ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)

ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆ, 2020ರ ಫಲಿತಾಂಶ

Posted On: 23 OCT 2020 8:30PM by PIB Bengaluru

ದಿನಾಂಕ 04/10/2020 ರಂದು ನಡೆದ ನಾಗರಿಕ ಸೇವಾ (ಪ್ರಿಲಿಮಿನರಿ) ಪರೀಕ್ಷೆಗಳ ಫಲಿತಾಂಶ ಆಧರಿಸಿ ಕೆಳಗಿನ ನೊಂದಾವಣಾ ಸಂಖ್ಯೆಯ ವಿದ್ಯಾರ್ಥಿಗಳು 2020 ಸಾಲಿನ ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ ಬರೆಯಲು ಸೇರ್ಪಡೆಗೆ ಅರ್ಹತೆ ಗಳಿಸಿದ್ದಾರೆ.

ಅಭ್ಯರ್ಥಿಗಳ ಅಭ್ಯರ್ಥಿತನವು ತಾತ್ಕಾಲಿಕವಾಗಿದ್ದು, ಪರೀಕ್ಷಾ ನಿಯಮದ ಪ್ರಕಾರ , ಎಲ್ಲಾ ಅಭ್ಯರ್ಥಿಗಳು ವಿವರವಾದ ಅರ್ಜಿ ಫಾರಂ –I ರಲ್ಲಿ ( ಡಿ..ಎಫ್.-I ) ನಾಗರಿಕ ಸೇವೆಗಳ (ಮೈನ್ ) ಪರೀಕ್ಷೆ 2020 ಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯು ಕೇಂದ್ರೀಯ ಲೋಕಸೇವಾ ಆಯೋಗದ ವೆಬ್ ಸೈಟ್ (https://upsconline.nic.in) ನಲ್ಲಿ ದಿನಾಂಕ 28-10-2020 ರಿಂದ 11-11-2020 ಸಂಜೆ 6 ಗಂಟೆವರೆಗೆ ಲಭ್ಯವಿದೆ. ಎಲ್ಲಾ ಅರ್ಹ ಅಭ್ಯರ್ಥಿಗಳು 2020 ಸಾಲಿನ ನಾಗರಿಕ ಸೇವಾ (ಮುಖ್ಯ ) ಪರೀಕ್ಷೆಗಳಿಗೆ ಸೇರುವುದಕ್ಕಾಗಿ ಡಿ..ಎಫ್. –I ನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಿ ಆನ್ ಲೈನ್ ನಲ್ಲಿ ಸಲ್ಲಿಸಬೇಕು , ಪರೀಕ್ಷೆಯು 08-01-2021 ಶುಕ್ರವಾರದಿಂದ ನಡೆಯಲಿದೆ. ಡಿ..ಎಫ್. –I ನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿ ಮತ್ತು ಅದನ್ನು ಸಲ್ಲಿಸುವುದಕ್ಕೆ ಸಂಬಂಧಿಸಿದ ಪ್ರಮುಖ ಸೂಚನೆಗಳು ವೆಬ್ ಸೈಟಿನಲ್ಲಿ ಲಭ್ಯ ಇವೆ. ಆನ್ ಲೈನ್ ಡಿ..ಎಫ್. –I ನ್ನು ಭರ್ತಿ ಮಾಡುವುದಕ್ಕೆ ಮೊದಲು , ಪರೀಕ್ಷೆಯಲ್ಲಿ ಯಶಸ್ಸು ಗಳಿಸಿರುವರೆಂದು ಘೋಷಿಸಲಾದ ಅಭ್ಯರ್ಥಿಗಳು ಮೇಲ್ಕಾಣಿಸಿದ ವೆಬ್ ಸೈಟಿನ ಸೂಕ್ತ ಪುಟದಲ್ಲಿ ತಮ್ಮನ್ನು ತಾವು ನೊಂದಾಯಿಸಿಕೊಳ್ಳಬೇಕು. ಅರ್ಹ ಅಭ್ಯರ್ಥಿಗಳಿಗೆ , ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು 12-02-2020 ದಿನಾಂಕದ ಅಧಿಸೂಚನೆಯನ್ವಯ ಹೊರಡಿಸಿರುವ ಭಾರತದ ವಿಶೇಷ ಗೆಜೆಟ್ಟಿನಲ್ಲಿ ಪ್ರಕಟವಾಗಿರುವ ನಾಗರಿಕ ಸೇವಾ ಪರೀಕ್ಷೆಗಳು, 2020 ನಿಯಮಗಳನ್ನು ಪರಾಮರ್ಶಿಸುವಂತೆ ಸಲಹೆ ಮಾಡಲಾಗಿದೆ.

