ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಮೂವರು ನೂತನ ಮಾಹಿತಿ ಆಯುಕ್ತರು ಇಂದು ಅಧಿಕಾರ ಸ್ವೀಕಾರ

Posted On: 07 NOV 2020 2:34PM by PIB Bengaluru

          ಮುಖ್ಯ ಮಾಹಿತಿ ಆಯುಕ್ತ ಶ್ರೀ ವೈ.ಕೆ. ಸಿನ್ಹಾ ಅವರು ಇಂದು ಕೇಂದ್ರ ಮಾಹಿತಿ ಆಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂವರು ನೂತನ ಮಾಹಿತಿ ಆಯುಕ್ತರಾದ ಶ್ರೀ ಹೀರಾಲಾಲ್ ಸಮಾರಿಯಾ, ಶ್ರೀಮತಿ ಸರೋಜ್ ಪುನ್ಹಾನಿ ಮತ್ತು ಶ್ರೀ ಉದಯ್ ಮಹೂರ್ಕರ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಮೂವರು ನೂತನ ಮಾಹಿತಿ ಆಯುಕ್ತರ ಸೇರ್ಪಡೆಯಿಂದಾಗಿ ಕೇಂದ್ರ ಮಾಹಿತಿ ಹಕ್ಕು ಆಯೋಗದಲ್ಲಿ ಮುಖ್ಯ ಮಾಹಿತಿ ಆಯುಕ್ತರು ಸೇರಿದಂತೆ ಆಯುಕ್ತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಶ್ರೀ ಹೀರಾಲಾಲ್ ಸಮಾರಿಯಾ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಅವರು ನಿವೃತ್ತಿಗೂ ಮುನ್ನ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಸಿವಿಲ್ ಇಂಜಿನಿಯರಿಂಗ್ ಪದವೀಧರರು. ಅವರ ಕಾರ್ಯಕ್ಷೇತ್ರ, ಆಡಳಿತವಾಗಿದ್ದು, ವ್ಯವಸ್ಥೆಯ ವಿಚಾರದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ.

          ಶ್ರೀಮತಿ ಸರೋಜಾ ಪುನ್ಹಾನಿ ಇವರು ಭಾರತೀಯ ಲೆಕ್ಕ ಮತ್ತು ಲೆಕ್ಕಪರಿಶೋಧನೆ ಸೇವಾ ಅಧಿಕಾರಿಯಾಗಿದ್ದು, ಕೇಂದ್ರ ಮಾಹಿತಿ ಆಯೋಗದಲ್ಲಿ ಮಾಹಿತಿ ಆಯುಕ್ತರಾಗಿ ಸೇರ್ಪಡೆಯಾಗುವ ಮುನ್ನ ಅವರು ಭಾರತ ಸರ್ಕಾರದ ಉಪ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪಾಲರ(ಮಾನವ ಸಂಪನ್ಮೂಲ ಮತ್ತು ತರಬೇತಿ) ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಾನವಶಾಸ್ತ್ರದಲ್ಲಿ ಪದವಿಯನ್ನು ಪಡೆದಿರುವ ಇವರು ಆಡಳಿತ ಮತ್ತು ಸರ್ಕಾರದ ವ್ಯವಸ್ಥೆಯ ವಿಚಾರದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ.

          ಶ್ರೀ ಉದಯ್ ಮಹೂರ್ಕರ್, ಹಿರಿಯ ಪತ್ರಕರ್ತರಾಗಿರುವ ಇವರು ಕೇಂದ್ರ ಮಾಹಿತಿ ಆಯೋಗಕ್ಕೆ ಮಾಹಿತಿ ಆಯುಕ್ತರಾಗಿ ಸೇರ್ಪಡೆಯಾಗುವ ಮುನ್ನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ಡೆಪ್ಯುಟಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಹಾರಾಜ ಸೈಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪ್ರಾಚ್ಯವಸ್ತು ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಅವರು ಮಾಧ್ಯಮ ವಲಯದಲ್ಲಿ ಅಗಾಧ ಅನುಭವವನ್ನು ಹೊಂದಿದ್ದಾರೆ.

*******



(Release ID: 1671032) Visitor Counter : 215