ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವೈದ್ಯಕೀಯ ಶಿಕ್ಷಣದಲ್ಲಿ ಮಹತ್ವದ ಸುಧಾರಣೆಗಳು
ಎಂಬಿಬಿಎಸ್ ಪ್ರವೇಶಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಕನಿಷ್ಠ ಅಗತ್ಯತೆಗಳ ನಿಯಮಗಳು(2020) ಪ್ರಕಟ
Posted On:
31 OCT 2020 4:48PM by PIB Bengaluru
ವೈದ್ಯಕೀಯ ಶಿಕ್ಷಣದದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಂಸಿ) ಮಹತ್ವದ ಸುಧಾರಣೆ ಕ್ರಮಗಳನ್ನು ಕೈಗೊಂಡಿದೆ. ಆಯೋಗ ತನ್ನ ಮೊದಲ ನಿಯಮಾವಳಿಗಳನ್ನು ಪ್ರಕಟಿಸಿದೆ. “ವಾರ್ಷಿಕ ಎಂಬಿಬಿಎಸ್ ಪ್ರವೇಶಕ್ಕೆ ಕನಿಷ್ಠ ಅಗತ್ಯತೆಗಳ ನಿಯಮಗಳು 2020” ಹೆಸರಿನಲ್ಲಿ ಇಂದು ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹಿಂದಿನ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಹೊರಡಿಸಿದ್ದ ವೈದ್ಯಕೀಯ ಕಾಲೇಜುಗಳ ಕನಿಷ್ಠ ಮಾನದಂಡ ನಿಯಮಾವಳಿ 1999(50/100/150/200/250 ವಾರ್ಷಿಕ ಪ್ರವೇಶಕ್ಕೆ) ನಿಯಮಕ್ಕೆ ಬದಲಾಗಿ ಹೊಸ ನಿಯಮ ಜಾರಿಗೆ ಬರಲಿದೆ.
ಹೊಸ ನಿಯಮಾವಳಿ ಮುಂದೆ ಸ್ಥಾಪನೆಯಾಗಲಿರುವ ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಅನ್ವಯವಾಗಲಿವೆ ಮತ್ತು ಈಗಾಗಲೇ ಸ್ಥಾಪನೆಗೊಂಡಿರುವ ವೈದ್ಯಕೀಯ ಕಾಲೇಜುಗಳಿಗೂ ಸಹ 2021-22ನೇ ಶೈಕ್ಷಣಿಕ ವರ್ಷಕ್ಕೆ ತಮ್ಮ ವಾರ್ಷಿಕ ಎಂಬಿಬಿಎಸ್ ಸೀಟುಗಳ ಸಂಖ್ಯೆ ಹೆಚ್ಚಳಕ್ಕೂ ಅನ್ವಯವಾಗಲಿದೆ. ಈ ವರ್ಗಾವಣೆಗೊಳ್ಳುವ ಅವಧಿಯಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಕಾಲೇಜುಗಳು ಸದ್ಯದ ಅಧಿಸೂಚನೆಗಿಂತ ಮುಂಚಿನ ನಿಯಮಗಳಿಗೆ ಒಳಪಟ್ಟಿರುವ ಕಾಲೇಜುಗಳಿಗೂ ಹೊಸ ನಿಯಮ ಅನ್ವಯವಾಗಲಿದೆ.
