ಪ್ರಧಾನ ಮಂತ್ರಿಯವರ ಕಛೇರಿ
ಕೊವಿಡ್-19 ಲಸಿಕೆ ಸರಬರಾಜು, ವಿತರಣೆ ಮತ್ತು ನಿಯಂತ್ರಣ ಸನ್ನದ್ಧತೆ ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ
ದತ್ತಾಂಶ, ಶೀತಲ ಸರಪಳಿಯ ಅಭಿವೃದ್ಧಿ ಮತ್ತು ಸಾರಿಗೆ ವ್ಯವಸ್ಥೆಯನ್ನು ಸಿದ್ಧಪಡಿಸಲಾಗುತ್ತಿದೆ
ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಲಸಿಕೆ ಸರಬರಾಜು ಮತ್ತು ಪರಿವೀಕ್ಷಣೆಗಾಗಿ ಡಿಜಿಟಲ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ
ಕೊವಿಡ್-19 ಲಸಿಕೆಗಾಗಿ ಆದ್ಯತೆಯ ಗುಂಪುಗಳಾದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಮಿಕರು ಮತ್ತು ಇತರೆ ದುರ್ಬಲ ಗುಂಪುಗಳನ್ನು ಗುರುತಿಸಲಾಗಿದೆ
Posted On:
20 NOV 2020 10:59PM by PIB Bengaluru
ಕೊವಿಡ್-19 ಲಸಿಕೆಯ ಸರಬರಾಜು, ವಿತರಣೆ ಮತ್ತು ನಿಯಂತ್ರಣೆಯ ಸನ್ನದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿಶೀಲಿಸಿದ್ದಾರೆ. ಲಸಿಕೆಗಳನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿದ ಸಂಶೋಧಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ಔಷಧಿ ಕಂಪೆನಿಗಳ ಪ್ರಯತ್ನಗಳನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದರು ಮತ್ತು ಲಸಿಕೆಯ ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆಗೆ ಅನುಕೂಲವಾಗುವಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕೆಂದು ಅವರು ನಿರ್ದೇಶಿಸಿದರು.
ಭಾರತದಲ್ಲಿ ಐದು ಲಸಿಕೆಗಳು ಅಭಿವೃದ್ಧಿಯ ಮುಂದುವರಿದ ಹಂತದಲ್ಲಿವೆ, ಅವುಗಳಲ್ಲಿ ನಾಲ್ಕು 2 / 3 ನೇ ಹಂತದಲ್ಲಿ ಮತ್ತು ಒಂದು 1 / 2 ನೇ ಹಂತದಲ್ಲಿವೆ. ಬಾಂಗ್ಲಾದೇಶ್, ಮ್ಯಾನ್ ಮಾರ್, ಖತರ್, ಭೂತಾನ್, ಸ್ವಿಡ್ಜರ್ ಲ್ಯಾಂಡ್, ಬಹ್ ರೇನ್, ಆಸ್ಟ್ರಿಯಾ ಮತ್ತು ದಕ್ಷಿಣ ಕೊರಿಯಾ ದಂತಹ ದೇಶಗಳು – ಭಾರತೀಯ ಲಸಿಕೆಗಳ ಅಭಿವೃದ್ಧಿ ಮತ್ತು ನಂತರದ ಬಳಕೆಯ ಸಹಭಾಗಿತ್ವಕ್ಕಾಗಿ ಹೆಚ್ಚಿನ ಆಸಕ್ತಿ ತೋರಿವೆ.
ಪ್ರಥಮ ಹಂತದಲ್ಲಿ ಲಭ್ಯವಾಗುವ ಲಸಿಕೆಯ ಅವಕಾಶವನ್ನ ನಿರ್ವಹಿಸುವ ಪ್ರಯತ್ನದಲ್ಲಿ, ಆರೋಗ್ಯ ಸೇವೆ ಮತ್ತು ಮುಂಚೂಣಿ ಕಾರ್ಮಿಕರ ದತ್ತಾಂಶ, ಶೀತಲ ಸರಪಳಿಯ ಅಭಿವೃದ್ಧಿ ಹಾಗೂ ಸಿರಂಜುಗಳು, ಸೂಜಿಗಳ ಸಂಗ್ರಹಣೆ ಇತ್ಯಾದಿ., ಮುಂದುವರಿದ ಹಂತಗಳಲ್ಲಿ ಸಿದ್ಧಪಡಿಸಲಾಗುತ್ತಿದೆ.
ಲಸಿಕೆಯ ಸರಬರಾಜು ಸರಪಳಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಮತ್ತು ಲಸಿಕೆ ರಹಿತ ಸರಬರಾಜುಗಳನ್ನು ಹೆಚ್ಚಿಸಲಾಗುತ್ತಿದೆ. ಲಸಿಕಾ ಕಾರ್ಯಕ್ರಮದ ತರಬೇತಿ ಮತ್ತು ಅನುಷ್ಠಾನಕ್ಕಾಗಿ, ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕವರ್ಗವನ್ನು ಒಳಪಡಿಸಿಕೊಳ್ಳಲಾಗುತ್ತಿದೆ. ಆದ್ಯತೆಯ ಸೂತ್ರಗಳ ಪ್ರಕಾರ, ಲಸಿಕೆಗಳು ಪ್ರತಿ ಸ್ಥಳ ಮತ್ತು ಪ್ರತಿ ವ್ಯಕ್ತಿಗೆ ತಲುಪುವದನ್ನು ಖಚಿತಪಡಿಸಲು ಪ್ರತಿ ಹಂತದಲ್ಲೂ ಎಚ್ಚರಿಕೆವಹಿಸಲಾಗುತ್ತಿದೆ.
