ವಾರ್ತಾ ಮತ್ತು ಪ್ರಸಾರ ಸಚಿವಾಲಯ

51 ನೇ ಭಾರತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾಕ್ಕೆ ಚಲನಚಿತ್ರಗಳ ಆಯ್ಕೆ


ಪನೋರಮಾಕ್ಕೆ ಆಯ್ಕೆಯಾದ ಕನ್ನಡದ ‘ಪಿಂಕಿ ಎಲ್ಲಿ?’

Posted On: 19 DEC 2020 1:24PM by PIB Bengaluru

2020 ರ ಭಾರತದ 51 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ಚಲನಚಿತ್ರಗಳ ಆಯ್ಕೆಯನ್ನು ಪ್ರಕಟಿಸಲಾಗಿದೆ. 2021 ರ ಜನವರಿ 16 ರಿಂದ 24 ರವರೆಗೆ 8 ದಿನಗಳ ಕಾಲ ಗೋವಾದಲ್ಲಿ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಆಯ್ದ ಚಲನಚಿತ್ರಗಳನ್ನು ಎಲ್ಲಾ ನೋಂದಾಯಿತ ಪ್ರತಿನಿಧಿಗಳು ಮತ್ತು ಆಯ್ದ ಪ್ರತಿನಿಧಿಗಳಿಗೆ ಪ್ರದರ್ಶಿಸಲಾಗುತ್ತದೆ.

183 ಸಮಕಾಲೀನ ಭಾರತೀಯ ಚಲನಚಿತ್ರಗಳ ಪೈಕಿ ಆಯ್ಕೆ ಮಾಡಲಾಗಿರುವ ಈ ಚಲನಚಿತ್ರಗಳು ಭಾರತೀಯ ಚಲನಚಿತ್ರೋದ್ಯಮದ ಚೈತನ್ಯ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ. ಆಯ್ಕೆ ಸಮಿತಿಗಳ ಪರಿಣಿತರು  ಫೀಚರ್ ಮತ್ತು ನಾನ್ ಫೀಚರ್ ಎರಡೂ ವಿಭಾಗಗಳಲ್ಲಿ ಭಾರತೀಯ ಪನೋರಮಾ ಚಲನಚಿತ್ರಗಳನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ.

ಹನ್ನೆರಡು ಸದಸ್ಯರನ್ನು ಒಳಗೊಂಡ ಫೀಚರ್ ಫಿಲ್ಮ್ ಸಮಿತಿಗೆ ಹೆಸರಾಂತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಶ್ರೀ ಜಾನ್ ಮ್ಯಾಥ್ಯೂ ಮ್ಯಾಥನ್ ಮುಖ್ಯಸ್ಥರಾಗಿದ್ದರು. ಫೀಚರ್ ವಿಭಾಗದ ಜ್ಯೂರಿಯು ಈ ಕೆಳಗಿನ ಸದಸ್ಯರನ್ನು ಹೊಂದಿದ್ದು, ಅವರು ಹೆಸರಾಂತ ಚಲನಚಿತ್ರಗಳು, ಚಲನಚಿತ್ರ ಸಂಸ್ಥೆಗಳು ಮತ್ತು ವೃತ್ತಿಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಒಟ್ಟಾರೆಯಾಗಿ ವೈವಿಧ್ಯಮಯವಾದ ಭಾರತೀಯ ಚಲನಚಿತ್ರ ತಯಾರಿಕಾ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಅವರೆಂದರೆ:

1. ಶ್ರೀ ಡೊಮಿನಿಕ್ ಸಂಗ್ಮಾ, ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ

2. ಶ್ರೀ ಜಡುಮೋನಿ ದತ್ತಾ, ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ

3. ಶ್ರೀಮತಿ ಕಲಾ ಮಾಸ್ಟರ್, ನೃತ್ಯ ಸಂಯೋಜಕಿ

4. ಶ್ರೀ ಕುಮಾರ್ ಸೊಹೊನಿ, ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ

5. ಶ್ರೀಮತಿ ರಮಾ ವಿಜ್, ನಟಿ ಮತ್ತು ನಿರ್ಮಾಪಕಿ

6. ಶ್ರೀ ರಾಮಮೂರ್ತಿ ಬಿ, ಚಲನಚಿತ್ರ ನಿರ್ದೇಶಕ

7. ಶ್ರೀಮತಿ ಸಂಘಮಿತ್ರ ಚೌಧುರಿ, ಚಲನಚಿತ್ರ ನಿರ್ದೇಶಕಿ ಮತ್ತು ಪತ್ರಕರ್ತೆ

8. ಶ್ರೀ ಸಂಜಯ್ ಪೂರಣ್ ಸಿಂಗ್ ಚೌಹಾನ್, ಚಲನಚಿತ್ರ ನಿರ್ದೇಶಕ

9. ಶ್ರೀ ಸತಿಂದರ್ ಮೋಹನ್, ಚಲನಚಿತ್ರ ವಿಮರ್ಶಕ ಮತ್ತು ಪತ್ರಕರ್ತ

10. ಶ್ರೀ ಸುಧಾಕರ್ ವಸಂತ, ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ

11. ಶ್ರೀ ಟಿ ಪ್ರಸನ್ನ ಕುಮಾರ್, ಚಲನಚಿತ್ರ ನಿರ್ಮಾಪಕ

12. ಶ್ರೀ ಯು ರಾಧಾಕೃಷ್ಣನ್, ಮಾಜಿ ಕಾರ್ಯದರ್ಶಿ, ಎಫ್ಎಫ್ಎಸ್ಐ

 

ಭಾರತೀಯ ಪನೋರಮಾ ಫೀಚರ್ ಫಿಲ್ಮ್ ಆಯ್ಕೆ ಸಮಿತಿಯು 20 ಚಲನಚಿತ್ರಗಳನ್ನು ಆಯ್ಕೆ ಮಾಡಿದೆ. ಭಾರತೀಯ ಪನೋರಮಾ 2020 ರ ಉದ್ಘಾಟನಾ ಚಲನಚಿತ್ರವಾಗಿ ತುಷಾರ್ ಹೀರಾನಂದಾನಿ ನಿರ್ದೇಶನದ ಸಾಂಡ್ ಕಿ ಆಂಖ್ (ಹಿಂದಿ) ಚಿತ್ರ ಆಯ್ಕೆಯಾಗಿದೆ.

ಭಾರತ ಚಲನಚಿತ್ರ ಮಂಡಳಿ (ಎಫ್‌ಎಫ್‌ಐ) ಮತ್ತು ನಿರ್ಮಾಕರ ಸಂಘದ ಶಿಫಾರಸುಗಳ ಆಧಾರದ ಮೇಲೆ ಡಿಎಫ್‌ಎಫ್‌ನ ಆಂತರಿಕ ಸಮಿತಿಯು 2020 ರ 51 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ಮೂರು ಮುಖ್ಯವಾಹಿನಿಯ ಚಲನಚಿತ್ರಗಳನ್ನು ಆಯ್ಕೆ ಮಾಡಿದೆ.

ಭಾರತೀಯ ಪನೋರಮಾ 2020 ಕ್ಕೆ ಆಯ್ಕೆಯಾದ 23 ಚಲನಚಿತ್ರಗಳ ಪಟ್ಟಿ ಹೀಗಿದೆ:

ಕ್ರ. ಸಂ.

