ಸ್ಥಿತಿ ಶಿಕ್ಷಣ ವರದಿ (.ಎಸ್..ಆರ್.) 2020 ವೇವ್ -1 (ಗ್ರಾಮೀಣ) ಉಲ್ಲೇಖಿಸಿ, ಸಮೀಕ್ಷೆಯು ಗ್ರಾಮೀಣ ಭಾರತದಲ್ಲಿ ಸ್ಮಾರ್ಟ್‌ ಫೋನ್‌ ಹೊಂದಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ದಾಖಲಾದ ಮಕ್ಕಳ ಶೇಕಡಾವಾರು ಪ್ರಮಾಣವು 2018 ರಲ್ಲಿ ಶೇಕಡಾ 36.5 ರಿಂದ 2020ರಲ್ಲಿ ಶೇಕಡಾ 61.8 ಕ್ಕೆ ಏರಿದೆ ಎಂದು ಹೇಳಿದರುಉತ್ತಮವಾಗಿ ಬಳಸಿಕೊಂಡರೆ, ಗ್ರಾಮೀಣ ಮತ್ತು ನಗರ, ಲಿಂಗ, ವಯಸ್ಸು ಮತ್ತು ಆದಾಯ ಗುಂಪುಗಳ ನಡುವಿನ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವುದರಿಂದ ಶೈಕ್ಷಣಿಕ ಫಲಿತಾಂಶಗಳಲ್ಲಿನ ಅಸಮಾನತೆಗಳು ಕಡಿಮೆಯಾಗಬಹುದು ಎಂದು ಸಮೀಕ್ಷೆ ಶಿಫಾರಸು ಮಾಡಿದೆ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕಲಿಕೆಗೆ ಅನುಕೂಲವಾಗುವಂತೆ, ಮಕ್ಕಳಿಗೆ ಶಿಕ್ಷಣವನ್ನು ಒದಗಿಸಿಕೊಡಲು ಸರ್ಕಾರ ಹಲವಾರು ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ದಿಕ್ಕಿನಲ್ಲಿ ಒಂದು ಪ್ರಮುಖ ಉಪಕ್ರಮವೆಂದರೆ ಪಿಎಂ -ವಿದ್ಯಾ ವಾಗಿದೆ. ಇದು ಡಿಜಿಟಲ್/ ಆನ್‌ಲೈನ್/ ಆನ್-ಏರ್ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಯತ್ನಗಳನ್ನು ಏಕೀಕರಿಸುವ ಒಂದು ಸಮಗ್ರ ಉಪಕ್ರಮವಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಬಹು-ಮಾದರಿಯ ಮತ್ತು ಶಿಕ್ಷಣಕ್ಕೆ ಸಮಾನ ಪ್ರವೇಶ ಅವಕಾಶವನ್ನು ಒದಗಿಸುವ ವ್ಯವಸ್ಥೆಯಾಗಿದೆ. ಎನ್‌...ಎಸ್‌.ಗೆ ಸಂಬಂಧಿಸಿದ ಸುಮಾರು ಆನ್‌ಲೈನ್ 92 ಕೋರ್ಸ್‌ಗಳು ಪ್ರಾರಂಭವಾಗಿದ್ದು, 1.5 ಕೋಟಿ ವಿದ್ಯಾರ್ಥಿಗಳು ಸ್ವಯಂ ಎಂ...ಸಿಗಳ ಅಡಿಯಲ್ಲಿ ದಾಖಲಾಗಿದ್ದಾರೆ. ಕೋವಿಡ್-19 ಪರಿಣಾಮವನ್ನು ಕಡಿಮೆಗೊಳಿಸಲು ಡಿಜಿಟಲ್ ಉಪಕ್ರಮಗಳ ಮೂಲಕ ಆನ್‌ಲೈನ್ ಕಲಿಕೆಯನ್ನು ಉತ್ತೇಜಿಸಲು ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ರೂ.818.17 ಕೋಟಿ ಮತ್ತು ಸಮಾಗ್ರ ಶಿಕ್ಷಾ ಯೋಜನೆಯಡಿ ಆನ್‌ಲೈನ್ ಶಿಕ್ಷಕರ ತರಬೇತಿಗಾಗಿ ರೂ .267.86 ಕೋಟಿ ನೀಡಲಾಗಿದೆ. ಕೋವಿಡ್‌  ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ ಪ್ರಸ್ತುತ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ / ಸಂಯೋಜಿತ / ಡಿಜಿಟಲ್ ಶಿಕ್ಷಣವನ್ನು ಕೇಂದ್ರೀಕರಿಸಿ ಡಿಜಿಟಲ್ ಶಿಕ್ಷಣದ ಬಗ್ಗೆ ಪ್ರಗ್ಯಾತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜೊತೆಗೆ ಮಾನಸಿಕ ಬೆಂಬಲಕ್ಕಾಗಿ ನೀಡುವ ನಿಟ್ಟಿನಲ್ಲಿ ಆತ್ಮ ನಿರ್ಭರ್ ಭಾರತ್ ಅಭಿಯಾನದಡಿಯಲ್ಲಿ ಮನೋದರ್ಪನ್ ಉಪಕ್ರಮವನ್ನು ಕೂಡಾ ಸೇರಿಸಲಾಗಿದೆ.

ಮುಂದಿನ ಒಂದು ದಶಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಭಾರತ ಹೊಂದಿರುತ್ತದೆ ಎಂದು ಆರ್ಥಿಕ ಸಮೀಕ್ಷೆ 2020-21 ಅಭಿಪ್ರಾಯಪಟ್ಟಿದೆ. ಆದ್ದರಿಂದ, ಅವರಿಗೆ ಉತ್ತಮ-ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಮ್ಮ ಸಾಮರ್ಥ್ಯದಲ್ಲಿ  ನಮ್ಮ ದೇಶದ ಭವಿಷ್ಯವು(ರಾಷ್ಟ್ರೀಯ ಶಿಕ್ಷಣ ನೀತಿ, 2020) ನಿರ್ಧರಿಸಲ್ಪಡುತ್ತದೆ. ಯು-ಡಿಐಎಸ್ಇ 2018-19 ಪ್ರಕಾರ, 9.72 ಲಕ್ಷಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳ ಮೂಲಭೂತಸೌಕರ್ಯ ಗಮನಾರ್ಹವಾಗಿ ಸುಧಾರಿಸಿದೆ. ಪೈಕಿ 90.2 ರಷ್ಟು ಬಾಲಕಿಯರ ಶೌಚಾಲಯ, 93.7 ರಷ್ಟು ಬಾಲಕರ ಶೌಚಾಲಯ, 95.9 ರಷ್ಟು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿದೆ, 82.1 ರಷ್ಟು ಮಂದಿ ಶುದ್ಧತೆಯ ನೀರಿನ (ಕುಡಿಯುವ ನೀರು, ಶೌಚಾಲಯ ಮತ್ತು ಕೈ ತೊಳೆಯುವ) ಸೌಲಭ್ಯವನ್ನು ಹೊಂದಿದ್ದಾರೆ, 84.2 ಶೇಕಡಾ ವೈದ್ಯಕೀಯ ತಪಾಸಣೆ ಸೌಲಭ್ಯ, 20.7 ಶೇಕಡಾ ಕಂಪ್ಯೂಟರ್ ಮತ್ತು 67.4 ಶೇಕಡಾ ವಿದ್ಯುತ್ ಸಂಪರ್ಕ ಮತ್ತು 74.2 ಶೇಕಡಾ ಇತರ ಅಗತ್ಯ ಸೇವೆಗಳಲ್ಲಿ ಅವಕಾಶಗಳನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ.

