ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಸಂಬಂಧ ಮುಖ್ಯಮಂತ್ರಿಗಳ ವರ್ಚುವಲ್ ಸಭೆಯ ಸಮಾರೋಪದಲ್ಲಿ ಪ್ರಧಾನಿ ಭಾಷಣ

Posted On: 24 NOV 2020 6:54PM by PIB Bengaluru

ಪ್ರಾರಂಭದಲ್ಲಿ, ನಾನು ಗೌರವಾನ್ವಿತ ಮುಖ್ಯಮಂತ್ರಿಗಳು, ಅನಿಸಿಕೆಗಳ ಮುಖ್ಯಾಂಶಗಳನ್ನು  ಬಹಳ ಗಂಭೀರವಾಗಿ ಪ್ರಸ್ತುತ ಪಡಿಸಿರುವುದಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ರಾಜ್ಯಗಳಿಗೆ ನನ್ನ ಕೋರಿಕೆ ಏನೆಂದರೆ, ಅಧಿಕಾರಿಗಳ ಮಟ್ಟದಲ್ಲಿ ಎಲ್ಲಾ ರಾಜ್ಯಗಳು ಎಲ್ಲಾ ಚರ್ಚೆಗಳಲ್ಲಿ ಪಾಲ್ಗೊಂಡಿವೆ, ನಮ್ಮೆದುರು ವಿಶ್ವದ ಅನುಭವವೂ ಇದೆ, ಆದರೆ ಮುಖ್ಯಮಂತ್ರಿಗಳು ತಮ್ಮದೇ ಆದ ವಿಶಿಷ್ಟ ಅನುಭವ ಹೊಂದಿರುವುದು ಸಾಧ್ಯವಿದೆ.

ಸಾರ್ವಜನಿಕೆ ಬದುಕಿನಲ್ಲಿ ಕೆಲಸ ಮಾಡುತ್ತಿರುವ ಜನರು ವಿಶೇಷ ಚಿಂತನೆಯನ್ನು, ದೂರದೃಷ್ಟಿಯನ್ನು ಹೊಂದಿರುತ್ತಾರೆ. ನೀವು ಬಹಳ ಪ್ರಮುಖವಾದ ವಿಷಯಗಳನ್ನು ಪ್ರಸ್ತಾಪಿಸಿರುವುದರಿಂದ, ಆದಷ್ಟು ಬೇಗ ಅವುಗಳು ಲಿಖಿತವಾಗಿ ಬಂದರೆ, ಆಗ ನಮಗೆ ನಮ್ಮ ಕಾರ್ಯತಂತ್ರವನ್ನು ರೂಪಿಸಲು ಸುಲಭವಾಗುತ್ತದೆ. ಇದು ನನ್ನ ಕೋರಿಕೆ. ಮತ್ತು ಇದನ್ನು ಯಾರ ಮೇಲೂ ಹೇರಲಾಗದು. ಭಾರತ ಸರಕಾರ ತನ್ನಷ್ಟಕ್ಕೆ ತಾನೇ ಯಾರ ಸಲಹೆಯನ್ನೂ ಕೇಳದೆ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದಾಗಬಾರದು. ನಾವು ಒಗ್ಗೂಡಿ ಕೆಲಸ ಮಾಡಬೇಕಾಗಿದೆ, ಆದುದರಿಂದ ಪ್ರತಿಯೊಬ್ಬರ ಸಲಹೆಯೂ ಇಲ್ಲಿ ಬಹು ಮುಖ್ಯ.

ಕೊರೊನಾ ಸೋಂಕಿಗೆ ಸಂಬಂಧಿಸಿ ಇಂದಿನ ಚರ್ಚೆಯಲ್ಲಿ ಬಹಳಷ್ಟು ಮಾಹಿತಿಗಳು ಲಭಿಸಿವೆ. ಇಂದು ಇದಕ್ಕೆ ಮೊದಲು ನಾನು ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಹದಗೆಡುತ್ತಿರುವ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿದೆ. ಲಸಿಕೆಗೆ ಸಂಬಂಧಿಸಿ ಹೇಳುವುದಾದರೆ, ಲಸಿಕೆಗಳ ಸ್ಥಿತಿ ಗತಿ ಮತ್ತು ವಿತರಣೆಯ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ. ಮಾಧ್ಯಮಗಳು ಏನು ಹೇಳುತ್ತಿವೆಯೋ, ಅದಕ್ಕಿಂತ ಭಿನ್ನವಾಗಿದೆ ಸ್ಥಿತಿ. ನಾವು ವ್ಯವಸ್ಥೆಯ ಭಾಗವಾಗಿರುವುದರಿಂದ, ನಾವು ದೃಢ ನಿಲುವಿನಿಂದ ಮುಂದುವರೆಯಬೇಕಾಗಿದೆ. ಪರಿಸ್ಥಿತಿ ಈಗ ಸ್ವಲ್ಪ ಸ್ಪಷ್ಟವಾಗಿದೆ.

ನಾವೆಲ್ಲರೂ ಅಪರಿಚಿತ ಶಕ್ತಿಯ ವಿರುದ್ದ ಸೆಣಸಾಡಬೇಕಾದಂತಹ ಸವಾಲನ್ನು ಎದುರಿಸಬೇಕಾದ ಕಾಲ ಒಂದಿತ್ತು. ಆದರೆ ದೇಶದ ಸಾಮೂಹಿಕ ಪ್ರಯತ್ನಗಳು ಸವಾಲನ್ನು ಎದುರಿಸಿದವು ಮತ್ತು ನಷ್ಟವನ್ನು ಅತ್ಯಂತ ಕಡಿಮೆ ಪ್ರಮಾಣಕ್ಕೆ ಸೀಮಿತ ಮಾಡಿದವು

ಗುಣಮುಖ ದರ ಮತ್ತು ಸಾವಿನ ಪ್ರಮಾಣವನ್ನು ಪರಿಗಣಿಸಿದರೆ, ಭಾರತದ ಪರಿಸ್ಥಿತಿ ವಿಶ್ವದ ಬಹುತೇಕ ರಾಷ್ಟ್ರಗಳಿಗಿಂತ ಉತ್ತಮವಾಗಿದೆ. ದೇಶದಲ್ಲಿ ಪರೀಕ್ಷೆಯಿಂದ ಹಿಡಿದು ಚಿಕಿತ್ಸೆಯವರೆಗೆ ಬೃಹತ್ ಜಾಲ ನಮ್ಮ ದೃಢ ಪ್ರಯತ್ನಗಳೊಂದಿಗೆ ಕಾರ್ಯಾಚರಿಸುತ್ತಿದೆ. ಜಾಲ ಸತತ ವಿಸ್ತರಣೆಯಾಗುತ್ತಿದೆ.

