ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರಗಳಿಗೆ ಶೇ.96ರಷ್ಟು ಅಥ್ಲೀಟ್ ಗಳ ಆಗಮನ: 2024ರ ಒಲಿಂಪಿಕ್ ಗೆ ತರಬೇತಿ ಪುನಾರಂಭ
Posted On:
29 OCT 2020 5:41PM by PIB Bengaluru
ದೇಶಾದ್ಯಂತ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ತರಬೇತಿ ಕೇಂದ್ರಗಳಲ್ಲಿ ಕ್ರೀಡಾ ಚಟುವಟಿಕೆಗಳು ಪುನಾರಂಭವಾಗಿದ್ದು, 2024ರ ಒಲಿಂಪಿಕ್ ಗೆ ಅಥ್ಲೀಟ್ ಗಳಿಗೆ ತರಬೇತಿ ಪುನಾರಂಭಗೊಂಡಿದೆ. ಸಾಯ್ ನ ಶ್ರೇಷ್ಠತಾ ತರಬೇತಿ ಕೇಂದ್ರಗಳು ಹಾಗೂ ಔರಂಗಾಬಾದ್, ಭೂಪಾಲ್, ಬೆಂಗಳೂರು, ದೆಹಲಿ ಲಕ್ನೋ, ರೋಹ್ಟಕ್ ಮತ್ತು ಸೋನಿಪತ್ ಸೇರಿದಂತೆ ಎಲ್ಲ ತರಬೇತಿ ಕೇಂದ್ರಗಳಿಗೆ ಶೇ.96ರಷ್ಟು ಅಥ್ಲೀಟ್ ಗಳು ಆಗಮಿಸಿ ತರಬೇತಿಗೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ತರಬೇತಿ ಕೇಂದ್ರಗಳು ಪುನಾರಂಭವಾಗುತ್ತಿದ್ದಂತೆಯೇ, ಟೊಕಿಯೋ ಒಲಂಪಿಕ್ಸ್ ಗೆ ಈಗಾಗಲೇ ಅರ್ಹತೆ ಪಡೆದಿರುವ ಅಥ್ಲೀಟ್ ಗಳು ತಮ್ಮ ತಮ್ಮ ಎನ್ ಸಿಒಇಎಸ್ ಮತ್ತು ಎಸ್ ಟಿಸಿಗಳಿಗೆ ತರಬೇತಿಗಾಗಿ ಮರು ಸೇರ್ಪಡೆಗೊಂಡಿದ್ದಾರೆ. ತರಬೇತಿ ಶಿಬಿರಗಳನ್ನು ಸೇರುವ ಅಥ್ಲೀಟ್ ಗಳು ಕಡ್ಡಾಯವಾಗಿ ಕ್ವಾರಂಟೈನ್ ನಿಯಮ ಮತ್ತು ಆರ್ ಟಿ-ಪಿಸಿಆರ್ ಪರೀಕ್ಷೆಯನ್ನು ಪಾಲಿಸಬೇಕು. ಕೆಲವು ಅಥ್ಲೀಟ್ ಗಳು ಈಗ ತರಬೇತಿಗೆ ಸೇರ್ಪಡೆಯಾಗಿಲ್ಲ, ಅವರು ದೀಪಾವಳಿ ಹಬ್ಬದ ನಂತರ ಸೇರ್ಪಡೆಯಾಗಲಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ತರಬೇತಿ ಪಡೆಯುವವರು ಒಮ್ಮೆ ಶಿಬಿರ ಸೇರಿದಂತೆ ಮತ್ತೆ ಹೊರಗೆ ಹೋಗಲು ಅವಕಾಶವಿರುವುದಿಲ್ಲ. ಆದ್ದರಿಂದ ಅಥ್ಲೀಟ್ ಗಳಿಗೆ ನವೆಂಬರ್ 1ರಿಂದ ಅಥವಾ ದೀಪಾವಳಿ ನಂತರ ಸೇರ್ಪಡೆಯಾಗಲು ಆಯ್ಕೆಯ ಅವಕಾಶ ನೀಡಲಾಗಿತ್ತು.