ಭಾರತವು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಶೇಕಡಾ 96 ರಷ್ಟು ಸಾಕ್ಷರತೆಯ ಮಟ್ಟವನ್ನು ಸಾಧಿಸಿದೆ ಎಂದು ಸಮೀಕ್ಷೆ ಹೇಳಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌.ಎಸ್‌.ಎಸ್) ಪ್ರಕಾರ, ಅಖಿಲ ಭಾರತ ಮಟ್ಟದಲ್ಲಿ 7 ವರ್ಷ ಮತ್ತು ಮೇಲ್ಪಟ್ಟ ವ್ಯಕ್ತಿಗಳ ಸಾಕ್ಷರತೆಯ ಪ್ರಮಾಣವು ಶೇಕಡಾ 77.7 ರಷ್ಟಿದೆ. ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮದ ಧಾರ್ಮಿಕ ಗುಂಪುಗಳು ಸೇರಿದಂತೆ ಎಸ್‌.ಸಿ, ಎಸ್‌.ಟಿ, .ಬಿ.ಸಿ ಸಾಮಾಜಿಕ ಗುಂಪುಗಳಲ್ಲಿ ಸ್ತ್ರೀ ಸಾಕ್ಷರತೆಯು ರಾಷ್ಟ್ರೀಯ ಸರಾಸರಿಗಿಂತ ಕೆಳಗಿದೆ.

ಸರ್ಕಾರದ ಶಾಲೆಗಳು ಮತ್ತು ವಿದ್ಯಾ ಸಂಸ್ಥೆಗಳಲ್ಲಿ ಕೈಗೆಟುಕುವ ಮತ್ತು ಸ್ಪರ್ಧಾತ್ಮಕ ರೀತಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು, ಕೇಂದ್ರ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020 ರಲ್ಲಿ ಘೋಷಿಸಿದೆ, ಹಾಗೂ ಇದು 34 ವರ್ಷದಷ್ಟು ಹಳೆಯ ಶಿಕ್ಷಣದ ರಾಷ್ಟ್ರೀಯ ನೀತಿ, 1986ರನ್ನು ಬದಲಾಯಿಸಿದೆ. ನೂತನ ಶಿಕ್ಷಣ ನೀತಿಯು ದೇಶದಲ್ಲಿನ ಎಲ್ಲಾ ಶಾಲೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಗಳಲ್ಲಿ ಪರಿಣಾಮಕಾರಿ ಪರಿವರ್ತನೆಯ ಸುಧಾರಣೆಗಳಿಗೆ ದಾರಿ ಮಾಡಿಕೊಡುವ ಗುರಿಯನ್ನು ಹೊಂದಿದೆ. ಎಲ್ಲಾ ವಿದ್ಯಾರ್ಥಿಗಳಿಗೆ, ಅವರ ವಾಸಸ್ಥಳ, ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಲೆಕ್ಕಿಸದೆ, ಅಂಚಿನಲ್ಲಿರುವ, ಹಿಂದುಳಿದ ಮತ್ತು ಕಡಿಮೆ ಪ್ರತಿನಿಧಿಸುವ ಗುಂಪುಗಳ ಮೇಲೆ ವಿಶೇಷ ಗಮನ ಹರಿಸುವುದು ಇದರ ನೂತನ ಶಿಕ್ಷಣ ನೀತಿಯ ಉದ್ದೇಶವಾಗಿದೆ. ಸಮಗ್ರ ಶಿಕ್ಷಣ, ಶಿಕ್ಷಕರ ಸಾಮರ್ಥ್ಯ ವೃದ್ಧಿ, ಡಿಜಿಟಲ್ ಶಿಕ್ಷಣದತ್ತ ಗಮನಹರಿಸುವುದು, ಶಾಲಾ ಮೂಲಸೌಕರ್ಯಗಳನ್ನು ಬಲಪಡಿಸುವುದು, ಬಾಲಕಿಯರ ಶಿಕ್ಷಣದತ್ತ ಗಮನಹರಿಸುವುದು, ಸೇರ್ಪಡೆ ಬಗ್ಗೆ ಗಮನಹರಿಸುವುದು, ಕ್ರೀಡೆ ಮತ್ತು ದೈಹಿಕ ಶಿಕ್ಷಣದತ್ತ ಗಮನಹರಿಸುವುದು, ಪ್ರಾದೇಶಿಕ ಸಮತೋಲನ ಮುಂತಾದವುಗಳು 2020-21 ಅವಧಿಯಲ್ಲಿ ಶಾಲಾ ಶಿಕ್ಷಣಕ್ಕಾಗಿ ಮಾಡಿರುವ  ಇತರ ಕೆಲವು ಕಾರ್ಯಕ್ರಮಗಳು ಮತ್ತು ಯೋಜನೆಗಳಾಗಿವೆ.

