ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಜಮ್ಮು ಮತ್ತು ಕಾಶ್ಮೀರ ಕೈಗಾರಿಕಾ ಅಭಿವೃದ್ಧಿಗಾಗಿ ಕೇಂದ್ರೀಯ ಯೋಜನೆಗೆ ಸರ್ಕಾರದ ಅನುಮೋದನೆ


ಪ್ರಥಮ ಬಾರಿಗೆ, ವಿಭಾಗ ಮಟ್ಟಕ್ಕೆ ಕೈಗಾರಿಕಾ ಅಭಿವೃದ್ಧಿಯನ್ನು ಕೊಂಡೊಯ್ದ ಕೈಗಾರಿಕಾ ಪ್ರೋತ್ಸಾಹಕ ಯೋಜನೆ

2037 ರವರೆಗೆ  ಒಟ್ಟು 28,400 ಕೋಟಿ ವೆಚ್ಚದ ಯೋಜನೆ

ಹೊಸ ಹೂಡಿಕೆಗೆ ಉತ್ತೇಜನಕಾರಿ ಯೋಜನೆ, ಜಮ್ಮು ಮತ್ತು ಕಾಶ್ಮೀರದ ಹಾಲಿ ಕೈಗಾರಿಕೆಗಳಿಗೆ ಬೆಂಬಲ; 5 ವರ್ಷದವರೆಗೆ ಶೇ.5ರ ಬಡ್ಡಿ ದರದಲ್ಲಿ ಕಾರ್ಯ ಬಂಡವಾಳ

ಉದ್ಯೋಗ ಸೃಷ್ಟಿ ಯೋಜನೆಯ ಗುರಿ, ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಉದ್ದೇಶ

Posted On: 07 JAN 2021 12:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿಯ ಸಭೆ, ಜಮ್ಮು ಮತ್ತು ಕಾಶ್ಮೀರದ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಕುರಿತ ಇಲಾಖೆಯ 2037 ರವರೆಗೆ ಒಟ್ಟು ರೂ 28,400 ಕೋಟಿ ರೂ.ಗಳ ಕೇಂದ್ರ ವಲಯ ಯೋಜನೆಯ ಪ್ರಸ್ತಾವನೆಯನ್ನು ಪರಿಗಣಿಸಿ ಅಂಗೀಕರಿಸಿದೆ

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತ ಕಾಶ್ಮೀರದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಭಾರತ ಸರ್ಕಾರ ಹೊಸ ಕೈಗಾರಿಕಾ ಅಭಿವೃದ್ಧಿ ಯೋಜನೆ (ಜೆ ಅಂಡ್ ಕೆ, ಐಡಿಎಸ್ 2021)ನ್ನು ಕೇಂದ್ರೀಯ ವಲಯದ ಯೋಜನೆಯಾಗಿ ರೂಪಿಸಿದೆ. ಪ್ರದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ನೇರವಾಗಿ ಕಾರಣವಾಗುವ ಉದ್ಯೋಗ ಸೃಷ್ಟಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜಮ್ಮು ಮತ್ತು ಕಾಶ್ಮಿರ ಪುನರ್ಸಂಘಟನೆ ಕಾಯ್ದೆ 2019 ಅಡಿಯಲ್ಲಿ 31.10.2019 ರಿಂದ ಅನ್ವಯವಾಗುವಂತೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಐತಿಹಾಸಿಕ ಅಭಿವೃದ್ಧಿಯನ್ನು ಪರಿಗಣಿಸಿ, ಹಾಲಿ ಯೋಜನೆಯನ್ನು ಉದ್ಯೋಗ ಸೃಷ್ಟಿ, ಕೌಶಲ್ಯವರ್ಧನೆ ಮತ್ತು ಹೊಸ ಹೂಡಿಕೆಯನ್ನು ಆಕರ್ಷಿಸುವ ಮತ್ತು ಹಾಲಿ ಇರುವ ಕೈಗಾರಿಕೆ ಸದ್ಬಳಕೆಗೆ ಒತ್ತು ನೀಡಿ ಕೈಗಾರಿಕೆ ಮತ್ತು ಸೇವಾ ನೇತೃತ್ವದ  ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಮುನ್ನೋಟದೊಂದಿಗೆ ಜಾರಿಗೆ ತರಲಾಗಿದೆ.