ಈ ಹಂತದ ಕ್ರೀಡಾ ಚಟುವಟಿಕೆಗಳು ಪುನಾರಂಭವಾದ ನಂತರ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು ಅವರು “ಟೋಕಿಯೋ ಕ್ಕೆ ತೆರಳಲಿರುವ ನಮ್ಮ ಅಥ್ಲೀಟ್ ಗಳು ಈಗಾಗಲೇ ತರಬೇತಿಯಲ್ಲಿ ತೊಡಗಿದ್ದಾರೆ ಮತ್ತು ಈ ಹಂತದಲ್ಲೂ ಸಹ ಸಾಕಷ್ಟು ಅಥ್ಲೀಟ್ ಗಳು ತರಬೇತಿ ಶಿಬಿರಗಳನ್ನು ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಇದು ಕ್ರೀಡಾ ಚಟುವಟಿಕೆಗಳನ್ನು ಪುನಾರಂಭಿಸಲು ಎಸ್ ಎ ಐ ಸಿದ್ಧಪಡಿಸಿರುವ ಮಾರ್ಗಸೂಚಿಯಲ್ಲಿ ಅಥ್ಲೀಟ್ ಗಳಿಗೆ ಸಂಪೂರ್ಣ ವಿಶ್ವಾಸವಿರುವುದನ್ನು ತೋರಿಸುತ್ತದೆ. ಹಾಗಾಗಿ ಅವರು ಅತ್ಯುತ್ಸಾಹದಿಂದ ತರಬೇತಿ ಶಿಬಿರಗಳಿಗೆ ಹಾಜರಾಗಿದ್ದಾರೆ. ನಮ್ಮ ಅಥ್ಲೀಟ್ ಗಳ ಸುರಕ್ಷತೆ ಮೊದಲ ಅದ್ಯತೆಯಾಗಿದೆ ಮತ್ತು ಸುರಕ್ಷಿತ ವಾತಾವರಣದಲ್ಲಿ ಅವರಿಗೆ ತರಬೇತಿ ಸಿಗಲಿದೆ ಎಂಬುದನ್ನು ಖಾತ್ರಿಪಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’’ ಎಂದರು.
ಬಣ್ಣಗಳ ಸಂಕೇತ ನೀಡಿರುವುದು ಮತ್ತು ಕೇಂದ್ರಗಳನ್ನು ವಲಯಗಳನ್ನಾಗಿ ವಿಭಜಿಸಿರುವುದು ಸೇರಿದಂತೆ ವ್ಯಾಪಕ ಸುಕ್ಷರತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಥ್ಲೀಟ್ ಗಳು ಹೊರಗಿನವರ ಸಂಪರ್ಕಕ್ಕೆ ಬರುವುದನ್ನು ತಡೆಯಲಾಗುವುದು, ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಂತೆ ಹಾಗೂ ಅಯಾ ರಾಜ್ಯಗಳ ಶಿಷ್ಟಾಚಾರಗಳಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಅಥ್ಲೀಟ್ ಗಳ ವಾಸ್ತವ್ಯ ಮತ್ತು ತರಬೇತಿ ಸುರಕ್ಷಿತ ವಾತಾವರಣದಲ್ಲಿ ನಡೆಯುವುದನ್ನು ಖಾತ್ರಿಪಡಿಸಲಾಗಿದೆ.
ಅಲ್ಲದೆ, ಹೆಚ್ಚುವರಿಯಾಗಿ ಎಸ್ ಎ ಐ ಅಧಿಕಾರಿಗಳು, ಅಥ್ಲೀಟ್ ಗಳನ್ನು ಹಾಗೂ ಅವರ ಪೋಷಕರನ್ನು ಸಂಪರ್ಕಿಸಿ ಅವರಿಗೆ ಪಾಲನೆ ಮಾಡುತ್ತಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಎಸ್ ಐಎ ಕೇಂದ್ರಗಳನ್ನು ಸೇರ್ಪಡೆಯಾದ ನಂತರ ಮತ್ತು ಆ ಮೊದಲು ಕೈಗೊಳ್ಳುತ್ತಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಪ್ರಾಧಿಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಅಥ್ಲೀಟ್ ಗಳು ಹಾಗೂ ಅವರ ಪೋಷಕರನ್ನು ಸಂಪರ್ಕಿಸಿದಾಗ ಅವರು ಸಕಾರಾತ್ಮಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರ ಎನ್ ಸಿಒಇಎಸ್/ಎಸ್ ಎಐ ತರಬೇತಿ ಕೇಂದ್ರಗಳಿಗೆ ಆಗಮಿಸಲು ಅಥ್ಲೀಟ್ ಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. 500 ಕಿಲೋಮೀಟರ್ ಗಿಂತ ಹೆಚ್ಚಿನ ದೂರ ಕ್ರಮಿಸಬೇಕಾದ ಅಥ್ಲೀಟ್ ಗಳಿಗೆ ವಿಮಾನ ಟಿಕೆಟ್ ಮತ್ತು 500 ಕಿಲೋಮೀಟರ್ ಕಿಂತ ಕಡಿಮೆ ದೂರವಿದ್ದರೆ 3ನೇ ಎ.ಸಿ. ರೈಲಿನ ಟಿಕೆಟ್ ಒದಗಿಸಲಾಗುವುದು.
***
(Release ID: 1668850)