ಸಂಪುಟ

ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಗಳಿಗೆ ಬಳಸಿಕೊಳ್ಳಲು ಸಹಕಾರ ಕುರಿತು ಭಾರತ- ಭೂತಾನ್ ನಡುವೆ ಒಡಂಬಡಿಕೆಗೆ ಕೇಂದ್ರ ಸಂಪುಟ ಅನುಮೋದನೆ

Posted On: 30 DEC 2020 3:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆ ಭಾರತದ ಗಣರಾಜ್ಯ ಮತ್ತು ಭೂತಾನ್ ಘನ ಸರ್ಕಾರದ ನಡುವೆ ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಗಳಿಗೆ ಬಳಸಿಕೊಳ್ಳುವ ಕುರಿತ ಒಪ್ಪಂದಕ್ಕೆ ಅನುಮೋದನೆ ನೀಡಿತು. ಈ ಒಪ್ಪಂದಕ್ಕೆ ಎರಡೂ ದೇಶಗಳು 2020ರ ನವೆಂಬರ್ 19ರಂದು ಸಹಿ ಹಾಕಿ, ಬೆಂಗಳೂರು/ಥಿಂಪುವಿನಲ್ಲಿ ಸಹಿ ಹಾಕಿದವು ಮತ್ತು ವಿನಿಮಯ ಮಾಡಿಕೊಂಡವು.

ಪ್ರಮುಖಾಂಶಗಳ ವಿವರ:

          ಈ ಒಡಂಬಡಿಕೆಯಿಂದಾಗಿ ಭಾರತ ಮತ್ತು ಭೂತಾನ್ ಸಂಭಾವ್ಯ ಆಸಕ್ತಿಕರ ವಲಯಗಳಲ್ಲಿ ಅಂದರೆ ಭೂಮಿಯ ದೂರಸಂವೇದಿ, ಉಪಗ್ರಹ ಸಂವಹನ ಮತ್ತು ಉಪಗ್ರಹ ಆಧಾರಿತ ನಾವಿಗೇಶನ್, ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಅನ್ವೇಷಣೆ, ಬಾಹ್ಯಾಕಾಶ ನೆಲೆ ಬಳಕೆ ಮತ್ತು ಬಾಹ್ಯಾಕಾಶ ವ್ಯವಸ್ಥೆಗಳು ಹಾಗೂ ಬಾಹ್ಯಾಕಾಶ ನೆಲೆ ವ್ಯವಸ್ಥೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಅನ್ವಯ ವಲಯಗಳಲ್ಲಿ ಪರಸ್ಪರ ಸಹಕಾರ ಹೊಂದಬಹುದಾಗಿದೆ.

       ಈ ಒಡಂಬಡಿಕೆಯಿಂದಾಗಿ ಡಿಒಎಸ್/ಇಸ್ರೋದ ಸದಸ್ಯರು ಮತ್ತು ಭೂತಾನ್ ನ ಮಾಹಿತಿ ಮತ್ತು ಸಂವಹನ ಸಚಿವಾಲಯದ ಸದಸ್ಯರನ್ನೊಳಗೊಂಡ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುವುದು. ಅದು ಒಪ್ಪಂದ ಜಾರಿ ವಿಧಾನಗಳು, ಮುಂದಿನ ಕಾರ್ಯ ಯೋಜನೆ ಸಿದ್ಧಪಡಿಸುವುದು, ಕಾಲಮಿತಿಯಲ್ಲಿ ಅನುಷ್ಠಾನ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಯೋಜನೆಗಳನ್ನು ರೂಪಿಸಲಿದೆ.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:

ಈಗಾಗಲೇ ಸಹಿ ಹಾಕಿರುವ ಒಪ್ಪಂದದಿಂದಾಗಿ ನಿರ್ದಿಷ್ಟ ವಲಯಗಳಲ್ಲಿ ಸಹಕಾರ ಹೊಂದುವ ಜೊತೆಗೆ ನಿರ್ದಿಷ್ಟ ಅನುಷ್ಠಾನ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸಲಾಗುವುದು ಮತ್ತು ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುವುದು. ಆ ಸಮಿತಿ ಕಾಲಮಿತಿಯಲ್ಲಿ ಒಪ್ಪಂದದ ಅನುಷ್ಠಾನ ವಿಧಾನಗಳು ಸೇರಿದಂತೆ ಮುಂದಿನ ಕಾರ್ಯ ಯೋಜನೆಯನ್ನು ಸಿದ್ಧಪಡಿಸಲಿದೆ.