ಭಾರತೀಯ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಕಠಿಣ ಮತ್ತು ಅತ್ಯುನ್ನತ ಜಾಗತಿಕ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಪ್ರಖ್ಯಾತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ನಿಯಂತ್ರಕರ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲು ಪ್ರಧಾನಮಂತ್ರಿಗಳು ನಿರ್ದೇಶಿಸಿದ್ದಾರೆ
ಕೊವಿಡ್-19 ಲಸಿಕೆ ನಿರ್ವಹಣೆಗಾಗಿ ರಚಿಸಲಾದ ರಾಷ್ಟ್ರೀಯ ತಜ್ಞರ ತಂಡ (ನೆಗ್ ವಾಕ್) ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸುತ್ತಿದೆ ಮತ್ತು ಪ್ರಥಮ ಹಂತದಲ್ಲಿ ಆದ್ಯತೆ ನೀಡಲಾದ ಗುಂಪುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಸಂಬಂಧಿತ ಪಾಲುದಾರರು ತೀವ್ರಗೊಳಿಸಿದ್ದಾರೆ
ಲಸಿಕೆ ಸರಬರಾಜು ಮತ್ತು ಪರಿವೀಕ್ಷಣೆಗಾಗಿ ಡಿಜಿಟಲ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ ಮತ್ತು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪಾಲುದಾರರ ಸಹಭಾಗಿತ್ವದೊಂದಿಗೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ತುರ್ತು ಬಳಕೆಯ ಅಧಿಕಾರವನ್ನು ಮತ್ತು ಔಷಧೀಯ ಉತ್ಪಾದನೆ ಹಾಗೂ ಸಂಗ್ರಹದ ಅಂಶಗಳನ್ನು ಪ್ರಧಾನಮಂತ್ರಿಗಳು ಪರಿಶೀಲಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಸಿಕೆಯ 3 ನೇ ಹಂತದ ಪ್ರಯೋಗದ ಫಲಿತಾಂಶ ಲಭ್ಯವಾಗುತ್ತಿದ್ದಂತೆ ನಮ್ಮ ಧೃಡ ಮತ್ತು ಸ್ವತತ್ರ ನಿಯಂತ್ರಕರು ಬಳಕೆಗಾಗಿ ಅಧಿಕೃತತೆಯನ್ನು ನೀಡಲು ಇವುಗಳ ಶೀಘ್ರ ಮತ್ತು ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಡಿಸುತ್ತಾರೆ
ಕೋವಿಡ್ – 19 ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಾಯವಾಗಲು ಕೋವಿಡ್ ಸುರಕ್ಷಾ ಯೋಜನೆಯಡಿಯಲ್ಲಿ ಸರ್ಕಾರ ರೂ 900 ಕೋಟಿ ಸಹಾಯಧನವನ್ನು ಒದಗಿಸಿದೆ.
ತ್ವರಿತಗತಿಯಲ್ಲಿ ನಿಯಂತ್ರಕ ಅನುಮತಿಗಾಗಿ, ಮತ್ತು ಲಸಿಕಾ ಕಾರ್ಯಕ್ರಮವನ್ನು ಸಮಯೊಚಿತವಾಗಿ ಆಯೋಜಿಸಲು ಯೋಜನೆಯನ್ನು ರೂಪಿಸಬೇಕೆಂದು ಪ್ರಧಾನಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ಲಸಿಕಾ ಅಭಿವೃದ್ಧಿಗಾಗಿ ಮಾಡಿದ ಸಮಗ್ರ ಪ್ರಯತ್ನಗಳನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದ್ದಾರೆ. ಪ್ರಸ್ತುತ ಇರುವ ಸಾಂಕ್ರಾಮಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಶುಚಿತ್ವವನ್ನು ಖಚಿತಪಡಿಸಿಕೊಳ್ಳುವುದು ರಕ್ಷಣಾ ಕ್ರಮಗಳ ಮೇಲೆ ಸಡಿಲಿಕೆಗೆ ಅವಕಾಶವಿರುವುದಿಲ್ಲ ಎಂದು ಒತ್ತಿ ಹೇಳಿದರು.
ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಸತ್ ಕಾರ್ಯದರ್ಶಿ, ನೀತಿ ಆಯೋಗದ ಸದಸ್ಯರು(ಆರೋಗ್ಯ) ಪ್ರಧಾನ ವೈಜ್ಞಾನಿಕ ಸಲಹೆಗಾರರು, ಆರೋಗ್ಯ ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕರು, ಪ್ರಧಾನಮಂತ್ರಿ ಕಚೇರಿ ಅಧಿಕಾರಿಗಳು ಮತ್ತು ಭಾರತ ಸರ್ಕಾರದ ಸಂಬಂಧಿತ ಇಲಾಖಾ ಕಾರ್ಯದರ್ಶಿಗಳು ಈ ಸಭೆಯಲ್ಲಿ ಹಾಜರಿದ್ದರು
***
(Release ID: 1674769)
Visitor Counter : 170
Read this release in:
Urdu
,
English
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam