ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ತ್ರಿಪುರಾದ 9 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ಶಿಲಾನ್ಯಾಸ


ಹೆದ್ದಾರಿ ಯೋಜನೆಗಳಿಂದ ಸಾಮಾಜಿಕ ಆರ್ಥಿಕ ಸ್ಥಿತಿಗತಿಗೆ ಉತ್ತೇಜನ

ಪ್ರವಾಸೋದ್ಯಮ ಅಭಿವೃದ್ಧಿ, ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಸಂಪರ್ಕ ವೃದ್ಧಿ

Posted On: 26 OCT 2020 2:03PM by PIB Bengaluru

ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್ ಎಂಇ) ಸಚಿವ ಶ್ರೀ ನಿತಿನ್ ಗಡ್ಕರಿ ಅವರು, ನಾಳೆ (ಅಕ್ಟೋಬರ್ 27ರಂದು) ತ್ರಿಪುರಾದಲ್ಲಿ 262 ಕಿ.ಮೀ. ಉದ್ದದ ಸುಮಾರು 2752 ಕೋಟಿ ರೂ. ಮೌಲ್ಯದ 9 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತ್ರಿಪುರಾ ಮುಖ್ಯಮಂತ್ರಿ ಶ್ರೀ ಬಿಪ್ಲಬ್ ಕುಮಾರ್ ದೇಬ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಮತ್ತು ಜನರಲ್(ನಿವೃತ್ತ) ಡಾ. ವಿ.ಕೆ. ಸಿಂಗ್, ರಾಜ್ಯದ ಸಚಿವರುಗಳು, ಸಂಸದರು, ಶಾಸಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಯೋಜನೆಗಳು ಪೂರ್ಣಗೊಂಡ ನಂತರ ಬಾಂಗ್ಲಾದೇಶಕ್ಕೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಮತ್ತು ಅಂತಾರಾಷ್ಟ್ರೀಯ ಮಾರ್ಗದಲ್ಲಿ ಅತ್ಯಂತ ವೇಗ ಮತ್ತು ಅಡೆತಡೆ ಸಂಪರ್ಕ ಸಾಧ್ಯವಾಗಲಿದೆ ಮತ್ತು ರಾಜ್ಯದಲ್ಲಿ ಪ್ರವಾಸೋದ್ಯಮ ಬಲವರ್ಧನೆಗೆ ಅತ್ಯಂತ ಪ್ರಮುಖ ಕಾರಣವಾಗಲಿದೆ. ಹೊಸ ಯೋಜನೆಗಳಿಂದ ಇಡೀ ರಾಜ್ಯದಲ್ಲಿನ ಪ್ರವಾಸೋದ್ಯಮ ತಾಣಗಳು, ಐತಿಹಾಸಿಕ ಪ್ರದೇಶಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಅತ್ಯಂತ ವೇಗದ ಮತ್ತು ಸುರಕ್ಷಿತ ಸಂಚಾರಕ್ಕೆ ಉತ್ತಮ ಸಂಪರ್ಕವನ್ನು ಒದಗಿಸಲಿದೆ. ಇದರಿಂದ ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಲ್ಲದೆ, ಈ ಪ್ರದೇಶದ ಕೌಶಲ್ಯಹೊಂದಿದ, ಅರೆ ಕೌಶಲ್ಯ ಮತ್ತು ಕೌಶಲ್ಯರಹಿತರಿಗೆ ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಲು ನೆರವಾಗಲಿದೆ. ಈ ಯೋಜನೆಗಳಿಂದ ಪ್ರಯಾಣದ ಸಮಯ ತಗ್ಗುವುದಲ್ಲದೆ, ವಾಹನಗಳ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ ಮತ್ತು ಇಂಧನ ಉಳಿತಾಯವಾಗಲಿದೆ. ಈ ಯೋಜನೆಗಳ ಅನುಷ್ಠಾನದಿಂದ ಸ್ಥಳೀಯವಾಗಿ ಸಾಮಾಜಿಕ ಆರ್ಥಿಕ ಸ್ಥಿತಿಗತಿ ವೃದ್ಧಿಯಾಗಲಿದೆ. ಅಲ್ಲದೆ ಕೃಷಿ ಉತ್ಪನ್ನಗಳ ಸುಗಮ ಸಾಗಾಣೆಗೆ ಮತ್ತು ದೊಡ್ಡ ಮಾರುಕಟ್ಟೆಗಳು ಲಭ್ಯವಾಗಲಿವೆ. ಆ ಮೂಲಕ ಉತ್ಪನ್ನಗಳ ಸರಕು ಮತ್ತು ಸೇವೆಗಳ ವೆಚ್ಚ ತಗ್ಗಲಿದೆ. ಜೊತೆಗೆ ಆರೋಗ್ಯ ರಕ್ಷಣೆ ಹಾಗೂ ತುರ್ತು ಸೇವೆಗಳು ಅತ್ಯಂತ ಸುಲಭ ಮತ್ತು ವೇಗವಾಗಿ ಲಭ್ಯವಾಗಲಿವೆ. ಒಟ್ಟಾರೆ ಈ ಯೋಜನೆಗಳು ಪೂರ್ಣಗೊಂಡ ನಂತರ ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರಿ ಉತ್ತೇಜನ ದೊರಕಲಿದ್ದು, ಆ ಪ್ರದೇಶದ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಸಂಪರ್ಕವೂ ಸುಗಮವಾಗಲಿದೆ. ಅಂತಿಮವಾಗಿ ಈ ಯೋಜನೆಗಳು ತ್ರಿಪುರಾ ರಾಜ್ಯದ ಜಿಡಿಪಿ ವೃದ್ಧಿಗೆ ಹೆಚ್ಚಿನ ನೆರವಾಗಲಿದೆ.

