ರೈಲ್ವೇ ಸಚಿವಾಲಯ

2020 ರ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ರೈಲ್ವೆಯ ಸರಕು ಸಾಗಣೆ ಲೋಡಿಂಗ್ ಮತ್ತು ಗಳಿಕೆಯ ಅಂಕಿಅಂಶಗಳಲ್ಲಿ ಹೆಚ್ಚಳ


ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆಯ ಲೋಡಿಂಗ್ ಶೇ. 15 ಮತ್ತು ಗಳಿಕೆ ಶೇ. 9 ರಷ್ಟು ಏರಿಕೆ

ಅಕ್ಟೋಬರ್ 2020 ರಲ್ಲಿ ರೈಲ್ವೆಯ ಲೋಡಿಂಗ್ 108.16 ಮಿಲಿಯನ್ ಟನ್ ಆಗಿದ್ದು, ಇದು ಕಳೆದ ವರ್ಷದ ಲೋಡಿಂಗ್ (93.75 ಮಿಲಿಯನ್ ಟನ್) ಗೆ ಹೋಲಿಸಿದರೆ ಶೇ.15 ರಷ್ಟು ಹೆಚ್ಚಾಗಿದೆ

ರೈಲ್ವೆ ಸಚಿವಾಲಯವು ಸರಕು ಸಾಗಣೆ ವಹಿವಾಟನ್ನು ಬಲಪಡಿಸಲು ಮತ್ತು ಮತ್ತಷ್ಟು ಉತ್ತೇಜಿಸಲು ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ವಿದ್ಯುತ್, ಕಲ್ಲಿದ್ದಲು, ವಾಹನ ಮತ್ತು ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರ ಉನ್ನತ ನಾಯಕರೊಂದಿಗೆ ಸಭೆಗಳನ್ನು ನಡೆಸಿದೆ

Posted On: 01 NOV 2020 1:36PM by PIB Bengaluru

ಭಾರತೀಯ ರೈಲ್ವೆಯ 2020 ರ ಅಕ್ಟೋಬರ್ ತಿಂಗಳ ಸರಕು ಸಾಗಣೆ ಅಂಕಿಅಂಶಗಳು ಗಳಿಕೆ ಮತ್ತು ಲೋಡಿಂಗ್ ವಿಷಯದಲ್ಲಿ ಹೆಚ್ಚಿನ ಏರಿಕೆಯನ್ನು ಕಾಯ್ದುಕೊಂಡಿವೆ.

2020 ರ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ರೈಲ್ವೆಯ ಸರಕುಗಳ ಲೋಡಿಂಗ್ ಮತ್ತು ಗಳಿಕೆಯು ಕಳೆದ ವರ್ಷದ ಇದೇ ಅವಧಿಗಿಂತ ಹೆಚ್ಚಾಗಿವೆ.

ಅಕ್ಟೋಬರ್ 2020 ರಲ್ಲಿ, ಭಾರತೀಯ ರೈಲ್ವೆಯ ಲೋಡಿಂಗ್ 108.16 ಮಿಲಿಯನ್ ಟನ್ ಆಗಿದ್ದು, ಇದು ಕಳೆದ ವರ್ಷದ ಅದೇ ಅವಧಿಗೆ (93.75 ಮಿಲಿಯನ್ ಟನ್) ಹೋಲಿಸಿದರೆ ಶೇ.15 ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಭಾರತೀಯ ರೈಲ್ವೆಯು ಸರಕು ಸಾಗಣೆಯಿಂದ 10405.12 ಕೋಟಿ ರೂ. ಗಳಿಸಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ (9536.22 ಕೋಟಿ ರೂ.) ಹೋಲಿಸಿದರೆ 868.90 ಕೋಟಿ ರೂ.(ಶೇ.9) ಹೆಚ್ಚಾಗಿದೆ.

