ಪ್ರಧಾನ ಮಂತ್ರಿಯವರ ಕಛೇರಿ

ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ 162 ಪಿಎಸ್ಎ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ನಿಂದ ರೂ. 201.58 ಕೋಟಿ

Posted On: 05 JAN 2021 5:02PM by PIB Bengaluru

ಪ್ರಧಾನಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ (ಪಿಎಂ ಕೇರ್ಸ್) ಫಂಡ್ ಟ್ರಸ್ಟ್ ದೇಶದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆಚ್ಚುವರಿಯಾಗಿ 162 ಮೀಸಲಾದ ಪಿಎಸ್ಎ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 201.58 ಕೋಟಿ ರೂ.ಗಳನ್ನು ನಿಗದಿಪಡಿಸಿದೆ.

  • ಒಟ್ಟು ಯೋಜನಾ ವೆಚ್ಚವು ಘಟಕಗಳ ಪೂರೈಕೆ ಮತ್ತು ಕಾರ್ಯಾರಂಭ ಮತ್ತು ಕೇಂದ್ರ ವೈದ್ಯಕೀಯ ಸರಬರಾಜು ಮಳಿಗೆಯ (ಸಿಎಮ್ಎಸ್ಎಸ್) ನಿರ್ವಹಣಾ ಶುಲ್ಕಕ್ಕೆ 137.33 ಕೋಟಿ ರೂ. ಮತ್ತು ಸಮಗ್ರ ವಾರ್ಷಿಕ ನಿರ್ವಹಣೆ ಒಪ್ಪಂದಕ್ಕೆ ಸುಮಾರು 64.25 ಕೋಟಿ ರೂ.ಗಳನ್ನು ಒಳಗೊಂಡಿದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಕೇಂದ್ರ ವೈದ್ಯಕೀಯ ಸರಬರಾಜು ಮಳಿಗೆಯಿಂದ (ಸಿಎಮ್ಎಸ್ಎಸ್) ಖರೀದಿಯನ್ನು ಮಾಡಲಾಗುತ್ತದೆ.
  • 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ [ಅನುಬಂಧ -1] ಒಟ್ಟು 154.19 ಮೆ.ಟನ್ ಸಾಮರ್ಥ್ಯದ ಒಟ್ಟು 162 ಘಟಕಗಳನ್ನು ಸ್ಥಾಪಿಸಲಾಗುವುದು.
  • ಘಟಕಗಳನ್ನು ಸ್ಥಾಪಿಸಬೇಕಾದ ಸರ್ಕಾರಿ ಆಸ್ಪತ್ರೆಗಳನ್ನು ಸಂಬಂಧಪಟ್ಟ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿ ಗುರುತಿಸಲಾಗಿದೆ.
  • ಘಟಕಗಳಿಗೆ ಮೊದಲ 3 ವರ್ಷಗಳವರೆಗೆ ಖಾತರಿ ಇರುತ್ತದೆ. ಮುಂದಿನ 7 ವರ್ಷಗಳವರೆಗೆ, ಯೋಜನೆಯು ಸಿಎಎಂಸಿ (ಸಮಗ್ರ ವಾರ್ಷಿಕ ನಿರ್ವಹಣೆ ಒಪ್ಪಂದ) ಯನ್ನು ಒಳಗೊಂಡಿದೆ.
  • ಸಾಮಾನ್ಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಆಸ್ಪತ್ರೆಗಳು / ರಾಜ್ಯಗಳು ಮಾಡಬೇಕು. ಸಿಎಎಂಸಿ ಅವಧಿಯ ನಂತರ, ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನು ಆಸ್ಪತ್ರೆಗಳು / ರಾಜ್ಯಗಳು ಭರಿಸುತ್ತವೆ.
  • ಕಾರ್ಯವಿಧಾನವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ದೀರ್ಘಕಾಲೀನ ವ್ಯವಸ್ಥಿತ ವೃದ್ಧಿಯ ಮೂಲಕ ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಕಡಿಮೆ ವೆಚ್ಚದಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ. ಕೋವಿಡ್-19 ಮಧ್ಯಮ ಮತ್ತು ತೀವ್ರವಾದ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಜೊತೆಗೆ ಇತರ ವೈದ್ಯಕೀಯ ಪರಿಸ್ಥಿತಿಗಳಿಗಾಗಿ ಸಾಕಷ್ಟು ತಡೆರಹಿತ ಆಮ್ಲಜನಕದ ಪೂರೈಕೆಯು ಅವಶ್ಯಕತೆಯಾಗಿದೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಪಿಎಸ್ಎ ಆಕ್ಸಿಜನ್ ಸಾಂದ್ರತೆಯ ಘಟಕಗಳ ಸ್ಥಾಪನೆ ಆರೋಗ್ಯ ಸೌಲಭ್ಯವು ಅಂಗಡಿಗಳು ಮತ್ತು ಸರಬರಾಜು ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸೌಲಭ್ಯಗಳನ್ನು ತಮ್ಮದೇ ಆದ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲು ಅನುವು ಮಾಡಿಕೊಡುವ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ರಾಜ್ಯಗಳು / ಯುಟಿಗಳ ಒಟ್ಟು ಆಮ್ಲಜನಕ ಲಭ್ಯತೆಯನ್ನು ಹೆಚ್ಚಿಸುವುದಲ್ಲದೆ, ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ರೋಗಿಗಳಿಗೆ ಸಮಯೋಚಿತವಾಗಿ ಆಮ್ಲಜನಕದ ಬೆಂಬಲವನ್ನು ಒದಗಿಸಲು ಸಹಕಾರಿಯಾಗುತ್ತದೆ.

