ಸಂಪುಟ
ಭಾರತದಲ್ಲಿ ಡಿ.ಟಿ.ಎಚ್ (ಡೈರೆಕ್ಟ್-ಟು-ಹೋಂ) ಸೇವೆ ಮಾರ್ಗಸೂಚಿಗಳ ಪರಿಷ್ಕರಣೆಗೆ ಸಂಪುಟದ ಅನುಮೋದನೆ
Posted On:
23 DEC 2020 4:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಡೈರೆಕ್ಟ್-ಟು-ಹೋಮ್ (ಡಿಟಿಎಚ್) ಪ್ರಸಾರ ಸೇವೆಯನ್ನು ಒದಗಿಸಲು ಪರವಾನಗಿ ಪಡೆಯುವ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ನಿರ್ಣಯದ ಮುಖ್ಯಾಂಶಗಳು ಇಂತಿವೆ:
- ಪ್ರಸಕ್ತ ಇರುವ 10 ವರ್ಷಗಳ ಬದಲಾಗಿ ಡಿಟಿಎಚ್ ಪರವಾನಗಿಯನ್ನು 20 ವರ್ಷಗಳಿಗೆ ನೀಡಲಾಗುವುದು. ನಂತರ ಒಂದು ಬಾರಿಗೆ 10 ವರ್ಷದಂತೆ ಪರವಾನಗಿಯ ಅವಧಿ ನವೀಕರಿಸಬಹುದು.
- ಪರವಾನಗಿ ಶುಲ್ಕವನ್ನು ಜಿ.ಆರ್. ಶೇ.10ರಿಂದ ಎಜಿಆರ್ ಶೇ.8ಕ್ಕೆ ಪರಿಷ್ಕರಿಸಲಾಗಿದೆ. ಎಜಿಆರ್ ಅನ್ನು ಜಿಆರ್ ನಿಂದ ಜಿಎಸ್ಟಿ ಕಳೆದು ಲೆಕ್ಕ ಹಾಕಲಾಗುವುದು.
- ಪರವಾನಗಿ ಶುಲ್ಕವನ್ನು ಪ್ರಸಕ್ತ ಇರುವ ವಾರ್ಷಿಕ ಆಧಾರದ ಬದಲಾಗಿ ತ್ರೈಮಾಸಿಕದ ಆಧಾರದಲ್ಲಿ ಸಂಗ್ರಹಿಸಲಾಗುವುದು.
- ಡಿಟಿಎಚ್ ನಿರ್ವಹಣೆದಾರರಿಗೆ ಅನುಮತಿ ನೀಡಲಾದ ಪ್ಲಾಟ್ ಫಾರಂ ಚಾನಲ್ ಗಳಾಗಿ ಅನುಮತಿಸಲಾದ ಸಾಮರ್ಥ್ಯದ ಗರಿಷ್ಠ ಶೇ.5ರಷ್ಟು ಕಾರ್ಯಾಚರಣೆ ನಡೆಸಲು ಅನುಮತಿಸಲಾಗುವುದು. ಒಂದು ಬಾರಿಯ ಮರುಪಾವತಿಸಲಾಗದ ನೋಂದಣಿ ಶುಲ್ಕವನ್ನು ಪಿಎಸ್ ಚಾನಲ್ ಗೆ ರೂ .10,000ವನ್ನು ಡಿಟಿಎಚ್ ನಿರ್ವಹಣೆದಾರನಿಗೆ ವಿಧಿಸಲಾಗುವುದು.
- ಡಿಟಿಎಚ್ ನಿರ್ವಹಣೆದಾರರುಗಳ ನಡುವೆ ಮೂಲಸೌಕರ್ಯದ ಹಂಚಿಕೆ. ಡಿಟಿಎಚ್ ನಿರ್ವಹಣೆದಾರರು, ಡಿಟಿಎಚ್ ವೇದಿಕೆಯನ್ನು ಮತ್ತು ಟಿವಿ ವಾಹಿನಿಗಳ ಟ್ರಾನ್ಸ್ ಪೋರ್ಟ್ ಸ್ಟ್ರೀಮ್ ಅನ್ನು ಸ್ವಯಂಪ್ರೇರಿತ ಆಧಾರದಲ್ಲಿ ಹಂಚಿಕೊಳ್ಳಲು ಅನುಮತಿಸಲಾಗುವುದು. ಟಿವಿ ಚಾನಲ್ ಗಳ ವಿತರಕರುಗಳಿಗೆ ತಮ್ಮ ಚಂದಾದಾರರ ನಿರ್ವಹಣಾ ವ್ಯವಸ್ಥೆ (ಎಸ್.ಎಂ.ಎಸ್.) ಗಾಗಿ ಸಮಾನ ಯಂತ್ರಾಂಶ ಮತ್ತು ಕಂಡೀಷನಲ್ ಅಕ್ಸೆಸ್ ಸಿಸ್ಟಮ್ (ಸಿಎಎಸ್.) ಅಪ್ಲಿಕೇಷನ್ ಹಂಚಿಕೆಗೆ ಅನುಮತಿ ನೀಡಲಾಗುವುದು.
