ಹಣಕಾಸು ಸಚಿವಾಲಯ
ಆತ್ಮನಿರ್ಭರ ಭಾರತ 3.0 ಕುರಿತ ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
“ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ”ಗೆ ಚಾಲನೆ
ಎಂ.ಎಸ್.ಎಂ.ಇ.ಗಳು, ವ್ಯಾಪಾರ ಸಂಸ್ಥೆಗಳು, ಮುದ್ರಾ ಸಾಲ ಪಡೆಯುವವರು ಮತ್ತು ವ್ಯಕ್ತಿಗಳಿಗೆ ತುರ್ತು ಸಾಲ ಖಾತ್ರಿ ಯೋಜನೆ ಮಾರ್ಚ್ 31, 2021 ರವರೆಗೆ ವಿಸ್ತರಣೆ ಮತ್ತು ಶೇ.20 ರವರೆಗೆ ಹೆಚ್ಚುವರಿ ಸಾಲ
10 ಚಾಂಪಿಯನ್ ವಲಯಕ್ಕೆ ₹ 1.46 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ
ಪಿಎಂ ವಸತಿ ಯೋಜನೆ – ನಗರಕ್ಕೆ ₹ 18,000 ಕೋಟಿ ಹೆಚ್ಚುವರಿ ಹಣ ಹಂಚಿಕೆ
ಸರ್ಕಾರಿ ಟೆಂಡರ್ ಗಳಲ್ಲಿ ಅರ್ನೆಸ್ಟ್ ಠೇವಣಿ ಹಣ ಮತ್ತು ಕಾರ್ಯಕ್ಷಮತೆಯ ಭದ್ರತೆ ವಿನಾಯಿತಿ
ಕಟ್ಟಡ ನಿರ್ಮಾಣದಾರರು ಮತ್ತು ಮನೆ ಖರೀದಿಸುವವರಿಗೆ ಆದಾಯ ತೆರಿಗೆ ಪರಿಹಾರ ಒದಗಿಸಲು ವಲಯ ದರ ಮತ್ತು ಒಪ್ಪಂದದ ಮೌಲ್ಯದ ನಡುವಿನ ವ್ಯತ್ಯಾಸ ಶೇ.20ಕ್ಕೆ ಹೆಚ್ಚಳ
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್.ಐ.ಐ.ಎಫ್.) ಸಾಲ ವೇದಿಕೆಯಲ್ಲಿ ₹6000 ಕೋಟಿ ಈಕ್ವಿಟಿ ಹೂಡಿಕೆ
ಕೃಷಿಗೆ ಬೆಂಬಲ ನೀಡಲು ಸಬ್ಸಿಡಿ ದರದ ರಸಗೊಬ್ಬರಕ್ಕೆ ₹65,000 ಕೋಟಿ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಉದ್ಯೋಗ ಯೋಜನೆಗೆ ₹10,000 ಕೋಟಿ ಹೆಚ್ಚುವರಿ ಹಂಚಿಕೆ
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭಾರತ ನೀಡುವ ನೆರವಿನ ಮೂಲಕ ಯೋಜನಾ ರಫ್ತಿಗೆ 3,000 ಕೋಟಿ ರೂ.
