ಸಂಸ್ಕೃತಿ ಸಚಿವಾಲಯ

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜಯಂತಿ ಆಚರಣೆಗೆ ಪ್ರಧಾನಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ

Posted On: 09 JAN 2021 11:39AM by PIB Bengaluru

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜಯಂತಿಯ ಆಚರಣೆಗಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಕುರಿತು ಇಂದು ಗೆಜೆಟ್ ಪ್ರಕಟಣೆಯನ್ನು ಹೊರಡಿಸಲಾಗಿದೆ. 

23 ನೇ ಜನವರಿ 2021 ರಿಂದ ಒಂದು ವರ್ಷ ಕಾಲ  ನೇತಾಜಿಯವರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಉನ್ನತ ಮಟ್ಟದ ಸಮಿತಿಯು ನಿರ್ಧರಿಸುತ್ತದೆ. ಖ್ಯಾತನಾಮರು, ಇತಿಹಾಸಕಾರರು, ಲೇಖಕರು, ತಜ್ಞರು, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರು ಮತ್ತು ಆಜಾದ್ ಹಿಂದ್ ಫೌಜ್ (ಐಎನ್‌ಎ) ನೊಂದಿಗೆ ಸಂಬಂಧ ಇದ್ದ ಗಣ್ಯ ವ್ಯಕ್ತಿಗಳು ಸಮಿತಿಯ ಸದಸ್ಯರಾಗಿದ್ದಾರೆ. ದೆಹಲಿ, ಕೋಲ್ಕತಾ ಹಾಗೂ ನೇತಾಜಿ ಮತ್ತು ಆಜಾದ್ ಹಿಂದ್ ಫೌಜ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ವಿದೇಶಗಳ ಇತರ ಸ್ಥಳಗಳಲ್ಲಿ ನಡೆಯುವ ಸ್ಮರಣಾರ್ಥ ಕಾರ್ಯಕ್ರಮಗಳ ಬಗ್ಗೆ ಈ ಸಮಿತಿ ಮಾರ್ಗದರ್ಶನ ನೀಡಲಿದೆ.

http://egazette.nic.in/WriteReadData/2021/224300.pdf

***

 



(Release ID: 1687281) Visitor Counter : 176