ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್ 19: ಪುನಾರಂಭಕ್ಕೆ ಕೇಂದ್ರ ಗೃಹ ಸಚಿವಾಲಯದಿಂದ ಮಾರ್ಗಸೂಚಿ ವಿಸ್ತರಣೆ


ಜಾಗರೂಕತೆಯಿಂದ ಮುಂದಿನ ಹೆಜ್ಜೆ ಇಡಿ

ಕೋವಿಡ್ ಸೂಕ್ತ ನಡೆವಳಿಕೆಗಳನ್ನು ಜಾರಿ ಮಾಡಲು ರಾಜ್ಯಗಳು/ಯುಟಿಗಳಿಗೆ ಸೂಚನೆ

Posted On: 27 OCT 2020 3:38PM by PIB Bengaluru
 • ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ಇಂದು ಆದೇಶ ಹೊರಡಿಸಿದ್ದು ಪುನಾರಂಭ ಕುರಿತಂತೆ 30.09.2020ರಂದು ಹೊರಡಿಸಿದ್ದ ಮಾರ್ಗಸೂಚಿಗಳ ಅವಧಿಯನ್ನು 30.11.2020ರವರೆಗೆ ಜಾರಿಯಲ್ಲಿರುವಂತೆ ವಿಸ್ತರಣೆ ಮಾಡಿದೆ.
 • ಕಂಟೈನ್ಮೆಂಟ್ ವಲಯಗಳ ಹೊರಗೆ ಚಟುವಟಿಕೆಗಳ ಪುನಾರಂಭ
  • 2020 ಮಾರ್ಚ್ 24ರಂದು ಎಂಎಚ್‌.ಎ ಲಾಕ್‌ ಡೌನ್ ಕ್ರಮಗಳ ಕುರಿತು ಮೊದಲ ಆದೇಶ ಹೊರಡಿಸಿದಾಗಿನಿಂದ, ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳನ್ನು ಕ್ರಮೇಣ ತೆರೆಯಲಾಗಿದೆ. ಇಲ್ಲಿ ಬಹುತೇಕ ಚಟುವಟಿಕೆಗಳಿಗೆ ಅನುಮತಿಸಲಾಗಿದೆ, ಹೆಚ್ಚಿನ ಸಂಖ್ಯೆಯ ಜನರನ್ನು ಒಳಗೊಳ್ಳುವ ಕೆಲವು ಚಟುವಟಿಕೆಗಳಿಗೂ ಕೆಲವೊಂದು ನಿರ್ಬಂಧಗಳು ಮತ್ತು ಆರೋಗ್ಯ ಮತ್ತು ಸುರಕ್ಷತೆಯ ಮುನ್ನೆಚ್ಚರಿಕೆ ಕುರಿತ ಎಸ್.ಓ.ಪಿ.ಗಳ ಪಾಲನೆಯೊಂದಿಗೆ ಅವಕಾಶ ನೀಡಲಾಗಿದೆ. ಈ ಚಟುವಟಿಕೆಗಳಲ್ಲಿ ಮೆಟ್ರೋ ರೈಲು, ಶಾಂಪಿಗ್ ಮಾಲ್ ಗಳು, ಹೊಟೆಲ್, ರೆಸ್ಟೋರೆಂಟ್ ಗಳು ಮತ್ತು ಆತಿಥ್ಯ ಸೇವೆಗಳು, ಧಾರ್ಮಿಕ ಸ್ಥಳಗಳು, ಯೋಗ ಮತ್ತು ತರಬೇತಿ ಸಂಸ್ಥೆಗಳು, ಜಿಮ್ ಗಳು, ಸಿನಿಮಾ, ಮನರಂಜನಾ ಪಾರ್ಕ್ ಇತ್ಯಾದಿ ಸೇರಿವೆ.