ಪಿ.ಎಂ. ಕೇರ್ಸ್ ಅಡಿಯಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರುಗಳ ಪೂರೈಕೆಯನ್ನು ಖಾತ್ರಿಗೊಳಿಸಲು ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ಆಮ್ಲಜನಕ ಉತ್ಪಾದನೆಗೆ ಸಂಬಂಧಿಸಿ ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಸ್ವಾವಲಂಬಿಯಾಗಿಸಲು ಪ್ರಯತ್ನಗಳು ಜಾರಿಯಲ್ಲಿವೆ. ಆದುದರಿಂದ 160 ಆಮ್ಲಜನಕ ಸ್ಥಾವರಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪಿ.ಎಂ. ಕೇರ್ಸ್ ನಿಧಿಯಡಿ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸಾವಿರಾರು ಹೊಸ ವೆಂಟಿಲೇಟರುಗಳನ್ನು ಖಾತ್ರಿಪಡಿಸಲಾಗಿದೆ. ಪಿ.ಎಂ. ಕೇರ್ಸ್ ನಿಧಿಯಡಿ ವೆಂಟಿಲೇಟರುಗಳಿಗಾಗಿ ಎರಡು ಸಾವಿರ ಕೋಟಿ ರೂಪಾಯಿಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ.

ಸ್ನೇಹಿತರೇ,

ಕೊರೊನಾ ಹಬ್ಬಿದ ನಂತರದ ಕಳೆದ 8-10 ತಿಂಗಳಲ್ಲಿ ಪಡೆದ ಅನುಭವ, ಪರಿಣತಿಗಳ ಹಿನ್ನೆಲೆಯಲ್ಲಿ ದೇಶವು ಸಾಕಷ್ಟು ದತ್ತಾಂಶಗಳನ್ನು ಹೊಂದಿದೆ. ಕೊರೊನಾ ನಿರ್ವಹಣೆಗೆ ಸಂಬಂಧಿಸಿ ಸಮಗ್ರ ಅನುಭವ ಹೊಂದಲಾಗಿದೆ. ಭವಿಷ್ಯದ ಕಾರ್ಯತಂತ್ರವನ್ನು ರೂಪಿಸುವಾಗ , ನಾವು ಕಳೆದ ಕೆಲವು ತಿಂಗಳುಗಳಲ್ಲಿ ಸಮಾಜ ಮತ್ತು ಜನತೆ ಹೇಗೆ ಪ್ರತಿಕ್ರಿಯೆ ಮಾಡಿತು ಎಂಬುದನ್ನು ಅರಿತುಕೊಂಡು ಮುಂದಡಿ ಇಡಬೇಕಾದ ಅಗತ್ಯವಿದೆ ಎಂಬುದು ನನ್ನ ಚಿಂತನೆಯಾಗಿದೆ. ನೋಡಿ, ಭಾರತದ ಜನತೆಯ ವರ್ತನೆ ವಿವಿಧ ಹಂತಗಳಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ವ್ಯತಿರಿಕ್ತ ಆಗಿತ್ತು.

ಮೊದಲ ಹಂತದಲ್ಲಿ ಅಲ್ಲಿ ಭಾರೀ ಆತಂಕ, ಭಯ ಇತ್ತು; ಯಾರೊಬ್ಬರಿಗೂ ತನಗೆ ಏನಾಗುತ್ತದೆ ಎಂಬುದು ಗೊತ್ತಿರಲಿಲ್ಲ. ಮತ್ತು ಇಡೀ ವಿಶ್ವದಲ್ಲಿಯೂ ಇಂತಹದೇ ಸ್ಥಿತಿ ಇತ್ತು. ಪ್ರತಿಯೊಬ್ಬರೂ ಭಯ ಭೀತರಾಗಿದ್ದರು ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಿದ್ದರು. ಆರಂಭದಲ್ಲಿ ಆತ್ಮಹತ್ಯೆಯ ಘಟನೆಗಳೂ ನಡೆದವು. ಕೆಲವು ತಮಗೆ ಕೊರೊನಾ ಬಂದಿದೆ ಎಂದು ತಿಳಿದಾಗ ಆತ್ಮಹತ್ಯೆ ಮಾಡಿಕೊಂಡರು.

