ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಮಕ್ಕಳು, ಪಾಲಕರು/ಕುಟುಂಬಗಳಿಗೆ ಗುಣಮಟ್ಟದ ಜೀವನವೃದ್ಧಿಗೆ ಪ್ರಾಯೋಗಿಕ ಪರಿಹಾರಗಳ ಅಭಿವೃದ್ಧಿಗೆ ನಗರಗಳ ಅಭಿವೃದ್ಧಿಗೆ ನೆರೆಹೊರೆಯ ಸವಾಲುಗಳ ಪೋಷಣೆ


ನಗರಗಳಲ್ಲಿ “ದತ್ತಾಂಶ ಸಂಸ್ಕೃತಿ” ಸೃಷ್ಟಿಗೆ ಡಿಎಂಎ ಸೈಕಲ್-2ಗೆ ಬೆಂಬಲ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳಲು ಅನುವಾಗುವಂತೆ ಮಾರ್ಗದರ್ಶಿ ಇ-ಕಲಿಕೆಗೆ ಸಿಡಿಒ ತರಬೇತಿ

ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರಿಂದ ಮೂರು ಕಾರ್ಯಕ್ರಮಗಳಿಗೆ ಚಾಲನೆ

Posted On: 04 NOV 2020 4:25PM by PIB Bengaluru

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ(ಸ್ವತಂತ್ರ ಹೊಣೆಗಾರಿಕೆ) ರಾಜ್ಯ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಇಂದು ಮೂರು ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅವುಗಳೆಂದರೆ, ಚಿಕ್ಕ ಮಕ್ಕಳು, ಅವರ ಪಾಲಕರು ಮತ್ತು ಕುಟುಂಬಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಗರಗಳನ್ನು ರೂಪಿಸಲು ಆದ್ಯತೆ ನೀಡುವ ನೆರೆಹೊರೆ ಸ್ಪರ್ಧೆ ಪೋಷಣೆ, ನಗರಗಳಲ್ಲಿ ದತ್ತಾಂಶ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲು ದತ್ತಾಂಶ  ಪರಿಪಕ್ವತೆ ಮೌಲ್ಯಮಾಪನ ನೀತಿ ಮತ್ತು ನೂರು ಸ್ಮಾರ್ಟ್ ಸಿಟಿಗಳಲ್ಲಿ ನಗರ ದತ್ತಾಂಶ ಅಧಿಕಾರಿ(ಸಿಡಿಒ)ಗಳಿಗೆ ಆನ್ ಲೈನ್ ಮೂಲಕ ತರಬೇತಿ ನೀಡುವ ಕಾರ್ಯಕ್ರಮಗಳಿಗೆ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ ಚಾಲನೆ ನೀಡಿದರು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾಶಂಕರ್ ಮಿಶ್ರಾ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಇತರೆ ಭಾಗಿದಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನೆರೆಹೊರೆ ಪೋಷಣೆ ಸ್ಪರ್ಧೆ, ಇದು ಮೂರು ವರ್ಷಗಳ ಕಾರ್ಯಕ್ರಮವಾಗಿದ್ದು, ಇದರಲ್ಲಿ ಚಿಕ್ಕ ಮಕ್ಕಳು, ಅವರ ಪೋಷಕರು ಮತ್ತು ಕುಟುಂಬಗಳ ಜೀವನಮಟ್ಟ ವೃದ್ಧಿಗೆ ಅನುಕೂಲಕಾರಿಯಾದ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಅವುಗಳನ್ನು ಬೆಂಬಲಿಸುವುದಾಗಿದೆ. ಈ ಸ್ಪರ್ಧೆಯನ್ನು ನೆದರ್ ಲ್ಯಾಂಡ್ಸ್ ನ ಬರ್ನಾರ್ಡ್ ವಾನ್ ಲೀರ್ ಫೌಂಡೇಷನ್ ನ ಬೆಂಬಲ ಮತ್ತು ಡಬ್ಲ್ಯೂಆರ್ ಐ ಇಂಡಿಯಾದ ತಾಂತ್ರಿಕ ನೆರವಿನೊಂದಿಗೆ ನಡೆಸಲಾಗುವುದು. ಈ ಸ್ಪರ್ಧೆಯ ಮೂಲಕ ಆಯ್ದ ನಗರಗಳಿಗೆ ತಾಂತ್ರಿಕ ನೆರವು ಮತ್ತು ಪಾರ್ಕ್ ಗಳು ಮತ್ತು ಮುಕ್ತ ಸ್ಥಳಗಳ ಮರುವಿನ್ಯಾಸದ ಸಾಮರ್ಥ್ಯವೃದ್ಧಿಗೆ ನೆರವು ನೀಡುವುದು, ಮಕ್ಕಳಿಗೆ ಅನುಕೂಲಕಾರಿಯಾದ ಸೌಕರ್ಯಗಳನ್ನು ಸುಧಾರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಚಿಕ್ಕ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಚಿಕ್ಕ ಮಕ್ಕಳು ಮತ್ತು ಕುಟುಂಬದವರಿಗೆ ಸುರಕ್ಷಿತ ಮತ್ತು ನಡೆದಾಡುವಂತಹ ಬೀದಿಗಳನ್ನು ನಿರ್ಮಿಸುವುದು ಸೇರಿದೆ. ಈ ಸ್ಪರ್ಧೆ ಎಲ್ಲ ಸ್ಮಾರ್ಟ್ ಸಿಟಿಗಳಿಗೂ ಮುಕ್ತವಾಗಿದ್ದು, ಐದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಇತರ ನಗರಗಳೂ ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಿಗೂ ಸಹ ಅನ್ವಯವಾಗುತ್ತವೆ.

