ಗೃಹ ವ್ಯವಹಾರಗಳ ಸಚಿವಾಲಯ
ಗುರುದೇವ್ ರವೀಂದ್ರನಾಥ ಠಾಗೋರ್, ವಿಶ್ವ ಭಾರತಿ ಮತ್ತು ಶಾಂತಿ ನಿಕೇತನ, ಭಾರತ ಹಾಗು ವಿದೇಶಗಳ ಆಕರ್ಷಣೆಯ ಕೇಂದ್ರ: ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ
ದೇಶದ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ಸಂಪ್ರದಾಯ ಅಥವಾ ಸ್ವಾತಂತ್ರ್ಯ ಸಂಗ್ರಾಮವೇ ಆಗಿರಲಿ, ಪ್ರತಿಯೊಂದು ವಿಚಾರದಲ್ಲೂ, ಬಂಗಾಳವು ದೇಶದ ಇತರ ಭಾಗಗಳಿಗಿಂತ 50 ವರ್ಷ ಮುಂದಿದೆ
ವಿಶ್ವ ಭಾರತಿ ಸದಾ ಜಾತಿ, ಧರ್ಮ, ವರ್ಗವನ್ನು ಮೀರಿ ಪ್ರಯತ್ನ ಮಾಡಿದೆ ಮತ್ತು ಮಾನವತೆಯ ಸಂದೇಶವನ್ನು ಸಾರಿದೆ
ವಿಶ್ವ ಭಾರತಿ ಶತಮಾನೋತ್ಸವ ಅಂಗವಾಗಿ, ಗುರುದೇವ ರವೀಂದ್ರನಾಥ್ ಠಾಗೋರರ ಕಲ್ಪನೆಗಳನ್ನು ನವೀಕರಿಸುವ ಪ್ರಯತ್ನ ಈ ಸಂಸ್ಥೆಯಿಂದ ಆಗಬೇಕು
ಶಾಂತಿನಿಕೇತನ ಮತ್ತು ವಿಶ್ವ ಭಾರತಿ, ದೇಶದ ಶೈಕ್ಷಣಿಕ ವ್ಯವಸ್ಥೆಯ ಚೌಕಟ್ಟಿಗೆ ಕೊಡುಗೆ ನೀಡಿವೆ
50 ವರ್ಷಗಳ ಬಳಿಕ ವಿಶ್ವ ಭಾರತಿಯ 150ನೇ ವಾರ್ಷಿಕೋತ್ಸವ ಆಚರಿಸುವಾಗ, ನಾವು ವಿವಿಧ ಕ್ಷೇತ್ರಗಳಲ್ಲಿ ಔನ್ನತ್ಯ ಸಾಧಿಸಿದ ಕನಿಷ್ಠ 10 ಜನರನ್ನು ಪೋಷಿಸುವ ಮತ್ತು ದೇಶಾದ್ಯಂತ ಗುರುದೇವ್ ಠಾಗೋರ್ ಅವರ ಆಲೋಚನೆಗಳನ್ನು ಹುಟ್ಟುಹಾಕಿ, ಜೀವನ ಮತ್ತು ಸಮಾಜದ ಒಂದು ಭಾಗವನ್ನಾಗಿ ಮಾಡುವ ಗುರಿ ಹೊಂದಬೇಕು
Posted On:
20 DEC 2020 7:31PM by PIB Bengaluru
ಗುರುದೇವ್ ರವೀಂದ್ರ ನಾಥ ಠಾಗೋರ್, ವಿಶ್ವ ಭಾರತಿ ಮತ್ತು ಶಾಂತಿ ನಿಕೇತನಗಳು ಭಾರತ ಮತ್ತು ವಿದೇಶಗಳಲ್ಲೂ ಜನಾಕರ್ಷಣೆಯ ಕೇಂದ್ರಗಳಾಗಿವೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದ್ದಾರೆ. ಇಂದು ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಬುದ್ಧಿ ಜೀವಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ, ಇದು