ಬಂಡವಾಳ ಮತ್ತು ಕೈಗಾರಿಕಾ ವೆಚ್ಚಗಳಿಗಾಗಿ, ₹ 10,200 ಕೋಟಿ ಹೆಚ್ಚುವರಿ ಬಜೆಟ್ ಉತ್ತೇಜನ
ಭಾರತದ ಕೋವಿಡ್ ಲಸಿಕೆ ಸಂಶೋಧನೆ ಮತ್ತು ಅಭ
Posted On:
12 NOV 2020 6:05PM by PIB Bengaluru
ಆತ್ಮನಿರ್ಭರ ಭಾರತ 3.0 ಅಡಿಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಭಾರತ ಸರ್ಕಾರದ ಕ್ರಮದ ಭಾಗವಾಗಿ, ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ 12 ಪ್ರಮುಖ ಕ್ರಮಗಳನ್ನು ಪ್ರಕಟಿಸಿದರು. ಇಂದು ಪ್ರಕಟಿಸಲಾದ ಒಟ್ಟು ಉತ್ತೇಜನ 2.65 ಲಕ್ಷ ಕೋಟಿ ರೂ.ಗಳಾಗಿವೆ. ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೋವಿಡ್ 19 ಸಾಂಕ್ರಾಮಿಕದಿಂದ ಉಂಟಾಗಿರುವ ಏರಿಳಿತಕ್ಕೆ ನೆರವಾಗಲು ಈ ದಿನಾಂಕದವರೆಗೆ ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಒಟ್ಟು ಉತ್ತೇಜನದ ₹ 29.87 ಲಕ್ಷ ಕೋಟಿಯಾಗಿದ್ದು, ಇದು ರಾಷ್ಟ್ರೀಯ ಜಿಡಿಪಿಯ ಶೇ.15 ರಷ್ಟಾಗುತ್ತದೆ. ಇದರಲ್ಲಿ ಜಿಡಿಪಿಯ ಶೇ. 9 ಮೌಲ್ಯದ ಉತ್ತೇಜನಗಳನ್ನು ಸರ್ಕಾರ ಒದಗಿಸಿದೆ ಎಂದರು.
ಆತ್ಮನಿರ್ಭರ ಭಾರತ 3.0 ಅಡಿಯಲ್ಲಿನ ಪ್ರಮುಖ 12 ಘೋಷಣೆಗಳು ಈ ಕೆಳಕಂಡಂತಿವೆ-
1) ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ
ಕೋವಿಡ್-19 ಚೇತರಿಕೆಯ ಸಮಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇಪಿಎಫ್.ಒ-ನೋಂದಾಯಿತ ಸಂಸ್ಥೆಗಳು ಇಪಿಎಫ್.ಒ ನೋಂದಣಿಯಿಲ್ಲದ ಹೊಸ ಉದ್ಯೋಗಿಗಳನ್ನು ಅಥವಾ ಈ ಮೊದಲು ಉದ್ಯೋಗ ಕಳೆದುಕೊಂಡವರನ್ನು ತೆಗೆದುಕೊಂಡರೆ, ಯೋಜನೆ ಈ ಉದ್ಯೋಗಿಗಳಿಗೆ ಪ್ರಯೋಜನವನ್ನು ಒದಗಿಸುತ್ತದೆ.
ಯೋಜನೆಯಡಿಯಲ್ಲಿ ಫಲಾನುಭವಿಗಳು / ಹೊಸ ನೌಕರರು:
· ಇಪಿಎಫ್.ಓ ನೋಂದಾಯಿತ ಸಂಸ್ಥೆಗೆ ಹೊಸ ಉದ್ಯೋಗಿ 15,000 ರೂ. ಮಾಸಿಕ ವೇತನಕ್ಕಿಂತ ಕಡಿಮೆಯ ಕೆಲಸಕ್ಕೆ ಸೇರ್ಪಡೆಯಾದರೆ
· 15,000ಕ್ಕಿಂತ ಕಡಿಮೆ ಮಾಸಿಕ ವೇತನ ಪಡೆಯುವ ಇ.ಪಿ.ಎಫ್. ಸದಸ್ಯರು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ 01.03.2020 ರಿಂದ 30.09.2020 ನಡುವೆ ಕೆಲಸ ಬಿಟ್ಟಿದ್ದರೆ ಮತ್ತು 01.10.2020ರ ನಂತರ ಮತ್ತೆ ಕೆಲಸಕ್ಕೆ ಸೇರಿದ್ದರೆ.
· ಕೇಂದ್ರ ಸರ್ಕಾರವು 01.10.2020ರಂದು ಅಥವಾ ನಂತರ ಈ ಕೆಳಗಿನ ವೇತನಶ್ರೇಣಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಅರ್ಹರಿಗೆ 2 ವರ್ಷಗಳವರೆಗೆ ಸಬ್ಸಿಡಿ ಒದಗಿಸುತ್ತದೆ:
· 1000ದವರೆಗೆ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಸ್ಥಾಪನೆಗಳು: ನೌಕರರ ವಂತಿಗೆ (ವೇತನದ ಶೇ.12ರಷ್ಟು) ಮತ್ತು ಉದ್ಯೋಗದಾತರ ವಂತಿಗೆ (ವೇತನದ ಶೇ.12) ಒಟ್ಟು ವೇತನದ ಶೇ.24.
