ವಾರ್ತಾ ಮತ್ತು ಪ್ರಸಾರ ಸಚಿವಾಲಯ

108 ದೇಶಗಳಿಂದ ಒಂದೇ ವಿಷಯದಲ್ಲಿ 2,800 ಚಲನಚಿತ್ರ ತಯಾರಿ, ಜನರ ಅಪಾರ ಪ್ರತಿಭೆಗೆ ಉದಾಹರಣೆ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್


"51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉನ್ನತ ರೀತಿಯಲ್ಲಿ ಆಯೋಜನೆ"

Posted On: 14 DEC 2020 12:58PM by PIB Bengaluru

ಕೊರೊನಾ ವೈರಾಣು ಕುರಿತಂತೆ ಕಿರುಚಿತ್ರಗಳನ್ನು ಆಚರಿಸಲು ಚಲನಚಿತ್ರೋತ್ಸವವನ್ನು ಆಯೋಜಿಸುವ ಆಲೋಚನೆ ಅದ್ಭುತವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಇಂದು ಇಲ್ಲಿ ನಡೆದ ಅಂತಾರಾಷ್ಟ್ರೀಯ ಕೊರೊನಾ ವೈರಾಣು ಕಿರುಚಿತ್ರೋತ್ಸವದಲ್ಲಿ ಮಾತನಾಡಿದ ಶ್ರೀ ಜಾವಡೇಕರ್, ಒಂದೇ ವಿಷಯದ ಕುರಿತಂತೆ 108 ದೇಶಗಳಿಂದ 2,800 ಚಲನಚಿತ್ರಗಳಿಗೆ ಉತ್ಸವ ಸಾಕ್ಷಿಯಾಗಿದ್ದು, ಇದು ಜನರ ಅಪಾರ ಪ್ರತಿಭೆಗೆ ಉದಾಹರಣೆಯಾಗಿದೆ ಎಂದು ಹೇಳಿದರು. ಉತ್ಸವದ ಆಯೋಜಕರನ್ನು ಸಚಿವರು ಅಭಿನಂದಿಸಿದರು.

ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತದ ದೇಶಗಳಲ್ಲಿ ದೊಡ್ಡ ವೈಪರೀತ್ಯಕ್ಕೆ ಕಾರಣವಾಗಿದೆ ಎಂದು ಶ್ರೀ ಜಾವಡೇಕರ್ ಹೇಳಿದರು. ಆದಾಗ್ಯೂ, 2020ರ ಆರಂಭದಲ್ಲಿ ಬಿಕ್ಕಟ್ಟನ್ನು ಗುರುತಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಸಂಕಷ್ಟವನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯವಾಯಿತು ಮತ್ತು ನಂತರ ಭೀತಿಗಳ ವಿರುದ್ಧವೂ ಅವಿಶ್ರಾಂತವಾಗಿ ಶ್ರಮಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಕೊರೊನಾ ವೈರಾಣು ಬಿಕ್ಕಟ್ಟು ಪರಿಹಾರೋಪಾದಿಯಲ್ಲಿದ್ದು, ಭಾರತದಲ್ಲೂ ಲಸಿಕೆ ಲಭ್ಯ, ಪ್ರತಿಕಾಯಗಳು ಸೃಷ್ಟಿಯಾಗುವ ಮುನ್ನ, ಎರಡನೇ ಸುತ್ತಿನ ಲಸಿಕಾ ಕಾರ್ಯದವರೆಗು ಜಾಗೃತಿ ಅವಶ್ಯ ಎಂದು ಅವರು ಎಚ್ಚರಿಕೆ ನೀಡಿದರು.

ಗೋವಾದಲ್ಲಿ ನಡೆಯಲಿರುವ 51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಮಾತನಾಡಿದ ಶ್ರೀ ಜಾವಡೇಕರ್, ಐಎಫ್ಎಫ್ಐ ಅನ್ನು ‘ಉನ್ನತ ಮಟ್ಟದಲ್ಲಿ’ ಆಯೋಜಿಸಲಾಗುವುದು, ಜನರು ಉತ್ಸವವನ್ನು ಆನ್‌ ಲೈನ್‌ ನಲ್ಲಿ ವೀಕ್ಷಿಸಲು ಸಾಧ್ಯವಾಗಲಿದ್ದು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳನ್ನು ಕಡಿಮೆ ಪ್ರೇಕ್ಷಕರೊಂದಿಗೆ ಸ್ಥಳದಲ್ಲಿ ಆಯೋಜಿಸಲಾಗುತ್ತದೆ. ಐಎಫ್‌ಎಫ್‌ಐನ ಈ ಆವೃತ್ತಿಯು 21 ಕಥಾ ಚಲನಚಿತ್ರಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಅಲ್ಪ ಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಭಾರತದಂತ ವಿಶಾಲ ದೇಶದಲ್ಲಿ, ಯಶಸ್ವಿಯಾಗಿ ಕೊರೊನಾ ವೈರಾಣು ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸಿದ್ದಕ್ಕಾಗಿ ಶ್ರೀ ಜಾವಡೇಕರ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯವನ್ನು ಅಭಿನಂದಿಸಿದರು. ಅಂತಹ ವಿಶಾಲವಾದ ಕಿರುಚಿತ್ರಗಳನ್ನು ಒಂದೇ ವೇದಿಕೆಗೆ ಪರಿಚಯಗೊಳಿಸಿದ ತೀರ್ಪುಗಾರರನ್ನು ಮತ್ತು ಉತ್ಸವದ ಆಯೋಜಕರನ್ನು ಅಭಿನಂದಿಸಿದರು.

***


(Release ID: 1680545) Visitor Counter : 186