ಚುನಾವಣಾ ಆಯೋಗ

ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಮತ್ತು ವಿವಿಧ ರಾಜ್ಯಗಳ ಉಪ-ಚುನಾವಣೆಗಳ ಫಲಿತಾಂಶ ಪ್ರವೃತ್ತಿಗಳ ಪ್ರಸಾರಕ್ಕೆ 2020 ನವೆಂಬರ್ 10 ರಂದು ವ್ಯವಸ್ಥೆ

Posted On: 09 NOV 2020 6:10PM by PIB Bengaluru

ಬಿಹಾರ ವಿಧಾನಸಭೆ ಮತ್ತು ಉಪ ಚುನಾವಣೆಗಳ ಫಲಿತಾಂಶದ ಪ್ರವೃತ್ತಿ 10.11.2020ರಂದು ಬೆಳಗ್ಗೆ 8 ಗಂಟೆಯಿಂದ ಈ ಕೆಳಕಂಡ ತಾಣಗಳಲ್ಲಿ ಮತ್ತು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಾಗಲಿದೆ.

1. ಭಾರತೀಯ ಚುನಾವಣಾ ಆಯೋಗದ https://results.eci.gov.in/ ಅಂತರ್ಜಾಲ ತಾಣದಲ್ಲಿ ಫಲಿತಾಂಶಗಳನ್ನು ಪ್ರದರ್ಶಿಸಲಾಗುವುದು ಮತ್ತು ಪ್ರತಿ ಕ್ಷೇತ್ರದ ಪ್ರಸಕ್ತ ಸುತ್ತುವಾರು ಫಲಿತಾಂಶಕ್ಕಾಗಿ ಕೆಲವೇ ನಿಮಿಷಗಳಿಗೊಮ್ಮೆ ಅದನ್ನು ನವೀಕರಿಸಲಾಗುವುದು.

2. ಫಲಿತಾಂಶಗಳು ಮತದಾರರ ಸಹಾಯವಾಣಿ ಮೊಬೈಲ್ ಆಪ್ ನಲ್ಲೂ ಲಭ್ಯವಾಗಲಿದ್ದು, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ನಲ್ಲಿ ಇದು ಲಭ್ಯವಿದೆ.

ಅಂತರ್ಜಾಲ ತಾಣ/ ಮೊಬೈಲ್ ಆಪ್ ಆಯಾ ಎಣಿಕೆ ಕೇಂದ್ರಗಳಿಂದ ಮತಎಣಿಕೆ ಅಧಿಕಾರಿಗಳು ಕಂಪ್ಯೂಟರ್ ನಲ್ಲಿ ಭರ್ತಿ ಮಾಡಿದ ಮಾಹಿತಿಯನ್ನು ಪ್ರದರ್ಶಿಸುತ್ತವೆ. ಆಯಾ ಎಣಿಕೆ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು ಸಿಸ್ಟಮ್ ನಲ್ಲಿ ಭರ್ತಿ ಮಾಡಿದ ರೀತ್ಯ ಇಸಿಐ ಮಾಹಿತಿಯನ್ನು ಪ್ರದರ್ಶಿಸುತ್ತದೆ.

***


(Release ID: 1671549) Visitor Counter : 214