ಬಳಿಕ ನಿಧಾನವಾಗಿ ಎರಡನೆ ಹಂತ ಬಂದಿತು. ಎರಡನೇ ಹಂತದಲ್ಲಿ ಜನರಲ್ಲಿ ಭಯ ಇನ್ನೂ ಇತ್ತು, ಮತ್ತು ಅವರು ಇತರರನ್ನು  ಸಂಶಯಿಸತೊಡಗಿದರು. ಯಾರಿಗಾದರೂ ಕೊರೊನಾ ಬಂದರೆ ಅದು ಗಂಭೀರ ವಿಷಯ ಎಂದವರು ಭಾವಿಸತೊಡಗಿದರು ಮತ್ತು ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. ರೀತಿಯಾಗಿ ಮನೆಯೊಳಗೆ ಒಂದು ವೈರತ್ವ ಇತ್ತು. ಖಾಯಿಲೆಯ ಕಾರಣಕ್ಕೆ ಸಮಾಜದಿಂದ ಬಹಿಷ್ಕಾರದ ಭಯ ಜನರಲ್ಲಿ ಮೂಡಿತ್ತುಇದರಿಂದಾಗಿ ಅನೇಕರು ಕೊರೊನಾದ ಸೋಂಕನ್ನು ಗುಟ್ಟಾಗಿಡಲಾರಂಭಿಸಿದರು. ಜನರಿಗೆ ಇದನ್ನು ತಿಳಿಯಗೊಡಬಾರದು , ಅವರು ಅವರು ತಮ್ಮನ್ನು ಸಮಾಜದಿಂದ ಪ್ರತ್ಯೇಕಿಸುತ್ತಾರೆ ಎಂದು ಭಾವಿಸತೊಡಗಿದರು. ನಿಧಾನವಾಗಿ ಜನರು ವಾಸ್ತವವನ್ನು ಅರಿತುಕೊಂಡರು ಮತ್ತು ಅದರಿಂದ ಹೊರಬರಲಾರಂಭಿಸಿದರು.

ಬಳಿಕೆ ಮೂರನೇ ಹಂತ ಬಂದಿತು. ಜನರು ಜಾಗರೂಕರಾದರು. ಅವರು ತಮಗೆ ಕೊರೊನಾ ಬಂದಿರುವುದನ್ನು ತಿಳಿಯಪಡಿಸತೊಡಗಿದರು ಮತ್ತು ತಾವು ಐಸೋಲೇಶನ್ನಿಗೆ ಹೋಗುತ್ತಿರುವುದಾಗಿ, ಹೇಳಿದ್ದಲ್ಲದೆ, ಇತರರಿಗೂ ಇದನ್ನು ಅನುಸರಿಸಲು ಕೋರತೊಡಗಿದರು. ರೀತಿಯಲ್ಲಿ ಜನರು ತಾವೇ ಇತರರಿಗೆ ಮನವರಿಕೆ ಮಾಡಿಕೊಡತೊಡಗಿದರು.

ಜನರು ಬಹಳ ಗಂಭೀರವಾಗಿರುತ್ತಿದ್ದುದು ಮತ್ತು ಜಾಗರೂಕರಾಗಿರುತ್ತಿದ್ದುದರ ಬಗ್ಗೆ ನಿಮಗೂ ಅರಿವಿರಬಹುದು. ಮೂರನೇ ಹಂತದ ಬಳಿಕ ನಾವೀಗ ನಾಲ್ಕನೇ ಹಂತದಲ್ಲಿದ್ದೇವೆ. ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಹೆಚ್ಚುತ್ತಿರುವಂತೆಯೇ, ಜನರು ವೈರಸ್ ಹಾನಿಯನ್ನು ಉಂಟುಮಾಡುವುದಿಲ್ಲ ಎಂಬುದನ್ನು ಅರಿತರು, ಅದು ದುರ್ಬಲಗೊಂಡಿದೆ ಎಂಬುದನ್ನೂ ಅರಿತುಕೊಂಡರು. ಹಲವು ಮಂದಿ ಒಂದು ವೇಳೆ ತಾವು ಯಾವುದಾದರೊಂದು ಸಂದರ್ಭದಲ್ಲಿ ಅಸ್ವಸ್ಥಗೊಂಡರೂ ಗುಣಮುಖರಾಗುತ್ತೇವೆ ಎಂದು ಭಾವಿಸಲಾರಂಭಿಸಿದರು.

ಇದರಿಂದಾಗಿ, ಎಲ್ಲಾ ಕಡೆಯೂ ನಿರ್ಲಕ್ಷ ಹರಡಿತು. ಮತ್ತು ಅದರಿಂದಾಗಿ, ಹಬ್ಬಗಳಿಗೆ ಮೊದಲು, ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನಾನು ಪ್ರತಿಯೊಬ್ಬರಿಗೂ ಕೈಮುಗಿದು ಮನವಿ ಮಾಡಿದೆ, ಲಸಿಕೆ ಇಲ್ಲದಿರುವುದರಿಂದ ಸಂತೃಪ್ತಿಪಡಬಾರದು, ನಾವು ಔಷಧಿಯನ್ನು ಹೊಂದಿಲ್ಲ ಎಂದು ಹೇಳಿದೆ. ಉಳಿದ ದಾರಿ ಎಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದು. ನಾವು ತಪ್ಪುಗಳನ್ನು ಮಾಡಿದೆವು ಮತ್ತು ಅವು ಕೆಲ ಮಟ್ಟಿನ ಹಿನ್ನಡೆಗೆ ಕಾರಣವಾದವು.

ನಾಲ್ಕನೇ ಹಂತದಲ್ಲಿ, ನಾವು ಜನರಲ್ಲಿ ಕೊರೊನಾದ ಗಂಭೀರ ಪರಿಸ್ಥಿತಿಯ ಬಗ್ಗೆ ಮತ್ತೆ ಸೂಕ್ಷ್ಮತ್ವವನ್ನು ಬೆಳೆಸಬೇಕಾಯಿತು. ಲಸಿಕೆಯ ನಿಟ್ಟಿನಲ್ಲಿ ಜನರು ಕಾರ್ಯಪ್ರವೃತ್ತರಾಗಿದ್ದಾರೆ. ನಾವು ಕೊರೊನಾದ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಬೇಕಾಗಿದೆ. ನಾವು ರಕ್ಷಣೆಯನು ಯಾವ ಹಂತದಲ್ಲಿಯೂ ನಿರ್ಲಕ್ಷ್ಯ ಮಾಡುವಂತಿಲ್ಲ. ಹೌದು, ಆರಂಭದಲ್ಲಿ ನಾವು ಕೆಲವು ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾದುದರಿಂದ ನಿರ್ಬಂಧಗಳನ್ನು ಜಾರಿ ಮಾಡಬೇಕಾಯಿತು. ನಾವು ಜನರಲ್ಲಿ ಬಗ್ಗೆ ಅರಿವನ್ನು ಉಂಟು ಮಾಡಬೇಕಾಗಿತ್ತು. ನಮ್ಮಲ್ಲಿ ಈಗ ತಂಡ ಸಿದ್ದವಾಗಿದೆ ಮತ್ತು ಜನರೂ ಸಿದ್ದವಾಗಿದ್ದಾರೆ. ಅವರು ನಿರ್ಬಂಧಗಳನು ಅಳವಡಿಸಿಕೊಂಡರೆ, ಪರಿಸ್ಥಿತಿ ಸುಧಾರಿಸಬಹುದು. ನಾವು ಏನನ್ನು ತಯಾರು ಮಾಡುತ್ತೇವೋ, ಅದನ್ನು ಅದರನ್ವಯವೇ ಜಾರಿಗೆ ತರಬೇಕು. ಮತ್ತು ನಾವು ಸೋಂಕು ಇನ್ನಷ್ಟು ಹರಡದಂತೆ ತಡೆಯಬೇಕು. ಅಲ್ಲಿ ಹೊಸ ಸಮಸ್ಯೆ ಇಲ್ಲ.

ನಾವು ಪ್ರಕ್ಷುಬ್ದತೆಯ ಆಳ ಸಮುದ್ರದಿಂದ ದಡದತ್ತ ಬರುತ್ತಿದ್ದೇವೆ. ನಾನು ಕಾವ್ಯದ ಸಾಲುಗಳಲ್ಲಿ ಒಡಮೂಡಿಸಿದಂತಹ ಪರಿಸ್ಥಿತಿ ಬರಬಾರದು ಎಂಬುದನ್ನು ಆಶಿಸುತ್ತೇನೆ

 हमारी किश्ती भी

वहां डूबी जहां पानी कम था।

ನಮ್ಮ ದೋಣಿ ಕೂಡಾ ಕಡಿಮೆ ನೀರಿರುವಲ್ಲಿ ಕೊಚ್ಚಿಕೊಂಡು ಹೋಗಿದೆ.

ನಾವು ಇಂತಹ ಸ್ಥಿತಿ  ಮರುಕಳಿಸಲು ಬಿಡಬಾರದು.

ಸ್ನೇಹಿತರೇ,

ಸೋಂಕಿನ ಪ್ರಮಾಣ ಕಡಿಮೆಯಾದ ದೇಶಗಳಲ್ಲಿ ಇಂದು ನಾವು ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಕೋಷ್ಟಕಗಳು ಇದನ್ನು ಹೇಳುತ್ತಿವೆ. ಅದೇ ರೀತಿ ನಮ್ಮ ರಾಜ್ಯಗಳಲ್ಲೂ ಕಂಡುಬರುತ್ತಿರುವುದು ಚಿಂತೆಗೆ ಕಾರಣವಾಗಿದೆ. ಆದ್ದರಿಂದ ಸರಕಾರದಲ್ಲಿರುವ ಮತ್ತು ಆಡಳಿತದಲ್ಲಿರುವ ನಾವೆಲ್ಲರೂ ಹೆಚ್ಚು ಜಾಗರೂಕರಾಗಿರಬೇಕಾಗಿದೆ ಮತ್ತು ಎಚ್ಚರದಿಂದ ಇರಬೇಕಾಗಿದೆ. ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ನಾವು ನಮ್ಮೆಲ್ಲಾ ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ. ಪರೀಕ್ಷೆ, ದೃಢ ಪಡಿಸುವಿಕೆ, ಸಂಪರ್ಕ ಪತ್ತೆಗಳಿಗೆ ಗರಿಷ್ಟ ಆದ್ಯತೆ ನೀಡಬೇಕು ಮತ್ತು ದತ್ತಾಂಶಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪುಗಳಾಗಿದ್ದರೆ ಅವುಗಳನ್ನು ಸರಿಪಡಿಸಬೇಕು. ಪಾಸಿಟಿವ್ ದರವನ್ನು 5% ಮಿತಿಯೊಳಗೆ ನಿಯಂತ್ರಿಸಲ್ಪಡಬೇಕು. ಮತ್ತು ನನಗನಿಸುತ್ತದೆ - ನಾವು ಇದು ಯಾಕೆ ಅರ್ಧಾಂಶ ಅಥವಾ ಎರಡು ಪಟ್ಟು ಹೆಚ್ಚಾಗುತ್ತಿದೆ ಎಂಬ ಬಗ್ಗೆ ಸಣ್ಣ ಸಣ್ಣ ವಿಷಯಗಳ ಕುರಿತೂ ಗಮನ ಹರಿಸಬೇಕು ಎಂಬುದಾಗಿ. ರಾಜ್ಯ ಮಟ್ಟಕ್ಕೆ ಬದಲು ನಾವು ಇದನ್ನು ಸ್ಥಳೀಯ ಮಟ್ಟದಲ್ಲಿ ಸಮಾಲೋಚಿಸಿದರೆ, ಬಹುಷಃ ವಿಷಯವನ್ನು ಶೀಘ್ರವಾಗಿ ನಿಭಾಯಿಸಲು ನಾವು ಸಮರ್ಥರಾಗಬಹುದು.