ಯೋಜನೆಯ ಅಡಿಯಲ್ಲಿ ಕೆಳಕಂಡ ಪ್ರೋತ್ಸಾಹಕಗಳು ಲಭ್ಯವಿದೆ:

1.   ಬಂಡವಾಳ ಹೂಡಿಕೆ ಪ್ರೋತ್ಸಾಹಕವು ವಲಯ ಯಲ್ಲಿ ಶೇ.30 ಮತ್ತು ವಲಯ ಬಿ ಯಲ್ಲಿ ಶೇ.50 ದರದಲ್ಲಿ  ಘಟಕ ಮತ್ತು ಯಂತ್ರೋಪಕರಣ (ಉತ್ಪಾದನೆಯಲ್ಲಿ) ಅಥವಾ ಕಟ್ಟಡ ನಿರ್ಮಾಣ ಮತ್ತು ಇತರ ಬಾಳಿಕೆ ಬರುವ ಭೌತಿಕ ಸ್ವತ್ತುಗಳ (ಸೇವಾ ವಲಯದಲ್ಲಿ) ಮಾಡಿದ ಹೂಡಿಕೆಯ ಮೇಲೆ ಲಭ್ಯವಿರುತ್ತದೆ. 50 ಕೋಟಿ ರೂ.ವರೆಗಿನ ಹೂಡಿಕೆಯ ಘಟಕ ಪ್ರೋತ್ಸಾಹಕಕ್ಕೆ ಅರ್ಹವಾಗುತ್ತದೆಪ್ರೋತ್ಸಾಹಕ ಗರಿಷ್ಠ ಮಿತಿ ಅನುಕ್ರಮವಾಗಿ ವಲಯ ಗೆ 5 ಕೋಟಿ ರೂ. ಮತ್ತು ವಲಯ ಬಿ ಗೆ 7.5 ಕೋಟಿ ರೂ. ಆಗಿರುತ್ತದೆ.

2.   ಬಂಡವಾಳ ಬಡ್ಡಿ ಸಹಾಯಧನ: ಸಾಲದ ಮೊತ್ತದ ಮೇಲೆ ಗರಿಷ್ಠ 7 ವರ್ಷಗಳವರೆಗೆ ಶೇ.6 ವಾರ್ಷಿಕ ಬಡ್ಡಿ ದರದಲ್ಲಿ ಘಟಕ ಮತ್ತು ಯಂತ್ರೋಪಕರಣಗಳ (ಉತ್ಪಾದನೆಯಲ್ಲಿ) ಅಥವಾ ಕಟ್ಟಡ ನಿರ್ಮಾಣ ಮತ್ತು ಇತರ ಎಲ್ಲಾ ಬಾಳಿಕೆ ಬರುವ ಭೌತಿಕ ಸ್ವತ್ತುಗಳಲ್ಲಿ (ಸೇವಾ ವಲಯದಲ್ಲಿ) ಹೂಡಿಕೆ ಮಾಡಲು 500 ಕೋಟಿ ರೂ.ಗಳವರೆಗೆ ಬಡ್ಡಿ ಸಹಾಯಧನ.

3.   ಜಿಎಸ್ಟಿ ಸಂಪರ್ಕಿತ ಪ್ರೋತ್ಸಾಹಕ: ಘಟಕ ಮತ್ತು ಯಂತ್ರೋಪಕರಣಗಳ (ಉತ್ಪಾದನೆಯಲ್ಲಿ) ಅಥವಾ ಕಟ್ಟಡ ನಿರ್ಮಾಣ ಮತ್ತು ಇತರ ಎಲ್ಲಾ ಬಾಳಿಕೆ ಬರುವ ಭೌತಿಕ ಸ್ವತ್ತುಗಳನ್ನು (ಸೇವಾ ವಲಯದಲ್ಲಿ) 10 ವರ್ಷಗಳವರೆಗೆ ಮಾಡಿದ ನಿಜವಾದ ಹೂಡಿಕೆಯ ಅರ್ಹ ಮೌಲ್ಯದ ಶೇ.300ರಷ್ಟು ಜಿಎಸ್ಟಿ ಸಂಪರ್ಕಿತ ಪ್ರೋತ್ಸಾಹಕ. ಹಣಕಾಸು ವರ್ಷವೊಂದರಲ್ಲಿ ಪ್ರೋತ್ಸಾಹಕದ ಮೊತ್ತವು ಒಟ್ಟು ಅರ್ಹ ಪ್ರೋತ್ಸಾಹಕದ ಹತ್ತನೇ ಒಂದು ಭಾಗವನ್ನು ಮೀರುವಂತಿಲ್ಲ.

