ರಕ್ಷಣಾ ಸಚಿವಾಲಯ

ಎಚ್‌ಎಎಲ್ ನಿಂದ ಭಾರತೀಯ ವಾಯುಪಡೆಗೆ 83 ಹಗುರ ಯುದ್ದ ವಿಮಾನ (ಎಲ್‌ಸಿಎ) ತೇಜಸ್ ಖರೀದಿಗೆ ಸಂಪುಟ ಅನುಮೋದನೆ

Posted On: 13 JAN 2021 5:27PM by PIB Bengaluru

ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಜನವರಿ 13ರಂದು ನಡೆದ ಸಚಿವ ಸಂಪುಟ ಸಭೆ, 73 ಎಲ್ ಸಿಎ ತೇಜಸ್ ಮಾರ್ಕ್-1 ಯುದ್ದ ವಿಮಾನಗಳು ಮತ್ತು 10 ಎಲ್ ಸಿಎ ತೇಜಸ್ ಮಾರ್ಕ್ -1 ತರಬೇತಿ ಯುದ್ದ ವಿಮಾನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಇದಕ್ಕೆ ವಿನ್ಯಾಸ ಮತ್ತು ಅಭಿವೃದ್ಧಿ ಮೂಲಸೌಕರ್ಯಕ್ಕಾಗಿ 1,202 ಕೋಟಿ ರೂ. ಸೇರಿದಂತೆ ಒಟ್ಟು 45,696 ಕೋಟಿ ರೂ. ಖರ್ಚಾಗಲಿದೆ.

ಹಗುರ ಯುದ್ದ ವಿಮಾನ ಎಂಕೆ-1 ಆವೃತ್ತಿಯನ್ನು ದೇಶಿಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ ಮತ್ತು ಆತ್ಯಾಧುನಿಕ ಆಧುನಿಕ 4 ಪ್ಲಸ್ ಪೀಳಿಗೆಯ ಯುದ್ದ ವಿಮಾನವನ್ನು ಉತ್ಪಾದಿಸಲಾಗುವುದು. ವಿಮಾನ ಭಾರತೀಯ ವಾಯುಪಡೆ (ಐಎಎಫ್)ಗೆ ಕಾರ್ಯಾಚರಣೆ ಅಗತ್ಯತೆಗಳಿಗೆ ಬೇಕಾದ ಗಂಭೀರ ಕಾರ್ಯಾಚರಣೆ ಸಾಮರ್ಥ್ಯಗಳಾದ ಆ್ಯಕ್ವಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಇಎಸ್ ) ರಡಾರ್, ಬಿಯಾಂಡ್ ವಿಜುವಲ್ ರೇಂಜ್ (ಬಿವಿಆರ್) ಎಲೆಕ್ಟ್ರಾನಿಕ್ ವಾರ್ಫೇರ್ (ಇಡಬ್ಲೂ), ಸ್ಯೂಟ್ ಅಂಡ್ ಏರ್ ಟು ಏರ್ ರಿಫಿಲಿಂಗ್ (ಎಎಆರ್ ) ಗಳನ್ನು ಹೊಂದಿದೆ. ಇದು (ಭಾರತದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿ ಮತ್ತು ಉತ್ಪಾದಿಸಿದ ವರ್ಗದಡಿ) ಮಾಡಿದ ಮೊದಲ ಹಗುರ ಯುದ್ದ ವಿಮಾನಗಳ ಖರೀದಿಯಾಗಿದ್ದು, ಶೇ.50ಷ್ಟು ದೇಶೀಯ ಉತ್ಪಾದನೆಗಳಾಗಿದ್ದು, ಕಾರ್ಯಕ್ರಮ ಮುಗಿಯುವ ವೇಳೆಗೆ ಪ್ರಮಾಣ ಶೇ.60ರಷ್ಟು ತಲುಪಲಿದೆ.

ಅಲ್ಲದೆ, ಸಚಿವ ಸಂಪುಟ ಐಎಎಫ್ ಗೆ ಅವುಗಳ ಮೂಲ ಡಿಪೋಗಳಲ್ಲಿ ದುರಸ್ತಿ ಮತ್ತು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಮೂಲಸೌಕರ್ಯ ಅಭಿವೃದ್ಧಿಗೂ ಸಹ ಅನುಮೋದನೆ ನೀಡಿತು. ಇದರಿಂದ ಗಂಭೀರ ಕಾರ್ಯಾಚರಣೆಗಳ ವೇಳೆ ಸುತ್ತಾಡುವ ಸಮಯ ತಗ್ಗಲಿದೆ ಮತ್ತು ಕಾರ್ಯಾಚರಣೆಗಳಿಗೆ ವಿಮಾನಗಳ ಲಭ್ಯತೆ ಪ್ರಮಾಣ ಹೆಚ್ಚಿಸಲಿದೆ. ಇದರಿಂದಾಗಿ ಐಎಎಫ್ ಗೆ ತನ್ನ ವಿಮಾನಗಳನ್ನು ದಕ್ಷ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಹಾಗೂ ದುರಸ್ತಿ ಮೂಲಸೌಕರ್ಯ ಪರಿಣಾಮಕಾರಿಯಾಗಿ ಲಭ್ಯವಾಗುವಂತೆ ಮಾಡಲು ಸಹಕಾರಿಯಾಗಲಿದೆ.

ಆತ್ಮ ನಿರ್ಭರ ಭಾರತ ಅಭಿಯಾನದಡಿ, ಭಾರತ ನಿರಂತರವಾಗಿ ದೇಶಿಯವಾಗಿ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದಿಸಿದ ಆಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ರಕ್ಷಣಾ ವಲಯದಲ್ಲಿ ಹೊಂದುತ್ತಿದ್ದು, ಮೂಲಕ ತನ್ನ ಸಾಮರ್ಥ್ಯವೃದ್ಧಿಸಿಕೊಳ್ಳುತ್ತಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಹಗರು ಯುದ್ದ ವಿಮಾನಗಳನ್ನು ಉತ್ಪಾದಿಸುತ್ತಿದ್ದು, ಇದು ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಮತ್ತು ದೇಶೀಯ ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ಮತ್ತು ದೇಶಿಯ ರಕ್ಷಣಾ ಉದ್ಯಮಕ್ಕೆ ನೆರವು ನೀಡುತ್ತಿದೆ. ಎಂಎಸ್ ಎಂಇಗಳು ಸೇರಿದಂತೆ ಸುಮಾರು 500 ಭಾರತೀಯ ಕಂಪನಿಗಳು ಖರೀದಿ ಪ್ರಕ್ರಿಯೆಯಲ್ಲಿ ವಿನ್ಯಾಸ ಮತ್ತು ಉತ್ಪಾದನಾ ವಲಯಗಳಲ್ಲಿ ಎಚ್ಎಎಲ್ ಜೊತೆ ಕಾರ್ಯನಿರ್ವಹಿಸಲಿವೆ. ಕಾರ್ಯಕ್ರಮ, ಭಾರತವನ್ನು ಬಾಹ್ಯಾಕಾಶ ಉತ್ಪಾದನಾ ಪೂರಕ ವ್ಯವಸ್ಥೆಯಿಂದ ಕ್ರಿಯಾಶೀಲ ಆತ್ಮನಿರ್ಭರ ಸ್ವಾವಲಂಬಿ ಪೂರಕ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ.

***



(Release ID: 1688772) Visitor Counter : 239