ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಭಾರತದ ಬಹು ಪಥದ ಇಂಧನ ಪರಿವರ್ತನೆಯ ಪಾಲುದಾರಿಕೆಗೆ ಜಾಗತಿಕ ತೈಲ, ಅನಿಲ ಹಾಗೂ ಇಂಧನ ವಲಯದ ಪ್ರಮುಖ ಕಂಪನಿಗಳಿಗೆ ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಆಹ್ವಾನ
Posted On:
29 OCT 2020 10:37AM by PIB Bengaluru
ಭಾರತದಲ್ಲಿ ಬಹುವಿಧದ ಇಂಧನ ಉತ್ಪಾದನೆ ಹೆಚ್ಚಳದ ಮೂಲಕ ಭಾರತದ ಹಂಚಿಕೆಯ ಸಮೃದ್ಧಿಯಲ್ಲಿ ಪಾಲುದಾರರಾಗುವಂತೆ ಜಾಗತಿಕ ಉದ್ಯಮದ ಪ್ರಮುಖರಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಆಹ್ವಾನ ನೀಡಿದರು.
ಗೌರವಾನ್ವಿತ ಪ್ರಧಾನಮಂತ್ರಿ ಅವರು ಭಾರತೀಯ ಇಂದನ ವೇದಿಕೆಯನ್ನು ಉದ್ಘಾಟಿಸಿ, ಕೋವಿಡ್-19 ಸಾಂಕ್ರಾಮಿಕ ಜಾಗತಿಕ ಇಂಧನ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಈ ಸಂಕಷ್ಟದ ಸಮಯದಲ್ಲಿ, ಭಾರತ ಸರ್ಕಾರ ಇಂಧನ ಭದ್ರತೆಯ ಸುಧಾರಣೆ, ವಿನ್ಯಾಸ ಮತ್ತು ನಮ್ಮ ಇಂಧನದ ಚಿತ್ರಣವನ್ನು ಪರಿವರ್ತಿಸಲು ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಉಲ್ಲೇಖಿಸಿದ್ದರು ಎಂದು ಸೆರಾ ವೀಕ್ನ ಭಾರತೀಯ ಇಂಧನ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು,
ಇಂಧನ ಕುರಿತಂತೆ ಪ್ರಧಾನಿಯವರು ತಮ್ಮ ದೂರದೃಷ್ಟಿ ಚಿಂತನೆ, ಭಾರತದ ಹೊಸ ಇಂಧನ ನಕ್ಷೆಯನ್ನು ಹಾಗೂ ಏಳು ಪ್ರಮುಖ ಚಾಲನಾ ಶಕ್ತಿಗಳ ಕುರಿತು ವಿಸ್ತೃತವಾಗಿ ವಿವರಿಸಿದ್ದಾರೆ, ಅದನ್ನು ಗೌರವಿಸುವುದಾಗಿ ಸಚಿವ ಪ್ರಧಾನ್ ಹೇಳಿದರು. ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಗ್ರಾಮ ಮಟ್ಟದಲ್ಲಿ ಸಾರ್ವತ್ರಿಕ ವಿದ್ಯುದೀಕರಣ, ಶುದ್ಧ ಅಡುಗೆ ಇಂಧನವನ್ನು ದೇಶಾದ್ಯಂತ ಪ್ರತಿಯೊಂದು ಮನೆಗೂ ತಲುಪಿಸುವುದು ಮತ್ತು ರಾಷ್ಟ್ರವ್ಯಾಪಿ ಎಲ್ಇಡಿ ಬಲ್ಬ್ ಗಳನ್ನು ಪೂರೈಸುವುದು, ಆ ಮೂಲಕ ಪರಿಣಾಮಕಾರಿ ಇಂಧನಗಳನ್ನು ಬಳಸಲು ಒತ್ತು ನೀಡಲಾಗುತ್ತಿದೆ. ಹಾಗೂ ದೇಶದಲ್ಲಿ ಇಂಧನ ಬಡತನವನ್ನು ಗಮನಾರ್ಹವಾಗಿ ತಗ್ಗಿಸುವ ಭರವಸೆಯನ್ನು ಈಡೇರಿಸಿದ್ದಾರೆ ಎಂದರು.
ಪ್ರಧಾನಮಂತ್ರಿ ಅವರು ಕಾರ್ಯಕ್ರಮದ ಮೊದಲೇ ದಿನ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ತೈಲ ಮತ್ತು ಅನಿಲ ಕಂಪನಿಗಳ ಸಿಇಒಗಳು/ ತಜ್ಞರು ಮತ್ತು ನಾಯಕರೊಂದಿಗೆ ಸಂವಾದ ನಡೆಸಿದರು ಮತ್ತು ಭಾರತದ ಇಂಧನ ವಲಯದ ಕುರಿತು ತಮ್ಮ ಚಿಂತನೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ಪ್ರಧಾನಮಂತ್ರಿಗಳು ಸರ್ಕಾರದ ಪ್ರಮುಖ ನೀತಿ ಎಂದರೆ ಶುದ್ಧ, ಕೈಗೆಟಕುವ ಮತ್ತು ಸುಸ್ಥಿರ ರೀತಿಯಲ್ಲಿ ಎಲ್ಲ ಭಾರತೀಯರಿಗೂ ಇಂಧನ ಲಭ್ಯವಾಗುವಂತೆ ಮಾಡುವುದು ತಮ್ಮ ಗುರಿಯಾಗಿದೆ ಎಂದು ಹೇಳಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಭಾರತವನ್ನು ಆಕರ್ಷಣೀಯ ತಾಣವನ್ನಾಗಿ ಮಾಡಲು ಹಲವು ಸರಣಿ ನೀತಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಅವರು, ಸ್ವಾವಲಂಬಿ ಭಾರತದ ಕುರಿತು ಉಲ್ಲೇಖಿಸಿ ಅದು ಜಾಗತಿಕ ಆರ್ಥಿಕತೆಗೆ ಹಲವು ಪಟ್ಟು ಶಕ್ತಿಯನ್ನು ಒದಗಿಸಲಿದೆ ಎಂದು ಹೇಳಿದ್ದರು.
ಭಾರತದ ತೈಲ ಮತ್ತು ಅನಿಲ ಉದ್ಯಮ ಇತ್ತೀಚಿನ ವರ್ಷಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ ಎಂದು ಶ್ರೀ ಪ್ರಧಾನ್ ಹೇಳಿದರು. ಈ ಸಂಕಷ್ಟದ ಸವಾಲಿನ ಸಂದರ್ಭಗಳಲ್ಲಿ ಸುಗಮ ರೀತಿಯಲ್ಲಿ ಇಂಧನ ಪೂರೈಕೆ, ದೇಶದ ಅತ್ಯಂತ ಕುಗ್ರಾಮಗಳಿಗೂ ಶುದ್ಧ ಅಡುಗೆ ಇಂಧನ ದೊರಕುವಂತೆ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಸಂದರ್ಭಕ್ಕೆ ತಕ್ಕಂತೆ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಗೌರವಾನ್ವಿತ ಪ್ರಧಾನಮಂತ್ರಿ ಅವರ ನಿರ್ಣಾಯಕ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ ಇಂಧನ ವಲಯದಲ್ಲಿ ಭಾರತದ ಆರ್ಥಿಕ ಪ್ರಗತಿಗೆ ಮತ್ತು ಕೋವಿಡ್ ನಂತರದ ಸಮಯದಲ್ಲಿ ನಿರಂತರ ಪ್ರಯತ್ನಗಳು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ವಿಶ್ವ ಅನಿರೀಕ್ಷಿತ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಕೋವಿಡ್ ಸಾಂಕ್ರಾಮಿಕ ವಿಶ್ವದ ಆರ್ಥಿಕ ಪ್ರಗತಿಗೆ ತಡೆಯೊಡ್ಡಿದೆ ಎಂದರು. “ಜಾಗತಿಕ ಇಂಧನ ವಲಯದ ಪೂರೈಕೆ ಸರಣಿ ಮೇಲೆ ಕೋವಿಡ್ ಉಂಟಮಾಡಿರುವ ಪರಿಣಾಮಗಳ ಮೌಲ್ಯಮಾಪನ ಮಾಡುವುದರ ಜೊತೆಗೆ ಭಾರತದ ಇಂಧನ ವಲಯದ ಬಲವರ್ಧನೆ ನಿಟ್ಟಿನಲ್ಲೂ ಸಹ ನಾವು ಕ್ರಮಗಳನ್ನು ಕೈಗೊಳ್ಳುವ ಸ್ಥಿತಿಯಲ್ಲಿದ್ದೇವೆ” ಎಂದು ಶ್ರೀ ಪ್ರಧಾನ್ ಹೇಳಿದರು. “ಭಾರತೀಯ ತೈಲ ಮತ್ತು ಅನಿಲ ಉದ್ಯಮದ ನಾಯಕರು, ಕೇವಲ ತಮ್ಮ ಅನುಭವಗಳನ್ನು ಆಧರಿಸಿ ಕೊಡುಗೆ ನೀಡುತ್ತಿಲ್ಲ. ಈ ವೇದಿಕೆಯ ಮೂಲಕ ತಮ್ಮ ಹೊಸ ಚಿಂತನೆಗಳನ್ನು ನೀಡಲಿದ್ದಾರೆ” ಎಂದು ಹೇಳಿದರು.