4.   ಕಾರ್ಯ ಬಂಡವಾಳ ಬಡ್ಡಿ ಪ್ರೋತ್ಸಾಹಕ: ಎಲ್ಲ ಹಾಲಿ ಘಟಕಗಳಿಗೆ ವಾರ್ಷಿಕ ಶೇ.5 ಬಡ್ಡಿ ದರದಲ್ಲಿ ಗರಿಷ್ಠ 5 ವರ್ಷಗಳವರೆಗೆ ಗರಿಷ್ಠ 1 ಕೋಟಿಗೆ ಮಿತಿಗೆ ಒಳಪಟ್ಟ ಪ್ರೋತ್ಸಾಹಕ.

ಯೋಜನೆಯ ಪ್ರಮುಖ ಅಂಶಗಳು:

1.     ಸಣ್ಣ ಮತ್ತು ದೊಡ್ಡ ಘಟಕಗಳೆರಡಕ್ಕೂ ಯೋಜನೆಯನ್ನು ಆಕರ್ಷಕವಾಗಿ ರೂಪಿಸಲಾಗಿದೆ. 50 ಕೋಟಿ ರೂ.ವರೆಗಿನ ಘಟಕ ಮತ್ತು ಯಂತ್ರೋಪಕರಣಗಳಲ್ಲಿನ ಹೂಡಿಕೆಯ ಸಣ್ಣ ಘಟಕಗಳಿಗೆ,  7.5 ಕೋಟಿ ರೂ. ಬಂಡವಾಳ ಪ್ರೋತ್ಸಾಹಕ  ಪಡೆಯುತ್ತವೆ ಮತ್ತು ಗರಿಷ್ಠ 7 ವರ್ಷಗಳವರೆಗೆ ಶೇ.6 ದರದಲ್ಲಿ ಬಡ್ಡಿ ಸಹಾಯಧನ ಪಡೆಯುತ್ತವೆ.

2.   ಯೋಜನೆಯು ಕೈಗಾರಿಕಾ ಅಭಿವೃದ್ಧಿಯನ್ನು ಕೇಂದ್ರಾಡಳಿತ ಪ್ರದೇಶ ಜೆ ಮತ್ತು ಕೆಯ ವಿಭಾಗ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ, ಇದು ಭಾರತ ಸರ್ಕಾರದ ಯಾವುದೇ ಕೈಗಾರಿಕಾ ಪ್ರೋತ್ಸಾಹಕ ಯೋಜನೆಯಲ್ಲೇ ಪ್ರಥಮವಾಗಿದ್ದು, ಇಡೀ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚು ನಿರಂತರ ಮತ್ತು ಸಮತೋಲಿತ ಕೈಗಾರಿಕಾ ಬೆಳವಣಿಗೆಗೆ ಪ್ರಯತ್ನಿಸುತ್ತದೆ.

3.   ಒಂದು ಪ್ರಮುಖ ಪ್ರೋತ್ಸಾಹಕ - ಜಿಎಸ್ಟಿ ಸಂಪರ್ಕಿತ ಪ್ರೋತ್ಸಾಹಕವನ್ನು ತರುವ ಮೂಲಕ ಸುಗಮ ವಾಣಿಜ್ಯದ ನಿಟ್ಟಿನಲ್ಲಿ ಯೋಜನೆಯನ್ನು ಸರಳೀಕರಿಸಲಾಗಿದೆ- ಇದು ಪಾರದರ್ಶಕತೆಯೊಂದಿಗೆ ರಾಜೀ ಇಲ್ಲದೆ ಕಡಿಮೆ ಅನುಸರಣೆ ಹೊರೆಯನ್ನು ಖಚಿತಪಡಿಸುತ್ತದೆ.