ಹೊಸ ನಿಯಮಾವಳಿಗಳನ್ನು ಸಂಸ್ಥೆಗಳ ಕಾರ್ಯ ನಿರ್ವಹಣಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಅದರಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಮತ್ತು ಸರಳವಾಗಿ ಬಳಸಿಕೊಳ್ಳುವುದು ಹಾಗೂ ಆಧುನಿಕ ಶೈಕ್ಷಣಿಕ ಸಂಪನ್ಮೂಲ ಸಾಮಗ್ರಿಗಳನ್ನು ಬಳಸಿಕೊಂಡು, ಒಂದು ವೇಳೆ ಸಂಪನ್ಮೂಲ ಕೊರತೆಯಿರುವಂತಹ ಸಂದರ್ಭಗಳಲ್ಲೂ ಸಹ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮುನ್ನಡೆಯುವುದಕ್ಕೆ ಲಭ್ಯವಿರುವ ಸಂಪನ್ಮೂಲದಲ್ಲೇ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಮುಖ ಬದಲಾವಣೆಗಳು:
ಹೊಸ ನಿಯಮಾವಳಿಯಲ್ಲಿ ವೈದ್ಯಕೀಯ ಕಾಲೇಜುಗಳು ಅದರ ಮಾನ್ಯತೆ ಪಡೆದಿರುವ ತರಬೇತಿ ಆಸ್ಪತ್ರೆಗಳ ಸ್ಥಾಪನೆಗೆ ನಿಗದಿಪಡಿಸಲಾಗಿದ್ದ ಭೂಮಿಯ ಅಗತ್ಯ ಪ್ರಮಾಣವನ್ನು ತೆಗೆದು ಹಾಕಲಾಗಿದೆ (ಎಲ್ಲಾ ಕಟ್ಟಡಗಳು ಹಾಲಿ ಇರುವ ಕಟ್ಟಡ ಉಪನಿಯಮಗಳಿಗೆ ಅನುಗುಣವಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ). ಅಧಿಸೂಚನೆ ಪ್ರಕಾರ ಸಂಸ್ಥೆಗೆ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸ್ಥಳಾವಕಾಶಗಳ ಅವಶ್ಯಕತೆಯನ್ನು ಕನಿಷ್ಠಗೊಳಿಸಲಾಗಿದೆ ಮತ್ತು ಕಾರ್ಯನಿರ್ವಹಣಾ ಪ್ರದೇಶದ ಅಗತ್ಯತೆ ಗುರುತಿಸಲಾಗಿದೆ. ನಿರ್ದಿಷ್ಟ ಮಾನದಂಡದಂತೆ ಲಭ್ಯವಿರುವ ಎಲ್ಲಾ ಬೋಧನಾ ಸ್ಥಳಾವಕಾಶವನ್ನು ಎಲ್ಲ ವಿಭಾಗಗಳು(ಈವರೆಗಿನ ಸರಳೀಕರಣವಲ್ಲದ ನಿಯಮದಂತೆ) ಆ ಮೂಲಕ ಎಲ್ಲಾ ಬೋಧನಾ ಸ್ಥಳವನ್ನು ಇ-ಕಲಿಕೆ ಮತ್ತು ಡಿಜಿಟಲ್ ಗೆ ಸಂಯೋಜನೆಗೊಂಡಿರಬೇಕು, ಪ್ರತಿಯೊಂದು ಒಂದಕ್ಕೊಂದು ಹೊಂದಿಕೊಂಡಿರಬೇಕು.(ಮೊದಲು ಇದು ಅಪೇಕ್ಷೆ ಆಗಿತ್ತು)
ಹೊಸ ನಿಯಮಾವಳಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸುಸಜ್ಜಿತ ರೀತಿಯ ‘ಕೌಶಲ್ಯ ಪ್ರಯೋಗಾಲಯ’ ಅಗತ್ಯಗತ್ಯವಾಗಿದೆ. ಅಲ್ಲದೆ ಶೈಕ್ಷಣಿಕ ಪದ್ದತಿಯ ಪ್ರಕಾರ ವೈದ್ಯಕೀಯ ಬೋಧಕರಿಗೆ ತರಬೇತಿ ನೀಡಲು ವೈದ್ಯಕೀಯ ಶಿಕ್ಷಣ ಘಟಕ ಸ್ಥಾಪನೆ ಪ್ರಸ್ತಾಪಿಸಲಾಗಿದೆ. ಗ್ರಂಥಾಲಯಕ್ಕೆ ಬೇಕಾದ ಸ್ಥಳಾವಕಾಶ ಮತ್ತು ಪುಸ್ತಕಗಳು ಹಾಗೂ ಜರ್ನಲ್ ಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ಥಾನಿಕರ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಆಪ್ತ ಸಮಾಲೋಚನಾ ಸೇವೆಗಳನ್ನು ಕಡ್ಡಾಯಗೊಳಿಸಲಾಗಿದೆ.
ವೈದ್ಯಕೀಯ ತರಬೇತಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ಆಸ್ಪತ್ರೆ ಅತ್ಯಗತ್ಯವಾಗಿರುವುದನ್ನು ಮನಗಂಡು ಹೊಸ ನಿಯಮಾವಳಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅರ್ಜಿ ಸಲ್ಲಿಸಲು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎರಡು ವರ್ಷಗಳ ಅವಧಿಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು.(ಈ ಮೊದಲಿನ ನಿಯಮಾವಳಿಯಲ್ಲಿ ಆಸ್ಪತ್ರೆ ಕಾರ್ಯನಿರ್ವಹಣೆ ಅವಧಿಯನ್ನು ನಿಗದಿಪಡಿಸಿರಲಿಲ್ಲ) ಆಸ್ಪತ್ರೆಯ ನಾನಾ ವಿಭಾಗಗಳ ಬೋಧನೆಗೆ ಅನುಗುಣವಾಗಿ ಹಾಸಿಗೆಗಳ ಅಗತ್ಯತೆಯನ್ನು ಸರಳೀಕರಣಗೊಳಿಸಲಾಗಿದ್ದು, ಅದನ್ನು ವಾರ್ಷಿಕ ವಿದ್ಯಾರ್ಥಿಗಳ ಪ್ರವೇಶ, ಚಿಕಿತ್ಸಾ ವಿಧಾನಗಳ ಕುರಿತು ಬೋಧನೆ ಮಾಡುವ ಅವಧಿ ಮತ್ತು ಪದವೀಧರ ವೈದ್ಯಕೀಯ ತರಬೇತಿಗೆ ಕನಿಷ್ಠ ಕ್ಲಿನಿಕಲ್ ಅಗತ್ಯತೆಗಳನ್ನು ಪೂರೈಸುವುದಕ್ಕೆ ಸಂಯೋಜನೆಗೊಳಿಸಲಾಗಿದ್ದು, ಈ ಹಿಂದಿನ ನಿಯಮಗಳಿಗೆ ಹೋಲಿಸಿದರೆ ಬೋಧನಾ ಹಾಸಿಗೆ ಅಗತ್ಯತೆಗಳನ್ನು ಶೇ.10ರಷ್ಟು ಇಳಿಕೆ ಮಾಡಲಾಗಿದೆ.