· 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಸಂಸ್ಥೆಗಳು: ನೌಕರರ ಇಪಿಎಫ್ ವಂತಿಗೆ ಮಾತ್ರ (ಇಪಿಎಫ್ ವೇತನದ ಶೇ.12)
ಈ ಯೋಜನೆ 2020ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ ಮತ್ತು 2021ರ ಜೂನ್ 30ರವರೆಗೆ ಚಾಲ್ತಿಯಲ್ಲಿರುತ್ತದೆ.
ಇತರ ಕೆಲವು ಅರ್ಹತೆಯ ಮಾನದಂಡುಗಳನ್ನೂ ಪೂರೈಸಬೇಕಾಗುತ್ತದೆ ಮತ್ತು ಕೇಂದ್ರ ಸರ್ಕಾರ ಎರಡು ವರ್ಷಗಳವರೆಗೆ ಹೊಸ ಅರ್ಹ ಉದ್ಯೋಗಿಗಳ ವಿಚಾರದಲ್ಲಿ ಸಬ್ಸಿಡಿ ನೀಡುತ್ತದೆ.
2)ತುರ್ತು ಸಾಲ ಖಾತ್ರಿ ಯೋಜನೆ ಎಂ.ಎಸ್.ಎಂ.ಇ.ಗಳು, ವ್ಯಾಪಾರಗಳು, ಮುದ್ರಾ ಸಾಲ ಪಡೆಯುವವರು ಮತ್ತು ವ್ಯಕ್ತಿಗಳು (ವಾಣಿಜ್ಯ ಉದ್ದೇಶದ ಸಾಲ) 2021ರ ಮಾರ್ಚ್, 31ರವರೆಗೆ ವಿಸ್ತರಿಸಲಾಗಿದೆ.
ಸಾಲ ಖಾತ್ರಿ ಬೆಂಬಲ ಯೋಜನೆ ಇ.ಸಿ.ಎಲ್.ಜಿ.ಎಸ್. 2.0 ಅನ್ನು ಇತರ ಮಾನದಂಡಗಳೊಂದಿಗೆ ಒತ್ತು ನೀಡಿ ಆರೋಗ್ಯ ಆರೈಕೆ ವಲಯ ಮತ್ತು ಕೋವಿಡ್ -19 ಕಾರಣದಿಂದಾಗಿ ಒತ್ತಡಕ್ಕೆ ಸಿಲುಕಿ 29.2.2020 ರಲ್ಲಿದ್ದಂತೆ 50 ಕೋಟಿ ರೂ. ಮೇಲ್ಪಟ್ಟು ಮತ್ತು ರೂ.500 ಕೋಟಿ ವರೆಗೆ ಸಾಲ ಬಾಕಿ ಉಳಿಸಿಕೊಂಡಿರುವ 26 ಒತ್ತಡಕ್ಕೆ ಒಳಗಾಗಿರುವ ವಲಯಗಳಿಗಾಗಿ ಆರಂಭಿಸಲಾಗಿದೆ.
ಈ ಕಾಯಗಳು ತಮ್ಮ ಬಾಕಿಯ ಶೇ.20ರಷ್ಟು ಹೆಚ್ಚುವರಿ ಸಾಲವನ್ನು 1 ವರ್ಷದ ಅಸಲಿನ ಕಂತಿನ ಪಾವತಿಯ ಮುಂದೂಡಿಕೆಯೊಂದಿಗೆ 5 ವರ್ಷಗಳ ಅವಧಿಗೆ ಪಡೆಯಲಿದ್ದಾರೆ. ಈ ಯೋಜನೆ 31.3.2021ರವರೆಗೆ ಲಭ್ಯವಿರುತ್ತದೆ.
3) 10 ಚಾಂಪಿಯನ್ ವಲಯಗಳಿಗೆ ರೂ. 1.46 ಲಕ್ಷ ಕೋಟಿ ಮೌಲ್ಯದ ಉತ್ಬಾದನೆ ಸಂಪರ್ಕಿತ ಉಪಕ್ರಮ.
ಉತ್ಪಾದನೆ ಸಂಪರ್ಕಿತ ಉಪಕ್ರಮ ಯೋಜನೆಯಡಿಯಲ್ಲಿ ಮತ್ತೆ 10 ಚಾಂಪಿಯನ್ ವಲಯ ಸೇರಿದ್ದು, ದೇಶೀಯ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುತ್ತದೆ. ಇದು ಆರ್ಥಿಕತೆ, ಹೂಡಿಕೆ, ರಫ್ತು ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಉತ್ತೇಜನ ನೀಡಲಿವೆ. ಒಟ್ಟು 1.5 ಲಕ್ಷ ಕೋಟಿ ರೂ. ಗಳನ್ನು ಮುಂದಿನ 5 ವರ್ಷಗಳ ಅವಧಿಗೆ ಈ ವಲಯಗಳಿಗಾಗಿ ಹಂಚಿಕೆ ಮಾಡಲಾಗುವುದು. ಆ ಹತ್ತು ವಲಯಗಳು – ಮುಂದುವರಿದ ಸೆಲ್ ಕೆಮಿಸ್ಟ್ರೀ ಬ್ಯಾಟರಿ, ಎಲೆಕ್ಟ್ರಾನಿಕ್ /ತಂತ್ರಜ್ಞಾನ ಉತ್ಪನ್ನಗಳು, ವಾಹನ ಮತ್ತು ವಾಹನ ಬಿಡಿಭಾಗಗಳು, ಔಷಧ, ದೂರಸಂಪರ್ಕ ಮತ್ತು ನೆಟ್ ವರ್ಕಿಂಗ್ ಉತ್ಪನ್ನಗಳು, ಜವಳಿ ಉತ್ಪನ್ನಗಳು, ಆಹಾರ ಉತ್ಪನ್ನ, ಉನ್ನತ ಸಾಮರ್ಥ್ಯದ ಸೌರ ಪಿವಿ ಮಾದರಿಗಳು, ಶ್ವೇತ ಸರಕುಗಳು (ಎಸಿಗಳು ಮತ್ತು ಎಲ್.ಇ.ಡಿ.) ಮತ್ತು ವಿಶಿಷ್ಟ ಉಕ್ಕು.
4)ಪಿ.ಎಂ. ವಸತಿ ಯೋಜನೆ -ನಗರಕ್ಕೆ ₹ 18,000 ಕೋಟಿ ಹೆಚ್ಚುವರಿ ಹಂಚಿಕೆ
ಪಿಎಂಎವೈ – ನಗರಕ್ಕೆ 18 ಸಾವಿರ ಕೋಟಿ ಒದಗಿಸಲಾಗಿದೆ. ಇದು ಈಗಾಗಲೇ ಈ ವರ್ಷಕ್ಕೆ ಹಂಚಿಕೆ ಮಾಡಿರುವ 8 ಸಾವಿರ ಕೋಟಿಗೆ ಮಿಗಿಲಾಗಿದೆ. ಇದು 12 ಲಕ್ಷ ಮನೆಗಳ ನಿರ್ಮಾಣಕ್ಕೆ ಮತ್ತು 18 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು, 78 ಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಮತ್ತು ಉಕ್ಕು ಮತ್ತು ಸಿಮೆಂಟ್ ಉತ್ಪಾದನೆ ಮತ್ತು ಮಾರಾಟದ ಸುಧಾರಣೆ ಮಾಡಲಿದ್ದು, ಆರ್ಥಿಕತೆಯ ಮೇಲೆ ಬಹುಶ್ರುತ ಪರಿಣಾಮ ಬೀರುತ್ತದೆ.