ಅನುಬಂಧ- 1

ಪಿಎಸ್ಎ 2 ಘಟಕಗಳ ಸ್ಥಾಪನೆಯ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ವಿವರ

ಕ್ರ. ಸಂ.

ರಾಜ್ಯ / ಕೇಂದ್ರಾಡಳಿತ ಪ್ರದೇಶ

ಪಿಎಸ್ಎ 2 ಘಟಕಗಳ ಸಂಖ್ಯೆ

1

ಅಸ್ಸಾಂ

6

2

ಮಿಜೋರಾಂ

1

3

ಮೇಘಾಲಯ

3

4

ಮಣಿಪುರ

3

5

ನಾಗಾಲ್ಯಾಂಡ್

3

6

ಸಿಕ್ಕಿಂ

1

7

ತ್ರಿಪುರ

2

8

ಉತ್ತರಾಖಂಡ

7

9

ಹಿಮಾಚಲ ಪ್ರದೇಶ

7

10

ಲಕ್ಷದ್ವೀಪ

2

11

ಚಂಡೀಗಢ

3

12

ಪುದುಚೇರಿ

6

13

ದೆಹಲಿ

8

14

ಲಡಾಖ್

3

15

ಜೆ & ಕೆ

6

16

ಬಿಹಾರ

5

17

ಚತ್ತೀಸ್ಗಢ

4

18

ಮಧ್ಯಪ್ರದೇಶ

8

19

ಮಹಾರಾಷ್ಟ್ರ

10

20

ಒಡಿಶಾ

7

21

ಉತ್ತರ ಪ್ರದೇಶ

14

22

ಪಶ್ಚಿಮ ಬಂಗಾಳ

5

23

ಆಂಧ್ರಪ್ರದೇಶ

5

24

ಹರಿಯಾಣ

6

25

ಗೋವಾ

2

26

ಪಂಜಾಬ್

3

27

ರಾಜಸ್ಥಾನ

4

28

ಜಾರ್ಖಂಡ್

4

29

ಗುಜರಾತ್

8

30

ತೆಲಂಗಾಣ

5

31

ಕೇರಳ

5

32

ಕರ್ನಾಟಕ

6

 

ಒಟ್ಟು

162

ಗಮನಿಸಿ: ಉಳಿದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಇನ್ನೂ ತಮ್ಮ ಪಿಎಸ್ಎ ಅವಶ್ಯಕತೆಗಳನ್ನು ಸಲ್ಲಿಸಿಲ್ಲ.

***



(Release ID: 1686285) Visitor Counter : 251