ದೇಶದ ಸಾಂಸ್ಕೃತಿಕ ಪರಂಪರೆಯ ಹೊಸ ಕಲ್ಪನೆಯಿರಲಿ, ಕಲೆ ಮತ್ತು ಸಂಪ್ರದಾಯವೇ ಆಗಿರಲಿ, ಅಥವಾ ಸ್ವಾತಂತ್ರ್ಯ ಹೋರಾಟವೇ ಇರಲಿ, ಪ್ರತಿಯೊಂದು ವಿಚಾರದಲ್ಲೂ ಬಂಗಾಳವು 50 ವರ್ಷಗಳು ಮುಂದಿದೆ ಎಂದರು. ವಿಶ್ವ ಭಾರತಿ ತನ್ನ 100 ವರ್ಷಗಳನ್ನು ಪೂರೈಸುತ್ತಿದೆ ಎಂದೂ ಕೇಂದ್ರ ಗೃಹ ಸಚಿವರು ಹೇಳಿದರು. ಇದು ಸ್ಥಾಪನೆಯಾದ ಸಮಯದಲ್ಲಿ ಕೆಲವು ಆಲೋಚನೆಗಳು ಇದ್ದಿರಬಹುದು, ಮತ್ತು ಈಗ, 100 ವರ್ಷಗಳು ಪೂರ್ಣಗೊಂಡ ನಂತರ, ಗುರುದೇವ್ ರವೀಂದ್ರನಾಥ ಠಾಗೋರ್ ಅವರ ಆಲೋಚನೆಗಳನ್ನು ಈ ಸಂಸ್ಥೆಯಿಂದ ನವೀಕರಿಸುವ ಪ್ರಯತ್ನವಾಗಬೇಕು ಎಂದರು. ದೇಶದ ಶಿಕ್ಷಣ ವ್ಯವಸ್ಥೆಯ ಚೌಕಟ್ಟಿನಲ್ಲಿ ಶಾಂತಿನಿಕೇತನ ಮತ್ತು ವಿಶ್ವ ಭಾರತಿ ಕೊಡುಗೆ ನೀಡಿವೆ ಎಂದು ಅವರು ತಿಳಿಸಿದರು.
1901 ರಲ್ಲಿ ಬ್ರಹ್ಮಚಾರ್ಯಾಶ್ರಮದಿಂದ ಪ್ರಾರಂಭವಾದ ಈ ಪ್ರಯಾಣವು ಭಾರತದ ಸಾಂಸ್ಕೃತಿಕ ಪರಂಪರೆಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಂಕುಚಿತತೆಯ ಎಲ್ಲ ಮಿತಿಗಳನ್ನು ಮೀರಿ ಯೋಚಿಸುವ ಮೂಲಕ ವ್ಯಕ್ತಿಯನ್ನು ನಿರ್ಭಯಗೊಳಿಸುವುದು ಶಿಕ್ಷಣದ ಉದ್ದೇಶ ಎಂದು ಗುರುದೇವರು ಹೇಳಿದರು ಎಂದು ಅವರು ತಿಳಿಸಿದರು. ಗುರುದೇವ ರವೀಂದ್ರನಾಥ್ ಠಾಗೋರ್ ನೀಡಿದ ಮಂತ್ರದ ಪ್ರಕಾರ ಇಲ್ಲಿಂದ ಹೊರಹೊಮ್ಮುವ ವಿಚಾರಗಳು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿದರೆ ಮಾತ್ರ ವಿಶ್ವ ಭಾರತಿಯ ಪಯಣ ಯಶಸ್ವಿಯಾಗುತ್ತದೆ ಎಂದರು. ಐಷಾರಾಮಿ ಜೀವನ, ಬಾಂಧವ್ಯ ಮತ್ತು ಎಲ್ಲಾ ರೀತಿಯ ಸಾಮಾಜಿಕ ಬಂಧಗಳನ್ನು ಮುರಿದು ಶಾಂತಿಯ ಹುಡುಕುವ ವ್ಯಕ್ತಿಗಳ ವ್ಯಕ್ತಿತ್ವ ಅರಳುವಂತೆ ಮಾಡುವುದು ಶಿಕ್ಷಣದ ಉದ್ದೇಶವಾಗಿದೆ ಎಂದ ಶ್ರೀ ಶಾ, ಸತ್ಯವನ್ನು ತಿಳಿದುಕೊಳ್ಳುವ ಅನ್ವೇಷಣೆ ಎಂದಿಗೂ ನಿಲ್ಲುವುದಿಲ್ಲ ಎಂದು ಹೇಳಿದರು.