ಚಲನಚಿತ್ರ ಹೆಸರು

ಭಾಷೆ

ನಿರ್ದೇಶಕರು

1

ಬ್ರಿಡ್ಜ್

ಅಸ್ಸಾಮಿ

ಕೃಪಾಳ್ ಕಲಿತಾ

2

ಅವಿಜಾತ್ರಿಕ್

ಬೆಂಗಾಳಿ

ಶುಭ್ರಜಿತ್ ಮಿಶ್ರಾ

3

ಬ್ರಹ್ಮ ಜೇನ್ ಗೋಪೊನ್ ಕೊಮ್ಮೋತಿ

ಬೆಂಗಾಳಿ

ಅರಿತ್ರಾ ಮುಖರ್ಜಿ

4

ಎ ಡಾಗ್ ಆ್ಯಂಡ್ ಹಿಸ್ ಮ್ಯಾನ್

ಚತ್ತೀಸ್ ಗಢಿ

ಸಿದ್ಆರ್ಥ ತ್ರಿಪಾಠಿ

5

ಅಪ್ ಅಪ್ & ಅಪ್

ಇಂಗ್ಲಿಷ್

ಗೋವಿಂದ್ ನಿಹಲಾನಿ

6

ಆವರ್ತನ್

ಹಿಂದಿ

ದರ್ಬಾ ಸಹಾಯ್

7

ಸಾಂಡ್ ಕಿ ಆಂಖ್

ಹಿಂದಿ

ತುಷಾರ್ ಹೀರಾನಂದಾನಿ

8

ಪಿಂಕಿ ಎಲ್ಲಿ?

ಕನ್ನಡ

ಪೃಥ್ವಿ ಕೊಣನೂರು

9

ಸೇಫ್

ಮಲಯಾಳಂ

ಪ್ರದೀಪ್ ಕಲಿಪುರಾಯತ್

10

ಟ್ರಾನ್ಸ್

ಮಲಯಾಳಂ

ಅನ್ವರ್ ರಷೀದ್

11

ಕೆಟ್ಟಿಯೊಳಾನು ಎಂಟೆ ಮಲಖಾ

ಮಲಯಾಳಂ

ನಿಸ್ಸಾಮ್ ಬಷೀರ್

12

ತಹಿರಾ

ಮಲಯಾಳಂ

ಸಿದ್ದಿಕ್ ಪರವೂರ್

13

ಈಗಿ ಕೋನಾ

ಮಣಿಪುರಿ

ಬಾಬ್ಬಿ ವಹೆಂಗಬಾಮ್

14

ಜೂನ್

ಮರಾಠಿ

ವೈಭವ್ ಕಿಸ್ತಿ ಮತ್ತು ಸಹೃದ್ ಗೋಡಬೋಲೆ

15

ಪ್ರವಾಸ್

ಮರಾಠಿ

ಶಶಾಂಕ್ ಉದಪುರ್ಕರ್

16

ಕರ್ತಾನಿಸಾಂಚಿ ವಾರಿ

ಮರಾಠಿ

ಮಂಗೇಶ್ ಜೋಷಿ

17

ಕಾಲಿರಾ ಅತೀತ

ಒರಿಯಾ

ನೀಲಾ ಮಧಬ್ ಪಾಂಡಾ

18

ನಮೋ

ಸಂಸ್ಕೃತ

ವಿಜೀಶ್ ಮಣಿ

19

ಥಾಯ್ನ್

ತಮಿಳು

ಗಣೇಶ್ ವಿನಾಯಕನ್

20

ಗರ್ಥರ್ನ್

ತೆಲುಗು

ಕಿರಣ್ ಕೊಂಡಮಾದುಗುಲ

 

 

ಮುಖ್ಯವಾಹಿನಿ ಚಿತ್ರಗಳು

 

 

 

21

ಅಸುರನ್

ತಮಿಳು

ವೇಟ್ರಿ ಮಾರನ್

22

ಕಪ್ಪೆಲಾ

ಮಲಯಾಳಂ

ಮುಹಮದ್ ಮುಸ್ತಪಾ

23

ಚಿಚ್ಚೋರೆ

ಹಿಂದಿ

ನಿತೆಶ್ ತಿವಾರಿ

 

ನಾನ್ ಫೀಚರ್ ಚಿತ್ರಗಳು

ಭಾರತೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾದ ನಾನ್ ಫೀಚರ್ ವಿಭಾಗಕ್ಕೆ ಆಯ್ಕೆ ಸಮಿತಿಯು ಸಾಮಾಜಿಕವಾಗಿ ಮತ್ತು ಕಲಾತ್ಮಕವಾಗಿ ರೋಮಾಂಚಕವಾದ ಸಮಕಾಲೀನ ಚಿತ್ರಗಳನ್ನು ಆಯ್ಕೆ ಮಾಡಿದೆ.

ಭಾರತದ 51 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ಅಡಿಯಲ್ಲಿ ಆಯ್ಕೆಯಾದ ನಾನ್-ಫೀಚರ್ ಚಲನಚಿತ್ರಗಳನ್ನು 2021ರ ಜನವರಿ 16 ರಿಂದ 24 ರವರೆಗೆ ಗೋವಾದಲ್ಲಿ ಪ್ರದರ್ಶಿಸಲಾಗುತ್ತದೆ,

143 ಸಮಕಾಲೀನ ನಾನ್ ಫೀಚರ್ ಚಲನಚಿತ್ರಗಳ ಪೈಕಿ ಆಯ್ಕೆಯಾಗಿರುವ ಚಲನಚಿತ್ರಗಳು ನಮ್ಮ ಉದಯೋನ್ಮುಖ ಮತ್ತು ಸ್ಥಾಪಿತ ಚಲನಚಿತ್ರ ನಿರ್ದೇಶಕರ ಸಮಕಾಲೀನ ಭಾರತೀಯ ಮೌಲ್ಯಗಳನ್ನು ದಾಖಲಿಸುವ, ಮನರಂಜನೆ ನೀಡುವ ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ತೋರಿಸುತ್ತವೆ

ಏಳು ಸದಸ್ಯರ ನಾನ್-ಫೀಚರ್ ಆಯ್ಕೆ ಸಮಿತಿಗೆ ಹೆಸರಾಂತ ಫೀಚರ್ ಮತ್ತು ಸಾಕ್ಷ್ಯಚಿತ್ರ ನಿರರ್ದೇಶಕ ಶ್ರೀ. ಹೋಬಮ್ ಪಬನ್ ಕುಮಾರ್ ಅಧ್ಯಕ್ಷರಾಗಿದ್ದರು. ಸಮಿತಿಯ ಸದಸ್ಯರು ಹೀಗಿದ್ದಾರೆ:

1. ಶ್ರೀ ಅತುಲ್ ಗಂಗ್ವಾರ್, ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ

2. ಶ್ರೀ ಜ್ವಾಂಗ್ಡಾವೊ ಬೊಡೊಸಾ, ಚಲನಚಿತ್ರ ನಿರ್ದೇಶಕ

3. ಶ್ರ. ಮಂದರ್ ತಲೌಲಿಕರ್, ಚಲನಚಿತ್ರ ನಿರ್ದೇಶಕ

4. ಶ್ರೀ ಸಾಜಿನ್ ಬಾಬು, ಚಲನಚಿತ್ರ ನಿರ್ದೇಶಕ

5. ಶ್ರೀ ಸತೀಶ್ ಪಾಂಡೆ, ನಿರ್ಮಾಪಕ ಮತ್ತು ನಿರ್ದೇಶಕ

6. ಶ್ರೀಮತಿ ವೈಜಯಂತಿ ಆಪ್ಟೆ, ಚಿತ್ರಕಥೆಗಾರ್ತಿ ಮತ್ತು ನಿರ್ಮಾಪಕಿ

 

ಭಾರತೀಯ ಪನೋರಮಾ, 2020 ರ ಆರಂಭಿಕ ನಾನ್-ಫೀಚರ್ ಚಿತ್ರಕ್ಕಾಗಿ ಅಂಕಿತ್ ಕೊಥಾರಿ ನಿರ್ದೇಶನದ ಪಾಂಚಿಕಾ ಆಯ್ಕೆಯಾಗಿದೆ.

2020 ರ ಭಾರತದ 51 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾದ 20 ನಾನ್-ಫೀಚರ್ ಚಲನಚಿತ್ರಗಳು ಹೀಗಿವೆ:

ಕ್ರ. ಸಂ.

