ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಕೋವಿಡ್-19: ದಿವ್ಯಾಂಗರ ಸಬಲೀಕರಣದ ರಾಷ್ಟ್ರೀಯ ಪ್ರಶಸ್ತಿಗಳಿಗೆ, ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವ ರಾಷ್ಟ್ರೀಯ ಆಯ್ಕೆ ಸಮಿತಿ ಸಭೆ ಮುಂದೂಡಿಕೆ

Posted On: 02 DEC 2020 5:05PM by PIB Bengaluru

ದಿವ್ಯಾಂಗರ ಕೊಡುಗೆ/ ಕೌಶಲ ಗುರುತಿಸಿ ಮತ್ತು ಸರ್ಕಾರಿ ಸಂಸ್ಥೆಗಳು/ ಸಂಘಟನೆಗಳು ನೀಡಿದ ಕೊಡುಗೆ ಹಾಗೂ ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣ ಕ್ಷೇತ್ರದಲ್ಲಿನ ಖಾಸಗಿ ಕಾಯಗಳ ಸೇವೆ ಗುರುತಿಸಿ ಪ್ರತಿವರ್ಷ ವಿಶೇಷ ಚೇತನ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನವಾದ ಡಿಸೆಂಬರ್ 3ರಂದು ದಿವ್ಯಾಂಗರ ಸಬಲೀಕರಣ ಕುರಿತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗತ್ತದೆ.  ಆದರಂತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ದಿವ್ಯಾಂಗರ ಸಬಲೀಕರಣ ಇಲಾಖೆ, 2020ರ ಜುಲೈ 25ರಂದು ಜಾಹೀರಾತು ನೀಡಿ ರಾಷ್ಟ್ರೀಯ ಪ್ರಶಸ್ತಿ 2020ಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅರ್ಜಿಗಳು/ ನಾಮಾಂಕನಗಳನ್ನು ಇಲಾಖೆ ಸ್ವೀಕರಿಸಿತ್ತು.

ತರುವಾಯ, ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳು ಮತ್ತು ದಸ್ತಾವೇಜುಗಳನ್ನು ಸವಿವರವಾಗಿ ಪರಿಶೀಲನೆ ನಡೆಸಲಾಯಿತು. ತದನಂತರ ಅದನ್ನು ರಾಷ್ಟ್ರೀಯ ಆಯ್ಕೆ ಸಮಿತಿಯ ಮುಂದೆ ಮಂಡಿಸಲಾಗುತ್ತದೆ. ಆ ಪ್ರಕಾರವಾಗಿ ರಾಷ್ಟ್ರೀಯ ಆಯ್ಕೆ ಸಮಿತಿಯ ಸಭೆಯನ್ನು  01.12.2020ರಂದು ಕರೆಯಲಾಗಿತ್ತು. ಆದಾಗ್ಯೂ, ಕೋವಿಡ್ -19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಸಭೆಯನ್ನು ಮುಂದೂಡಲಾಗಿದೆ. ಪರಿಸ್ಥಿತಿ ಸುಧಾರಿಸಿದ ತರುವಾಯ ಸಾರ್ವಜನಿಕರಿಗೆ ಪೂರ್ವ ಸೂಚನೆ, ಮಾಹಿತಿಯೊಂದಿಗೆ ರಾಷ್ಟ್ರೀಯ ಆಯ್ಕೆ ಸಮಿತಿಯ ಸಭೆ ನಡೆಯಲಿದೆ.

***



(Release ID: 1677818) Visitor Counter : 211