ಪ್ರಧಾನ ಮಂತ್ರಿಯವರ ಕಛೇರಿ

ಹವಾಮಾನ ಹೊಂದಾಣಿಕೆ ಶೃಂಗಸಭೆ 2021 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 25 JAN 2021 8:50PM by PIB Bengaluru

ಗೌರವಾನ್ವಿತರೇ,

ಹವಾಮಾನ ಹೊಂದಾಣಿಕೆ ಶೃಂಗಸಭೆಯನ್ನು ಭಾರತ ಸ್ವಾಗತಿಸುತ್ತದೆ ಮತ್ತು ಆ ಕಾರಣಕ್ಕಾಗಿ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಅವರ ನಾಯಕತ್ವವನ್ನು ಶ್ಲಾಘಿಸುತ್ತದೆ. 

ಹವಾಮಾನ ಹೊಂದಾಣಿಕೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಮಹತ್ವ ಪಡೆದುಕೊಂಡಿದೆ ಮತ್ತು ಅದು ಭಾರತದ ಅಭಿವೃದ್ಧಿಯ ಪ್ರಯತ್ನಗಳಿಗೆ ಅತ್ಯಂತ ಪ್ರಮುಖ ಅಂಶವಾಗಿದೆ.

ಈ ಕೆಳಗಿನ ಭರವಸೆಗಳನ್ನು ನಮಗೆ ನಾವೇ ನೀಡುತ್ತಿದ್ದೇವೆ.

  • ನಾವು ಕೇವಲ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಈಡೇರಿಸುವುದಿಲ್ಲ, ಅವುಗಳನ್ನು ಮೀರಿ ಕಾರ್ಯ ನಿರ್ವಹಿಸುತ್ತೇವೆ.
  • ನಾವು ಕೇವಲ ಪರಿಸರ ನಾಶವನ್ನು ತಪ್ಪಿಸುವುದೇ ಅಲ್ಲದೆ, ಅದನ್ನು ಬದಲಾಯಿಸಲಾಗುವುದು.
  • ನಾವು ಕೇವಲ ಹೊಸ ಸಾಮರ್ಥ್ಯಗಳನ್ನು ಸೃಷ್ಟಿಸುವುದೇ ಅಲ್ಲದೆ ಜಾಗತಿಕ ಒಳಿತಿನ ಏಜೆಂಟ್ ಗಳನ್ನಾಗಿ ರೂಪಿಸಲಾಗುವುದು.

ನಮ್ಮ ಕ್ರಿಯಗಳು ನಮ್ಮ ಬದ್ಧತೆಯನ್ನು ತೋರುತ್ತವೆ.

2030ರೊಳಗೆ ನಾವು 450 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದುವ ಗುರಿ ಹಾಕಿಕೊಂಡಿದ್ದೇವೆ.

ನಾವು ಎಲ್ಇಡಿ ದೀಪಗಳನ್ನು ಉತ್ತೇಜಿಸುತ್ತಿದ್ದೇವೆ ಮತ್ತು ವಾರ್ಷಿಕ 38 ಮಿಲಿಯನ್ ಟನ್ ಕಾರ್ಬನ್ ಡೈ ಆಕ್ಸೈಡ್  ಹೊರ ಉಗುಳುವುದನ್ನು ಉಳಿತಾಯ ಮಾಡಿದ್ದೇವೆ.

ನಾವು 2030ರೊಳಗೆ 26 ದಶಲಕ್ಷ ಹೆಕ್ಟೇರ್ ಬಂಜರು ಭೂಮಿಯನ್ನು ಮರು ಸ್ಥಾಪನೆ ಮಾಡುವ ಗುರಿ ಹೊಂದಿದ್ದೇವೆ.

ನಾವು 80 ಮಿಲಿಯನ್ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಅಡುಗೆ ಅನಿಲವನ್ನು ಒದಗಿಸುತ್ತೇವೆ.

ನಾವು 64 ಮಿಲಿಯನ್ ಕುಟುಂಬಗಳಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುತ್ತೇವೆ

ಮತ್ತು ನಮ್ಮ ಯೋಜನೆಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ.

ಅಂತಾರಾಷ್ಟ್ರೀಯ ಸೌರ ಮೈತ್ರಿ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿಗಳಿಂದಾಗಿ ಜಾಗತಿಕ ಹವಾಮಾನ ಪಾಲುದಾರಿಕೆಯ ಶಕ್ತಿಯನ್ನು ತೋರಿದ್ದೇವೆ. ಜಾಗತಿಕವಾಗಿ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಉತ್ತೇಜಿಸಲು ಸಿ ಡಿ ಆರ್ ಐ ಜೊತೆ ಸೇರಿ ಹೊಂದಾಣಿಕೆ ಕಾರ್ಯಕ್ಕಾಗಿ ಜಾಗತಿಕ ಸಮುದಾಯಕ್ಕೆ ಕರೆ ನೀಡುತ್ತೇನೆ.

ಭಾರತದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಕುರಿತ ಮೂರನೇ ಅಂತಾರಾಷ್ಟ್ರೀಯ ಸಮಾವೇಶಕ್ಕಾಗಿ ನಾನು ಎಲ್ಲರನ್ನೂ ಎಲ್ಲರನ್ನೂ ಆಹ್ವಾನಿಸುತ್ತೇನೆ.

ಗೌರವಾನ್ವಿತರೇ,

ಭಾರತದ ನಾಗರಿಕತೆಯ ಮೌಲ್ಯಗಳು ನಮಗೆ ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬಾಳ್ವೆ ನಡೆಸುವ ಪ್ರಾಮಖ್ಯತೆಯನ್ನು ಕಲಿಸುತ್ತದೆ.

ನಮ್ಮ ಪುರಾತನ ಧಾರ್ಮಿಕ ಗ್ರಂಥ, ಯಜುರ್ವೇದ ನಮಗೆ ಭೂಗ್ರಹದ ಅಂದರೆ ಭೂಮಾತೆ ಮತ್ತು ಅದರ ಮಕ್ಕಳ ನಡುವಿನ ಸಂಬಂಧವನ್ನು ಕಲಿಸುತ್ತದೆ.

ನಾವು ಭೂ ಮಾತೆಯ ರಕ್ಷಣೆಗೆ ಗಮನಹರಿಸಿದರೆ ಆಕೆ ನಮ್ಮನ್ನು ಪೋಷಿಸುವುದನ್ನು ಮುಂದುವರಿಸುತ್ತಾಳೆ.

ಹವಾಮಾನ ವೈಪರೀತ್ಯವನ್ನು ಅಳವಡಿಸಿಕೊಳ್ಳಲು ಹೊಸ ಆದರ್ಶಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.

ಈ  ಭಾವನೆ ನಮಗೆ ಮುನ್ನಡೆಯಲು ದಾರಿ ದೀಪವಾಗಲಿದೆ.

ತುಂಬಾ ಧನ್ಯವಾದಗಳು

***



(Release ID: 1692604) Visitor Counter : 243