ಎರಡನೆಯದಾಗಿ , ಆರ್.ಟಿ. ಪಿ.ಸಿ.ಆರ್. ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಭಾವನೆಯನ್ನು  ನಾವೆಲ್ಲರೂ ವ್ಯಕ್ತಪಡಿಸಿದ್ದೇವೆ. ಮನೆಯಲ್ಲಿ ಪ್ರತ್ಯೇಕವಾಗಿರಿಸಲ್ಪಡುವ ವ್ಯಕ್ತಿಗಳ ಮೇಲಿನ ನಿಗಾ ಇನ್ನಷ್ಟು ಹೆಚ್ಚಬೇಕು. ಅಲ್ಲಿ ಏನಾದರೂ ಕೊರತೆ ಕಂಡು ಬಂದರೆ ಆಗ , ರೋಗಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆ ತರಲಾಗುತ್ತದೆ  ಮತ್ತು ವ್ಯಕ್ತಿಯನ್ನು ಉಳಿಸಲು ನಮಗೆ ಸಾಧ್ಯವಾಗುವುದಿಲ್ಲ. ಸಮುದಾಯ ಮತ್ತು ಗ್ರಾಮ ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನಾವು ಒದಗಿಸಬೇಕಾಗಿದೆ. ಗ್ರಾಮಗಳ ಬಳಿಯಲ್ಲಿ ಸಾಕಷ್ಟು ಆಮ್ಲಜನಕ ಪೂರೈಕೆ ಲಭ್ಯ ಇರುವಂತೆ ಮತ್ತು ಸೂಕ್ತ ಮೂಲಸೌಕರ್ಯ ಲಭ್ಯ ಇರುವಂತೆ ಖಾತ್ರಿಪಡಿಸಬೇಕು.

ನಮ್ಮ ಗುರಿ ಮರಣ ಪ್ರಮಾಣವನ್ನು ಶೇಖಡಾ 1 ಕ್ಕಿಂತ ಕಡಿಮೆ ಮಾಡುವುದಾಗಿದೆ. ನಾನು ಮೊದಲು ಹೇಳಿದಂತೆ ದೂರ ಪ್ರದೇಶಗಳಲ್ಲಿ ಸಾವುಗಳು ಯಾಕೆ ಸಂಭವಿಸುತ್ತವೆ ಎಂಬುದನ್ನು ಕಂಡು ಹುಡುಕಬೇಕಾದ ಅಗತ್ಯವಿದೆ. ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಗಮನ ನೀಡಿದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಸಮರ್ಥರಾಗುತ್ತೇವೆ. ಮತ್ತು ಒಂದು ಬಹಳ ಮುಖ್ಯ ಸಂಗತಿ ಎಂದರೆ , ಜಾಗೃತಿ ಕಾರ್ಯಕ್ರಮಗಳಲ್ಲಿ  ಕಡಿತ ಮಾಡಬಾರದು. ಕೊರೊನಾ ನಿಯಂತ್ರಣಕ್ಕೆ ಅವಶ್ಯವಾದ ಸಂದೇಶಗಳನ್ನು ಸಮಾಜಕ್ಕೆ ತಿಳಿಸುತ್ತಲೇ ಇರಬೇಕು. ಕೆಲವು  ಸಮಯದ  ಹಿಂದೆ ಇದ್ದಂತೆ, ನಾವು ಪ್ರತೀ ಸಂಘಟನೆಯನ್ನು ಬಳಸಿಕೊಂಡು, ಪ್ರತೀ ಪ್ರಭಾವೀ ವ್ಯಕ್ತಿಯನ್ನು ಒಳಗೊಳಿಸಿಕೊಂಡು ಅದಕ್ಕೆ ಪುನಶ್ಚೇತನ ನೀಡಬೇಕು

ಸ್ನೇಹಿತರೇ,

ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ಲಸಿಕೆ ಕುರಿತ ಸುದ್ದಿಗಳ ಬಗ್ಗೆ ನಿಮಗೆ ಅರಿವಿರಬಹುದು. ಪ್ರದರ್ಶಿಕೆಗಳ ಮೂಲಕ ನಿಮಗೆ ಇದನ್ನು ಈಗಾಗಲೇ ವಿವರಿಸಲಾಗಿದೆ, ದೇಶದಲ್ಲಿ ಮತ್ತು ಜಗತ್ತಿನಲ್ಲಿ ಲಸಿಕೆ ಕುರಿತ ಸಂಶೋಧನೆಯ ಕೆಲಸ ಬಹುತೇಕ ಕೊನೆಯ ಹಂತದಲ್ಲಿದೆ. ಭಾರತ ಸರಕಾರವು ಪ್ರತೀ ಬೆಳವಣಿಗೆಗಳ ಮೇಲೂ ನಿಕಟ ನಿಗಾ ಇರಿಸಿದೆ. ಮತ್ತು ನಾವು ಪ್ರತಿಯೊಬ್ಬರ ಜೊತೆಗೂ ಸಂಪರ್ಕದಲ್ಲಿದ್ದೇವೆ. ಲಸಿಕೆಯ ಒಂದು, ಎರಡು ಅಥವಾ ಮೂರು ಡೋಸ್ ಗಳಿರುತ್ತವೆಯೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅದರ ದರ ಎಷ್ಟು ಎಂಬುದರ ಬಗ್ಗೆಯೂ ನಿರ್ಧಾರವಾಗಿಲ್ಲ.

ಆದರೂ, ನಮ್ಮಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಯಾಕೆಂದರೆ, ಅದನ್ನು ಅಭಿವೃದ್ಧಿಪಡಿಸಲು ಹೊರಟಿರುವವರು, ಕಾರ್ಪೋರೇಟ್ ಜಗತ್ತಿನಲ್ಲಿ ಬೃಹತ್ ದೊಡ್ಡ ಸ್ಪರ್ಧೆ ಇದೆ. ದೇಶಗಳ ನಡುವೆ ರಾಜತಾಂತ್ರಿಕ ಹಿತಾಸಕ್ತಿಯೂ ಇದೆ. ನಾವು ಡಬ್ಲ್ಯು.ಎಚ್.. ಮಾರ್ಗದರ್ಶಿಗಳಿಗೆ ಕಾಯಬೇಕಾಗುತ್ತದೆ. ಆದುದರಿಂದ, ನಾವು ಜಾಗತಿಕ ಪರಿಸ್ಥಿತಿಯನ್ನನುಲಕ್ಷಿಸಿ ಮುಂದಡಿ ಇಡಬೇಕಾಗುತ್ತದೆ. ನಾವು ಭಾರತೀಯ ಅಭಿವೃದ್ಧಿಗಾರರು ಮತ್ತು ಉತ್ಪಾದಕರ ಜೊತೆಗೂ ಸಂಪರ್ಕದಲ್ಲಿದ್ದೇವೆ. ಪ್ರಯತ್ನಗಳು ನಡೆಯುತ್ತಿರುವಂತೆಯೇ, ಜಾಗತಿಕ ನಿಯಂತ್ರಕ ವ್ಯವಸ್ಥೆ ಮತ್ತು ಇತರ ಸರಕಾರಗಳ ಜೊತೆ, ಬಹುರಾಷ್ಟ್ರೀಯ ಸಂಸ್ಥೆಗಳ ಜೊತೆ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳ ಜೊತೆ ಹೆಚ್ಚಿನ ಸಮಾಲೋಚನೆ ಮತ್ತು ಸಕಾಲದಲ್ಲಿ ಮಾಹಿತಿ ಒದಗಿಸುವ  ವ್ಯವಸ್ಥೆಯೊಂದು ಅಲ್ಲಿದೆ.  