5) ನಿರ್ಮಾಣ ಮತ್ತು ಮೂಲಸೌಕರ್ಯಗಳಿಗೆ ಬೆಂಬಲ - ಸರ್ಕಾರಿ ಟೆಂಡರ್ ಗಳಲ್ಲಿ ಅರ್ನೆಸ್ಟ್ ಠೇವಣಿ ಹಣ ಮತ್ತು ಕಾರ್ಯಕ್ಷಮತೆಯ ಭದ್ರತೆಯ ವಿನಾಯಿತಿ
ತಮ್ಮ ಹಣ ಸಿಲುಕಿಕೊಂಡಿರುವ ಗುತ್ತಿಗೆದಾರರ ವ್ಯವಹಾರಗಳನ್ನು ಸುಗಮಗೊಳಿಸಲು ಮತ್ತು ಪರಿಹಾರವನ್ನು ಒದಗಿಸಲು, ಕಾರ್ಯಕ್ಷಮತೆಯ ಭದ್ರತೆಯನ್ನು ಶೇ.5-10 ರಿಂದ ಶೇ. 3 ಕ್ಕೆ ಇಳಿಸಲಾಗಿದೆ. ಇದು ಹಾಲಿ ನಡೆಯುತ್ತಿರುವ ಗುತ್ತಿಗೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೂ ವಿಸ್ತರಣೆಯಾಗುತ್ತದೆ. ಟೆಂಡರುಗಳ ಇಎಂಡಿಯನ್ನು ಬಿಡ್ ಭದ್ರತೆ ಘೋಷಣೆಯಿಂದ ಬದಲಾಯಿಸಲಾಗುತ್ತದೆ. ಸಾಮಾನ್ಯ ಹಣಕಾಸು ನಿಯಮಗಳಲ್ಲಿನ ಸಡಿಲಿಕೆಗಳು ಡಿಸೆಂಬರ್ 31, 2021 ರವರೆಗೆ ಜಾರಿಯಲ್ಲಿರುತ್ತವೆ.
6) ಕಟ್ಟಡ ನಿರ್ಮಾಣದಾರರು ಮತ್ತು ಮನೆ ಖರೀದಿದಾರರಿಗೆ ಆದಾಯ ತೆರಿಗೆ ಪರಿಹಾರ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 43 ಸಿಎ ಅಡಿಯಲ್ಲಿ ವಲಯ ದರ ಮತ್ತು ರಿಯಲ್ ಎಸ್ಟೇಟ್ ಆದಾಯ ತೆರಿಗೆಯಲ್ಲಿನ ಒಪ್ಪಂದದ ಮೌಲ್ಯದ ನಡುವಿನ ವ್ಯತ್ಯಾಸವನ್ನು ಶೇ.10 ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ. ಇದು 2 ಕೋಟಿ ರೂ. ವರೆಗಿನ ವಸತಿ ಘಟಕಗಳ ಪ್ರಾಥಮಿಕ ಮಾರಾಟಕ್ಕೆ (ಈ ಯೋಜನೆಯ ಘೋಷಣೆಯ ದಿನಾಂಕದಿಂದ, ಜೂನ್ 30, 2021 ರವರೆಗೆ) ಅನ್ವಯ. ಈ ಅವಧಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56 (2) (ಎಕ್ಸ್) ಅಡಿಯಲ್ಲಿ ಈ ಘಟಕಗಳನ್ನು ಖರೀದಿಸುವವರಿಗೆ ಶೇ.20ವರೆಗಿನ ಪರಿಹಾರವನ್ನು ಅನುಮತಿಸಲಾಗುವುದು. ಆದಾಯ ತೆರಿಗೆ ಪರಿಹಾರವು ಮಧ್ಯಮ ವರ್ಗದವರಿಗೆ ಮನೆಗಳನ್ನು ಖರೀದಿಸಲು ಪ್ರೋತ್ಸಾಹವನ್ನು ನೀಡುತ್ತದೆ.
7) ಮೂಲಸೌಕರ್ಯ ಸಾಲ ನೆರವಿನ ವೇದಿಕೆ
ಸರ್ಕಾರ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್.ಐ.ಐ.ಎಫ್.)ಸಾಲ ವೇದಿಕೆಯಲ್ಲಿ 6 ಸಾವಿರ ಕೋಟಿ ಈಕ್ವಿಟಿ ಹೂಡಿಕೆಯನ್ನು ಮಾಡಲಿದ್ದು, ಇದು 2025ರವರೆಗೆ ಮೂಲಸೌಕರ್ಯ ಯೋಜನೆಗಳಿಗೆ 1.1 ಲಕ್ಷ ಕೋಟಿ ರೂ. ಸಾಲ ಒದಗಿಸಲು ಎನ್.ಐ.ಐ.ಎಫ್. ಗೆ ನೆರವಾಗಲಿದೆ.