  • ಕೋವಿಡ್ ಸೋಂಕು ಹರಡಬಹುದಾದ ತೀವ್ರ ಅಪಾಯದ ಕೆಲವು ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಅವುಗಳ ಪುನಾರಂಭ ಕುರಿತಂತೆ ಪರಿಸ್ಥಿತಿಯ ಅವಲೋಕನದೊಂದಿಗೆ ಮತ್ತು ಎಸ್.ಓ.ಪಿ.ಗಳಿಗೆ ಒಳಪಟ್ಟು ನಿರ್ಧಾರ ಕೈಗೊಳ್ಳಲು ಅನುಮತಿಸಲಾಗಿದೆ. ಈ ಚಟುವಟಿಕೆಗಳಲ್ಲಿ ಶಾಲೆಗಳು ಮತ್ತು ತರಬೇತಿ ಕೇಂದ್ರಗಳು, ಸಂಶೋಧನಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು, 100ಕ್ಕಿಂತ ಹೆಚ್ಚಿನ ಜನರು ಸೇರುವುದಕ್ಕೆ ಅವಕಾಶ ನೀಡುವುದು ಇತ್ಯಾದಿ ಸೇರಿವೆ.
  • ಎಂ.ಎಚ್.ಎ.30.09.2020ರಂದು ಹೊರಡಿಸಿದ ಈ ಹಿಂದಿನ ಮಾರ್ಗಸೂಚಿಗಳು ಕೆಲವೊಂದು ನಿರ್ಬಂಧಗಳಗಳೊಂದಿಗೆ ಈ ಕೆಳಕಂಡ ಚಟುವಟಿಕೆಗಳಿಗೂ ಅನುಮತಿ ನೀಡುತ್ತದೆ:
 1. ಎಂಎಚ್‌.ಎ ಅನುಮತಿಸಿದಂತೆ ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಯಾನ.
 2. ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳನ್ನು ಬಳಕೆ.
 3. ಬಿಸಿನೆಸ್ ಟು ಬ್ಯುಸಿನೆಸ್ (ಬಿ 2 ಬಿ) ಉದ್ದೇಶಗಳಿಗಾಗಿ ಪ್ರದರ್ಶನ ಸಭಾಂಗಣಗಳು.
 4. ತಮ್ಮ ಆಸನ ಸಾಮರ್ಥ್ಯದ ಶೇ.50 ವರೆಗೆ ಸಿನೆಮಾಗಳು / ಚಿತ್ರಮಂದಿರಗಳು / ಮಲ್ಟಿಪ್ಲೆಕ್ಸ್‌ ಗಳು.
 5. ಮುಚ್ಚಿದ ಸ್ಥಳಗಳಲ್ಲಿ ಸಾಮಾಜಿಕ / ಶೈಕ್ಷಣಿಕ / ಕ್ರೀಡೆ / ಮನರಂಜನೆ / ಸಾಂಸ್ಕೃತಿಕ / ಧಾರ್ಮಿಕ / ರಾಜಕೀಯ ಕಾರ್ಯಕ್ರಮಗಳು ಮತ್ತು ಇತರ ಸಭೆಗಳು ಸಭಾಂಗಣ ಸಾಮರ್ಥ್ಯದ ಶೇ. 50 ಮತ್ತು ಗರಿಷ್ಠ 200 ವ್ಯಕ್ತಿಗಳ ಮಿತಿಗೆ ಒಳಪಟ್ಟಿರುತ್ತದೆ