          “ನಗರದ ಪರಿಸರ ಚಿಕ್ಕ ಮಕ್ಕಳ ಆರೋಗ್ಯ ಮತ್ತು ಅಭಿವೃದ್ಧಿಯನ್ನು ರೂಪಿಸುತ್ತದೆ. ವಿಶೇಷವಾಗಿ ಮಕ್ಕಳ ಬಾಲ್ಯದ ಐದು ವರ್ಷ, ಅತ್ಯಂತ ಗಂಭೀರ ಮತ್ತು ಮಹತ್ವದ್ದಾಗಿರುತ್ತದೆ. ಮಗುವಿನ ಜೀವನದ ಮೊದಲ ಒಂದು ಸಾವಿರ ದಿನಗಳು ಪ್ರತಿಯೊಂದು ಕ್ಷಣವೂ ಒಂದು ಮಿಲಿಯನ್ ಗೂ ಅಧಿಕ  ಹೊಸ ನರ ಸಂಪರ್ಕಗಳ ರಚನೆಯಾಗುತ್ತವೆ. ಚಿಕ್ಕ ಮಕ್ಕಳ ಮತ್ತು ಅವರ ಕುಟುಂಬಗಳ ಪ್ರಾಥಮಿಕ ಸಾರ್ವಜನಿಕ ವ್ಯಾಪ್ತಿಯನ್ನು ವಿಸ್ತರಿಸುವುದು, ಬಾಲ್ಯಾವಸ್ಥೆಯಲ್ಲಿ ಅವರಿಗೆ ಹೆಚ್ಚು ಸುರಕ್ಷತೆಯನ್ನು ಕಲ್ಪಿಸುವುದು, ಮತ್ತು ನೆರೆಹೊರೆ ಸ್ಪರ್ಧೆ, ಪೋಷಣೆ  ಮೂಲಕ ಮುಂದಿನ ದಶಕಗಳಲ್ಲಿ ಭಾರತದ ನಗರಗಳಲ್ಲಿ ಉತ್ಕೃಷ್ಟ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಫಲಿತಾಂಶಗಳಿಗೆ ಭದ್ರ ಬುನಾದಿ ಹಾಕಲು ನೆರವಾಗಲಿದೆ”.