ಸ್ನೇಹಿತರೇ,

ಆರಂಭದಿಂದಲೂ, ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವವನ್ನು ಉಳಿಸಲು ನಾವು ಗರಿಷ್ಟ ಅದ್ಯತೆಗಳನ್ನು ನೀಡಿದ್ದೇವೆ. ಈಗ, ಒಮ್ಮೆ ಲಸಿಕೆ ಬಂದರೆ, ಕೊರೊನಾ ಲಸಿಕೆ ಎಲ್ಲರನ್ನೂ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. ಅಲ್ಲಿ ವಿವಾದಗಳಿರಬಾರದು. ಕೊರೊನಾ ಲಸಿಕೆಯ ಮೇಲಣ ಭಾರತದ ಆಂದೋಲನ ಪ್ರತೀ ನಾಗರಿಕರ ಬಗ್ಗೆಯೂ ಹೊಂದಿರುವ ರಾಷ್ಟ್ರೀಯ ಬದ್ಧತೆಯಾಗಿದೆ.

ಇಂತಹ ಬೃಹತ್ ಲಸಿಕಾ ಕಾರ್ಯಕ್ರಮ ಸುಸೂತ್ರವಾಗಿ, ವ್ಯವಸ್ಥಿತವಾಗಿ ಮತ್ತು ಸುಸ್ಥಿರವಾಗಿರುವಂತೆ ಖಾತ್ರಿಪಡಿಸಿಕೊಳ್ಳಬೇಕಿದೆ. ಯಾಕೆಂದರೆ ಇದು ಬಹಳ ಧೀರ್ಘಾವಧಿಯ ವ್ಯವಹಾರ. ಆದುದರಿಂದ, ಪ್ರತಿಯೊಬ್ಬರೂ, ಸರಕಾರ ಮತ್ತು ಸಂಘಟನೆಗಳು ಸೇರಿದಂತೆ, ನಾವು ತಂಡವಾಗಿ ಕೆಲಸ ಮಾಡಬೇಕಾಗಿದೆ.

ಸ್ನೇಹಿತರೇ,

ಲಸಿಕೆಗೆ ಸಂಬಂಧಿಸಿ ಭಾರತವು ಹೊಂದಿರುವ ರೀತಿಯ ಅನುಭವ ವಿಶ್ವದ ಹಲವು ದೊಡ್ಡ ದೇಶಗಳಿಗೆ ಲಭ್ಯ ಇರಲಾರದು. ವೇಗದ ಜೊತೆ ನಮಗೆ ಸುರಕ್ಷೆ ಕೂಡಾ ಅಷ್ಟೇ ಮುಖ್ಯ. ಭಾರತವು ತನ್ನ ನಾಗರಿಕರಿಗೆ ಯಾವುದೇ ಲಸಿಕೆಯನ್ನು ಒದಗಿಸಲಿ, ಅದು ಪ್ರತಿಯೊಂದು ವೈದ್ಯಕೀಯ ಮಾನದಂಡ ಮತ್ತು ನಿಬಂಧನೆಗಳಿಗೆ ಅನುಗುಣವಾಗಿರುತ್ತದೆ. ಲಸಿಕೆ ವಿತರಣೆಗೆ ಸಂಬಂಧಿಸಿ, ಅದನ್ನು ಎಲ್ಲಾ ರಾಜ್ಯಗಳ ಜೊತೆಗೂಡಿ ಯೋಜಿಸಲಾಗುತ್ತದೆ.

ನಾವು ಲಸಿಕೆಯ ಮೊದಲ ಫಲಾನುಭವಿಗಳು ಯಾರು ಎಂಬುದರ ಬಗ್ಗೆ ಡಬ್ಲ್ಯು.ಎಚ್.. ಸಲಹೆಯನ್ವಯ, ನೀಲನಕಾಶೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಆದರೆ ಅಂತಿಮವಾಗಿ ನಾವು ತೀರ್ಮಾನ ಕೈಗೊಳ್ಳಬೇಕಾಗಿದೆ ಮತ್ತು ಎಲ್ಲಾ ರಾಜ್ಯಗಳ ಸಲಹೆ ಬಹಳ ಮುಖ್ಯ, ಯಾಕೆಂದರೆ ಆಯಾ ರಾಜ್ಯಗಳಲ್ಲಿ ಅದನ್ನು ಎಷ್ಟು ಚೊಕ್ಕಟವಾಗಿ ಮಾಡಬಹುದು ಎಂಬ ಬಗ್ಗೆ ಅವರಿಗೆ ಗೊತ್ತಿರುತ್ತದೆ ಮತ್ತು ಎಷ್ಟು ಹೆಚ್ಚುವರಿ ಶೀತಲ ಸರಪಳಿ ದಾಸ್ತಾನು ವ್ಯವಸ್ಥೆ ಬೇಕಾಗುತ್ತದೆ ಎಂಬ ಬಗ್ಗೆ ಅರಿವಿರುತ್ತದೆ.