ಚಲನಚಿತ್ರ ಹೆಸರು

ನಿರ್ದೇಶಕರು

ಭಾಷೆ

1

100 ಇಯರ್ಸ್ ಆಫ್ ಕ್ರೈಸೊಟೋಮ್- ಎ ಬಯಾಗ್ರಾಫಿಕಲ್ ಫಿಲ್ಮ್

ಬ್ಲೆಸ್ಸಿ ಇಪೆ ಥಾಮಸ್

ಇಂಗ್ಲಿಷ್

2

ಅಹಿಂಸಾ-ಗಾಂಧಿ: ದ ಪವರ್ ಆಫ್ ದ ಪವರ್ ಲೆಸ್

ರಮೇಶ್ ಶರ್ಮಾ

ಇಂಗ್ಲಿಷ್

3

ಕ್ಯಾಟ್ ಡಾಗ್

ಅಶ್ಮಿತಾ ಗುಹಾ ನಿಯೋಗಿ

ಹಿಂದಿ

4

ಡ್ರಾಮಾ ಕ್ವೀನ್ಸ್

ಸೋಹಿನಿ ದಾಸ್ ಗುಪ್ತಾ

ಇಂಗ್ಲಿಷ್

5

ಗ್ರೀನ್ ಬ್ಲಾಕ್ ಬೆರ್ರೀಸ್

ಪೃಥ್ವಿರಾಗ್ ದಾಸ್ ಗುಪ್ತಾ

ನೇಪಾಳಿ

6

ಹೈವೇ ಆಫ್ ಲೈಫ್

ಮೈಬಮ್ ಅಮರ್ಜಿತ್ ಸಿಂಗ್

ಮಣಿಪುರಿ

7

ಹೋಲಿ ರೈಟ್ಸ್

ಫರ್ಹಾ ಖಾತುನ್

ಹಿಂದಿ

8

ಇನ್ ಅವರ್ ವಲ್ಡ್

ಶ್ರೀಧರ್ ಬಿಎಸ್

ಇಂಗ್ಲಿಷ್

9

ಇನ್ವೆಸ್ಟಿಂಗ್ ಲೈಫ್

ವೈಶಾಲಿ ವಸಂತ್ ಕೆಂದಾಳೆ

ಇಂಗ್ಲಿಷ್

10

ಜಾದೂ

ಶೂರ್ವೀರ್ ತ್ಯಾಗಿ

ಹಿಂದಿ

11

ಜಟ್ ಆಯೀ ಬಸಂತ್

ಪ್ರಶಾಂತ್ ಆನಂದ್

ಪಹಡಿ/ಹಿಂದಿ

12

ಜಸ್ಟಿಸ್ ಡಿಲೇಯ್ಡ್ ಬಟ್ ಡಿಲಿವರ್ಡ್

ಕಾಮಾಕ್ಯ ನಾರಾಯಣ್ ಸಿಂಗ್

ಹಿಂದಿ

13

ಖೀಸಾ

ರಾಜ್ ಪ್ರೀತಂ ಮೋರೆ

ಮರಾಠಿ

14

ಒರು ಪಾಥಿರಾ ಸ್ವಪ್ನಂ ಪೋಲೆ

ಶರಣ್ ವೇಣುಗೋಪಾಲ್

ಮಲಯಾಳಂ

15

ಪಾಂಚಿಕಾ

ಅಂಕಿತ್ ಕೊಠಾರಿ

ಗುಜರಾತಿ

16

ಪಂಢರಾ ಚಿವ್ಡಾ

ಹಿಮಾಂಶು ಸಿಂಗ್

ಮರಾಠಿ

17

ರಾಧಾ

ಬಿಮಲ್ ಪೊದ್ದಾರ್

ಬೆಂಗಾಳಿ

18

ಶಾಂತಾಬಾಯಿ

ಪ್ರತೀಕ್ ಗುಪ್ತಾ

ಹಿಂದಿ

19

ಸ್ಟಿಲ್ ಅಲೈವ್

ಓಂಕಾರ್ ದಿವಾಡ್ಕರ್

ಮರಾಠಿ

20

ದ 14 ಫೆಬ್ರವರಿ & ಬಿಯಾಂಡ್

ಉತ್ಪಲ್ ಕಲಾಲ್

ಇಂಗ್ಲಿಷ್

***



(Release ID: 1681979) Visitor Counter : 392