          “ಕುಟುಂಬಗಳು, ಅಸಮರ್ಪಕ ಸಾರ್ವಜನಿಕ ಸಾರಿಗೆ, ಆರೋಗ್ಯ, ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಆರೈಕೆ ಸಮಸ್ಯೆಗಳು, ಮರುಭೂಮಿಗಳಂತಾಗಿವೆ. ಇಂತಹ ಸವಾಲುಗಳನ್ನು ಎದುರಿಸಲು ಚಿಂತನಶೀಲ ನಗರ ಯೋಜನೆಗಳು ಮತ್ತು ವಿನ್ಯಾಸ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಮಕ್ಕಳ ಜೀವನ ಆರಂಭಕ್ಕೆ ಉತ್ತಮ ಮುನ್ನುಡಿ ಬರೆಯುತ್ತವೆ. ಇದರಲ್ಲಿ ನಡೆಯಬಹುದಾದ ಸ್ಥಳ, ನೆರೆಹೊರೆಯ ಬಳಕೆ, ಚಿಕ್ಕಮಕ್ಕಳ ಕುಟುಂಬಗಳಿಗೆ 15 ನಿಮಿಷ ಬರಿಗಾಲಲ್ಲಿ ನಡೆಯುವ ವ್ಯವಸ್ಥೆ ಸನಿಹದಲ್ಲೇ ಕಲ್ಪಿಸಬೇಕು. ಪೋಷಕರಿಗೆ ತಮ್ಮ ನಿವಾಸದ ಸನಿಹದಲ್ಲೇ ಹಸಿರು ಸಾರ್ವಜನಿಕ ಸ್ಥಳಾವಕಾಶ ಇರುವಂತೆ ಮಾಡಬೇಕು. ಚಿಕ್ಕಮಕ್ಕಳು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಬೇಕು. ಸುರಕ್ಷಿತ ಸಾರಿಗೆ ಮಾರ್ಗಗಳು ಮತ್ತು ಸಾರಿಗೆ ವ್ಯವಸ್ಥೆ ಇವು ಸುಲಭ ಕೈಗೆಟಕಬಹುದಾದ ಮತ್ತು ಕುಟುಂಬಗಳಿಗೆ ಆನಂದವನ್ನು ನೀಡುತ್ತವೆ. ಚಿಕ್ಕ ಮಕ್ಕಳು ಪ್ರಯಾಣಿಸಲು ಅನುಕೂಲವಾಗುತ್ತದೆ ಮತ್ತು ಕಡಿಮೆ ಶಬ್ದ ಮಾಲಿನ್ಯ ಹಾಗೂ ಸುರಕ್ಷಿತ ಮಟ್ಟದ ವಾಯುಗುಣಮಟ್ಟದ ಮೂಲಕ ಆರೋಗ್ಯಕರ ಪರಿಸರವನ್ನು ನಿರ್ಮಾಣ ಮಾಡಬೇಕು ಮತ್ತು ಕೊನೆಯದಾಗಿ ಕುಟುಂಬಗಳ ಆರೋಗ್ಯ ಬೆಂಬಲಿಸುವ ಕ್ರಿಯಾಶೀಲ ಸಮುದಾಯ ಜೀವನವನ್ನು ನಡೆಸುವಂತಾಗಬೇಕು”.

- ಶ್ರೀ ಹರ್ದೀಪ್ ಸಿಂಗ್ ಪುರಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ(ಸ್ವತಂತ್ರ ಹೊಣೆಗಾರಿಕೆ)

          “ಎಲ್ಲ ಜನರಿಗೆ ಸ್ಪಂದಿಸುವಂತಹ ನಗರಗಳಿಗೆ, ಅತ್ಯಂತ ಸೂಕ್ಷ್ಮ ಗುಂಪಿನ ಅಗತ್ಯತೆಗಳನ್ನು ಪ್ರಜ್ಞಾಪೂರ್ವಕವಾಗಿ ಎದುರಿಸುವಂತಹ ಅಗತ್ಯತೆಗಳು ಇವೆ. ನಗರ ಯೋಜನೆಯಲ್ಲಿ ಬಾಲ್ಯಾವಸ್ಥೆಗೆ ಅಗತ್ಯ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯಂತ ಸಮಗ್ರ, ಜನಸ್ನೇಹಿ ನಗರಗಳನ್ನು ಅಭಿವೃದ್ಧಿಗೊಳಿಸಲು ನೆರವಾಗಲಿದೆ”.

 - ಶ್ರೀ ದುರ್ಗಾಶಂಕರ್ ಮಿಶ್ರಾ, ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಎಂಒಎಚ್ ಯುಎ)

          “ನಾವು ನವಜಾತ ಶಿಶುಗಳು, ಚಿಕ್ಕಮಕ್ಕಳು ಅವರ ಪೋಷಕರು ಹಾಗೂ ಅವರ ಪಾಲಕರಿಗೆ ಅನುಕೂಲವಾಗುವಂತೆ ನೆರೆಹೊರೆ ಸ್ನೇಹಿ, ಸುಸ್ಥಿರ ಮತ್ತು ಸಮಗ್ರ ನಗರಗಳ ನಿರ್ಮಾಣವನ್ನು ನಂಬಿದ್ದೇವೆ. ಇದರಲ್ಲಿ ಮೂಲಸೌಕರ್ಯ ಮತ್ತು ಸಣ್ಣ ವಯಸ್ಸಿನ ಮಕ್ಕಳಿಗೆ ಹಾಗೂ ಒಟ್ಟಾರೆ ಎಲ್ಲ ಜನರಿಗೂ ಉತ್ತಮ ಜೀವನ ನಡೆಸಲು ಅನುಕೂಲವಾಗಿರುವಂತಿರಬೇಕು. ಸಾರ್ವಜನಿಕ ಸ್ಥಳಗಳು, ಸಂಚಾರ, ಚಿಕ್ಕಮಕ್ಕಳಿಗೆ ಸೇವಾ ಲಭ್ಯತೆಗಳಿಗೆ ಒತ್ತು ನೀಡಲಾಗುತ್ತಿದ್ದು, ಅಲ್ಲದೆ ಮಕ್ಕಳ ಆರೋಗ್ಯ ಮತ್ತು ಕಲ್ಯಾಣ ಬೆಂಬಲಿಸುವ ಇತರೆ ಅಂಶಗಳ ಬಗ್ಗೆಯೂ ಆದ್ಯತೆ ನೀಡಲಾಗುತ್ತಿದೆ. ಚಿಕ್ಕ ಮಕ್ಕಳಿಗಾಗಿ ಕಾರ್ಯನಿರ್ವಹಿಸುವ ನಗರಗಳು ಎಲ್ಲ ವಯೋಮಾನದವರ ಕೆಲಸಕ್ಕೂ ಹೊಂದಿಕೆಯಾಗುತ್ತವೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಈ ಪ್ರಮುಖ ಕಾರ್ಯಕ್ರಮ ಆರಂಭಿಸಿರುವುದಕ್ಕಾಗಿ ನಾವು ಆಭಾರಿಯಾಗಿದ್ದೇವೆ ಮತ್ತು ಇದಕ್ಕೆ ಸಹಯೋಗ ನೀಡುತ್ತಿರುವ ವರ್ಲ್ಡ್ ರಿಸೋರ್ಸಸ್ ಇಂಡಿಯಾ ಮತ್ತು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ನಗರಗಳ ಸಹಕಾರವನ್ನು ಎದುರು ನೋಡುತ್ತಿದ್ದೇವೆ’’.

  • ರುಷ್ದಾ ಮಜೀದ್, ಭಾರತದ ಪ್ರತಿನಿಧಿ, ಬರ್ನಾರ್ಡ್ ವಾನ್ ಲೀರ್ ಫೌಂಡೇಷನ್

“ದತ್ತಾಂಶ ಪರಿಪಕ್ವತೆ ಮೌಲ್ಯಮಾಪನ ನೀತಿ(ಡಿ ಎಂ ಎ ಎಫ್)– ಸೈಕಲ್-2 ಇದು ಸ್ಮಾರ್ಟ್ ಸಿಟಿ ಯೋಜನೆಗಳಡಿ ಕೈಗೊಂಡಿರುವ ದತ್ತಾಂಶ ಸ್ಮಾರ್ಟ್ ನಗರಗಳ ಉಪಕ್ರಮದಡಿ ‘ದತ್ತಾಂಶ ಸಂಸ್ಕೃತಿ’ಯನ್ನು ಸೃಷ್ಟಿಸುವುದಾಗಿದೆ. ಈ ನೀತಿಯ ಪ್ರಮುಖ ಧ್ಯೇಯವೆಂದರೆ ನೀತಿಗಳು, ಆಡಳಿತ ವ್ಯವಸ್ಥೆ, ದತ್ತಾಂಶ ನಿರ್ವಹಣೆ, ಸಾಮರ್ಥ್ಯವೃದ್ಧಿ ಮತ್ತು ನಗರ ಮಟ್ಟದಲ್ಲಿ ಸಂಬಂಧಿಸಿದವರೊಂದಿಗೆ ಸಹಯೋಗ ಈ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿ ದತ್ತಾಂಶವನ್ನು ಹೊಂದುವಂತೆ ಮಾಡುವುದಾಗಿದೆ. ಮುಕ್ತ ಆವಿಷ್ಕಾರ, ಸಹಭಾಗಿತ್ವ, ಸಹ-ಸೃಷ್ಟಿ ಮತ್ತು ಶೈಕ್ಷಣಿಕ ಸಂಶೋಧನೆ ವಿಚಾರದಲ್ಲಿ ದತ್ತಾಂಶ ಸಂಸ್ಕೃತಿಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಇದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಮೌಲ್ಯಮಾಪನ ಮಾಡುವ ವ್ಯವಸ್ಥೆಯನ್ನು ಸ್ಮಾರ್ಟ್ ಸಿಟಿಗಳು ಮಾತ್ರವಲ್ಲದೆ, ಇತರೆ ನಗರಗಳಿಗೂ ವಿಸ್ತರಿಸಲಾಗಿದೆ.

