ಹಣಕಾಸು ಸಚಿವಾಲಯ

ಕೇಂದ್ರ ಸರ್ಕಾರ: ಒಂದು ತಿಂಗಳ ಅವಧಿಗೆ ತುರ್ತು ಸಾಲದ ಖಾತ್ರಿ ಯೋಜನೆ ವಿಸ್ತರಣೆ


ಇ.ಸಿ.ಎಲ್.ಜಿ.ಎಸ್. ಅಡಿಯಲ್ಲಿ 2 ಲಕ್ಷ ಕೋಟಿ ರೂ.ಗೂ ಅಧಿಕ ಸಾಲಗಳು ಮಂಜೂರು

Posted On: 02 NOV 2020 3:17PM by PIB Bengaluru

ಕೇಂದ್ರ ಸರ್ಕಾರ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಪುನಾರಂಭ ಮತ್ತು ಪ್ರಸಕ್ತ ಹಬ್ಬಗಳ ಋತುವಿನಲ್ಲಿ ಬೇಡಿಕೆಯ ಹೆಚ್ಚಳ ನಿರೀಕ್ಷೆಯ ದೃಷ್ಟಿಯಿಂದ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್.ಜಿ.ಎಸ್) 2020 ರ ನವೆಂಬರ್ 30 ರವರೆಗೆ ಒಂದು ತಿಂಗಳುಗಳ ಕಾಲ ಅಥವಾ 3 ಲಕ್ಷ ರೂ. ಗಳನ್ನು ಯೋಜನೆ ಅಡಿಯಲ್ಲಿ ಮಂಜೂರಾತಿ ಸಮಯದವರೆಗೆ ಯಾವುದು ಮೊದಲು ಅದಕ್ಕೆ ಅನ್ವಯವಾಗುವಂತೆ ವಿಸ್ತರಿಸಿದೆ. ಈ ವಿಸ್ತರಣೆಯು ಈವರೆಗೆ ಯೋಜನೆಯ ಲಾಭವನ್ನು ಪಡೆಯದ ಅಂತಹ ಸಾಲಗಾರರಿಗೆ ಯೋಜನೆಯಡಿ ಸಾಲ ಪಡೆಯಲು ಮತ್ತಷ್ಟು ಅವಕಾಶವನ್ನು ಒದಗಿಸುತ್ತದೆ.

ಎಂ.ಎಸ್.ಎಂ.ಇ.ಗಳು, ವಾಣಿಜ್ಯ ಸಂಸ್ಥೆಗಳು, ವಾಣಿಜ್ಯ ಉದ್ದೇಶದ ವೈಯಕ್ತಿಕ ಸಾಲ ಮತ್ತು ಮುದ್ರಾ ಯೋಜನೆಯಡಿ ಸಾಲ ಪಡೆದವರಿಗೆ ಅವರು 29.03.2020ರವರೆಗೆ ಉಳಿಸಿಕೊಂಡಿರುವ ಸಾಲದ ಬಾಕಿಯ ಮೇಲೆ ಶೇ.20ರಷ್ಟು ಸಂಪೂರ್ಣ ಖಾತ್ರಿಯ ಮತ್ತು ಮೇಲಾಧಾರ ರಹಿತವಾದ ಹೆಚ್ಚುವರಿ ಸಾಲ ಒದಗಿಸಲು ಇ.ಸಿ.ಎಲ್.ಜಿ.ಎಸ್. ಅನ್ನು ಆತ್ಮನಿರ್ಭರ ಪ್ಯಾಕೇಜ್ (ಎ.ಎನ್.ಬಿ.ಪಿ.) ಭಾಗವಾಗಿ ಪ್ರಕಟಿಸಲಾಗಿತ್ತು. 29.2.2020ರಲ್ಲಿದ್ದಂತೆ 50 ಕೋಟಿ ರೂ. ಸಾಲ ಬಾಕಿ ಇರುವ ಮತ್ತು ವಾರ್ಷಿಕ ವಹಿವಾಟು 250 ಕೋಟಿ ರೂ. ಹೊಂದಿರುವವರು ಯೋಜನೆಯಡಿ ಅರ್ಹರಾಗಿರುತ್ತಾರೆ. ಯೋಜನೆಯಡಿ ಬಡ್ಡಿದರವನ್ನು ಬ್ಯಾಂಕುಗಳು ಮತ್ತು ಎಫ್‌.ಐಗಳಿಗೆ ಶೇಕಡಾ 9.25 ಮತ್ತು ಎನ್‌.ಬಿಎಫ್‌.ಸಿಗಳಿಗೆ ಶೇ. 14 ಎಂದು ನಿಗದಿಪಡಿಸಲಾಗಿದೆ. ಯೋಜನೆಯಡಿಯಲ್ಲಿ ಒದಗಿಸಲಾದ ಸಾಲಗಳ ಅವಧಿ ನಾಲ್ಕು ವರ್ಷಗಳು, ಇದರಲ್ಲಿ ಅಸಲು ಮರುಪಾವತಿಯ ಮೇಲಿನ ಒಂದು ವರ್ಷದ ಕಂತು ಪಾವತಿ ಮುಂದೂಡಿಕೆಯೂ ಸೇರಿರುತ್ತದೆ.

ಸಾಲ ನೀಡುವ ಸಂಸ್ಥೆಗಳು ಇಸಿಎಲ್‌.ಜಿಎಸ್ ಪೋರ್ಟಲ್‌ ನಲ್ಲಿ ಅಪ್‌ ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಈ ಯೋಜನೆಯಡಿ ಈವರೆಗೆ 60.67 ಲಕ್ಷ ಸಾಲಗಾರರಿಗೆ 2.03 ಲಕ್ಷ ಕೋಟಿ ರೂ.ಮಂಜೂರು ಮಾಡಲಾಗಿದ್ದು, 1.48 ಲಕ್ಷ ಕೋಟಿ ರೂ. ವಿತರಿಸಲಾಗಿದೆ.

****



(Release ID: 1669485) Visitor Counter : 302