ವಿಶ್ವ ಭಾರತಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಹಲವು ಜನರನ್ನು ರಾಷ್ಟ್ರಕ್ಕೆ ನೀಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಿಶ್ವ-ಭಾರತಿಯ ಶತಮಾನೋತ್ಸವ ವರ್ಷದಲ್ಲಿ, ಈ ಸಂಪ್ರದಾಯವು ನಿಲ್ಲುವುದಿಲ್ಲ ಎಂಬ ಪ್ರತಿಜ್ಞೆಯನ್ನು ನಾವು ಕೈಗೊಳ್ಳಬೇಕು ಮತ್ತು 50 ವರ್ಷಗಳ ನಂತರ, ವಿಶ್ವ ಭಾರತಿ 150ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುವಾಗ, ವಿವಿಧ ಕ್ಷೇತ್ರಗಳಲ್ಲಿ ಔನ್ನತ್ಯ ಸಾಧಿಸಿದ ಕನಿಷ್ಠ ಹತ್ತು ಜನರನ್ನು ಪೋಷಿಸುವ ಮತ್ತು ಗುರುದೇವ್ ಠಾಗೋರ್ ಅವರ ಆಲೋಚನೆಗಳನ್ನು ದೇಶಾದ್ಯಂತ ಹುಟ್ಟುಹಾಕಿ ಮತ್ತು ಅವುಗಳನ್ನು ಜೀವನ ಮತ್ತು ಸಮಾಜದ ಒಂದು ಭಾಗವನ್ನಾಗಿ ಮಾಡುವ ಗುರಿ ಹೊಂದಬೇಕು ಎಂದರು.
ಬಂಗಾಳದ ಹಲವು ಪುತ್ರರು ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ರಾಜಾರಾಮ್ ಮೋಹನ ರಾಯ್, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಶ್ರೀ ಅರಬಿಂದೋ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮತ್ತು ಸುಭಾಷ್ ಚಂದ್ರ ಬೋಸ್ ಅವರು 19ನೇ ಶತಮಾನದ ನವೋದಯದಲ್ಲಿ ಭಾರತದ ಪರಂಪರೆಯನ್ನು ಶ್ರೀಮಂತಗೊಳಿಸಲು ಶ್ರಮಿಸಿದರು ಎಂದರು. ಗುರುದೇವ್ ಠಾಗೋರ್ ಅವರ ಆಲೋಚನೆಗಳ ಪ್ರಭಾವ ಮತ್ತು ಅವರ ವ್ಯಕ್ತಿತ್ವದ ಹಿರಿಮೆಯನ್ನು ಎರಡು ವಿಭಿನ್ನ ಸಿದ್ಧಾಂತಗಳ - ಮಹಾತ್ಮ ಗಾಂಧಿಜೀಯಿಂದ ಮತ್ತು ಸುಭಾಷ್ ಚಂದ್ರ ಬೋಸ್ ಪಡೆದರು. ಗುರುದೇವ್ ಠಾಗೋರ್ ಅವರಿಂದ ಅವರು ಸ್ಫೂರ್ತಿ ಪಡೆದಿದ್ದರು, ಇದು ಗುರುದೇವ್ ಠಾಗೋರ್ ಅವರ ವಿಚಾರಗಳ ವ್ಯಾಪ್ತಿಯನ್ನು ತೋರಿಸುತ್ತದೆ. ಗುರುದೇವ್ ಠಾಗೋರ್ ಅವರ ಎರಡು ಸಂಯೋಜನೆಗಳು ಎರಡು ರಾಷ್ಟ್ರಗಳಲ್ಲಿ ರಾಷ್ಟ್ರಗೀತೆಯಾಗಿದ್ದು, ಅವರು ವಿಶ್ವದ ಏಕೈಕ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದು ಶ್ರೀ ಶಾ ಹೇಳಿದರು. ಗುರುದೇವ್ ಅವರ ಆಲೋಚನೆಗಳು, ಸಂಸ್ಕೃತಿ, ತತ್ವ ಮತ್ತು ಕಲೆಗಳ ಆಳ ಎಷ್ಟು ಅಗಾಧವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.