ಸೌದಿ ಅರೆಬಿಯಾದ ಇಂಧನ ಸಚಿವರಾದ ಎಚ್. ಆರ್. ಎಚ್. ದೊರೆ ಅಬ್ದುಲ್ ಅಜೀಜ್, ಅಮೆರಿಕದ ಇಂಧನ ಕಾರ್ಯದರ್ಶಿ ಗೌರವಾನ್ವಿತ ಡಾನ್ ಬ್ರೌಲೆಟ್, ಅವರು ಭಾರತ ಇಂಧನ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದಕ್ಕೆ ಪ್ರಧಾನ್ ಧನ್ಯವಾದಗಳನ್ನು ಸಲ್ಲಿಸಿದರು. ಅಲ್ಲದೆ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಜಾಗತಿಕ ತೈಲ ಮತ್ತು ಅನಿಲ ಕಂಪನಿಗಳು ಸುಮಾರು 40 ಸಿಇಒಗಳು ಮತ್ತು ಭಾರತೀಯ ಸಾರ್ವಜನಿಕ ಮತ್ತು ಖಾಸಗಿ ತೈಲ ಕಂಪನಿಗಳ ಸಿಇಒಗಳು, ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಮತ್ತು ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ಮತ್ತು ದೇಶದಲ್ಲಿ ಬಂಡವಾಳ ಹೂಡಿಕೆ ಕುರಿತಂತೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಉದ್ಯಮದ ನಾಯಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಮುಂದಿನ ಎರಡು ದಶಕಗಳಲ್ಲಿ ಭಾರತದ ಇಂಧನ ಬೇಡಿಕೆ ದುಪ್ಪಟ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಸುಸ್ಥಿರ ಜಗತ್ತಿನ ಪುನರ್ ನಿರ್ಮಾಣದಲ್ಲಿ ಭಾರತ ಅತ್ಯಂತ ವಿಭಿನ್ನ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ್ದರು.
2017ರಲ್ಲಿ ಸೆರಾವೀಕ್ ಆರಂಭಿಸಿದ ಭಾರತ-ಇಂಧನ ವೇದಿಕೆ ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಇದರ ಹಿಂದಿನ ಉದ್ದೇಶ ಜಾಗತಿಕ ಇಂಧನ ನಾಯಕರನ್ನು ಮತ್ತು ತಜ್ಞರನ್ನು ಭಾರತದಲ್ಲಿ ಒಂದೆಡೆ ಸೇರಿಸುವುದು ಹಾಗೂ ಭಾರತದ ಇಂಧನ ವಲಯ ಎದುರಿಸುತ್ತಿರುವ ಸವಾಲು ಹಾಗೂ ಅಲ್ಲಿರುವ ಅವಕಾಶಗಳ ಬಗ್ಗೆ ಸಮಾಲೋಚನೆಗಳನ್ನು ನಡೆಸುವುದಾಗಿದೆ. ಐಎಚ್ಎಸ್ ಮರ್ಕಿಟ್ ನ ಉಪಾಧ್ಯಕ್ಷ ಡಾ. ಡೇನಿಯಲ್ ಯರ್ಗಿನ್ ಮತ್ತು ಅವರ ತಂಡದ ಕಾರ್ಯವನ್ನು ಶ್ಲಾಘಿಸಿದ ಅವರ ಬದ್ಧತೆಯಿಂದಾಗಿ ವರ್ಚುವಲ್ ರೂಪದಲ್ಲಿ ಭಾರತ ಇಂಧನ ವೇದಿಕೆಯ ನಾಲ್ಕನೇ ಆವೃತ್ತಿಯನ್ನು ನಡೆಸಲಾಯಿತು ಎಂದು ಹೇಳಿದರು.
ಮೂರು ದಿನಗಳ ಈ ಕಾರ್ಯಕ್ರಮದ ವೇಳೆ ಶ್ರೀ ಪ್ರಧಾನ್ ಅವರು, ಡಾ. ಯರ್ಗಿನ್ ಅವರ “ದಿ ನ್ಯೂ ಮ್ಯಾಪ್” ಕೃತಿಯನ್ನು ಬಿಡುಗಡೆ ಮಾಡಿದರು.
***
(Release ID: 1668382)
Visitor Counter : 252