ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ವಟಾಯನ್ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲಿರುವ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

Posted On: 19 NOV 2020 4:01PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ಅವರು 2020ರ ನವೆಂಬರ್ 21ರಂದು ವಟಾಯನ್  ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಈಗಾಗಲೇ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿರುವ ಸಚಿವರಿಗೆ ಈ ಪ್ರಶಸ್ತಿ ಮತ್ತೊಂದು ಗರಿಯಾಗಿದೆ ಮತ್ತು ಅವರು ಬರಹ, ಕಾವ್ಯ ಮತ್ತು ಇತರೆ ಸಾಹಿತ್ಯ ಕೃಷಿಗಾಗಿ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಶ್ರೀ ಪೋಖ್ರಿಯಾಲ್ ಅವರು ಈ ಹಿಂದೆ, ಅಂದಿನ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸಾಹಿತ್ಯ ಭಾರತಿ ಪ್ರಶಸ್ತಿ, ಮಾಜಿ ರಾಷ್ಟ್ರಪತಿ ಡಾ..ಪಿ.ಜೆ.ಅಬ್ದುಲ್ ಕಲಾಂ ಅವರಿಂದ ಸಾಹಿತ್ಯ ಗೌರವ ಸಮ್ಮಾನ್ , ಭಾರತ್ ಗೌರವ್ ಸಮ್ಮಾನ್, ದುಬೈ ಸರ್ಕಾರದಿಂದ ಅತ್ಯುತ್ತಮ ಆಡಳಿತ ಪ್ರಶಸ್ತಿ, ಮಾರಿಷಸ್ ನ ಜಾಗತಿಕ ಸಂಸ್ಥೆ ನೀಡುವ ಭಾರತೀಯ ಮೂಲದ ಅಪ್ರತಿಮ ಸಾಧನೆ ಪ್ರಶಸ್ತಿ, ಪರಿಸರ ಸಂರಕ್ಷಣೆಗಾಗಿ ಉಕ್ರೇನ್ ನಿಂದ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಿಶಾಂಕ್ ಅವರಿಗೆ ನೇಪಾಳ ಹಿಮಾಲ್ ಗೌರವ ಸಮ್ಮಾನ್ನೀಡಿ ಗೌರವಿಸಿದೆ.

ಶ್ರೀ ನಿಶಾಂಕ್ ಅವರ ಜಸ್ಟ್ ಎ ಡಿಸೈರ್ ಕಥಾಸಂಗ್ರಹ ಜರ್ಮನಿಯ ಆವೃತ್ತಿಯಲ್ಲಿ ನೂರ್ ಇನ್ ವಾನ್ಚುಹೆಸರಿನಲ್ಲಿ ಹ್ಯಾಂಬರ್ಗ್ ನ ಆಫ್ರೋ ಏಷ್ಯನ್ ಸಂಸ್ಥೆ ಪ್ರಕಟಿಸಿದೆ. ಅವರ ಸ್ಪರ್ಶ ಗಂಗಾ ಮಾರಿಷಸ್ ನ ಶಾಲೆಯ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅವರು ಸ್ವರ್ಣ ಗಂಗಾಸೇರಿ ಹಲವು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀ ಪೋಖ್ರಿಯಾಲ್ ಅವರು, ಉತ್ತರ ಪ್ರದೇಶದ ಸಂಸ್ಕೃತಿ ಸಚಿವರಾಗಿ ಜಗತ್ತಿನಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

ಶ್ರೀ ಪೋಖ್ರಿಯಾಲ್ ಅವರು ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ, ಉತ್ತರಾಖಂಡ್ ನ ಗ್ರಾಫಿಕ್ಸ್ ಎರಾ ಡೀಮ್ಡ್ ವಿಶ್ವವಿದ್ಯಾಲಯದಿಂದ ಸಾಹಿತ್ಯ ಕ್ಷೇತ್ರದಲ್ಲಿ ಡಿಲಿಟ್ ಪಡೆದಿದ್ದಾರೆ.

ಶ್ರೀ ಪೋಖ್ರಿಯಾಲ್ ಅವರು ನಾನಾ ವಿಷಯಗಳ ಬಗ್ಗೆ 75ಕ್ಕೂ ಅಧಿಕ ಕೃತಿಗಳನ್ನು ರಚನೆ ಮಾಡಿದ್ದಾರೆ ಮತ್ತು ಅವುಗಳಲ್ಲಿ ಬಹುತೇಕ ದೇಶಿಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ, ಸಚಿವರು ನಾನಾ ಪ್ರಕ್ರಿಯೆಗಳ ಮೂಲಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಖೈರುಗೊಳಿಸಿದ್ದಾರೆ, ಅದಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಯುಕೆ ಮೂಲಕದ ಲಂಡನ್ ನ ವಟಾಯನ್ ಸಂಸ್ಥೆ, ಕವಿಗಳು, ಬರಹಗರಾರರು ಮತ್ತು ಕಲಾವಿದರನ್ನು ಅವರು ಮಾಡಿರುವ ಗಣನೀಯ ಸಾಧನೆಯನ್ನು ಅವರಿಗೆ ಗುರುತಿಸಿ ವಟಾಯನ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.  ಈ ಮೊದಲು ಹೆಸರಾಂತ ಗಣ್ಯ ವ್ಯಕ್ತಿಗಳಾದ ಪ್ರಸೂನ್ ಜೋಷಿ, ಜಾವೇದ್ ಆಖ್ತರ್ ಅವರುಗಳು ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ವಟಾಯನ್ ಪ್ರಶಸ್ತಿಗೆ ಭಾಜನರಾಗಿದ್ದರು.

ವಟಾಯನ್-ಯುಕೆ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ನವೆಂಬರ್ 21ರಂದು ಅಂತಾರಾಷ್ಟ್ರೀಯ ಕಾಲಮಾನ ರಾತ್ರಿ 8.30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಲಂಡನ್ ನ ನೆಹರು ಕೇಂದ್ರದ ನಿರ್ದೇಶಕ ಮತ್ತು ಖ್ಯಾತ ಬರಹಗಾರ ಡಾ. ಅಮಿಶ್ ತ್ರಿಪಾಠಿ ವಿಶೇಷ ಅತಿಥಿಯಾಗಿ ಭಾಗವಹಿಸುವರು. ವಟಾಯನ್ ನ ಅಧ್ಯಕ್ಷ ಮಿರಾ ಕೌಶಿಕ್, ಅಗ್ರಾದ ಕೇಂದ್ರೀಯ ಹಿಂದಿ ಮಂಡಳಿ ಉಪಾಧ್ಯಕ್ಷರಾದ ಕವಿ ಅನಿಲ್ ಶರ್ಮ ಜೋಷಿ ಮತ್ತು ವಾಣಿ ಪ್ರಕಾಶಂನ ಕಾರ್ಯಕಾರಿ ನಿರ್ದೇಶಕ ಅದಿತಿ ಮಹೇಶ್ವರಿ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

***


(Release ID: 1674200) Visitor Counter : 146