ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದಡಿ 6 ನೇ ದಿನ, ಸುಮಾರು 10.5 ಲಕ್ಷ ಫಲಾನುಭವಿಗಳಿಗೆ ಲಸಿಕೆ: ಹೊರ ದೇಶಗಳಿಗೆ ಹೋಲಿಸಿದರೆ ಭಾರತ ಅತಿ ಹೆಚ್ಚು ಸಾಧನೆ


ಭಾರತದಲ್ಲಿ ಸೋಂಕು ಪತ್ತೆ ಪರೀಕ್ಷೆಯಲ್ಲಿ ಗಣನೀಯ ಏರಿಕೆ: 19 ಕೋಟಿ ದಾಟಿದ ಒಟ್ಟು ಸಂಖ್ಯೆ

ಕರ್ನಾಟಕ ರಾಜ್ಯದಲ್ಲಿ 1,38,807 ಜನರಿಗೆ ಲಸಿಕೆ

Posted On: 22 JAN 2021 11:00AM by PIB Bengaluru

ಜಾಗತಿಕ ಸಾಂಕ್ರಾಮಿಕದ ವಿರುದ್ಧ ಸಾಮೂಹಿಕ ಮತ್ತು ದೃಢ ನಿಶ್ಚಯದ ಹೋರಾಟದಲ್ಲಿ ಭಾರತ ಮಹತ್ವದ ಹೆಗ್ಗುರುತು ದಾಖಲಿಸಿದೆ.

2021ರ ಜನವರಿ 22ರ ಬೆಳಿಗ್ಗೆ 7 ಗಂಟೆವರೆಗೆ ಸುಮಾರು 10.5 ಲಕ್ಷ [10,43,543] ಫಲಾನುಭವಿಗಳು ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆದಿದ್ದಾರೆ.

ಕಳೆದ 24 ಗಂಟೆಗಳಲ್ಲಿ 4,049 ಕೇಂದ್ರಗಳಲ್ಲಿ 2,37,050 ಮಂದಿಗೆ ಲಸಿಕೆ ಹಾಕಲಾಗಿದೆ. ಈವರೆಗೆ 18,167  ಸ್ಥಳಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಲಸಿಕೆ ಪಡೆದಿರುವ ಫಲಾನುಭವಿಗಳ ವಿವರ ಹೀಗಿದೆ:

ಕ್ರ. ಸಂ.

ರಾಜ್ಯ/ ಕೇಂದ್ರಾಡಳಿತ

ಪ್ರದೇಶ

ಲಸಿಕೆ ಪಡೆದ

ಫಲಾನುಭವಿಗಳು

1

ಅಂಡಮಾನ್-ನಿಕೋಬಾರ್ ದ್ವೀಪ

1032

2

ಆಂಧ್ರಪ್ರದೇಶ

1,15,365

3

ಅರುಣಾಚಲಪ್ರದೇಶ

4,682

4

ಅಸ್ಸಾಂ

10,676

5

ಬಿಹಾರ

63,541

6

ಚಂಡಿಗಢ

753

7

ಛತ್ತೀಸ್ ಗಢ

22,171

8

ದಾದ್ರ ಮತ್ತು ನಗರ್ ಹವೇಲಿ

184

9

ದಾಮನ್ ಮತ್ತು ದಿಯು

94

10

ದೆಹಲಿ

18,844

11

ಗೋವಾ

426

12

ಗುಜರಾತ್

34,865

13

ಹರಿಯಾಣ

45,893

14

ಹಿಮಾಚಲಪ್ರದೇಶ

5,790

15

ಜಮ್ಮು & ಕಾಶ್ಮೀರ

6,847

16

ಜಾರ್ಖಂಡ್

11,641

17

ಕರ್ನಾಟಕ

1,38,807

18

ಕೇರಳ

35,173

19

ಲಡಾಖ್

240

20

ಲಕ್ಷದ್ವೀಪ

369

21

ಮಧ್ಯಪ್ರದೇಶ

38,278

22

ಮಹಾರಾಷ್ಟ್ರ

52,393

23

ಮಣಿಪುರ

1,454

24

ಮೇಘಾಲಯ

1,785

25

ಮಿಝೋರಾಂ

2,537

26

ನಾಗಾಲ್ಯಾಂಡ್

3,187

27

ಒಡಿಶಾ

1,13,623

28

ಪುದುಚೆರಿ

759

29

ಪಂಜಾಬ್

12,532

30

ರಾಜಸ್ಥಾನ

32,379

31

ಸಿಕ್ಕಿಂ

773

32

ತಮಿಳುನಾಡು

42,947

33

ತೆಲಂಗಾಣ

97,087

34

ತ್ರಿಪುರಾ

9,272

35

ಉತ್ತರ ಪ್ರದೇಶ

22,644

36

ಉತ್ತರಾಖಂಡ

8,206

37

ಪಶ್ಚಿಮ ಬಂಗಾಳ

53,988

38

ಇತರೆ

32,297

 

ಒಟ್ಟು

10,43,534

ಸೋಂಕು ಪತ್ತೆ ಪರೀಕ್ಷಾ ವಿಭಾಗದಲ್ಲೂ ಸಹ ಭಾರತ ತನ್ನ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶ ತನ್ನ ಪರೀಕ್ಷಾ ಮೂಲ ಸೌಕರ್ಯವನ್ನು ವಿಸ್ತರಿಸಿಕೊಂಡಿದೆ. ಒಟ್ಟು ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆ 19 ಕೋಟಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ 8,00,242 ಮಾದರಿಗಳ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಒಟ್ಟು ಪರೀಕ್ಷೆಗಳ ಸಂಖ್ಯೆ 19,01,48,024ಕ್ಕೆ ಏರಿಕೆಯಾಗಿದೆ.

ನಿರಂತರ, ಸಮಗ್ರ ಮತ್ತು ವ್ಯಾಪಕ ಪರೀಕ್ಷಾ ಫಲಿತಾಂಶದಿಂದಾಗಿ ದೇಶದಲ್ಲಿ ಪಾಸಿಟಿವಿಟಿ ದರ ತಗ್ಗಿದೆ. ಇಂದು ಒಟ್ಟು ಪಾಸಿಟಿವಿಟಿ ದರ ಶೇ 5.59ರಲ್ಲಿದೆ.

ಕಳೆದ ವಾರಗಳಲ್ಲಿನ ಪ್ರವೃತ್ತಿಯನ್ನು ಸ್ಥಿರವಾಗಿ ಅನುಸರಿಸಿದ ಮಾಹಿತಿಯಂತೆ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ 1.78ಕ್ಕೆ ಇಳಿಕೆಯಾಗಿದೆ.  ಭಾರತದ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,88,688 ರಲ್ಲಿದೆ.

ಕಳೆದ 24 ಗಂಟೆಗಳಲ್ಲಿ 18,002 ಮಂದಿ ಚೇತರಿಸಿಕೊಂಡಿದ್ದಾರೆ. 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು ಇಳಿಕೆಯಾದ ನಿವ್ವಳ ಪ್ರಕರಣಗಳ ಸಂಖ್ಯೆ 3,620 ರಷ್ಟಿದೆ.

ಒಟ್ಟು ಚೇತರಿಸಿಕೊಂಡಿರುವ ಪ್ರಕರಣ ಸಂಖ್ಯೆ 10,283,708ಕ್ಕೆ ಬೆಳವಣಿಗೆ ಕಂಡಿದೆ. ಸಕ್ರಿಯ ಮತ್ತು ಚೇತರಿಕೆ ಪ್ರಕರಣಗಳ ಸಂಖ್ಯೆಯಲ್ಲಿನ ಅಂತರ 1,00,95,020 [54.5 ಪಟ್ಟು] ರಷ್ಟಿದೆ. ಒಟ್ಟು ಚೇತರಿಕೆ ದರ ಶೇ 96.78 ಕ್ಕೆ ಏರಿಕೆಯಾಗಿದೆ. 

ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹೊಸ ಚೇತರಿಕೆ ಪ್ರಕರಣಗಳ ಸಂಖ್ಯೆ 84.70 ರಷ್ಟಿದೆ. ಕೇರಳದಲ್ಲಿ 6,229 ಮಂದಿ ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟದಲ್ಲಿ ಕ್ರಮವಾಗಿ 3,980 ಹಾಗೂ 815 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 14,545 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೊಡುಗೆ 84.14 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 6,334 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ನಿನ್ನೆ 2,886 ಪ್ರಕರಣಗಳು ಕಂಡು ಬಂದಿದ್ದರೆ ಕರ್ನಾಟಕದಲ್ಲಿ 674  ಪ್ರಕರಣಗಳು ಪತ್ತೆಯಾಗಿವೆ. 

9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಶೇ 82.82 ರಷ್ಟು ಮರಣದರ ದಾಖಲಾಗಿದ್ದು, 163 ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ದೈನಂದಿನ ಮರಣ ಪ್ರಮಾಣ ಹೆಚ್ಚಿದ್ದು, 52 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 21 ಜನ ಸಾವಿಗೀಡಾಗಿದ್ದಾರೆ.

***



(Release ID: 1691233) Visitor Counter : 213