ಸಂಪುಟ

ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ಸೌರಶಕ್ತಿ ಕ್ಷೇತ್ರದ ಸಹಕಾರ ಕುರಿತ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲು ಸಂಪುಟದ ಅನುಮೋದನೆ

Posted On: 20 JAN 2021 11:50AM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸೌರಶಕ್ತಿ ಕ್ಷೇತ್ರದಲ್ಲಿ ಸಹಕಾರ ಕುರಿತ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ.

ಭಾರತದ ಸೌರಶಕ್ತಿಯ ರಾಷ್ಟ್ರೀಯ ಸಂಸ್ಥೆ (ಎನ್‌ಐಎಸ್ಇ), ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಉಜ್ಬೇಕಿಸ್ತಾನ್‌ನ ಅಂತರರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (ಐಎಸ್‌ಇಐ) ನಡುವಿನ ಸಂಶೋಧನೆ/ ಪ್ರದರ್ಶನ/ ಪ್ರಾಯೋಗಿಕ ಯೋಜನೆಗಳನ್ನು ಗುರುತಿಸುವುದು ಇದರ ಮುಖ್ಯ ಕಾರ್ಯಕ್ಷೇತ್ರವಾಗಿದೆ. ಪರಸ್ಪರ ಗುರುತಿಸಿದ ಕೆಳಗಿನ. ಪ್ರದೇಶಗಳಲ್ಲಿ ಎರಡೂ ದೇಶಗಳು ಕೆಲಸ ಮಾಡುತ್ತವೆ.

  1.  ಸೌರ ದ್ಯುತಿವಿದ್ಯುಜ್ಜನಕ
  2. ಶೇಖರಣಾ ತಂತ್ರಜ್ಞಾನಗಳು
  3. ತಂತ್ರಜ್ಞಾನದ ವರ್ಗಾವಣೆ

ಪರಸ್ಪರ ಒಪ್ಪಂದದ ಆಧಾರದ ಮೇಲೆ, ಎರಡೂ ದೇಶಗಳು ಅಂತರರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್‌ಎ) ಸದಸ್ಯ ರಾಷ್ಟ್ರಗಳಲ್ಲಿ ಪ್ರಾಯೋಗಿಕ ಯೋಜನೆಯ ಅನುಷ್ಠಾನ ಮತ್ತು ನಿಯೋಜನೆಗಾಗಿ ಕೆಲಸ ಮಾಡುತ್ತವೆ.

***(Release ID: 1690344) Visitor Counter : 121