ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಸತತ 46ನೇ ದಿನ ಹೊಸ ಕೋವಿಡ್ ಪ್ರಕರಣಗಳಿಗಿಂತ ಗುಣಮುಖರಾದವರ ಪ್ರಮಾಣ ಹೆಚ್ಚಳ


11ನೇ ದಿನವೂ 50 ಸಾವಿರಕ್ಕಿಂತ ಕಡಿಮೆ ಹೊಸ ಕೋವಿಡ್ ಪ್ರಕರಣಗಳು

Posted On: 18 NOV 2020 12:43PM by PIB Bengaluru

ಭಾರತದಲ್ಲಿ ಪ್ರತಿ ದಿನ ಹೊಸದಾಗಿ ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೊಸ ಸೋಂಕು ಪ್ರಕರಣಗಳಿಗಿಂತ ಹೆಚ್ಚಾಗಿದ್ದು, ಕಳೆದ ಒಂದೂವರೆ ತಿಂಗಳಿಗೂ ಅಧಿಕ ಸಮಯದಿಂದ ಪ್ರವೃತ್ತಿ  ಮುಂದುವರಿದಿದೆ. ಸತತ 11ನೇ ದಿನವೂ ದೇಶದಲ್ಲಿ 50,000ಕ್ಕೂ ಕಡಿಮೆ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಕಳೆದ 24 ಗಂಟೆಗಳಲ್ಲಿ 44,739 ಕೋವಿಡ್-19 ಸೋಂಕಿತರು ಗುಣಮುಖರಾಗಿದ್ದರೆ ಹೊಸದಾಗಿ ಕೇವಲ 38,617 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಸರಾಸರಿ 6,122 ಇಳಿಕೆಯಾಗಿ, ಇದೀಗ 4,46,805ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಕೋವಿಡ್-19 ಪ್ರಕರಣಗಳಿಗೆ ಹೋಲಿಸಿದರೆ ಶೇ. 5.01ರಷ್ಟಿದೆ.

http://static.pib.gov.in/WriteReadData/userfiles/image/image0015D3N.jpg

ಕಳೆದ ಕೆಲವು ವಾರಗಳಿಂದೀಚೆಗೆ ಪ್ರತಿ ದಿನ ಸರಾಸರಿ ಸೋಂಕು ಪ್ರಕರಣಗಳು ನಿರಂತರವಾಗಿ ಇಳಿಕೆಯಾಗುತ್ತಿವೆ.

http://static.pib.gov.in/WriteReadData/userfiles/image/image002HXUA.jpg

ಕೋವಿಡ್ ಸೂಕ್ತ ನಡವಳಿಕೆ ಬಗ್ಗೆ ವ್ಯಾಪಕ ಯಶಸ್ವಿ ಪ್ರಚಾರ ಮಾತ್ರವಲ್ಲದೆ, ನಾನಾ ಜನಸಂಖ್ಯಾ ಗುಂಪಿನಲ್ಲಿ ಜಾಗೃತಿ ಹೆಚ್ಚುತ್ತಿದೆ. ಆದರೆ ಯೂರೋಪ್ ಮತ್ತು ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇದು  ಮಹತ್ವ ಪಡೆದುಕೊಂಡಿದೆ.

http://static.pib.gov.in/WriteReadData/userfiles/image/image0030KUL.jpg

ದೇಶದಲ್ಲಿ ಇಂದು ಚೇತರಿಕೆಯ ಪ್ರಮಾಣ 93.52ಕ್ಕೆ ಏರಿಕೆಯಾಗಿದೆ. ಒಟ್ಟು ಚೇತರಿಕೆಯಾಗಿರುವ ಪ್ರಕರಣಗಳ ಸಂಖ್ಯೆ 83,35,109.

ಪೈಕಿ ಶೇ.74.98ರಷ್ಟು ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.  

ಕೇರಳದಲ್ಲಿ ಕೋವಿಡ್ ನಿಂದ ಅಧಿಕ ಸಂಖ್ಯೆಯ ಅಂದರೆ 6,620 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 5,123 ಸೋಂಕಿತರು ಗುಣಮುಖರಾಗಿದ್ದಾರೆ, ದೆಹಲಿಯಲ್ಲಿ ಹೊಸದಾಗಿ 4,421ಸೋಂಕಿತರು ಗುಣಮುಖರಾಗಿದ್ದಾರೆ.

http://static.pib.gov.in/WriteReadData/userfiles/image/image0041QJN.jpg

ಹೊಸ ಪ್ರಕರಣಗಳಲ್ಲಿ ಶೇ.76.15ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 6,396 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ  5,792 ಹೊಸ ಪ್ರಕರಣಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 3,654 ಹೊಸ ಪ್ರಕರಣಗಳು ವರದಿಯಾಗಿವೆ.

http://static.pib.gov.in/WriteReadData/userfiles/image/image005PVT6.jpg

ಕಳೆದ 24 ಗಂಟೆಗಳಲ್ಲಿ 474 ಸೋಂಕಿತರು ಸಾವನ್ನಪ್ಪಿದ್ದು, ಪೈಕಿ ಶೇ. 78.9ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಹೊಸದಾಗಿ ವರದಿಯಾಗಿರುವ ಮರಣ ಪ್ರಕರಣಗಳಲ್ಲಿ ದೆಹಲಿಯಲ್ಲಿ 99 ಸೋಂಕಿತರು ಸಾವನ್ನಪ್ಪಿದ್ದಾರೆ. ಆನಂತರ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 68 ಮತ್ತು 52 ಸೋಂಕಿತರು ಹೊಸದಾಗಿ ಸಾವನ್ನಪ್ಪಿದ್ದಾರೆ.

http://static.pib.gov.in/WriteReadData/userfiles/image/image006HSSR.jpg

***



(Release ID: 1673730) Visitor Counter : 189