ಹಣಕಾಸು ಸಚಿವಾಲಯ

2021-22 ನೇ ಸಾಲಿನ ಬಜೆಟ್ ಕುರಿತ ಸಲಹೆಗಳಿಗೆ ಕೇಂದ್ರ ಹಣಕಾಸು ಸಚಿವಾಲಯದ ಆಹ್ವಾನ

Posted On: 13 NOV 2020 4:16PM by PIB Bengaluru

ಇತ್ತೀಚಿನ ವರ್ಷಗಳಲ್ಲಿ, ಹಣಕಾಸು ಸಚಿವಾಲಯವು ಕೈಗಾರಿಕೆ/ ವಾಣಿಜ್ಯ ಸಂಘಟನೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ತಜ್ಞರೊಂದಿಗೆ ನಾರ್ತ್ ಬ್ಲಾಕ್‌ನಲ್ಲಿ ಬಜೆಟ್ ಪೂರ್ವ ಸಮಾಲೋಚನೆಗಳನ್ನು ನಡೆಸುತ್ತಿದೆ. ಈ ಬಾರಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬಜೆಟ್ ಪೂರ್ವ ಸಮಾಲೋಚನೆಗಳನ್ನು ಬೇರೆ ಸ್ವರೂಪದಲ್ಲಿ ನಡೆಸಲು ಸಚಿವಾಲಯವು ವಿವಿಧ ವರ್ಗಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ವಿವಿಧ ಸಂಸ್ಥೆಗಳು/ತಜ್ಞರಿಂದ ಸಲಹೆಗಳನ್ನು ಪಡೆಯಲು ಪ್ರತ್ಯೇಕ  ಇಮೇಲ್ ಸೃಷ್ಟಿಸಲು ನಿರ್ಧರಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು.

2021-22 ಸಾಲಿನ ಬಜೆಟ್ ಸಮಾಲೋಚನೆಗಳನ್ನು ಹೆಚ್ಚು ಜನರ ಭಾಗವಹಿಸುವಿಕೆಯ ಮೂಲಕ ದೇಶದ ಜನರಿಗೆ ಹತ್ತಿರ ತರಲು ನಿರ್ಧರಿಸಲಾಗಿದೆ. MyGov ಪ್ಲಾಟ್‌ಫಾರ್ಮ್‌ನಲ್ಲಿ ಸರ್ಕಾರವು ಮೈಕ್ರೋ-ಸೈಟ್ (ಆನ್‌ಲೈನ್ ಪೋರ್ಟಲ್) ಅನ್ನು ಪ್ರಾರಂಭಿಸಿದೆ, ಇದು ಬಜೆಟ್‌ ಕುರಿತು ಸಲಹೆ, ಆಲೋಚನೆಗಳನ್ನು ಸ್ವೀಕರಿಸಲು 2020 ರ ನವೆಂಬರ್ 15 ರಂದು ನೇರ ಪ್ರಸಾರವಾಗಲಿದೆ. 2021-22ರ ಬಜೆಟ್ ಕುರಿತು ತಮ್ಮ ಸಲಹೆಗಳನ್ನು ಸಲ್ಲಿಸಲು ಜನಸಾಮಾನ್ಯರು ವೈಯಕ್ತಿಕವಾಗಿ MyGovನಲ್ಲಿ ನೋಂದಾಯಿಸಿಕೊಳ್ಳಬೇಕು. ಸಲ್ಲಿಕೆಯಾಗುವ ಸಲಹೆಗಳನ್ನು ಭಾರತ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳು/ ಇಲಾಖೆಗಳು ಪರಿಶೀಲಿಸಲಿವೆ. ಅಗತ್ಯವಿದ್ದರೆ, ಸ್ಪಷ್ಟೀಕರಣಕ್ಕಾಗಿ ವ್ಯಕ್ತಿಗಳನ್ನು ನೋಂದಣಿ ಸಮಯದಲ್ಲಿ ಒದಗಿಸಲಾಗಿರುವ ಇಮೇಲ್/ ಮೊಬೈಲ್ ಮೂಲಕ ಸಂಪರ್ಕಿಸಲಾಗುವುದು. ಸಲಹೆಗಳನ್ನು ಸ್ವೀಕರಿಸಲು 30 ನವೆಂಬರ್ 2020 ರವರೆಗೆ ಪೋರ್ಟಲ್ ತೆರೆದಿರುತ್ತದೆ.

***



(Release ID: 1672724) Visitor Counter : 223