ವಿಶ್ವ ಭಾರತಿ ಸದಾ ಜಾತಿ, ಧರ್ಮ ಮತ್ತು ವರ್ಗವನ್ನು ಮೀರಿ ಮಾನವತೆಯ ಸಂದೇಶವನ್ನು ಸಾರುವ ಪ್ರಯತ್ನ ಮಾಡಿದೆ ಎಂದು ಗೃಹ ಸಚಿವರು ತಿಳಿಸಿದರು. ಹಿಂದೂ ಧರ್ಮದಲ್ಲಿ , ತತ್ವಶಾಸ್ತ್ರ, ಸಾಹಿತ್ಯ, ಸಂಗೀತ ಮತ್ತು ಕಲೆಗಳ ಸಂರಕ್ಷಣೆ ಮತ್ತು ಪ್ರಚಾರದ ವ್ಯವಸ್ಥೆ ಇತ್ತು ಮತ್ತು ವಿಶ್ವಭಾರತಿ ಐರೋಪ್ಯ ಮತ್ತು ಇತರ ದೇಶಗಳ ಸಾಹಿತ್ಯ ಮತ್ತು ತತ್ತ್ವಶಾಸ್ತ್ರವನ್ನು ಒಗ್ಗೂಡಿಸಿ ನಮ್ಮ ವೇದಗಳ ವಿಶ್ವ ಭ್ರಾತೃತ್ವದ ಮೂಲ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ಸರ್ವೇ ಭವಂತು ಸುಖಿನ, ಸರ್ವೇಸಂತು ನಿರಾಮಯಾ (ಎಲ್ಲರೂ ಸಂತೋಷವಾಗಿರಬೇಕು, ಯಾರೂ ಅನಾರೋಗ್ಯಕ್ಕೆ ಒಳಗಾಗಬಾರದು) ಎಂಬ ಈ ಮಂತ್ರವನ್ನು ಅರಿತುಕೊಂಡಿದೆ ಎಂದರು. ನಾವು ಗ್ರಾಮೀಣ ಅಭಿವೃದ್ಧಿಯ ಚಿತ್ರವನ್ನು ನವೀಕರಿಸದ ಹೊರತು ನಾವು ಆಧುನಿಕ ರೀತಿಯಲ್ಲಿ ಮುನ್ನಡೆಯುವುದಕ್ಕೆ ಆಗುವುದಿಲ್ಲ, ದೇಶದ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯವಿಲ್ಲ, ಗುರುದೇವರು ವಿಶ್ವಭಾರತಿಯ ಮೂಲಕ ಇದನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು. ಇಲ್ಲಿಂದ ಆರೋಗ್ಯ, ಸ್ವಚ್ಛತೆ, ಕರಕುಶಲ ಮತ್ತು ತಂತ್ರಜ್ಞಾನದಂತಹ ಎಲ್ಲಾ ವಿಚಾರಗಳನ್ನು ಮುಂದುವರಿಯಲಾಯಿತು ಎಂದರು.
