ಪ್ರಧಾನ ಮಂತ್ರಿಯವರ ಕಛೇರಿ

ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಅಂಗವಾಗಿ ನವೆಂಬರ್ 16 ರಂದು ಪ್ರಧಾನಿ ಮೋದಿಯವರಿಂದ ‘ಶಾಂತಿ ಪ್ರತಿಮೆ’ ಅನಾವರಣ

Posted On: 14 NOV 2020 5:41PM by PIB Bengaluru

ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 16, 2020 ರಂದು ಮಧ್ಯಾಹ್ನ 12.30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಾಂತಿ ಪ್ರತಿಮೆಅನಾವರಣಗೊಳಿಸಲಿದ್ದಾರೆ.

ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ (1870-1954) ಜೈನ ಮುನಿಯಾಗಿ ಕಠಿಣ ಜೀವನವನ್ನು ನಡೆಸಿದರು. ಅವರು ಜನಸಾಮಾನ್ಯರ ಕಲ್ಯಾಣ, ಶಿಕ್ಷಣ ನೀಡುವುದು ಹಾಗೂ ಸಾಮಾಜಿಕ ದುಷ್ಕೃತ್ಯಗಳ ನಿರ್ಮೂಲನೆಗಾಗಿ ಸತತವಾಗಿ ಕೆಲಸ ಮಾಡಿದರು. ಅವರು ಕವನ, ಪ್ರಬಂಧಗಳು, ಭಕ್ತಿಗೀತೆಗಳು ಮತ್ತು ಸ್ತವನಗಳು ಸೇರಿದಂತೆ ಅನೇಕ ಸಾಹಿತ್ಯವನ್ನೂ ರಚಿಸಿದ್ದಾರೆ. ಸ್ವಾತಂತ್ರ್ಯ ಚಳುವಳಿ ಮತ್ತು ಸ್ವದೇಶಿ ಆಂದೋಲನಕ್ಕೆ ಅವರು ಸಕ್ರಿಯ ಬೆಂಬಲ ನೀಡಿದ್ದರು. ಅವರ ಪ್ರೇರಣೆಯಿಂದಾಗಿ, ಶಾಲಾ ಕಾಲೇಜುಗಳು ಮತ್ತು ಅಧ್ಯಯನ ಕೇಂದ್ರಗಳು ಸೇರಿದಂತೆ 50 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಲವಾರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವರ ಗೌರವಾರ್ಥವಾಗಿ ಅನಾವರಣಗೊಳಿಸುವ ಪ್ರತಿಮೆಗೆಶಾಂತಿ ಪ್ರತಿಮೆಎಂದು ಹೆಸರಿಸಲಾಗಿದೆ. 151 ಇಂಚು ಎತ್ತರದ ಪ್ರತಿಮೆಯನ್ನು ಅಷ್ಟಾಧಾತು ಅಂದರೆ ಅಷ್ಟಲೋಹಗಳಿಂದ ತಯಾರಿಸಲಾಗಿದ್ದು, ತಾಮ್ರವನ್ನು ಪ್ರಮುಖವಾಗಿ ಬಳಸಲಾಗಿದೆ. ರಾಜಸ್ಥಾನದ ಪಾಲಿಯ ಜೆತ್ಪುರದಲ್ಲಿರುವ ವಿಜಯ ವಲ್ಲಭ ಸಾಧನಾ ಕೇಂದ್ರದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ.

***


(Release ID: 1672939) Visitor Counter : 137