ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಸಕ್ರಿಯ ಪ್ರಕರಣಗಳ ನಿರಂತರ ಇಳಿಕೆ; 2.83 ಲಕ್ಷಕ್ಕೆ ಇಳಿಕೆ


ಕಳೆದ 11 ದಿನಗಳಿಂದ ದಿನನಿತ್ಯ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆ

ಕಳೆದ 12 ದಿನಗಳಿಂದ ಮರಣ ಪ್ರಮಾಣ 400 ಕ್ಕಿಂತ ಕಡಿಮೆ

Posted On: 24 DEC 2020 11:03AM by PIB Bengaluru

ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರೆದಿದೆ. ಇಂದು ದೇಶದ ಸಕ್ರಿಯ ಪ್ರಕರಣಗಳ ಹೊರೆ  2,83,849 ರಲ್ಲಿದೆ. ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯ ಪಾಲು ಇನ್ನಷ್ಟು ಕಡಿಮೆಯಾಗಿ 2.80% ನಲ್ಲಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು ಸಕ್ರಿಯ  ಪ್ರಕರಣಗಳ ಹೊರೆಯಲ್ಲಿ ನಿವ್ವಳ  5,391 ಪ್ರಕರಣಗಳು ಕಡಿಮೆಯಾಗಿವೆ.

ಸುಮಾರು ಒಂದು ತಿಂಗಳಿನಿಂದ (27 ದಿನಗಳಿಂದ) ದೈನಿಕ ಹೊಸ ಪ್ರಕರಣಗಳ ಹೊರೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೇ 24,712 ಮಂದಿಯಲ್ಲಿ ಮಾತ್ರವೇ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಇದೇ ಅವಧಿಯಲ್ಲಿ  29,791 ಹೊಸ ಗುಣಮುಖ ಪ್ರಕರಣಗಳು ದಾಖಲಾಗಿವೆ, ಮೂಲಕ ಸಕ್ರಿಯ ಪ್ರಕರಣಗಳ ಹೊರೆ ಇಳಿಕೆ ಖಾತ್ರಿಯಾಗಿದೆ.

ಕಳೆದ 11 ದಿನಗಳಿಂದ ಭಾರತದಲ್ಲಿ ನಿರಂತರವಾಗಿ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 30,000 ಕ್ಕಿಂತ ಕಡಿಮೆ ಇರುವುದು ದಾಖಲಾಗಿದೆ.

ಒಟ್ಟು ಗುಣಮುಖರಾದವರ/ ಚೇತರಿಸಿಕೊಂಡವರ ಸಂಖ್ಯೆ ಸುಮಾರು 97 ಲಕ್ಷ (96,93,173). ಗುಣಮುಖ ದರ ಕೂಡಾ 95.75%.ಗೆ ಏರಿಕೆಯಾಗಿದೆ.

ಗುಣಮುಖರಾದ ಹೊಸ ಪ್ರಕರಣಗಳಲ್ಲಿ 79.56% ಪ್ರಕರಣಗಳು 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರೀಕೃತಗೊಂಡಿವೆ.

ಮಹಾರಾಷ್ಟ್ರದಲ್ಲಿ ಏಕದಿನದಲ್ಲಿ ಗರಿಷ್ಟ ಅಂದರೆ 7,620 ಹೊಸ ಗುಣಮುಖ ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ 4,808 ಮಂದಿ ಕಳೆದ 24 ಗಂಟೆಗಳಲ್ಲಿ ಗುಣಮುಖರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2,153 ಮಂದಿ ಗುಣಮುಖರಾಗಿದ್ದಾರೆ.

76.48% ಹೊಸ ಪ್ರಕರಣಗಳು 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿವೆ.

ದೈನಿಕ ಗರಿಷ್ಟ ಪ್ರಮಾಣದಲ್ಲಿ ಹೊಸ  ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 6,169 ಪ್ರಕರಣಗಳು ವರದಿಯಾಗಿವೆ. ಬಳಿಕ ಮಹಾರಾಷ್ಟ್ರದಲ್ಲಿ 3,913 ಮತ್ತು ಪಶ್ಚಿಮ ಬಂಗಾಳದಲ್ಲಿ 1,628 ಹೊಸ ಪ್ರಕರಣಗಳು ವರದಿಯಾಗಿದ್ದು, ಅನುಕ್ರಮವಾಗಿ  ಬಳಿಕದ ಸ್ಥಾನಗಳಲ್ಲಿವೆ.

ಕಳೆದ 24 ಗಂಟೆಗಳಲ್ಲಿ 312 ಸಾವುಗಳು ವರದಿಯಾಗಿವೆ.

ಹೊಸ ಸಾವುಗಳ ಸಂಖ್ಯೆಯಲ್ಲಿ 79.81% ಸಾವುಗಳು ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಭವಿಸಿವೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಾವುಗಳು (93) ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ಅನುಕ್ರಮವಾಗಿ 34 ಮತ್ತು 22 ಸಾವುಗಳು ಸಂಭವಿಸುತ್ತಿದ್ದು, ಬಳಿಕದ ಸ್ಥಾನಗಳಲ್ಲಿವೆ.

ಭಾರತದಲ್ಲಿ ದೈನಿಕ ಮೃತ್ಯು ಪ್ರಮಾಣ ಸತತ ಕಡಿಮೆಯಾಗುತ್ತಿದೆ. ಕಳೆದ 12  ದಿನಗಳಲ್ಲಿ ದಿನನಿತ್ಯ ಮೃತಪಡುತ್ತಿದ್ದ ಪ್ರಕರಣಗಳ ಸಂಖ್ಯೆ 400 ಕ್ಕಿಂತ ಕಡಿಮೆ ಇದೆ.

***



(Release ID: 1683326) Visitor Counter : 132