ಕೌಶಲ್ಯ ಅಭಿವೃದ್ಧಿ:

ಆರ್ಥಿಕ ಸಮೀಕ್ಷೆ 2020-21 ಪ್ರಕಾರ 15-59 ವರ್ಷ ವಯಸ್ಸಿನ ಉದ್ಯೋಗಿಗಳ ಪೈಕಿ ಕೇವಲ 2.4 ರಷ್ಟು ಜನರು ಔಪಚಾರಿಕ ವೃತ್ತಿಪರ/ ತಾಂತ್ರಿಕ ತರಬೇತಿಯನ್ನು ಪಡೆದಿದ್ದಾರೆ ಮತ್ತು ಇನ್ನೂ 8.9 ರಷ್ಟು ಉದ್ಯೋಗಿಗಳು ಅನೌಪಚಾರಿಕ ಮೂಲಗಳ ಮೂಲಕ ತರಬೇತಿ ಪಡೆದಿದ್ದಾರೆ. ಅನೌಪಚಾರಿಕ ತರಬೇತಿಯನ್ನು ಪಡೆದ ಶೇಕಡಾ 8.9 ರಷ್ಟು ಉದ್ಯೋಗಿಗಳಲ್ಲಿ, ಅತಿದೊಡ್ಡ ಭಾಗವನ್ನು ಉದ್ಯೋಗದ ಜೊತೆಗೆ ತರಬೇತಿ  (ಶೇಕಡಾ 3.3) ಮೂಲಕ ನೀಡಲಾಗಿದೆ, ನಂತರ ಸ್ಥಾನ ಸ್ವಯಂ-ಕಲಿಕೆ (ಶೇಕಡಾ 2.5) ಮತ್ತು ಆನುವಂಶಿಕ ಮೂಲಗಳ (ಶೇಕಡಾ 2.1) ಮತ್ತು ಇತರ ಮೂಲಗಳ (ಶೇಕಡಾ 1) ಕೌಶಚ್ಯಾಭಿವೃದ್ಧಿ ತರಬೇತಿಗಳಾಗಿವೆ.

ಔಪಚಾರಿಕ ತರಬೇತಿಯನ್ನು ಪಡೆಯುವ ಗಂಡು ಮತ್ತು ಹೆಣ್ಣು ಮಕ್ಕಳು ಹೆಚ್ಚು ಯ್ದ ತರಬೇತಿ ಕೋರ್ಸ್ ಎಂದರೆ ಅದು .ಟಿ-.ಟಿ..ಎಸ್., ನಂತರ ವಿದ್ಯುತ್-ಶಕ್ತಿ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್- ಕಾರ್ಯತಂತ್ರದ ಉತ್ಪಾದನೆ, ಆಟೋಮೋಟಿವ್, ಪುರುಷರಿಗೆ ಕಚೇರಿ ಮತ್ತು ವ್ಯಾಪಾರ - ವ್ಯವಹಾರ-ಸಂಬಂಧಿತ ಕೆಲಸಗಳು, ಅಲ್ಲದೆ, ಹೆಣ್ಣುಮಕ್ಕಳ ತರಬೇತಿ ಶಿಕ್ಷಣವೆಂದರೆ ಜವಳಿ ಕೈಮಗ್ಗ- ಉಡುಪುಗಳು, ಕಚೇರಿ ಮತ್ತು ವ್ಯವಹಾರ-ಸಂಬಂಧಿತ ಕೆಲಸ, ಆರೋಗ್ಯ ಮತ್ತು ಜೀವನ ವಿಜ್ಞಾನ ಮತ್ತು ಶಿಶುಪಾಲನಾ-ಪೋಷಣೆ-ಪೂರ್ವ ಶಾಲೆ ಮತ್ತು ಕಚೇರಿಗೆ ಸಂಬಂಧಿಸಿದ ಕೆಲಸ ಮುಂತಾದವುಗಳು ಸೇರಿದೆ.