ಅಕ್ಟೋಬರ್ 2020 ರಲ್ಲಿ ರೈಲ್ವೆಯ ಲೋಡಿಂಗ್ 108.16 ಮಿಲಿಯನ್ ಟನ್ ಆಗಿದ್ದು, ಇದರಲ್ಲಿ 46.97 ಮಿಲಿಯನ್ ಟನ್ ಕಲ್ಲಿದ್ದಲು, 14.68 ಮಿಲಿಯನ್ ಟನ್ ಕಬ್ಬಿಣದ ಅದಿರು, 5.03 ಮಿಲಿಯನ್ ಟನ್ ಆಹಾರ ಧಾನ್ಯಗಳು, 5.93 ಮಿಲಿಯನ್ ಟನ್ ರಸಗೊಬ್ಬರ ಮತ್ತು 6.62 ಮಿಲಿಯನ್ ಟನ್ ಸಿಮೆಂಟ್ (ಕ್ಲಿಂಕರ್ ಹೊರತುಪಡಿಸಿ) ಸೇರಿದೆ.

ರೈಲು ಸರಕು ಸಾಗಣೆಯನ್ನು ಅತ್ಯಂತ ಆಕರ್ಷಕವಾಗಿಸಲು ಭಾರತೀಯ ರೈಲ್ವೆಯು ಹಲವಾರು ರಿಯಾಯಿತಿಗಳು / ವಿನಾಯ್ತಿಗಳನ್ನು ಸಹ ನೀಡುತ್ತಿದೆ.

ಸರಕು ಸಾಗಣೆಗಳ ಸುಧಾರಣೆಗಳನ್ನು ಸಾಂಸ್ಥಿಕಗೊಳಿಸಲಾಗುವುದು ಮತ್ತು ಮುಂಬರುವ ಶೂನ್ಯ ಆಧಾರಿತ ವೇಳಾಪಟ್ಟಿಯಲ್ಲಿ ಸೇರಿಸಲಾಗುವುದು ಎಂಬುದನ್ನೂ ಸಹ ಇಲ್ಲಿ ಗಮನಿಸಬಹುದು.

ಅಲ್ಲದೆ, ಹೊಸ ವಹಿವಾಟನ್ನು ಆಕರ್ಷಿಸಲು ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉತ್ತೇಜಿಸಲು, ರೈಲ್ವೆ ಸಚಿವಾಲಯವು ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ವಿದ್ಯುತ್, ಕಲ್ಲಿದ್ದಲು, ವಾಹನ ಮತ್ತು ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರ ಉನ್ನತ ನಾಯಕತ್ವದೊಂದಿಗೆ ಸಭೆಗಳನ್ನು ನಡೆಸಿದೆ.

ಅಲ್ಲದೆ, ವಲಯ ಮತ್ತು ವಿಭಾಗೀಯ ಮಟ್ಟಗಳಲ್ಲಿ ವ್ಯಾಪಾರ ಅಭಿವೃದ್ಧಿ ಘಟಕಗಳು ಮತ್ತು ಸರಕುಸಾಗಣೆಯ ವೇಗವನ್ನು ದ್ವಿಗುಣಗೊಳಿಸುವಿಕೆಯು ಪಂಜಾಬ್‌ನಲ್ಲಿ ನಿರ್ಬಂಧಿತ ಸರಕು ಸೇವೆಗಳ ಹೊರತಾಗಿಯೂ ಸುಸ್ಥಿರ ಬೆಳವಣಿಗೆಗೆ ಕಾರಣವಾಗಿವೆ.

ಭಾರತೀಯ ರೈಲ್ವೆಯು ಕೋವಿಡ್-19 ಸಾಂಕ್ರಾಮಿಕವನ್ನು ತನ್ನ ದಕ್ಷತೆ ಮತ್ತು ಸಾಮರ್ಥ್ಯಗಳನ್ನು ಸುಧಾರಿಸಲು ಅವಕಾಶವನ್ನಾಗಿ ಬಳಸಿಕೊಂಡಿದೆ.



(Release ID: 1669376) Visitor Counter : 172