ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 31, ‘ಪ್ರಬುದ್ಧ ಭಾರತ’ದ 125ನೇ ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ

Posted On: 29 JAN 2021 2:04PM by PIB Bengaluru

1896 ರಲ್ಲಿ ಸ್ವಾಮಿ ವಿವೇಕಾನಂದ ಅವರು ಪ್ರಾರಂಭಿಸಿದ ರಾಮಕೃಷ್ಣ ಮಿಷನ್ ಮಾಸ ಪತ್ರಿಕೆ 'ಪ್ರಬುದ್ಧ ಭಾರತ' 125 ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮಾತನಾಡಲಿದ್ದಾರೆ. 2021 ಜನವರಿ 31 ರಂದು ಮಧ್ಯಾಹ್ನ 3.15 ಕ್ಕೆ ಪ್ರಧಾನಿಯವರ ಬಾಷಣ ಇರುತ್ತದೆ. ಕಾರ್ಯಕ್ರಮವನ್ನು  ಮಾಯಾವತಿಯ ಅದ್ವೈತ ಆಶ್ರಮ ಆಯೋಜಿಸಿದೆ.

'ಪ್ರಬುದ್ಧ ಭಾರತಕುರಿತು

ಭಾರತದ ಪ್ರಾಚೀನ ಆಧ್ಯಾತ್ಮದ ಸಂದೇಶವನ್ನು ಪ್ರಚಾರ ಮಾಡಲುಪ್ರಬುದ್ಧ ಭಾರತಪತ್ರಿಕೆ ಒಂದು ಪ್ರಮುಖ ಮಾಧ್ಯಮವಾಗಿದೆ. ಇದರ ಪ್ರಕಟಣೆಯನ್ನು ಚೆನ್ನೈನಿಂದ (ಹಿಂದಿನ ಮದ್ರಾಸ್) ಪ್ರಾರಂಭಿಸಲಾಯಿತು. ಅಲ್ಲಿ ಎರಡು ವರ್ಷಗಳವರೆಗೆ ಪತ್ರಿಕೆ ಪ್ರಕಟವಾಯಿತು. ನಂತರ ಅದನ್ನು ಅಲ್ಮೋರಾದಿಂದ ಪ್ರಕಟಿಸಲಾಯಿತು. ನಂತರ, ಏಪ್ರಿಲ್ 1899 ರಲ್ಲಿ, ಪತ್ರಿಕೆಯ ಪ್ರಕಟಣಾ ಸ್ಥಳವನ್ನು ಅದ್ವೈತ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಅಲ್ಲಿಂದಲೇ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿದೆ.

ಹಲವಾರು ಶ್ರೇಷ್ಠ ವ್ಯಕ್ತಿಗಳು ಭಾರತೀಯ ಸಂಸ್ಕೃತಿ, ಆಧ್ಯಾತ್ಮ, ತತ್ವಶಾಸ್ತ್ರ, ಇತಿಹಾಸ, ಮನೋವಿಜ್ಞಾನ, ಕಲೆ ಮತ್ತು ಇತರ ಸಾಮಾಜಿಕ ವಿಷಯಗಳ ಕುರಿತುಪ್ರಬುದ್ಧ ಭಾರತದಲ್ಲಿ ಬರೆದಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್, ಸೋದರಿ ನಿವೇದಿತಾ, ಶ್ರೀ ಅರಬಿಂದೋ, ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಮುಂತಾದವರು ಪತ್ರಿಕೆಗೆ ಬರೆದಿದ್ದಾರೆ.

ಅದ್ವೈತ ಆಶ್ರಮವು ತನ್ನ ವೆಬ್ಸೈಟ್ನಲ್ಲಿ ಸಂಪೂರ್ಣಪ್ರಬುದ್ಧ ಭಾರತ ಹಳೆಯ ಸಂಚಿಕೆಗಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

***



(Release ID: 1693292) Visitor Counter : 265