          “ದತ್ತಾಂಶ ಮತ್ತು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕರಿಗೆ ಸರ್ಕಾರದ ಸೇವೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಲಭ್ಯವಾಗುವಂತೆ ಮಾಡಬೇಕು ಎಂಬುದು ಗೌರವಾನ್ವಿತ ಪ್ರಧಾನಮಂತ್ರಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿದೆ. ದತ್ತಾಂಶ ಸ್ಮಾರ್ಟ್ ಸಿಟಿಗಳ ಉಪಕ್ರಮವನ್ನು ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಕೈಗೊಳ್ಳಲಾಗಿದ್ದು, ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ದತ್ತಾಂಶ ಮತ್ತು ತಂತ್ರಜ್ಞಾನ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಈ ಉಪಕ್ರಮದ ಮೂಲಕ ಪುರಾವೆ ಆಧರಿಸಿದ ಯೋಜನೆ ಮತ್ತು ಸಾಧನಾ ನಿರ್ವಹಣೆಗೆ ಉತ್ಕೃಷ್ಟ ಕಾರ್ಯತಂತ್ರ ಅಳವಡಿಕೆ ಗುರಿ ಹೊಂದಲಾಗಿದೆ’’.

- ಶ್ರೀ ಹರ್ದೀಪ್ ಸಿಂಗ್ ಪುರಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ(ಸ್ವತಂತ್ರ ಹೊಣೆಗಾರಿಕೆ)

          “ಜಗತ್ತಿನಾದ್ಯಂತ ಎಲ್ಲ ನಗರಗಳು ದತ್ತಾಂಶವನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದು, ಆ ಮೂಲಕ ನೀತಿ ನಿರೂಪಣೆ, ಯೋಜನೆಗಳ ಆಯ್ಕೆ, ಯೋಜನೆಗಳ ವಿನ್ಯಾಸ, ಅನುಷ್ಠಾನ ಹಾಗೂ ಸೇವಾ ವಿತರಣೆ ಸರಣಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ನಾವು ದತ್ತಾಂಶವನ್ನು ಸಮರ್ಪಕವಾಗಿ ಬಳಸಿಕೊಂಡರೆ, ಸಾರ್ವಜನಿಕರ ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಹುದು ಮತ್ತು ನಗರ ಆಡಳಿತದಲ್ಲಿ ಸೀಮಿತ ಸಂಪನ್ಮೂಲದಲ್ಲಿ ಹೆಚ್ಚು ಸೇವೆ ನೀಡಲು ಸಾಧ್ಯವಾಗುತ್ತದೆ. ದತ್ತಾಂಶ ಆಧರಿತ ಕಾರ್ಯ ವಿಧಾನದಿಂದ ಫಲಿತಾಂಶ ಆಧಾರಿತ ಯೋಜನೆ ಮತ್ತು ಆಡಳಿತ ನಿಟ್ಟಿನಲ್ಲಿ ಸಾಗಲು ಖಾತ್ರಿಪಡಿಸುತ್ತದೆ. ನಗರಗಳ ಸೇವೆಗಳ ಸುಧಾರಣೆಯಲ್ಲಿ ದತ್ತಾಂಶ ಒಂದು ಪ್ರಮುಖ ಅಂಶ ಎಂದು ಪರಿಗಣಿಸಲಾಗುತ್ತಿದೆ. ಜೊತೆಗೆ ಆವಿಷ್ಕಾರ ಮತ್ತು ಸಹ-ಸೃಷ್ಟಿಗೆ ಇದೊಂದು ಉತ್ತಮ ಅವಕಾಶವಾಗಿದೆ’’.

- ಶ್ರೀ ದುರ್ಗಾಶಂಕರ್ ಮಿಶ್ರಾ, ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಎಂಒಎಚ್ ಯುಎ)

          ಸಿಡಿಒ ತರಬೇತಿ ಕಾರ್ಯಕ್ರಮದಡಿ ಎಂಒಎಚ್ ಯುಎ ಟಾಟಾ ಟ್ರಸ್ಟ್ ನೊಂದಿಗೆ ಸಹಭಾಗಿತ್ವ ಸಾಧಿಸಿ, ಆರು ವಾರಗಳ ಇ-ಕಲಿಕೆ ಕೋರ್ಸ್ ಆರಂಭಿಸಲಿದ್ದು, ಅದಕ್ಕೆ ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವುದು’ ಎಂದು ಹೆಸರಿಡಲಾಗಿದೆ. ವಿಶೇಷವಾಗಿ ಈ ಕೋರ್ಸ್ ಅನ್ನು 100 ಸ್ಮಾರ್ಟ್ ಸಿಟಿಗಳಲ್ಲಿ ನೇಮಕ ಗೊಂಡಿರುವ ನಗರ ದತ್ತಾಂಶ ಅಧಿಕಾರಿ(ಸಿಡಿಒ)ಗಳಿಗೆ ವಿನ್ಯಾಸಗೊಳಿಸಲಾಗಿದ್ದು, ಈ ಅಭ್ಯಾಸ ಆಧಾರಿತ ಡಿಜಿಟಲ್ ಕೋರ್ಸ್ ಸಿಡಿಒಗಳಿಗೆ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಮತ್ತು ದೃಶ್ಯೀಕರಣಕ್ಕೆ ಮೂಲ ಮತ್ತು ಆಧುನಿಕ ಸಾಧನಗಳನ್ನು ತಿಳಿಯಲು ನೆರವಾಗುತ್ತದೆ. ಸಿಡಿಒಗಳು ದತ್ತಾಂಶ ಆಧಾರಿತ ಪರಿಣಾಮಕಾರಿ ಆಡಳಿತದ ತತ್ವಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುವುದಲ್ಲದೆ, ವಾಸ್ತವಿಕ ಕಲಿಕೆ ಮತ್ತು ಅಳವಡಿಕೆ ಮೂಲಕ ಬಳಕೆ ಆಧಾರಿತ ಮನೋಭಾವದಲ್ಲಿ ಕ್ರಿಯಾತ್ಮಕ ದತ್ತಾಂಶ ನೀತಿ ರೂಪಿಸಲು ನೆರವಾಗಲಿದೆ.

“ನಗರ ದತ್ತಾಂಶ ಅಧಿಕಾರಿ(ಸಿಡಿಒ)ಗಳಿಗೆ ನೆರವು ನೀಡುವುದು, ಆನ್ ಲೈನ್ ಕಲಿಕೆ ವಿಧಾನಗಳು ಮತ್ತು ಪಾಲುದಾರರು ಹಾಗೂ ತಜ್ಞರಿಂದ ಬೆಂಬಲದ ಮೂಲಕ ಅವರ ಸಾಮರ್ಥ್ಯವೃದ್ಧಿಗೆ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳಲು ಸಚಿವಾಲಯ ಬದ್ಧವಾಗಿದೆ. ಆ ಮೂಲಕ ಎಂಒಎಚ್ ಯುಎ ಕೇವಲ ನಗರ ಸ್ಥಳೀಯ ಸಂಸ್ಥೆಗಳೊಳಗೆ ಡಿಜಿಟಲ್ ನಾಯಕತ್ವವನ್ನು ಸೃಷ್ಟಿಸುತ್ತಿಲ್ಲ. ಬದಲಿಗೆ ದೊಡ್ಡ ಪ್ರಮಾಣದಲ್ಲಿ ದೇಶದ ನಗರ ದತ್ತಾಂಶ ವ್ಯವಸ್ಥೆಯ ಸಾಮರ್ಥ್ಯವನ್ನು ಬಲವರ್ಧನೆಗೊಳಿಸುತ್ತಿದೆ”

- ಶ್ರೀ ಹರ್ದೀಪ್ ಸಿಂಗ್ ಪುರಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ(ಸ್ವತಂತ್ರ ಹೊಣೆಗಾರಿಕೆ)

          “ಟಾಟಾ ಟ್ರಸ್ಟ್ ಅಭಿವೃದ್ಧಿಗೊಳಿಸಿರುವ ತರಬೇತಿ ಕಾರ್ಯಕ್ರಮ, ತರಬೇತಿಯಲ್ಲಿ ಪಾಲ್ಗೊಳ್ಳುವ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಹೆಚ್ಚು ಪ್ರಸ್ತುತವಾಗುತ್ತದೆ ಮತ್ತು ಇದರಲ್ಲಿ ದತ್ತಾಂಶ ಆಧಾರಿತ ಆಡಳಿತದ ಮೂಲ, ದತ್ತಾಂಶ ಬಳಕೆಯ ಸಾಧನಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ತಂತ್ರಜ್ಞಾನ, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ಬಳಕೆ ಪ್ರಕರಣಗಳ ಪ್ರಾತ್ಯಕ್ಷಿಕೆ ಹಾಗೂ ಬದಲಾವಣೆ ನಿರ್ವಹಣೆಯ ತತ್ವಗಳು ಹಾಗೂ ಪದ್ಧತಿಗಳಿಂದಾಗಿ ದತ್ತಾಂಶ ಆಧಾರಿತ ಪರಿವರ್ತನೆಗಳನ್ನು ತರಲು ಸಾಧ್ಯ’’.

- ಶ್ರೀ ದುರ್ಗಾಶಂಕರ್ ಮಿಶ್ರಾ, ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಎಂಒಎಚ್ ಯುಎ)

          “2016ರಿಂದೀಚೆಗೆ ಟಾಟಾ ಟ್ರಸ್ಟ್ ತನ್ನ ದತ್ತಾಂಶ ಆಧರಿತ ಆಡಳಿತ(ಡಿಡಿಜಿ) ಶಿಷ್ಟಾಚಾರದ ಮೂಲಕ ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳನ್ನು ಅಗತ್ಯ ಮತ್ತು ದತ್ತಾಂಶ ಪ್ರಸ್ತುತತೆ ಆಧರಿಸಿದ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡುವಲ್ಲಿ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ ನಮ್ಮ ಪ್ರಯತ್ನಗಳು ವ್ಯವಸ್ಥೆಯೊಳಗೆ ಪರಿಣಾಮಕಾರಿ ಸಂಪನ್ಮೂಲಗಳು ಮತ್ತು ಶ್ರೇಣಿಯನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂಬ ಭರವಸೆ ಇದೆ. ಆ ಮೂಲಕ ನಾಗರಿಕರು ಮತ್ತು ಆಡಳಿತಕ್ಕೆ ನಿಜವಾಗಿಯೂ ಉತ್ತರ ದಾಯಿತ್ವದ ಪ್ರಯೋಜನ ದೊರಕಲಿದೆ. ಸರ್ಕಾರಿ ಸೇವೆಗಳ ಡಿಜಿಟಲೀಕರಣ ಮತ್ತು ವ್ಯವಸ್ಥಿತ ಅತ್ಯಾಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ಮಾರ್ಟ್ ಸಿಟಿಗಳಲ್ಲಿ ವಾಸಿಸುವವರಿಗೆ ಅನುಕೂಲಕಾರಿಯಾಗಲಿದೆ’’.

  • ಡಾ. ಪೂರ್ಣಿಮಾ ದೊರೆ, ಮುಖ್ಯಸ್ಥರು ದತ್ತಾಂಶ ಆಧಾರಿತ ಆಡಳಿತ ಟಾಟಾ ಟ್ರಸ್ಟ್

***​



(Release ID: 1670249) Visitor Counter : 328