ಹೊಸ ನಿಯಮಾವಳಿಯಂತೆ ಬೋಧನಾ ಸೌಕರ್ಯಕ್ಕೆ ಮಾನವ ಸಂಪನ್ಮೂಲ ಲಭ್ಯತೆಯನ್ನು ಸರಳೀಕರಣಗೊಳಿಸಲಾಗಿದೆ. ಕನಿಷ್ಠ ನಿಗದಿಪಡಿಸಿದ ಬೋಧನಾ ಸಂಪನ್ಮೂಲದ ಜೊತೆಗೆ ಗುಣಮಟ್ಟದ ತರಬೇತಿಯನ್ನು ವೃದ್ಧಿಸಲು ‘ವಿಸಿಟಿಂಗ್ ಫೆಸಿಲಿಟಿ’ಗೆ (ಅತಿಥಿ ಬೋಧಕರಿಗೆ) ಅವಕಾಶ ಕಲ್ಪಿಸಲಾಗಿದೆ.
ಪದವಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಹೊಸ ಬೋಧನಾ ವಿಭಾಗಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ತುರ್ತು ವೈದ್ಯಕೀಯ ವಿಭಾಗ(ಈ ಮೊದಲು ಸಾಮಾನ್ಯ ತುರ್ತು ಘಟಕಕ್ಕೆ ಬದಲಾಗಿ) ಅಗತ್ಯವಾಗಿದೆ ಮತ್ತು ಅಲ್ಲಿ ನಿರ್ದಿಷ್ಟ ಸೂಕ್ತ ರೀತಿಯಲ್ಲಿ ತುರ್ತುಗಳಿಗೆ ವಿಶೇಷವಾಗಿ ಗಾಯಾಳುಗಳಿಗೆ ಸ್ಪಂದಿಸುವ ಅಗತ್ಯವಿದೆ ಹಾಗೂ ದೈಹಿಕ ವೈದ್ಯಕೀಯ ಮತ್ತು ಪುನರ್ ವಸತಿ ವಿಭಾಗ ತೆರೆಯಬೇಕಾಗಿದ್ದು, ಅದರಲ್ಲಿ ಸಮಗ್ರ ಪುನರ್ ವಸತಿ ಆರೈಕೆ ಅಗತ್ಯತೆಗಳ ಭಾರೀ ಅಂತರವನ್ನು ನೀಗಿಸಬೇಕು.
ಹೊಸ ನಿಯಮದಡಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ‘ಅಪೇಕ್ಷಣೀಯ’ ಮತ್ತು ‘ಆಶೋತ್ತರ’ ಗುರಿಗಳನ್ನು ನೀಡಲಾಗಿದ್ದು, ಕನಿಷ್ಠ ಅಗತ್ಯ ಮಾನದಂಡಗಳ ಅಗತ್ಯತೆ ನೀಡಲಾಗಿದ್ದು, ಆ ಮೂಲಕ ವೈದ್ಯಕೀಯ ಸಂಸ್ಥೆಗಳು ಶ್ರೇಷ್ಠತೆಯನ್ನು ಸಾಧಿಸಲು ಪ್ರಯತ್ನಿಸಬಹುದಾಗಿದೆ. ದೇಶದ ವೈದ್ಯಕೀಯ ಸಂಸ್ಥೆಗಳಿಗೆ ಶ್ರೇಯಾಂಕವನ್ನು ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಬಳಕೆ ಈ ಎಲ್ಲಾ ಅಂಶಗಳನ್ನು ಪರಿಗಣಸಲಿದೆ.
****
(Release ID: 1669167)
Visitor Counter : 216
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Odia
,
Tamil
,
Telugu
,
Malayalam