ನಾನು ರಾಜ್ಯಗಳು ಇದನ್ನು ಆದ್ಯತೆಯಾಧಾರದಲ್ಲಿ ಪರಿಗಣಿಸಬೇಕು ಎಂದು ಭಾವಿಸುತ್ತೇನೆ. ಎಲ್ಲಿ ಇದು ಬೇಕು, ಮತ್ತು ಮಾನದಂಡಗಳು ಏನು ಎಂಬುದರ ಬಗ್ಗೆ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲು ಆರಂಭಿಸಬೇಕು. ಇಲಾಖೆಗಳನ್ನು ಅಧಿಸೂಚಿಸಲಾಗಿದೆಯಾದರೂ ನಾವು ಅದರ ಅನುಷ್ಟಾನಕ್ಕೆ ಸಿದ್ದತೆಗಳನು ಮಾಡಿಕೊಳ್ಳಬೇಕು. ಅವಶ್ಯವಿದ್ದರೆ, ಹೆಚ್ಚುವರಿ ಪೂರೈಕೆಯನ್ನೂ ಖಾತ್ರಿಪಡಿಸಿಕೊಳ್ಳಬೇಕು. ನಾವು ಆದಷ್ಟು ಬೇಗ ರಾಜ್ಯ ಸರಕಾರಗಳ ಜೊತೆಗೂಡಿ ಸಮಗ್ರ ಯೋಜನೆಯನ್ನು ಅಂತಿಮಗೊಳಿಸಲಿದ್ದೇವೆ. ಕೇಂದ್ರ ಮತ್ತು ರಾಜ್ಯಗಳ ತಂಡಗಳು ಪರಸ್ಪರ  ಸತತ ಸಂಪರ್ಕದಲ್ಲಿದ್ದು, ಕಾರ್ಯ ಪ್ರಗತಿಯಲ್ಲಿದೆ.

ಕೇಂದ್ರ ಸರಕಾರವು ಕೆಲ ಸಮಯದ ಹಿಂದೆ ರಾಜ್ಯಗಳಿಗೆ ರಾಜ್ಯ ಮಟ್ಟದಲ್ಲಿ ಚಾಲನಾ ಸಮಿತಿಯನ್ನು ಮತ್ತು ರಾಜ್ಯ ಮಟ್ಟದಲ್ಲಿ ಹಾಗು ಜಿಲ್ಲಾ ಮಟ್ಟದಲ್ಲಿ ಕಾರ್ಯ ಪಡೆಯನ್ನು ರಚಿಸಲು ಮನವಿ ಮಾಡಿತ್ತು. ಸಾಧ್ಯವಾದಷ್ಟು ಬೇಗ ಬ್ಲಾಕ್ ಮಟ್ಟದಲ್ಲಿಯೂ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬರಬೇಕು ಮತ್ತು ಯಾರಾದರೊಬ್ಬರನ್ನು ಅದರ ಉಸ್ತುವಾರಿಗೆ ನೇಮಿಸಬೇಕು. ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ನಡೆಸಬೇಕು, ಅವರಿಗೆ ತರಬೇತಿ ನೀಡಬೇಕು ಮತ್ತು ನಿಗಾ ವಹಿಸುತ್ತಿರಬೇಕು. ಮತ್ತು ಆನ್ ಲೈನ್ ತರಬೇತಿ ಕೂಡಾ ಆರಂಭಗೊಳ್ಳಬೇಕು. ನಮ್ಮ ದೈನಂದಿನ ವ್ಯವಹಾರಗಳ ಜೊತೆ, ನಾವು ಕೊರೊನಾವನ್ನು ಏಕಕಾಲದಲ್ಲಿ ನಿಗ್ರಹಿಸುವಂತಹ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಬೇಕು. ಇದು ನನ್ನ ಕೋರಿಕೆಯಾಗಿರುತ್ತದೆ.

ಯಾವ ಲಸಿಕೆಗೆ ಎಷ್ಟು ಬೆಲೆ, ಎಂದು ನೀವು ಕೇಳಿದ ಕೆಲವು ಪ್ರಶ್ನೆಗಳಿಗೆ ಇನ್ನೂ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ. ಎರಡು ದೇಶೀಯ  ಭಾರತೀಯ ಲಸಿಕಾ ಕಂಪೆನಿಗಳು ಮುಂಚೂಣಿಯಲ್ಲಿವೆ. ಆದರೆ, ನಮ್ಮ ಜನರು ವಿಶ್ವದಾದ್ಯಂತ ಇತರರ ಜೊತೆಗೂ ಸಹಕಾರದೊಂದಿಗೆ ಕಾರ್ಯನಿರತರಾಗಿದ್ದಾರೆ. ವಿಶ್ವದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಕಂಪೆನಿಗಳು ಅದರ ಉತ್ಪಾದನೆಗೆ ಸಂಬಂಧಿಸಿ ಭಾರತೀಯ ಜನರೊಂದಿಗೆ  ಮಾತುಕತೆ ನಡೆಸುತ್ತಿವೆ. ನಿಟ್ಟಿನಲ್ಲಿ, ಒಂದು ವೇಳೆ ಔಷಧಿಯೊಂದು ಕಳೆದ 20 ವರ್ಷಗಳಿಂದ ಜನಪ್ರಿಯವಾಗಿದ್ದರೆ ಮತ್ತು ಲಕ್ಷಾಂತರ ಜನರು ಅದನ್ನು 20 ವರ್ಷಗಳಿಂದ ಉಪಯೋಗಿಸುತ್ತಿರುತ್ತಾರೆ. ಆದರೆ ಕೆಲವರಲ್ಲಿ 20 ವರ್ಷಗಳ ಬಳಿಕವೂ ಅಡ್ದ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಮತ್ತು ಅದು ಸಾಧ್ಯವಿದೆ. ನಿರ್ಧಾರವನ್ನು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಕೈಗೊಳ್ಳಬೇಕಾಗುತದೆಅಧಿಕಾರಿಗಳು ನಿರ್ಧರಿಸಬೇಕಾಗುತ್ತದೆ. ಮತ್ತು ಅವರದನು ಪ್ರಮಾಣೀಕರಿಸಬೇಕಾಗುತ್ತದೆ

