ಸಂಪುಟ

ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಸಹಕಾರ ಕುರಿತ ಭಾರತ-ಇಸ್ರೇಲ್ ನಡುವಿನ ಒಡಂಬಡಿಕೆಗೆ ಸಂಪುಟದ ಅಂಗೀಕಾರ

Posted On: 04 NOV 2020 3:30PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಸಹಕಾರ ಕುರಿತ ಭಾರತ ಮತ್ತು ಇಸ್ರೇಲ್ ನಡುವೆ ತಿಳುವಳಿಕೆ ಒಂಡಂಬಡಿಕೆಗೆ ಅಂಗೀಕಾರ ನೀಡಿದೆ.

ತಿಳುವಳಿಕೆ ಒಪ್ಪಂದವು ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಕಾರವನ್ನು ಒಳಗೊಂಡಿದೆ:

i. ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ವಿನಿಮಯ ಮತ್ತು ತರಬೇತಿ

ii. ಮಾನವ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಆರೋಗ್ಯ ಸೌಲಭ್ಯಗಳ ಸ್ಥಾಪನೆಗೆ ನೆರವು

iii. ಔಷಧ, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ನಿಯಂತ್ರಣಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯ

iv. ಹವಾಮಾನ ಅಪಾಯದಿಂದಾಗುವ ನಾಗರಿಕರ ಆರೋಗ್ಯದ ದುರ್ಬಲತೆಗಳ ಮೌಲ್ಯಮಾಪನಕ್ಕಾಗಿ ಪರಿಣತಿಯನ್ನು ಹಂಚಿಕೊಳ್ಳುವುದು ಮತ್ತು ತಗ್ಗಿಸುವಿಕೆ ಹಾಗೂ ಅಳವಡಿಕೆಯ ಗುರಿಯನ್ನು ಸಾಧಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳು

v. ಎಲ್ಲ ಹವಾಮಾನಗಳನ್ನೂ ತಾಳಿಕೊಳ್ಳುವ  ಮೂಲಸೌಕರ್ಯಗಳಿಗೆ ಅನುಕೂಲವಾಗುವಂತೆ ಪರಿಣತಿಯನ್ನು ಹಂಚಿಕೊಳ್ಳುವುದು ಮತ್ತು 'ಗ್ರೀನ್ ಹೆಲ್ತ್‌ಕೇರ್' (ಹವಾಮಾನ ಸ್ಥಿತಿಸ್ಥಾಪಕ ಆಸ್ಪತ್ರೆಗಳು) ಅಭಿವೃದ್ಧಿಗೆ ಬೆಂಬಲವನ್ನು ಒದಗಿಸುವುದು

vi. ವಿವಿಧ ಸಂಬಂಧಿತ ಕ್ಷೇತ್ರಗಳಲ್ಲಿ ಪರಸ್ಪರ ಸಂಶೋಧನೆಯನ್ನು ಪ್ರೋತ್ಸಾಹಿಸುವುದು

vii. ಪರಸ್ಪರರು ನಿರ್ಧರಿಸುವ ಸಹಕಾರದ ಯಾವುದೇ ಕ್ಷೇತ್ರ

ಎರಡೂ ದೇಶಗಳ ಸಂಬಂಧಿತ ಸಂಸ್ಥೆಗಳು ಆಯೋಜಿಸುವ ದುಂಡು ಮೇಜಿನ ಸಭೆಗಳು, ಸೆಮಿನಾರ್ಗಳು, ವಿಚಾರ ಸಂಕಿರಣ, ಕಾರ್ಯಾಗಾರಗಳು ಮತ್ತು ಸಹಕಾರದ ವಿಷಯಗಳ ಕುರಿತಾದ ಸಮ್ಮೇಳನಗಳಲ್ಲಿ ತಮ್ಮ ದೇಶಗಳ ಪ್ರತಿನಿಧಿಗಳು ಭಾಗವಹಿಸುವುದನ್ನು ಎರಡೂ ಉಭಯ ದೇಶಗಳು ಪ್ರೋತ್ಸಾಹಿಸುತ್ತವೆ.

 


(Release ID: 1670142) Visitor Counter : 196