ಪ್ರಧಾನ ಮಂತ್ರಿಯವರ ಕಛೇರಿ

ಏಕತೆಯ ಪ್ರತಿಮೆಗೆ ರೈಲು ಸಂಪರ್ಕದಿಂದ ಪ್ರವಾಸಿಗರಿಗೆ ಉಪಯೋಗವಾಗಲಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ:ಪ್ರಧಾನಮಂತ್ರಿ

Posted On: 17 JAN 2021 2:17PM by PIB Bengaluru

 

 

ರೈಲ್ವೆ ಸಂಪರ್ಕದ ಮೂಲಕ ಕೇವಾಡಿಯಾವನ್ನು ಎಲ್ಲ ದಿಕ್ಕುಗಳೊಂದಿಗೆ ಸಂಪರ್ಕಿಸುತ್ತಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಗುಜರಾತ್ ನ ಕೇವಾಡಿಯಾಕ್ಕೆ ದೇಶದ ವಿವಿಧ ವಲಯಗಳಿಂದ 8 ರೈಲುಗಳ ಸಂಪರ್ಕಕ್ಕೆ ಹಸಿರು ನಿಶಾನೆ ತೋರಿಸಿ, ರಾಜ್ಯದ ವಿವಿಧ ರೈಲ್ವೆ ಸಂಬಂಧಿತ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 
ಪ್ರಧಾನಮಂತ್ರಿಯವರು, ಕೇವಾಡಿಯಾ ಮತ್ತು ಚೆನ್ನೈ, ವಾರಾಣಸಿ, ರೇವಾ, ದಾದಾರ್ ಮತ್ತು ದೆಹಲಿ ಹಾಗೂ ಕೇವಾಡಿಯಾ ಮತ್ತು ಪ್ರತಾಪ್ ನಗರ್ ನಡುವೆ ಮೆಮೋ ರೈಲು ಸೇವೆ ಹಾಗೂ ದಬೋಯ್ – ಚಾಂದೋಡ್ ನಡುವೆ ಬ್ರಾಡ್ ಗೇಜ್ ಮತ್ತು ಚಾಂದೋಡ್  ಕೇವಾಡಿಯಾ ನಡುವೆ ಹೊಸ ಮಾರ್ಗವು ಕೇವಾಡಿಯಾದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದರು. ಇದು ಪ್ರವಾಸಿಗರು ಮತ್ತು ಸ್ಥಳೀಯ ಆದಿವಾಸಿಗಳಿಗೆ ಉಪಯುಕ್ತವಾಗಿದೆ, ಇದು ಸ್ವಯಂ ಉದ್ಯೋಗ ಮತ್ತು ಉದ್ಯೋಗದ ಹೊಸ ಮಾರ್ಗಗಳನ್ನು ತೆರೆಯಲಿದೆ ಎಂದರು. 
ರೈಲ್ವೆ ಮಾರ್ಗವು ನಂಬಿಕೆಯ ಸ್ಥಳಗಳಾದ ಕರ್ನಾಲಿ, ಪೊಯಿಚಾ ಮತ್ತು ಗರುಡೇಶ್ವರಗಳಿಗೆ ಸಂಪರ್ಕವನ್ನು ಒದಗಿಸುತ್ತದೆ.


***

 



(Release ID: 1689528) Visitor Counter : 71