ಪ್ರಧಾನ ಮಂತ್ರಿಯವರ ಕಛೇರಿ

ಲಖನೌ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನದ ಶತಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಭಾಷಣ


ವಿಶ್ವವಿದ್ಯಾಲಯಗಳು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು

ಸಕಾರಾತ್ಮಕ ಆಲೋಚನೆ ಮತ್ತು ಅನುಸಂಧಾನದಲ್ಲಿ ಸಾಧ್ಯತೆಗಳ ಮನೋಭಾವ ಸದಾ ಜೀವಂತವಾಗಿಡುತ್ತದೆ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹೊಂದಿಕೊಳ್ಳಲು ಮತ್ತು ಆತ್ಮವಿಶ್ವಾಸ ಉತ್ತೇಜನ

ಕಳೆದ ಆರು ವರ್ಷಗಳಲ್ಲಿ ಮಾರಾಟವಾಗಿರುವ ಖಾದಿ ಉತ್ಪನ್ನಗಳು ಹಿಂದಿನ 20 ವರ್ಷಗಳಿಗಿಂತಲೂ ಅಧಿಕ: ಪ್ರಧಾನಮಂತ್ರಿ ನರೇಂದ್ರ ಮೋದಿ

प्रविष्टि तिथि: 25 NOV 2020 7:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಖನೌ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನದ ಶತಮಾನೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಇದೇ ವೇಳೆ ಪ್ರಧಾನಮಂತ್ರಿ ಅವರು ವಿಶ್ವವಿದ್ಯಾಲಯದ ಶತಮಾನೋತ್ಸವ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಿದರು. ಅಲ್ಲದೆ ಅವರು ಭಾರತೀಯ  ಅಂಚೆ ಇಲಾಖೆ ಹೊರತಂದಿರುವ ವಿಶೇಷ ಸ್ಮಾರಕ ಅಂಚೆ ಸ್ಟಾಂಪ್ ಮತ್ತು ವಿಶೇಷ ಕವರ್ ಅನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ಮತ್ತು ಲಖನೌ ಸಂಸದರಾದ ಶ್ರೀ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತಿತರರು ಭಾಗವಹಿಸಿದ್ದರು.

 ವಿಶ್ವವಿದ್ಯಾಲಯಗಳು ಸ್ಥಳೀಯ ಕಲೆ ಮತ್ತು ಉತ್ಪನ್ನಗಳ ಕುರಿತಂತೆ ಕೋರ್ಸ್ ಗಳನ್ನು ಆರಂಭಿಸಬೇಕು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಕುರಿತಂತೆ ಸಂಶೋಧನೆಗೆ ಒತ್ತು ನೀಡಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಲಖನೌದಚಿಕಂಕರಿ, ಮೊರಾದಾಬಾದ್ ಹಿತ್ತಾಳೆ ಸಾಮಾನುಗಳು, ಆಲಿಘರ್ ಬೀಗಗಳು, ಭದೋಲಿಯ ನೆಲಹಾಸು ಮತ್ತಿತರ ಉತ್ಪನ್ನಗಳಿಗೆ ಮ್ಯಾನೇಜ್ ಮೆಂಟ್, ಬ್ರ್ಯಾಂಡಿಂಗ್ ಮತ್ತು ಕಾರ್ಯತಂತ್ರದ ಮೂಲಕ ಅವುಗಳು ಜಾಗತಿಕವಾಗಿ ಸ್ಪರ್ಧೆಯೊಡ್ಡುವಂತೆ ಮಾಡಬೇಕು ಮತ್ತು ಕುರಿತ ಕೋರ್ಸ್ ಗಳನ್ನು ವಿಶ್ವವಿದ್ಯಾಲಯ ಆರಂಭಿಸಬೇಕು ಎಂದರು. ಇದರಿಂದಾಗಿ  ‘ಒಂದು ಜಿಲ್ಲೆ- ಒಂದು ಉತ್ಪನ್ನಪರಿಕಲ್ಪನೆ ಸಾಕಾರಕ್ಕೆ ನೆರವಾಗಲಿದೆ. ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರ ಒಳಗೊಳ್ಳುವಿಕೆ ಅಗತ್ಯವಿದೆ ಎಂದ ಪ್ರಧಾನಮಂತ್ರಿ, ಅವುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದರು.

ಪ್ರತಿಯೊಬ್ಬ ವ್ಯಕ್ತಿ, ಘಟಕದ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ರಾಯ್ ಬರೇಲಿಯ ಬೋಗಿ ಕಾರ್ಖಾನೆಯ ಉದಾಹರಣೆಯನ್ನು ನೀಡಿದರು. ದೀರ್ಘಕಾಲದ ವರೆಗೆ ಕಾರ್ಖಾನೆಯಲ್ಲಿ ಮಾಡಿದ್ದ ಹೂಡಿಕೆಯನ್ನು ಸಣ್ಣ ಉತ್ಪನ್ನಗಳು ಮತ್ತು ಕಪೂರ್ತಲಾದಲ್ಲಿ ಸಿದ್ಧಪಡಿಸುವ ರೈಲ್ವೆ ಬೋಗಿಗಳಿಗೆ ಅಳವಡಿಸುವ ಕೆಲವು ಸಣ್ಣ ಉತ್ಪನ್ನಗಳಿಗಷ್ಟೆ ಸೀಮಿತವಾಗಿತ್ತು. ಕಾರ್ಖಾನೆಯಲ್ಲಿ ಬೋಗಿಗಳನ್ನು ನಿರ್ಮಿಸುವ ಸಾಮರ್ಥ್ಯವಿದ್ದರೂ ಅದರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡಿರಲಿಲ್ಲ. 2014ರಲ್ಲಿ ಅದರ ಬಳಕೆಯಲ್ಲಿ ಬದಲಾವಣೆಯಾಯಿತು ಮತ್ತು ಕಾರ್ಖಾನೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲಾಯಿತು ಮತ್ತು ಇಂದು ಕಾರ್ಖಾನೆಯಿಂದ ನೂರಾರು ರೈಲ್ವೆ ಬೋಗಿಗಳು ಸಿದ್ಧವಾಗುತ್ತಿವೆ ಎಂದು ಹೇಳಿದರು. ಇಚ್ಛಾಶಕ್ತಿ ಮತ್ತು ಉದ್ದೇಶ ಎರಡೂ ಕೂಡ ಪ್ರಮುಖ ಸಾಮರ್ಥ್ಯಗಳಾಗಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಹಲವು ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, “ಸಕಾರಾತ್ಮಕ ಚಿಂತನೆ ಮತ್ತು ಅನುಸಂಶೋಧನಾ  ಸಾಧ್ಯತೆಗಳ ಮನೋಭಾವ ಸದಾ ನಮ್ಮಲ್ಲಿ ಜೀವಂತವಾಗಿಟ್ಟುಕೊಂಡಿರಬೇಕುಎಂದು ಹೇಳಿದರು.

ಗುಜರಾತ್ ಪೋರ್ ಬಂದರ್ ನಲ್ಲಿ ಗಾಂಧಿ ಜಯಂತಿ ವೇಳೆಫ್ಯಾಷನ್ ಷೋಮೂಲಕ ವಿದ್ಯಾರ್ಥಿಗಳ ಸಹಾಯದಿಂದ ಖಾದಿ ಜನಪ್ರಿಯತೆಯನ್ನು ಹೆಚ್ಚಿಸಲು ಕೈಗೊಂಡ ತಮ್ಮ ಅನುಭವವನ್ನು ಶ್ರೀ ನರೇಂದ್ರ ಮೋದಿ ಹಂಚಿಕೊಂಡರು. ಇದರಿಂದಾಗಿ ಖಾದಿಫ್ಯಾಷನ್ಉತ್ಪನ್ನವಾಗಿ ಜನಪ್ರಿಯವಾಗಿದೆ. ಕಳೆದ ಆರು ವರ್ಷಗಳಲ್ಲಿ ಮಾರಾಟವಾಗಿರುವ ಖಾದಿ ಉತ್ಪನ್ನಗಳ ಮೌಲ್ಯ, ಅದರ ಹಿಂದಿನ 20 ವರ್ಷಗಳ ಮಾರಾಟದ ಪ್ರಮಾಣಕ್ಕೂ ಅಧಿಕವಾಗಿದೆ ಎಂದು ಹೇಳಿದರು.

ಆಧುನಿಕ ಜೀವನದಲ್ಲಿ ಚಿತ್ತಭ್ರಮಣೆ ಮತ್ತು ಗಮನವನ್ನು ಬೇರೆಡೆ ಸೆಳೆಯುವ ಸಾಧನಗಳ ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಆಲೋಚನೆ ಮತ್ತು ಸ್ವಯಂ ಸಾಕ್ಷಾತಾರದ ಮನೋಭಾವ ಯುವಕರಲ್ಲಿ ಕ್ಷೀಣಿಸುತ್ತಿದೆ ಎಂದರು. ಎಲ್ಲ ಏಕಾಗ್ರತೆ ಭಂಗಗೊಳಿಸುವುದರ ನಡುವೆಯೂ ಯುವಕರು ತಮಗಾಗಿ ತಾವು ಸಮಯವನ್ನು ಕಾಯ್ದಿಟ್ಟುಕೊಳ್ಳಬೇಕು. ಇದರಿಂದ ಅವರ ಇಚ್ಛಾಶಕ್ತಿ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ತಮಗೇ ತಾವೇ ಪರೀಕ್ಷೆ ಮಾಡಿಕೊಳ್ಳುವ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ನೀತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಹೊಂದಿಕೊಳ್ಳುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಬೇಕು ಮತ್ತು ಚೌಕಟ್ಟಿನಿಂದಾಚೆಗೆ ಯೋಚಿಸಬೇಕು ಹಾಗೂ  ಬದಲಾವಣೆಗಳ ಬಗ್ಗೆ ಭಯಪಡಬಾರದು ಎಂದು ಅವರು ಕರೆ ನೀಡಿದರು. ವಿದ್ಯಾರ್ಥಿಗಳು ಹೊಸ ನೀತಿಯ ಬಗ್ಗೆ ಚರ್ಚೆ ಮಾಡಬೇಕು ಮತ್ತು ಅದರ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಪ್ರಧಾನಮಂತ್ರಿ ಮನವಿ ಮಾಡಿದರು

***


(रिलीज़ आईडी: 1675971) आगंतुक पटल : 221
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam