ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ


179 ದಿನಗಳ ನಂತರ 2.54 ಲಕ್ಷಕ್ಕೆ ತಗ್ಗಿದ ಸಕ್ರಿಯ ಪ್ರಕರಣಗಳು

ಕಳೆದ 7 ದಿನಗಳಿಂದ 300 ಕ್ಕಿಂತ ಕಡಿಮೆ ಸಾವಿನ ಪ್ರಕರಣ

Posted On: 01 JAN 2021 10:55AM by PIB Bengaluru

ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಸುಸ್ಥಿರವಾಗಿ ಇಳಿಕೆಯ ಹಾದಿ ಹಿಡಿದಿದೆ. ಅದೀಗ 2.54 ಲಕ್ಷಕ್ಕೆ (2,54,254) ಇಳಿಕೆ. 179 ದಿನಗಳ ನಂತರ ಇದು ಅತ್ಯಂತ ಕನಿಷ್ಠ. 2020 ಜುಲೈ 6ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 2,53, 287 ದಾಖಲಾಗಿತ್ತು.

ಭಾರತದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಶೇ.2.47% ಮಾತ್ರ ಸಕ್ರಿಯ ಪ್ರಕರಣಗಳು.

ಇತ್ತೀಚಿನ ದಿನಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸುಮಾರು 20,000 ಆಸುಪಾಸಿನಲ್ಲಿ ಪತ್ತೆಯಾಗುತ್ತಿವೆ. ಕಳೆದ 24 ತಾಸುಗಳಲ್ಲಿ 20,035 ಹೊಸ ಪ್ರಕರಣಗಳು ಪತ್ತೆಯಾದರೆ, 23,181 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕಳೆದ 35 ದಿನಗಳಿಂದ ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣಗಳು ಹೆಚ್ಚಾಗುತ್ತಿವೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಇಳಿಕೆ ಕಾಣುತ್ತಿದೆ.

ಈವರೆಗೆ ದೇಶದಲ್ಲಿ ಗುಣಮುಖ ಪ್ರಕರಣಗಳ ಸಂಖ್ಯೆ 99 ಲಕ್ಷಕ್ಕೆ (98,83,461) ಏರಿಕೆ ಕಂಡಿದೆ. ಚೇತರಿಕೆ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಸ್ಥಿರವಾಗಿ ಏರಿಕೆ ಕಾಣುತ್ತಿದ್ದು, ಅದೀಗ 96 ಲಕ್ಷಕ್ಕೆ (96,29,207) ಹೆಚ್ಚಳ ಕಂಡಿದೆ.

ಹೊಸ ಚೇತರಿಕೆ ದರ ಸಕ್ರಿಯ ಪ್ರಕರಣಗಳನ್ನು ಹಿಂದಿಕ್ಕುತ್ತಿರುವುದರಿಂದ ಒಟ್ಟಾರೆ ಚೇತರಿಕೆ ದರ ಇದೀಗ 96.08%ಗೆ ಸುಧಾರಣೆ ಕಂಡಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 77.61% ಹೊಸ ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ಕೇರಳದಲ್ಲಿ ಒಂದೇ ದಿನ ಗರಿಷ್ಠ ಅಂದರೆ 5,376 ಚೇತರಿಕೆ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 3,612 ಮತ್ತು ಪಶ್ಚಿಮ ಬಂಗಾಳದಲ್ಲಿ 1,537 ಸೋಂಕಿತರು ಚೇತರಿಸಿಕೊಂಡಿದ್ದಾರೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 80.19% ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕೇರಳದಲ್ಲಿ ಒಂದೇ ದಿನ ಗರಿಷ್ಠ 5,215, ಮಹಾರಾಷ್ಟ್ರದಲ್ಲಿ 3,509 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳಲ್ಲಿ 256 ಹೊಸ ಸಾವುಗಳು ಸಂಭವಿಸಿವೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 80.47% ಹೊಸ ಸಾವುಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಗರಿಷ್ಠ 58, ಕೇರಳದಲ್ಲಿ 30 ಮತ್ತು ಪಶ್ಚಿಮ ಬಂಗಾಳದಲ್ಲಿ 29 ಸಾವುಗಳು ವರದಿಯಾಗಿವೆ.

ಕಳೆದ 7 ದಿನಗಳಿಂದ ಪ್ರತಿನಿತ್ಯ 300ಕ್ಕಿಂತ ಕಡಿಮೆ ಸಾವುಗಳು ವರದಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಸಾವಿನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗುತ್ತಿರುವುದನ್ನು ಇದು ಖಾತ್ರಿಪಡಿಸಿದ್ದು, ಪ್ರಸ್ತುತ ಮರಣ ದರ 1.45%ಗೆ ತಗ್ಗಿದೆ.

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ದೆಹಲಿಯಲ್ಲಿ ಒಟ್ಟು ಸಾವಿನ ಶೇಕಡ 63ರಷ್ಟು ಮರಣಗಳು ಸಂಭವಿಸಿವೆ.

***



(Release ID: 1685389) Visitor Counter : 225