ಪ್ರಧಾನ ಮಂತ್ರಿಯವರ ಕಛೇರಿ

ಭಾರತರತ್ನ ಎಂಜಿಆರ್ ಜಯಂತಿ: ಪ್ರಧಾನಮಂತ್ರಿ ಗೌರವ ನಮನ

ಪ್ರಕಟಣಾ ದಿನಾಂಕ: 17 JAN 2021 11:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ.ಜಿ. ರಾಮಚಂದ್ರನ್ ಅವರ ಜಯಂತಿ ಅಂಗವಾಗಿ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು.

ಪ್ರಧಾನಿ ಟ್ವೀಟ್ ನಲ್ಲಿ, "ಭಾರತ್ ರತ್ನ ಎಂಜಿಆರ್ ಜನರ ಹೃದಯದಲ್ಲಿದ್ದಾರೆ. ಚಲನಚಿತ್ರ ಅಥವಾ ರಾಜಕೀಯ ರಂಗದಲ್ಲಿ ಅವರು ವ್ಯಾಪಕ ಗೌರವ ಹೊಂದಿದ್ದರು. ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಅವರು ಬಡತನ ನಿವಾರಣೆಗೆ ಹಲವಾರು ಪ್ರಯತ್ನಗಳನ್ನು ಪ್ರಾರಂಭಿಸಿದರು ಮತ್ತು ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಿದರು. ಎಂಜಿಆರ್‌ ಅವರ ಜಯಂತಿಯಂದು ಗೌರವ ನಮನಗಳು." ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1689643) ವಿಸಿಟರ್ ಕೌಂಟರ್ : 180