4.   ಕ್ಲೇಮುಗಳನ್ನು ಅನುಮೋದಿಸುವ ಮೊದಲು ಸ್ವತಂತ್ರ ಲೆಕ್ಕಪರಿಶೋಧನಾ ಸಂಸ್ಥೆಯನ್ನು ಹೊಂದುವ ಮೂಲಕ ಸೂಕ್ತ ಪರಿಶೀಲನೆ ಮತ್ತು ಸಮತೋಲನವನ್ನು ಕಾಪಾಡುವ ಯೋಜನೆಯ ನೋಂದಣಿ ಮತ್ತು ಅನುಷ್ಠಾನದಲ್ಲಿ ಜೆ ಮತ್ತು ಕೆ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚಿನ ಪಾತ್ರವನ್ನು ನಿರ್ವಹಿಸುತ್ತದೆ.

5.   ಇದು ಜಿ.ಎಸ್‌.ಟಿ. ಮರುಪಾವತಿ ಅಥವಾ ಹಿಂತಿರುಗಿಸುವುದಷ್ಟೇ ಅಲ್ಲ ಜೊತೆಗೆ ಜೆ ಮತ್ತು ಕೆಯ ಕೇಂದ್ರಾಡಳಿತ ಪ್ರದೇಶ ಎದುರಿಸುತ್ತಿರುವ ಅನಾನುಕೂಲಗಳನ್ನು ನಿವಾರಿಸಲು ಕೈಗಾರಿಕಾ ಪ್ರೋತ್ಸಾಹಕದ ಅರ್ಹತೆಯನ್ನು ಅಳೆಯಲು ಒಟ್ಟು ಜಿ.ಎಸ್‌.ಟಿ.ಯನ್ನು ಬಳಸಲಾಗುತ್ತದೆ.

6.   ಹಿಂದಿನ ಯೋಜನೆಗಳು ಹೆಚ್ಚಿನ ಪ್ರೋತ್ಸಾಹಕ ನೀಡಿದ್ದವು. ಆದಾಗ್ಯೂ ಒಟ್ಟಾರೆ ಆರ್ಥಿಕ ಹೊರಹರಿವು ಹೊಸ ಯೋಜನೆಗಿಂತ ಕಡಿಮೆ ಇತ್ತು

ಪ್ರಮುಖ ಪರಿಣಾಮ ಮತ್ತು ಉದ್ಯೋಗ ಸೃಷ್ಟಿ ಸಾಮರ್ಥ್ಯ:

1.   ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಮತ್ತು ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿ ಜೆ ಮತ್ತು ಕೆಯ ಅಸ್ತಿತ್ವದಲ್ಲಿರುವ ಕೈಗಾರಿಕಾ ಪರಿಸರ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವುದು ಯೋಜನೆ ಉದ್ದೇಶವಾಗಿದೆ, ಮೂಲಕ ಜೆ ಮತ್ತು ಕೆ ಇತರ ಕೈಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿದ ಇತರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ.

2.   ಉದ್ದೇಶಿತ ಯೋಜನೆಯು ಅಭೂತಪೂರ್ವ ಹೂಡಿಕೆಯನ್ನು ಆಕರ್ಷಿಸುವ ಮತ್ತು ಸುಮಾರು 4.5 ಲಕ್ಷ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ನೀಡುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಮಿಗಿಲಾಗಿ, ಕಾರ್ಯ ಬಂಡವಾಳ ಬಡ್ಡಿ ಸಹಾಯಧನದಿಂದಾಗಿ ಯೋಜನೆಯು ಸುಮಾರು 35,000 ಜನರಿಗೆ ಪರೋಕ್ಷವಾಗಿ ಬೆಂಬಲ ನೀಡುವ ಸಾಧ್ಯತೆಯಿದೆ.

ಒಳಗೊಂಡ ವೆಚ್ಚ:

ಉದ್ದೇಶತ ಯೋಜನೆಯ ಹಣಕಾಸು ಹಂಚಿಕೆ 2020-21ನೇ ಸಾಲಿಗೆ 28,400 ಕೋಟಿ ರೂ.ಗಳಾಗಿವೆ. ಈವರೆಗೆ ವಿವಿಧ ವಿಶೇಷ ಪ್ಯಾಕೇಜ್ ಯೋಜನೆಗಳ ಅಡಿಯಲ್ಲಿ 1,123.84 ಕೋಟಿ ರೂ. ಹಣ ವಿತರಿಸಲಾಗಿದೆ.

***



(Release ID: 1686805) Visitor Counter : 266