ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ನಿರಂತರ (ಶೇ.4.74) ಇಳಿಕೆ ಮುಂದುವರಿಕೆ


ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖ

ಭಾರತದಲ್ಲಿ 14 ಕೋಟಿ ದಾಟಿದ ಒಟ್ಟು ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆ

Posted On: 30 NOV 2020 12:02PM by PIB Bengaluru

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಹೊಸದಾಗಿ 38,772 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ, ಹೊಸದಾಗಿ 45,333 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,561 ಪ್ರಕರಣಗಳ ಇಳಿಕೆಯಾಗುವಂತೆ ಮಾಡಿದೆ.

ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ 4,46,952 ಇದ್ದು, ಇದು ಒಟ್ಟು ಪ್ರಕರಣಗಳಲ್ಲಿ ಶೇ.4.74ರಷ್ಟು ಮಾತ್ರವಾಗಿದೆ.

ಹೊಸ ಸೋಂಕು ಪ್ರಕರಣಗಳಿಗೂ ಮತ್ತು ಹೊಸದಾಗಿ ಗುಣಮುಖವಾಗುತ್ತಿರುವ ಪ್ರಕರಣಗಳ ನಡುವೆ ಭಾರಿ ಅಂತರವಿದ್ದು, ಚೇತರಿಕೆ ಪ್ರಮಾಣ ಇಂದು ಶೇ.93.81ರಷ್ಟು ದಾಖಲಾಗಿದೆ. ಒಟ್ಟು ಗುಣಮುಖವಾಗಿರುವ ಪ್ರಕರಣಗಳ ಸಂಖ್ಯೆ 88,47,600. ಸಕ್ರಿಯ ಪ್ರಕರಣಗಳು ಮತ್ತು ಗುಣಮುಖವಾಗಿರುವ ಪ್ರಕರಣಗಳ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದ್ದು, ಸದ್ಯ 84,00,648 ಇದೆ, ಅಂದರೆ ಸಕ್ರಿಯ ಪ್ರಕರಣಗಳ 19.8ಪಟ್ಟು ಹೆಚ್ಚು ಪ್ರಕರಣಗಳು ಗುಣಮುಖವಾಗಿವೆ.

ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕಳೆದ ಒಂದು ತಿಂಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗರಿಷ್ಠ ಪ್ರಮಾಣದ ಇಳಿಕೆ ಕಂಡು ಬಂದಿದೆ.

ಮತ್ತೊಂದೆಡೆ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ದೆಹಲಿ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.  

ಭಾರತದ  ಒಟ್ಟು 14 ಕೋಟಿ ಸೋಂಕು ಪತ್ತೆ ಪರೀಕ್ಷೆಗಳನ್ನು ಮಾಡುವ ಮೂಲಕ ಇಂದು ಕೋವಿಡ್-19 ವಿರುದ್ಧದ ಸಮರದಲ್ಲಿ ಮಹತ್ವದ ಮೈಲಿಗಲ್ಲು ದಾಟಿದೆ,  ಕಳೆದ 24 ಗಂಟೆಗಳಲ್ಲಿ 8,76,173 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತ ಪ್ರತಿದಿನದ ತನ್ನ ಸೋಂಕು ಪತ್ತೆ ಪರೀಕ್ಷೆಗಳ ಪ್ರಮಾಣವನ್ನು 15ಲಕ್ಷಕ್ಕೆ ಹೆಚ್ಚಳ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಪತ್ತೆಯಾಗಿರುವ ಸೋಂಕು ಪ್ರಕರಣಗಳಲ್ಲಿ ಶೇ.78.31ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 5,643 ಪ್ರಕರಣಗಳು ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ 5,544 ಪ್ರಕರಣಗಳು ಮತ್ತು ದೆಹಲಿಯಲ್ಲಿ ನಿನ್ನೆ 4906 ಹೊಸ ಪ್ರಕರಣಗಳು ದೃಢಪಟ್ಟಿವೆ.

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.76.94ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಕೋವಿಡ್ ನಿಂದ ಚೇತರಿಸಿಕೊಂಡವರಲ್ಲಿ ದೆಹಲಿಯಲ್ಲಿ ಅತ್ಯಧಿಕ ಸಂಖ್ಯೆಯ 6,325 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 5,861 ಸೋಂಕಿತರು ಗುಣಮುಖವಾಗಿದ್ದರೆ, ಮಹಾರಾಷ್ಟ್ರದಲ್ಲಿ 4,362 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 443 ಸೋಂಕಿತರು ಸಾವನಪ್ಪಿದ್ದು, ಅವುಗಳಲ್ಲಿ ಶೇ.78.56ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.ದೇಶದಲ್ಲಿ ರಾಷ್ಟ್ರೀಯ ಸರಾಸರಿ ಮರಣ ಪ್ರಮಾಣ ಶೇ 1.45ಕ್ಕೆ ಇಳಿದಿದೆ. ಜಾಗತಿಕವಾಗಿ(ಸದ್ಯ ಶೇ.99.4 ಇದೆ) ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ ಸಾವಿನ ಪ್ರಮಾಣ ಇದೆ.

ಒಟ್ಟು ಮರಣ ಹೊಂದಿದ ಸೋಂಕಿತರಲ್ಲಿ ಮಹಾರಾಷ್ಟ್ರದಲ್ಲಿ ಶೇ.19.18ರಷ್ಟು ಅಂದರೆ 85 ಸಾವು ಸಂಭವಿಸಿವೆ. ದೆಹಲಿಯಲ್ಲಿ ಸಾವಿನ ಪ್ರಮಾಣ 68 ಮತ್ತು ಪಶ್ಚಿಮ ಬಂಗಾಳದಲ್ಲಿ 54 ವರದಿಯಾಗಿವೆ.

***


(Release ID: 1677188) Visitor Counter : 210