ಗೃಹ ವ್ಯವಹಾರಗಳ ಸಚಿವಾಲಯ

ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನ: ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಗೌರವ ಸಲ್ಲಿಕೆ


ಗುವಾಹತಿಯಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ: ಸ್ವಾತಂತ್ರ್ಯ ಸೇನಾನಿಗೆ ಗೌರವ ಸಮರ್ಪಣೆ

ಸುಭಾಷ್ ಬಾಬು ಬುದ್ದಿವಂತ ವಿದ್ಯಾರ್ಥಿ, ಜನ್ಮತಃ ದೇಶ ಭಕ್ತ, ನುರಿತ ಆಡಳಿತಗಾರ ಮತ್ತು ಸಂಘಟಕ, ಸಾಟಿಯಿಲ್ಲದ ಹೋರಾಟ ಮನೋಭಾವದ ನಾಯಕ, ಅವರ ಧೈರ್ಯ ಮತ್ತು ಶೌರ್ಯ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ನೀಡಿದೆ

ಪ್ರತಿಕೂಲ ಪರಿಸ್ಥಿತಿಯಲ್ಲೂ ತಮ್ಮ ವರ್ಚಸ್ವಿ ನಾಯಕತ್ವದಿಂದ ದೇಶದ ಯುವ ಶಕ್ತಿಯನ್ನು ಸಂಘಟಿಸಿದ ನಾಯಕ

ನೇತಾಜಿ ಅವರ ಅದಮ್ಯ ಹೋರಾಟ ಮತ್ತು ಶೌರ್ಯ ಮನೋಭಾವದಿಂದಾಗಿ ಇಡೀ ದೇಶ ಅವರಿಗೆ ಶಾಶ್ವತವಾಗಿ ಋಣಿಯಾಗಿದೆ

ನೇತಾಜಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ “ಪರಾಕ್ರಮ ದಿವಸ್“ ಆಗಿ ಆಚರಣೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಅಭೂತಪೂರ್ವ ನಮನ ಸಲ್ಲಿಕೆ

ಸುಭಾಷ್ ಬಾಬು ಅವರ 125 ನೇ ಜನ್ಮ ದಿನಾಚರಣೆ ದೇಶಾದ್ಯಂತ ತೀವ್ರ ಸಂತಸ ಮತ್ತು ಉತ್ಸಾಹದಿಂದ ಆಚರಣೆ: ನೇತಾಜಿ ಕೊಡುಗೆಯನ್ನು ಮುಂದಿನ ಪೀಳಿಗೆ ದೀರ್ಘಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ

ಈ ಸ್ಪೂರ್ತಿ ಲಕ್ಷಾಂತರ ಮಕ್ಕಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ಮುಂಬರುವ ದಿನಗಳಲ್ಲಿ ದೇಶವನ್ನು ಸ್ವಾವಲಂಬಿ ಮಾಡಲು ಸಹಕಾರಿ

Posted On: 23 JAN 2021 3:27PM by PIB Bengaluru

ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಅವರ 125 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಗೌರವ ನಮನ ಸಲ್ಲಿಸಿದರು. ಅಸ್ಸಾಂನ ಗುವಾಹತಿಯಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು ಮತ್ತು ಸ್ವಾತಂತ್ರ್ಯ ಚಳವಳಿಯ ಮಹಾನ್ ನಾಯಕನಿಗೆ ಗೌರವ ಸಮರ್ಪಿಸಿದರು.

Image

ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ಸುಭಾಷ್ ಬಾಬು ಬುದ್ದಿವಂತ ವಿದ್ಯಾರ್ಥಿ, ಜನ್ಮತಃ ದೇಶ ಭಕ್ತ, ನುರಿತ ಆಡಳಿತಗಾರ ಮತ್ತು ಸಂಘಟಕ, ಸಾಟಿಯಿಲ್ಲದ ಹೋರಾಟ ಮನೋಭಾವದ ನಾಯಕ, ಅವರ ಧೈರ್ಯ ಮತ್ತು ಶೌರ್ಯ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ನೀಡಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ತಮ್ಮ ವರ್ಚಸ್ವಿ ನಾಯಕತ್ವದಿಂದ ದೇಶದ ಯುವ ಶಕ್ತಿಯನ್ನು ಸಂಘಟಿಸಿದ ನಾಯಕ ಎಂದು ಬಣ್ಣಿಸಿದರು.

Image

ಸ್ವಾತಂತ್ರ್ಯ ಚಳವಳಿಗೆ ಸುಭಾಷ್ ಚಂದ್ರ ಬೋಸ್ ಅವರು ಬದ್ಧರಾಗಿದ್ದರು. ಕೊಲ್ಕತ್ತಾದಿಂದ ಜರ್ಮನಿ ವರೆಗೆ ಅವರು 7,000 ಕಿಲೋಮೀಟರ್ ರಸ್ತೆ ಮಾರ್ಗದಲ್ಲಿ ಸಂಚಿಸಿದ್ದರು. 27,000 ಕಿಲೋಮೀಟರ್ ದೂರವನ್ನು ಜಲಾಂತರ್ಗಾಮಿ ಮೂಲಕ ಕ್ರಮಿಸಿದ್ದರು.  ಇವೆಲ್ಲವೂ ಸುಭಾಷ್ ಬಾಬು ಅವರ ಅದಮ್ಯ ಧೈರ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಅದಮ್ಯ ಹೋರಾಟ ಮತ್ತು ಶೌರ್ಯ ಮನೋಭಾವದಿಂದಾಗಿ ಇಡೀ ದೇಶ ಅವರಿಗೆ ಶಾಶ್ವತವಾಗಿ ಋಣಿಯಾಗಿದೆ ಎಂದು ಶ್ರೀ ಅಮಿತ್ ಶಾ ವರ್ಣಿಸಿದರು.  

ನೇತಾಜಿ ಅವರ ಹುಟ್ಟುಹಬ್ಬವನ್ನು ದೇಶಾದ್ಯಂತ “ ಪರಾಕ್ರಮ ದಿವಸ್ “ ಆಗಿ ಆಚರಿಸಲಾಗುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಹ ಸುಭಾಷ್ ಚಂದ್ರ ಬೋಸ್ ಅವರಿಗೆ ಅಭೂತಪೂರ್ವ ನಮನ ಸಲ್ಲಿಸಿದ್ದಾರೆ. “ಪರಾಕ್ರಮ ದಿನದ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ನನ್ನ ನಮನಗಳು. ಸುಭಾಷ್ ಬಾಬು ಅವರ 125 ನೇ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಜನತೆ ತೀವ್ರ ಸಂತಸ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ನೇತಾಜಿ ಕೊಡುಗೆಯನ್ನು ಮುಂದಿನ ಪೀಳಿಗೆ ದೀರ್ಘಕಾಲ ಸ್ಮರಿಸಿಕೊಳ್ಳುತ್ತದೆ.  ಈ ಸ್ಪೂರ್ತಿ ಲಕ್ಷಾಂತರ ಮಕ್ಕಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರೇರೇಪಿಸುತ್ತದೆ ಮತ್ತು ಮುಂಬರುವ ದಿನಗಳಲ್ಲಿ ದೇಶವನ್ನು ಸ್ವಾವಲಂಬಿ ಮಾಡಲು [ ಆತ್ಮನಿರ್ಬರ್ ಭಾರತ್ ] ಮಾಡಲು ಸಹಕಾರಿಯಾಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

***


(Release ID: 1691601) Visitor Counter : 199