8) ಕೃಷಿಗೆ ಬೆಂಬಲ: ಸಬ್ಸಿಡಿ ಸಹಿತ ರಸಗೊಬ್ಬರಕ್ಕೆ ₹65,000 ಕೋಟಿ
ರಸಗೊಬ್ಬರ ಬಳಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಮುಂಬರುವ ಬೆಳೆ ಹಂಗಾಮಿನಲ್ಲಿ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆ ಖಾತ್ರಿಪಡಿಸಲು ಹೆಚ್ಚಿನ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದ್ದು, ಇದಕ್ಕಾಗಿ 65,000 ಕೋಟಿ ರೂ. ಒದಗಿಸಲಾಗುತ್ತಿದೆ.
9) ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ:
10,000 ಕೋಟಿ ರೂ. ಹೆಚ್ಚುವರಿ ಹಂಚಿಕೆಯನ್ನು ಪಿ.ಎಂ. ಗರೀಬ್ ಕಲ್ಯಾಣ ಉದ್ಯೋಗ ಯೋಜನೆಗೆ ಒದಗಿಸಲಾಗುತ್ತಿದೆ. ಇದು ಗ್ರಾಮೀಣ ಆರ್ಥಿಕತೆಯವರ್ಧನೆಗೆ ನೆರವಾಗಲಿದೆ.
10) ಯೋಜನಾ ರಫ್ತಿಗೆ ಉತ್ತೇಜನ
ಭಾರತೀಯ ಅಭಿವೃದ್ಧಿ ಮತ್ತು ಆರ್ಥಿಕ ನೆರವಿನ ಯೋಜನೆ (ಐ.ಡಿ.ಇ.ಎ.ಎಸ್. ಯೋಜನೆ) ಅಡಿಯಲ್ಲಿ ಎಕ್ಸಿಮ್ ಬ್ಯಾಂಕ್ ಗೆ ಯೋಜನಾ ರಫ್ತು ಉತ್ತೇಜಿಸಲು ₹3,000 ಕೋಟಿ ಒದಗಿಸಲಾಗುತ್ತಿದೆ. ಇದು ಎಕ್ಸಿಮ್ ಬ್ಯಾಂಕ್ ಗೆ ಭಾರತದಿಂದ ರಫ್ತು ಉತ್ತೇಜಿಸುವ ಚಟುವಟಿಕೆಗಳಿಗೆ ನೆರವಾಗಲು ಸಾಲ ನೆರವು ಒದಗಿಸಲು ನೆರವಾಗುತ್ತದೆ.
11) ಬಂಡವಾಳ ಮತ್ತು ಕೈಗಾರಿಕಾ ಉತ್ತೇಜನ
ದೇಶೀಯ ರಕ್ಷಣಾ ಸಾಧನಗಳು, ಕೈಗಾರಿಕಾ ಮೂಲಸೌಕರ್ಯ ಮತ್ತು ಹಸಿರು ಇಂಧನಕ್ಕಾಗಿ ಬಂಡವಾಳ ಮತ್ತು ಕೈಗಾರಿಕಾ ವೆಚ್ಚಕ್ಕೆ ₹10,200 ಕೋಟಿ ರೂ. ಹೆಚ್ಚುವರಿ ಬಜೆಟ್ ಉತ್ತೇಜನವನ್ನು ಒದಗಿಸಲಾಗಿದೆ.
12) ಕೋವಿಡ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುದಾನ
₹900 ಕೋಟಿಯನ್ನು ಜೈವಿಕ ತಂತ್ರಜ್ಞಾನ ಇಲಾಖೆಗೆ ಭಾರತೀಯ ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಒದಗಿಸಲಾಗುತ್ತಿದೆ.
***
(Release ID: 1672388)
Visitor Counter : 643
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu