ಪ್ರವಾಸೋದ್ಯಮ ಸಚಿವಾಲಯ
ಕೇಂದ್ರ ಪ್ರವಾಸೋದ್ಯಮ ʼಪ್ರಶಾದ್ʼ ಯೋಜನೆಯಡಿ ಕೇರಳದ ಗುರುವಾಯೂರಿನಲ್ಲಿ ಪ್ರವಾಸಿ ಸೌಲಭ್ಯ ಕೇಂದ್ರ. ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಂದ ಚಾಲನೆ
Posted On:
04 NOV 2020 2:04PM by PIB Bengaluru
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ರಾಜ್ಯ ಸಚಿವರಾದ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಪ್ರವಾಸೋದ್ಯಮ ಸಚಿವಾಲಯದ ಪ್ರಶಾದ್ ಯೋಜನೆಯಡಿ ವರ್ಚುವಲ್ ಮೂಲಕ “ಕೇರಳದ ಗುರುವಾಯೂರ್ ಅಭಿವೃದ್ಧಿ” ಯೋಜನೆಯಡಿನಿರ್ಮಿಸಲಾದ “ಪ್ರವಾಸಿ ಸೌಲಭ್ಯ ಕೇಂದ್ರ”ವನ್ನು ಉದ್ಘಾಟಿಸಿದರು.ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಶ್ರೀ ಎಸ್. ವಿ.ಮುರಳೀಧರನ್, ಮತ್ತು ಕೇರಳ ಸರ್ಕಾರದ ಸಹಕಾರ, ಪ್ರವಾಸೋದ್ಯಮ ಮತ್ತು ದೇವಸ್ವಂಗಳ ಸಚಿವ ಎಸ್. ಕಡಕಂಪಲ್ಲಿ ಸುರೇಂದ್ರನ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ನಿರ್ಮಿಸಲು ಭಾರತ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದೆ ಎಂದು ಕೇಂದ್ರ ಸಚಿವರು ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು. ಪ್ರವಾಸೋದ್ಯಮ ಕ್ಷೇತ್ರದ ಅಡಿಯಲ್ಲಿ ಪ್ರವಾಸೋದ್ಯಮ ಸಚಿವಾಲಯದಿಂದ ಅಗತ್ಯವಿರುವ ಎಲ್ಲ ಸಹಕಾರ ಮತ್ತು ಬೆಂಬಲವನ್ನು ರಾಜ್ಯ ಸರ್ಕಾರಕ್ಕೆ ನೀಡುವುದಾಗಿ ಭರವಸೆ ನೀಡಿದರು.
ಗುರುತಿಸಲ್ಪಟ್ಟ ತೀರ್ಥಯಾತ್ರೆ ಮತ್ತು ಪಾರಂಪರಿಕ ತಾಣಗಳ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಪ್ರವಾಸೋದ್ಯಮ ಸಚಿವಾಲಯವು 2014-15ನೇ ಸಾಲಿನಲ್ಲಿ ‘ತೀರ್ಥಯಾತ್ರೆ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪರಂಪರೆ ವರ್ಧನಾ ಕಾರ್ಯಕ್ರಮ’ (ಪ್ರಶಾದ್)ವನ್ನು ಆರಂಭಿಸಿತು. ಈ ಯೋಜನೆಯು ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿದೆ ಅಂದರೆ ಪ್ರವೇಶ ಸ್ಥಳ (ರಸ್ತೆ, ರೈಲು ಮತ್ತು ಜಲ ಸಾರಿಗೆ), ತಲುಪುವ ಮಾರ್ಗದ ಸಂಪರ್ಕ, ಮಾಹಿತಿ / ವ್ಯಾಖ್ಯಾನ ಕೇಂದ್ರಗಳಂತಹ ಮೂಲ ಪ್ರವಾಸೋದ್ಯಮ ಸೌಲಭ್ಯಗಳು, ಎಟಿಎಂ / ವಿದೇಶಿ ಹಣ ವಿನಿಮಯ, ಪರಿಸರ ಸ್ನೇಹಿ ಸಾರಿಗೆ ವಿಧಾನಗಳು, ನವೀಕರಿಸಬಹುದಾದ ಶಕ್ತಿಯ ಮೂಲಗಳಿಂದ ಸ್ಥಳದ ಬೆಳಕಿನ ವ್ಯವಸ್ಥೆ ಮತ್ತು, ವಾಹನಗಳ ನಿಲ್ದಾಣ, ಕುಡಿಯುವ ನೀರು, ಶೌಚಾಲಯಗಳು, ವಸ್ತುಗಳನ್ನಿಡುವ ಕೊಠಡಿ, ಕಾಯುವ ಕೊಠಡಿಗಳು, ಪ್ರಥಮ ಚಿಕಿತ್ಸಾ ಕೇಂದ್ರಗಳು, ಕರಕುಶಲಗಳ ಮಳಿಗೆಗಳು/ ಉಪಹಾರ ಕೇಂದ್ರ, ಟೆಲಿಕಾಂ / ಇಂಟರ್ನೆಟ್ ಸೌಲಭ್ಯ ಇತ್ಯಾದಿ.
“ಗುರುವಾಯೂರ್ ಅಭಿವೃದ್ಧಿ” ಈ ಯೋಜನೆಯನ್ನು ಪ್ರವಾಸೋದ್ಯಮ ಸಚಿವಾಲಯವು ಮಾರ್ಚ್ 2017 ರಲ್ಲಿ 45.36 ಕೋಟಿ ರೂಪಾಯಿ ವೆಚ್ಚದ ಜೊತೆಗೆ ಅನುಮೋದಿಸಿತು. ಯೋಜನೆಯ ಭಾಗವಾದ “ಪ್ರವಾಸಿ ಸೌಲಭ್ಯ ಕೇಂದ್ರ”ವನ್ನು 11.57 ಕೋಟಿ ರೂಪಾಯಿ ವೆಚ್ಚದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸಿಸಿಟಿವಿ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಇತರ ಸೌಕರ್ಯಗಳಿಂದ ಹೊಂದಿದೆ.
*****
(Release ID: 1670248)
Visitor Counter : 289
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Tamil
,
Telugu
,
Malayalam