ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ವಸತಿ ಯೋಜನೆ: ಉತ್ತರ ಪ್ರದೇಶದ ಜನತೆಗೆ ಪ್ರಯೋಜನಕಾರಿ

Posted On: 20 JAN 2021 3:31PM by PIB Bengaluru

ಪ್ರಧಾನಮಂತ್ರಿ ವಸತಿ ಯೋಜನೆ ಪ್ರಸ್ತುತ ಸರ್ಕಾರದ ಅಡಿಯಲ್ಲಿ ವೇಗವಾಗಿ ಸಾಗಿದ್ದು, ಉತ್ತರ ಪ್ರದೇಶದ ಬಡವರಲ್ಲೇ ಕಡುಬಡವರಿಗೆ ಉಪಯುಕ್ತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ವಸತಿ ಯೋಜನೆ - ಗ್ರಾಮೀಣ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಆರ್ಥಿಕ ನೆರವು ಬಿಡುಗಡೆ ಮಾಡಿದ ನಂತರ ಅವರು ಮಾತನಾಡುತ್ತಿದ್ದರು.

ಆತ್ಮನಿರ್ಭರ ಭಾರತ ನೇರವಾಗಿ ದೇಶದ ನಾಗರಿಕರ ಆತ್ಮವಿಶ್ವಾಸದೊಂದಿಗೆ ಸಂಪರ್ಕಿತವಾಗಿದೆ ಮತ್ತು ಸ್ವಂತ ಮನೆ ಆತ್ಮವಿಶ್ವಾಸವನ್ನು ಹಲವು ಪಟ್ಟು ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸ್ವಯಂ ಒಡೆತನದ ಮನೆ ಜೀವನಕ್ಕೆ ಭರವಸೆ ನೀಡುತ್ತದೆ ಮತ್ತು ಬಡತನದಿಂದ ಹೊರಬರುವ ವಿಶ್ವಾಸ ಮೂಡಿಸುತ್ತದೆ ಎಂದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಡವರಿಗೆ ತಮಗೆ ಮನೆಗಳನ್ನು ಕಟ್ಟಿಕೊಡಲು ಸರ್ಕಾರ ಏನಾದರೂ ಸಹಾಯ ಮಾಡಬಹುದು ಎಂಬ ವಿಶ್ವಾಸವೇ ಇರಲಿಲ್ಲ ಎಂದು ಪ್ರಧಾನಮಂತ್ರಿಯವರು, ಸ್ಮರಿಸಿದರು. ಹಿಂದಿನ ಯೋಜನೆಗಳ ಅಡಿಯಲ್ಲಿ ನಿರ್ಮಿಸಿದ ಮನೆಗಳ ಗುಣಮಟ್ಟವೂ ಉತ್ತಮವಾಗಿರಲಿಲ್ಲ ಎಂದರು. ಬಡವರು ಕೆಟ್ಟ ನೀತಿಗಳಿಂದ ನರಳಾಡುತ್ತಿದ್ದರು ಎಂದು ಪ್ರಧಾನಮಂತ್ರಿ ತಿಳಿಸಿದರು. ದುರ್ದೈವವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಬಡ ಕುಟುಂಬಕ್ಕೂ 75ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಮನೆ ಒದಗಿಸಲು ಪ್ರಧಾನಮಂತ್ರಿ ವಸತಿ ಯೋಜನೆ ಆರಂಭಿಸಲಾಯಿತು ಎಂದರು. ಇತ್ತೀಚಿನ ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ, ಇದರಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆಯ ಪಾಲು 1.25 ಕೋಟಿ ಮನೆಗಳಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ 1.5 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡಿದೆ ಎಂದರು.

ಹಿಂದಿನ ರಾಜ್ಯ ಸರ್ಕಾರದ ಕಳಪೆ ಸ್ಪಂದನೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಉತ್ತರ ಪ್ರದೇಶದಲ್ಲಿ 22 ಲಕ್ಷ ಗ್ರಾಮೀಣ ವಸತಿ ನಿರ್ಮಿಸಲಾಗಿದ್ದು, ಪೈಕಿ 21.5 ಲಕ್ಷ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 14.5 ಲಕ್ಷ ಕುಟುಂಬಗಳು ತಮ್ಮ ಮನೆಗಳನ್ನು ಬಹುತೇಕ ಪ್ರಸಕ್ತ ಸರ್ಕಾರದ ಅವಧಿಯಲ್ಲೇ ಪಡೆದಿದ್ದಾರೆ ಎಂದರು.  

***



(Release ID: 1690446) Visitor Counter : 205