ಅಭಿವೃದ್ಧಿ ಯೋಜನೆಗಳಲ್ಲಿ ಈ ಕೆಳಗಿನವು ಸೇರಿವೆ:

ಕ್ರ.ಸಂ.

ಯೋಜನೆಯ ಹೆಸರು

ಉದ್ದ ಕಿ.ಮೀ.ಗಳಲ್ಲಿ

ಒಟ್ಟು ಯೋಜನಾ ವೆಚ್ಚ

ಕೋಟಿ ರೂ.ಗಳಲ್ಲಿ

1

ರಾಷ್ಟ್ರೀಯ ಹೆದ್ದಾರಿ 108ಎನಲ್ಲಿ ಜೋಲೈಬರಿ-ಬೆಲೋನಿಯಾ

21.4

201.99

2

ರಾಷ್ಟ್ರೀಯ ಹೆದ್ದಾರಿ 208ರಲ್ಲಿ ಕೈಲಾಶಂಕರ್-ಕುಮಾರಘಾಟ್

18.60

277.50

3

ರಾಷ್ಟ್ರೀಯ ಹೆದ್ದಾರಿ 08ರಲ್ಲಿ ಖಯೇರ್ಪುರ್ ನಿಂದ ಅಮ್ತಾಲಿ(ಅಗರ್ತಲಾ ಬೈಪಾಸ್)

12.90

147

4

ಎನ್ಎಚ್-108ಬಿ ಅಗರ್ತಲಾ-ಖೋವೈ(03 ಪ್ಯಾಕೇಜ್ ಗಳು)

38.80

480.19

5

ಎನ್ಎಚ್-208ಎ ಕೈಲಶಂಕರ್ ನಿಂದ ಕುರ್ತಿ ಸೇತುವೆ(03 ಪ್ಯಾಕೇಜ್ ಗಳು)

36.46

473.49

6

ಎನ್ಎಚ್ -44ಎನಲ್ಲಿ ಮನು-ಸಿಮ್ಲುಂಗ್

(02 ಪ್ಯಾಕೇಜ್ )

36.54

595.12

7

ಮುಹುರಿ ನದಿ ಮತ್ತು ಗೋಮತಿ ನದಿಗೆ ಆರ್ ಸಿಸಿ ಸೇತುವೆ

02

83.06

8

ಎನ್ಎಚ್-08ನಲ್ಲಿ ಚುರೈಬರಿ-ಅಗರ್ತಲಾ ವಲಯ ಬಲವರ್ಧನೆ

74.85

257.96

9

ಎನ್ಎಚ್-44ನ ಚುರೈಬರಿ-ಅಗರ್ತಲಾ ವಲಯದಲ್ಲಿ ಜಿಯೋಮೆಟ್ರಿಕ್ ಸುಧಾರಣೆ

21.789

236.18

 

ಒಟ್ಟು

261.339

2752.49

 

***



(Release ID: 1667589) Visitor Counter : 145