- ಪ್ರಸಕ್ತ ಅಸ್ತಿತ್ವದಲ್ಲಿರುವ ಡಿಟಿಎಚ್ ಮಾರ್ಗಸೂಚಿಯಲ್ಲಿನ ಶೇ.49ರಷ್ಟು ಎಫ್.ಡಿ.ಐ. ಮಿತಿಯನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಎಫ್.ಡಿ.ಎಲ್.ನಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರದ (ಡಿಪಿಐಐಟಿಯ) ನೀತಿಯೊಂದಿಗೆ ಹೊಂದಿಸಲಾಗುವುದು.
- ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊರಡಿಸುವ ಡಿಟಿಎಚ್ ಪರಿಷ್ಕೃತ ಮಾರ್ಗಸೂಚಿಯ ರೀತ್ಯ ನಿರ್ಣಯವು ಜಾರಿಯಾಗಲಿದೆ.
ಪ್ರಸ್ತಾಪಿತ ಕಡಿತವು ದೂರಸಂಪರ್ಕ ಕ್ಷೇತ್ರಕ್ಕೆ ಅನ್ವಯವಾಗುವ ಪರವಾನಗಿ ಶುಲ್ಕ ನಿಯಮಕ್ಕೆ ಹೊಂದಿಸುವ ಉದ್ದೇಶಹೊಂದಿದೆ ಮತ್ತು ಇದನ್ನು ನಿರೀಕ್ಷೆಯಂತೆ ಅನ್ವಯಿಸಲಾಗುತ್ತದೆ. ಈ ವ್ಯತ್ಯಾಸವು ಡಿಟಿಎಚ್ ಸೇವಾ ಪೂರೈಕೆದಾರರಿಗೆ ಹೆಚ್ಚಿನ ವ್ಯಾಪ್ತಿಗಾಗಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಇದು ಹೆಚ್ಚಿನ ಕಾರ್ಯಾಚರಣೆಗಳು ಮತ್ತು ಹೆಚ್ಚಿನ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಆ ಮೂಲಕ ಅವರಿಂದ ಪರವಾನಗಿ ಶುಲ್ಕದ ನಿಯಮಿತ ಪಾವತಿಯನ್ನೂ ಹೆಚ್ಚಿಸುತ್ತದೆ. ಪ್ಲಾಟ್ ಫಾರ್ಮ್ ಸೇವೆಗಳಿಗೆ ನೋಂದಣಿ ಶುಲ್ಕವು ಸುಮಾರು ರೂ. 12 ಲಕ್ಷ ರೂ.ಗಳಾಗಿದೆ. ಡಿಟಿಎಚ್ ನಿರ್ವಹಣೆದಾರರು ಮೂಲಸೌಕರ್ಯವನ್ನು ಹಂಚಿಕೊಳ್ಳುವುದರಿಂದ ವಿರಳ ಉಪಗ್ರಹ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಮತ್ತು ಗ್ರಾಹಕರು ಭರಿಸುವ ವೆಚ್ಚವನ್ನು ಕಡಿಮೆ ಮಾಡಬಹುದು. ಈಗಿರುವ ಎಫ್.ಡಿ.ಐ ನೀತಿಯನ್ನು ಅಳವಡಿಸಿಕೊಳ್ಳುವುದರಿಂದ ದೇಶಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಯೂ ಬರಲಿದೆ.
ಡಿಟಿಎಚ್ ಭಾರತದಾದ್ಯಂತದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಡಿಟಿಎಚ್ ವಲಯವು ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಇದು ನೇರವಾಗಿ ಡಿಟಿಎಚ್ ನಿರ್ವಹಣೆದಾರರುಗಳನ್ನು ಮತ್ತು ಕಾಲ್ ಸೆಂಟರ್ ಗಳಲ್ಲಿ ಬೇಕಾಗಿರುವವರನ್ನು ನೇಮಿಸಿಕೊಳ್ಳುವುದರ ಜೊತೆಗೆ ಪರೋಕ್ಷವಾಗಿ ಗಣನೀಯ ಸಂಖ್ಯೆಯಲ್ಲಿ ಬೇರುಮಟ್ಟದಲ್ಲಿ ಸ್ಥಾಪನೆ ಮಾಡುವವರನ್ನು ಕೆಲಸಕ್ಕೆ ನೇಮಕಕ್ಕೆ ಕಾರಣವಾಗುತ್ತದೆ. ತಿದ್ದುಪಡಿ ಮಾಡಲಾದ ಡಿಟಿಎಚ್ ಮಾರ್ಗಸೂಚಿಗಳು ದೀರ್ಘಾವಧಿಯ ಪರವಾನಗಿ ಅವಧಿ ಮತ್ತು ನವೀಕರಣಗಳು, ಸಡಿಲವಾದ ಎಫ್.ಡಿ.ಐ ಮಿತಿಗಳು ಇತ್ಯಾದಿಗಳ ಸ್ಪಷ್ಟತೆಯೊಂದಿಗೆ, ಉದ್ಯೋಗಾವಕಾಶಗಳ ಜೊತೆಗೆ ಡಿಟಿಎಚ್ ವಲಯದಲ್ಲಿ ನ್ಯಾಯಯುತವಾದ ಸ್ಥಿರತೆ ಮತ್ತು ಹೊಸ ಹೂಡಿಕೆಗಳನ್ನು ಖಾತ್ರಿಪಡಿಸುತ್ತದೆ.
***
(Release ID: 1683164)
Visitor Counter : 299
Read this release in:
Gujarati
,
English
,
Urdu
,
Hindi
,
Marathi
,
Manipuri
,
Punjabi
,
Odia
,
Tamil
,
Telugu
,
Malayalam