ಗುರುದೇವರು ತಮ್ಮಲ್ಲಿದ್ದ ವಿದ್ಯಾರ್ಥಿಯನ್ನು ಕೊನೆಯವರೆಗೂ ಸಾಯಲು ಬಿಡಲಿಲ್ಲ ಮತ್ತು ಅವರು 70 ನೇ ವಯಸ್ಸಿನಲ್ಲಿ ಚಿತ್ರಕಲೆ ಪ್ರಾರಂಭಿಸಿದರು, ಅವರು ಕೊನೆಯುಸಿರೆಳೆಯುವ ಮುನ್ನ 3,000 ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ಬಿಡಿಸಿದ್ದರು, ಒಬ್ಬರು ಕೊನೆಯವರೆಗೂ ಕಲಿಯುವುದನ್ನು ನಿಲ್ಲಿಸಬಾರದು ಎಂದು ಜಗತ್ತಿಗೆ ಸಾರಿದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಗುರುದೇವರ ಸಂಪ್ರದಾಯವನ್ನು ಮುಂದುವರೆಸುವ ಕೆಲಸ ಮಾಡಬೇಕು, ಅದಕ್ಕಾಗಿ ವಿಶ್ವಭಾರತಿ ಮುಕ್ತ ಮನಸ್ಸು ಮತ್ತು ಚಿಂತನೆ ಮುಂದುವರಿಯಬೇಕು ಎಂದು ಶ್ರೀ ಶಾ ಹೇಳಿದರು.
ಗುರುದೇವ್ ಅವರು, ಗದ್ಯ ಮತ್ತು ಕಾವ್ಯದ ಬೃಹತ್ ಭಂಡಾರವನ್ನೇ ನೀಡುವುದರ ಜೊತೆಗೆ, ಇಂತಹ ದೊಡ್ಡ ಸಂಸ್ಥೆಯನ್ನೂ ನಿರ್ವಹಿಸುತ್ತಿದ್ದರು, ಇದು ಖಂಡಿತವಾಗಿಯೂ ಪ್ರಶಂಸನೀಯವಾಗಿದೆ ಮತ್ತು ಮತ್ತೊಮ್ಮೆ ಠಾಗೋರ್ ಅವರ ಚಿಂತನೆಯನ್ನು ಮುನ್ನಡೆಸುವ ಸಮಯ ಬಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಿಶ್ವ ಭಾರತಿ ಅನೇಕ ವಿದ್ವಾಂಸರನ್ನು ದೇಶಕ್ಕೆ ನೀಡಿದೆ. ಮಹಾಶ್ವೇತಾ ದೇವಿ, ನಂದಲಾಲ್ ಬೋಸ್, ಗಾಯತ್ರಿ ದೇವಿ, ಸತ್ಯಜಿತ್ ರೇ ಮತ್ತು ವಿನೋದ್ ಬಿಹಾರಿ ಮುಖರ್ಜಿ ಸೇರಿದಂತೆ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಮಾಡಿದ್ದಾರೆ. ಈ ಸಂಪ್ರದಾಯವು ನಿಲ್ಲುವುದಿಲ್ಲ ಎಂದು ಇಂದು ನಾವು ಸಂಕಲ್ಪ ಮಾಡೋಣ ಎಂದರು.
ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಭಾರತದ ಶ್ರೇಷ್ಠ ಚಿಂತಕ ಗುರುದೇವ ರವೀಂದ್ರ ನಾಥ ಠಾಗೋರ್ ಅವರಿಗೆ ಶಾಂತಿನಿಕೇತನದಲ್ಲಿ ಗೌರವ ನಮನ ಸಲ್ಲಿಸಿದರು. ಶ್ರೀ ಅಮಿತ್ ಶಾ ವಿಶ್ವಭಾರತಿ ವಿಶ್ವವಿದ್ಯಾಲಯದ ಹೆಸರಾಂತ ಸಂಗೀತ ಭವನಕ್ಕೂ ಭೇಟಿ ನೀಡಿದರು.
***
(Release ID: 1682289)
Visitor Counter : 298