ನಾವು ಸಮಾಜ ಮತ್ತು ಜೀವಗಳ ಬಗ್ಗೆ ಚಿಂತಿತರಾಗಿದ್ದೇವೆ. ಆದರೆ ನಮಗೆಲ್ಲರಿಗೂ ತಿಳಿದಿದೆ, ನಾವು ವಿಜ್ಞಾನಿಗಳಲ್ಲ ಎಂಬುದು. ನಮಗೆ ಇದರಲ್ಲಿ ತಜ್ಞತೆ ಇಲ್ಲ. ಆದುದರಿಂದ ನಾವು ಜಾಗತಿಕ ಮಾರ್ಗದರ್ಶಿಗಳನ್ನು ಅನುಸರಿಸಬೇಕಾಗಿದೆ ಮತ್ತು ಅದರನ್ವಯ ನಾವು ಮುಂದಡಿ ಇಡಬೇಕಾಗಿದೆ. ಆದರೆ ನಾನುನಿಮ್ಮ ಲಸಿಕೆ ಕುರಿತ ವಿವರವಾದ ಯೋಜನೆಯನ್ನು ಮತ್ತು ಅದನ್ನು ಜನ ಸಮೂಹಕ್ಕೆ ಹೇಗೆ ಒದಗಿಸುತ್ತೀರಿ ಎಂಬ ಬಗ್ಗೆ ಸಾಧ್ಯವಿರುವಷ್ಟು ಬೇಗ ಲಿಖಿತವಾಗಿ ಕಳುಹಿಸಿಕೊಡುವಂತೆ ನಿಮ್ಮನ್ನು ಕೋರುತ್ತೇನೆ. ನಿಮ್ಮ ಸಲಹೆಗಳು ಬಹಳ ಮುಖ್ಯವಾದವು ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ಅವುಗಳು ಉಪಯುಕ್ತ. ರಾಜ್ಯಗಳ ಅನುಭವ ಬಹಳ ಮುಖ್ಯಯಾಕೆಂದರೆ  ಅದನ್ನು ಅಲ್ಲಿಂದಲೇ ಆರಂಭಿಸಬೇಕಾಗುತ್ತದೆ. ಆದುದರಿಂದ, ನಾನು ನೀವು ಬಹಳ ಕ್ರಿಯಾಶೀಲವಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಬಯಸುತ್ತೇನೆ, ಇದು ನನ್ನ ನಿರೀಕ್ಷೆ.

ನಾನು ಮೊದಲು ಹೇಳಿದಂತೆ, ಲಸಿಕೆಗೆ ಸಂಬಂಧಿಸಿ ಏನು ಮಾಡಬೇಕೋ ಅದನ್ನು ಮಾಡಲಾಗುತ್ತದೆ, ಆದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾವುದೇ ನಿಧಾನಗತಿ ಇರಬಾರದು. ಇದು ನನ್ನ ಕೋರಿಕೆ.

ಇಂದು ನನಗೆ ತಮಿಳು ನಾಡು ಮತ್ತು ಪುದುಚೇರಿಯ ಮುಖ್ಯಮಂತ್ರಿಗಳ ಜೊತೆ ಮಾತನಾಡುವ ಅವಕಾಶ ದೊರೆಯಿತು. ಬೆಳಿಗ್ಗೆ ನನಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳಿಗೆ ಟೆಲಿಫೋನ್ ಮಾಡಲು  ಸಾಧ್ಯವಾಗಲಿಲ್ಲ. ನಮ್ಮ ಪೂರ್ವ ಕರಾವಳಿಯಲ್ಲಿ ಚಂಡಮಾರುತ ಕ್ರಿಯಾಶೀಲವಾಗಿದೆ. ಅದು ತಮಿಳುನಾಡು, ಪುದುಚೇರಿ, ಮತ್ತು ಆಂಧ್ರ ಪ್ರದೇಶದ ಕೆಲವು ಭಾಗಗಳತ್ತ ಸಾಗುತ್ತಿದೆ. ಭಾರತ ಸರಕಾರದ ಎಲ್ಲಾ ತಂಡಗಳು ಬಹಳ ಕ್ರಿಯಾಶೀಲವಾಗಿದ್ದು, ಅವುಗಳನ್ನು ನಿಯೋಜಿಸಲಾಗಿದೆ.

ಇಂದು, ನಾನು ಇಬ್ಬರು ಗೌರವಾನ್ವಿತ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಇದರ ನಂತರ ನಾನು ಆಂಧ್ರ ಮುಖ್ಯಮಂತ್ರಿಗಳ ಜೊತೆ ಮಾತನಾಡಲಿದ್ದೇನೆ. ಭಾರತ ಸರಕಾರದ ಮತ್ತು ರಾಜ್ಯ ಸರಕಾರಗಳ ಮೊದಲ ಆದ್ಯತೆ ಎಂದರೆ ಪ್ರದೇಶಗಳನ್ನು ತೆರವು ಮಾಡುವುದು ಮತ್ತು ಜನರ ಜೀವವನ್ನು ರಕ್ಷಿಸುವುದು.

ನೀವು ನಿಮ್ಮ ಸಮಯವನ್ನು ಸಭೆಗೆ ವಿನಿಯೋಗಿಸಿರುವುದಕ್ಕೆ ನಾನು ಮತ್ತೆ ನಿಮಗೆ ಬಹಳ ಅಭಾರಿಯಾಗಿದ್ದೇನೆ. ಆದರೆ, ಮಾಹಿತಿಯನ್ನು ನನಗೆ ಸಾಧ್ಯವಾದಷ್ಟು ಬೇಗ ಕಳುಹಿಸಿಕೊಡಿ ಎಂದು ನಾನು ನಿಮ್ಮನ್ನು ಕೋರುತ್ತೇನೆ.

ಧನ್ಯವಾದಗಳು!

***



(Release ID: 1675989) Visitor Counter : 140