ಕೌಶಲ್ಯ ಅಭಿವೃದ್ಧಿಗಾಗಿ ಇತ್ತೀಚೆಗೆ ಹಲವಾರು ನೀತಿ - ನಿಯಮಾವಳಿಗಳ ಸುಧಾರಣೆಗಳನ್ನು ಸರ್ಕಾರ ರೂಪಿಸಿದೆ. ಏಕೀಕೃತ ಕೌಶಲ್ಯ ನಿಯಂತ್ರಕವಾಗಿ ನೂತನ  “ವೃತ್ತಿಪರ ಶಿಕ್ಷಣ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ” (ಎನ್‌.ಸಿ.ವಿ..ಟಿ)ಯನ್ನು ಕಾರ್ಯರೂಪಕ್ಕೆ ತಂದಿದೆ. ಮೊದಲ ಬಾರಿಗೆ, ಹೆಚ್ಚು ವಿಶ್ವಾಸಾರ್ಹ ಪ್ರಮಾಣೀಕರಣಗಳು ಮತ್ತು ಮೌಲ್ಯಮಾಪನಗಳಿಗಾಗಿ ಪ್ರಶಸ್ತಿ ಮತ್ತು ಮೌಲ್ಯಮಾಪನ ಸಂಸ್ಥೆಗಳ ಮಾರ್ಗಸೂಚಿಗಳನ್ನು ಅಕ್ಟೋಬರ್‌, 2020 ರಲ್ಲಿ ಎಲ್ಲರಿಗೂ ಸೂಚನೆ ತಿಳಿಸಲಾಯಿತು. ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ 3.0 ಅನ್ನು ವಲಸಿಗರು ಸೇರಿದಂತೆ 8 ಲಕ್ಷ ಅಭ್ಯರ್ಥಿಗಳ ಕೌಶಲ್ಯದ ತಾತ್ಕಾಲಿಕ ಗುರಿಯೊಂದಿಗೆ 2020-21ರಲ್ಲಿ ದೇಶದಾದ್ಯಂತ ರೂಪಿಸಲಾಯಿತು. .ಟಿ..ಗಳ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು ಶ್ರೇಣೀಕರಣವನ್ನು ಕೈಗೊಳ್ಳಲಾಗಿದೆ. ಎನ್‌..ಪಿ, 2020 ಮೂಲಕ ಸಾಮಾನ್ಯ ಶಿಕ್ಷಣದಲ್ಲಿ ವೃತ್ತಿಪರ ಶಿಕ್ಷಣ ಮತ್ತು ತರಬೇತಿಯ (ವಿ..ಟಿ.) ಏಕೀಕರಣವು ದೊಡ್ಡ ಪ್ರಮಾಣದ ಉತ್ತೇಜನವನ್ನು ಪಡೆದಿದೆ, ಮುಂದಿನ 5 ವರ್ಷಗಳಲ್ಲಿ 50% ಶಾಲೆ ಮತ್ತು ಉನ್ನತ ಶಿಕ್ಷಣ ಅಭ್ಯರ್ಥಿಗಳು ವಿ..ಟಿ.ಗೆ ಸಮರ್ಥವಾಗಿ ಎದುರಿಸಲಿದ್ದಾರೆ ಹಾಗೂ ಸಂಪೂರ್ಣವಾಗಿ ಅವಕಾಶವನ್ನು ಪಡೆಯಲಿದ್ದಾರೆ.

***(Release ID: 1693360) Visitor Counter : 154