ಪ್ರಮುಖ ಪರಿಣಾಮಗಳು:

ಈ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಭೂಮಿಯ ದೂರ ಸಂವೇದಿ, ಉಪಗ್ರಹ ಸಂವಹನ, ಉಪಗ್ರಹ ನಾವಿಗೇಶನ್, ಬಾಹ್ಯಾಕಾಶ ವಿಜ್ಞಾನ ಮತ್ತು ಹೊರ ಬಾಹ್ಯಾಕಾಶದಲ್ಲಿ ಅನ್ವೇಷಣೆ ಸೇರಿದಂತೆ ಇತರ ವಲಯಗಳಲ್ಲಿ ಸಹಕಾರ ಸಂಬಂಧ ಸಾಧ್ಯತೆಗಳನ್ನು ಪರಿಶೀಲಿಸುವುದಕ್ಕೆ ಒತ್ತು ಸಿಗಲಿದೆ.  

ಆಗಲಿರುವ ಪ್ರಯೋಜನಗಳು:

ಭೂತಾನ್ ಸರ್ಕಾರದ ಸಹಕಾರದಿಂದಾಗಿ ಈ ಒಪ್ಪಂದದನ್ವಯ ಮನುಕುಲದ ಒಳಿತಿಗಾಗಿ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಅನ್ವಯಿಸುವ ವಲಯಗಳಲ್ಲಿ ಜಂಟಿ ಚಟುವಟಿಕೆಗಳ ಅಭಿವೃದ್ಧಿಗೆ ಅವಕಾಶ ದೊರಕಲಿದೆ. ಇದರಿಂದಾಗಿ ಎರಡೂ ದೇಶಗಳ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿದೆ.

ಹಿನ್ನೆಲೆ:

          ಭಾರತ ಮತ್ತು ಭೂತಾನ್ ಅಧಿಕೃತ ಬಾಹ್ಯಾಕಾಶ ಸಹಕಾರ ಸಂಬಂಧ ಸ್ಥಾಪನೆಗೆ ಹಲವು ವರ್ಷಗಳಿಂದ ಚರ್ಚೆ ನಡೆಸುತ್ತಿದ್ದವು. ಬಾಹ್ಯಾಕಾಶ ಸಹಕಾರ ಕುರಿತಂತೆ ಅಂತರ ಸರ್ಕಾರ ಒಪ್ಪಂದದ ಕರಡನ್ನು 2017ರ ನವೆಂಬರ್ ನಲ್ಲಿ ಎಂಇಎ ಜೊತೆ ಹಂಚಿಕೊಳ್ಳಲಾಗಿತ್ತು ಮತ್ತು ಅದು ಭೂತಾನ್ ನೊಂದಿಗೆ ಚರ್ಚೆ ನಡೆಸಿತ್ತು. ಆ ಕರಡಿನ ಕುರಿತು 2020ರ ಫೆಬ್ರವರಿಯಲ್ಲಿ ನಡೆದ ದ್ವಿಪಕ್ಷೀಯ ಸಭೆಯ ವೇಳೆ ಮತ್ತಷ್ಟು ಚರ್ಚೆಗಳು ಹಾಗೂ ಸಹಕಾರದ ಪ್ರಸ್ತಾವಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.  

ರಾಜತಾಂತ್ರಿಕ ಮಾರ್ಗಗಳ ಮೂಲಕ ಕೆಲವೊಂದು ಪುನರ್ ವ್ಯಾಖ್ಯಾನಗಳ ನಂತರ ಉಭಯ ದೇಶಗಳು ಕಾರ್ಯಸಾಧುವಾದ ಒಪ್ಪಂದದ ಕರಡನ್ನು ಒಪ್ಪಿದವು ಮತ್ತು ಅದನ್ನು ಆಂತರಿಕ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ಅಗತ್ಯ ಅನುಮೋದನೆಗಳನ್ನು ಪಡೆದ ನಂತರ ಉಭಯ ದೇಶಗಳು 2020ರ ನವೆಂಬರ್ 19ರಂದು ಒಪ್ಪಂದಗಳಿಗೆ ಸಹಿ ಹಾಕಿದವು ಮತ್ತು ವಿನಿಮಯ ಮಾಡಿಕೊಂಡವು.

****(Release ID: 1684846) Visitor Counter : 16