ಪರಿಸ್ಥಿತಿಯ ಅವಲೋಕನದ ಆಧಾರದ ಮೇಲೆ ಮೇಲ್ಕಂಡ ಚಟುವಟಿಕೆಗಳ ಕುರಿತಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

 • ಕೋವಿಡ್ - ಸೂಕ್ತ ನಡೆವಳಿಕೆ
  • ಶ್ರೇಣೀಕೃತ ಪುನಾರಂಭ ಮತ್ತು ಚಟುವಟಿಕೆಗಳ ಪ್ರಗತಿಶೀಲ ಪುನರಾರಂಭದ ಹಿಂದಿನ ಮೂಲತತ್ವ ಮುಂದೆ ಸಾಗುವುದೇ ಆಗಿದೆ. ಹಾಗೆಂದ ಮಾತ್ರಕ್ಕೆ, ಇದು ಸಾಂಕ್ರಾಮಿಕ ರೋಗದ ಅಂತ್ಯ ಎಂದು ಅರ್ಥವಲ್ಲ. ಪ್ರತಿಯೊಬ್ಬ ನಾಗರಿಕರೂ ತಮ್ಮ ನಿತ್ಯ ಬದುಕಿನಲ್ಲಿ ಕೋವಿಡ್-19 ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಾಕಷ್ಟು ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ. ಕೋವಿಡ್-19 ಸೂಕ್ತ ನಡವಳಿಕೆಯ ಕುರಿತ ಈ ಕೆಳಕಂಡ ಮೂರು ಮಂತ್ರಗಳನ್ನು ಅನುಸರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಅಕ್ಟೋಬರ್ 8 ರಂದು ‘ಜನಾಂದೋಲನ’ವನ್ನು ಪ್ರಾರಂಭಿಸಿದರು ಅವುಗಳೆಂದರೆ:
 1. ಮಾಸ್ಕ್ ಗಳನ್ನು ಸರಿಯಾಗಿ ಧರಿಸಿ;
 2. ನಿಮ್ಮ ಕರಗಳನ್ನು ಪದೇ ಪದೇ ತೊಳೆದುಕೊಳ್ಳಿ; ಮತ್ತು
 3. ಮತ್ತು ಎರಡು ಗಜ ದೂರವನ್ನು ಕಡ್ಡಾಯವಾಗಿ ಪಾಲಿಸಿ.
  • ಚಟುವಟಿಕೆಗಳ ಪುನರಾರಂಭವು ಯಶಸ್ವಿಯಾಗಲು ಮತ್ತು ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಗಳಿಸಿದ ಪ್ರಯೋಜನಗಳನ್ನು ದುರ್ಬಲಗೊಳಿಸದಿರಲು ನಾಗರಿಕರಲ್ಲಿ ಶಿಸ್ತು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸುವ ತುರ್ತು ಅವಶ್ಯಕತೆಯಿದೆ.
  • ಎಂ.ಎಚ್.ಎ. ಈಗಾಗಲೇ ಮುಖ್ಯ ಕಾರ್ಯದರ್ಶಿಗಳು/ ಎಲ್ಲ ರಾಜ್ಯಗಳು/ ಯುಟಿಗಳ ಆಡಳಿತಗಾರರುಗಳಿಗೆ ಸೂಚನೆ ನೀಡಿ, ಕೋವಿಡ್ 19ರ ಸೂಕ್ತ ನಡೆವಳಿಕೆಗಳನ್ನು ಬೇರುಮಟ್ಟದಲ್ಲಿ ಉತ್ತೇಜಿಸುವ ಪ್ರಯತ್ನ ಮಾಡುವಂತೆ ಮತ್ತು ಮಾಸ್ಕ್ ಧಾರಣೆ, ಕರ ನೈರ್ಮಲ್ಯ ಮತ್ತು ವ್ಯಕ್ತಿಗತ ಅಂತರ ಪಾಲನೆ ಜಾರಿ ಮಾಡುವಂತೆ ತಿಳಿಸಿದೆ.

ಕೋವಿಡ್ -19 ನಿರ್ವಹಣೆಯ ರಾಷ್ಟ್ರೀಯ ನಿರ್ದೇಶಗಳು

 • ಕೋವಿಡ್ -19 ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳನ್ನು ದೇಶಾದ್ಯಂತ ಪಾಲಿಸಬೇಕು, ಕೋವಿಡ್ 19 ಸೂಕ್ತ ನಡೆವಳಿಕೆಗಳನ್ನು ಜಾರಿ ಮಾಡಬೇಕು.

ಕಂಟೈನ್ಮೆಂಟ್ ವಲಯಗಳಲ್ಲಿ 2020ರ ನವೆಂಬರ್ 30ರವರೆಗೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿ ಮಾಡಬೇಕು.

 • ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್ ಡೌನ್ ಅನ್ನು 2020ರ ನವೆಂಬರ್ 30ವರೆಗೆ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.
 • ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಪರಿಗಣಿಸಿದ ನಂತರ ಕಂಟೈನ್ಮೆಂಟ್ ವಲಯಗಳನ್ನು ಜಿಲ್ಲಾ ಪ್ರಾಧಿಕಾರಗಳು ಸೂಕ್ಷ್ಮ ಮಟ್ಟದಲ್ಲಿ ಗುರುತಿಸಬೇಕು. ಈ ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಮತ್ತು ಅತ್ಯಾವಶ್ಯಕ ಚಟುವಟಿಕೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ.
 • ಕಂಟೈನ್ಮೆಂಟ್ ವಲಯಗಳ ಒಳಗೆ ಕಟ್ಟುನಿಟ್ಟಿನ ಪರಿಧಿಯ ನಿಯಂತ್ರಣವನ್ನು ನಿರ್ವಹಿಸಬೇಕು ಮತ್ತು ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿಸಬೇಕು.
 • ಈ ಕಂಟೈನ್ಮೆಂಟ್ ವಲಯಗಳನ್ನು ಆಯಾ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಂತರ್ಜಾಲ ತಾಣಗಳಲ್ಲಿ ಅಧಿಸೂಚಿಸಬೇಕು ಮತ್ತು ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಹಂಚಿಕೊಳ್ಳಬೇಕು.

ರಾಜ್ಯಗಳು ಕಂಟೈನ್ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ಲಾಕ್ ಡೌನ್ ವಿಧಿಸಬಾರದು

 • ರಾಜ್ಯ/ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಕಂಟೈನ್ಮೆಂಟ್ ವಲಯಗಳ ಹೊರಗೆ ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ಮಾಡದೇ ಯಾವುದೇ ಸ್ಥಳೀಯ ಲಾಕ್ ಡೌನ್ (ರಾಜ್ಯ/ಜಿಲ್ಲೆ/ಉಪ ವಿಭಾಗ/ನಗರ/ಗ್ರಾಮ ಮಟ್ಟದಲ್ಲಿ)

ಅಂತರ ರಾಜ್ಯ ಮತ್ತು ರಾಜ್ಯದೊಳಗೆ ಯಾವುದೇ ಸಂಚಾರ ನಿರ್ಬಂಧವಿಲ್ಲ

 • ಅಂತರ ರಾಜ್ಯ ಮತ್ತು ರಾಜ್ಯದೊಳಗೆ ಯಾವುದೇ ವ್ಯಕ್ತಿ ಅಥವಾ ಸರಕು ಸಾಗಾಟಕ್ಕೆ ನಿರ್ಬಂಧ ಇರುವುದಿಲ್ಲ. ಇಂಥ ಓಡಾಟಕ್ಕೆ ಯಾವುದೇ ಪ್ರತ್ಯೇಕ ಅನುಮತಿ/ಅನುಮೋದನೆ/ಇ-ಪರ್ಮಿಟ್ ಅಗತ್ಯ ಇರುವುದಿಲ್ಲ.

ಸೂಕ್ಷ್ಮ ವ್ಯಕ್ತಿಗಳಿಗೆ ಸುರಕ್ಷತೆ

 • ಸೂಕ್ಷ್ಮ (ದುರ್ಬಲ) ವ್ಯಕ್ತಿಗಳು, ಅಂದರೆ, 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಅಗತ್ಯ ಅವಶ್ಯಕತೆಗಳನ್ನು ಪೂರೈಕೆ ಮತ್ತು ಆರೋಗ್ಯ ಉದ್ದೇಶಗಳಿಗಾಗಿ ಹೊರತುಪಡಿಸಿ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.

ಆರೋಗ್ಯ ಸೇತು ಬಳಕೆ

 • ಆರೋಗ್ಯ ಸೇತು ಮೊಬೈಲ್ ಆಪ್ ಬಳಕೆಯನ್ನು ನಿರಂತರವಾಗಿ ಉತ್ತೇಜಿಸಬೇಕು


******(Release ID: 1667956) Visitor Counter : 200