ಡಿ..ಎಫ್. –I ನ್ನು ಭರ್ತಿ ಮಾಡಿ ಸಲ್ಲಿಸಿದ ಮಾತ್ರಕ್ಕೆ, ಕಾರಣವೊಂದರಿಂದಲೇ ಅಭ್ಯರ್ಥಿಗಳಿಗೆ ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ 2020 ಕ್ಕೆ ಸೇರ್ಪಡೆ ಹಕ್ಕು ಲಭಿಸುತ್ತದೆ ಎಂದು ಭಾವಿಸಲಾಗದು. -ಸೇರ್ಪಡೆ (-ಅಡ್ಮಿಟ್ ಕಾರ್ಡ್ ) ಕಾರ್ಡ್ ನ್ನು ಮೇಲ್ಕಾಣಿಸಿದ ಪರೀಕ್ಷೆಯ ವೇಳಾಪಟ್ಟಿಯೊಂದಿಗೆ ಆಯೋಗದ ವೆಬ್ ಸೈಟಿಗೆ ಅರ್ಹ ಅಭ್ಯರ್ಥಿಗಳಿಗಾಗಿ ಪರೀಕ್ಷೆ ಆರಂಭಕ್ಕೆ 3-4 ವಾರಗಳ ಮೊದಲು ಅಪ್ಲೋಡ್ ಮಾಡಲಾಗುತ್ತದೆ. ಡಿ..ಎಫ್. –I ಸಲ್ಲಿಕೆ ಬಳಿಕ ಅಂಚೆ ವಿಳಾಸದಲ್ಲಾಗಲೀ, ಅಥವಾ ಮಿಂಚಂಚೆ ವಿಳಾಸದಲ್ಲಾಗಲೀ, ಅಥವಾ ಮೊಬೈಲ್ ನಂಬರ್ ಗಳಲ್ಲಿ ಬದಲಾವಣೆಗಳೇನಾದರೂ ಇದ್ದರೆ ಒಂದೇ ಬಾರಿ ಆಯೋಗಕ್ಕೆ ತಿಳಿಸಬಹುದು.

ಅಭ್ಯರ್ಥಿಗಳಿಗೆ ಅಂಕಗಳು, ಕಟಾಫ್ ಅಂಕಗಳು ಮತ್ತು ಸಿ.ಎಸ್. (ಪಿ) ಪರೀಕ್ಷೆಗಳು , 2020 ಸ್ಕ್ರೀನಿಂಗ್ ಟೆಸ್ಟಿನ ಉತ್ತರ ಕೀಗಳನ್ನು (ಆನ್ಸರ್ ಕೀ ) ಆಯೋಗದ ವೆಬ್ ಸೈಟ್ ಅಂದರೆ https://upsc.gov.in ರಲ್ಲಿ ನಾಗರಿಕ ಸೇವಾ ಪರೀಕ್ಷೆಗಳು, 2020 ಇಡೀಯ ಪಕ್ರಿಯೆ ಮುಕ್ತಾಯದ ಬಳಿಕ ಅಂದರೆ ಅಂತಿಮ ಫಲಿತಾಂಶ ಪ್ರಕಟಣೆಯ ಬಳಿಕ ಅಪ್ ಲೋಡ್ ಮಾಡಲಾಗುವುದು.

ಹೊಸದಿಲ್ಲಿಯ ಶಾಹಜಹಾನ್ ರಸ್ತೆಯ ಧೋಲ್ಪುರ ಹೌಸ್ ಕ್ಯಾಂಪಸ್ಸಿನಲ್ಲಿರುವ ಪರೀಕ್ಷಾ ಕೇಂದ್ರ ಕಟ್ಟಡದ ಬಳಿ ಕೇಂದ್ರೀಯ ಲೋಕ ಸೇವಾ ಆಯೋಗವು ಮಾಹಿತಿ ಸೌಲಭ್ಯ ಕೇಂದ್ರವನ್ನು ಹೊಂದಿದೆ. ಅಭ್ಯರ್ಥಿಗಳು ಮೇಲ್ಕಾಣಿಸಿದ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿ ಯಾವುದೇ ಮಾಹಿತಿ/ ಸ್ಪಷ್ಟೀಕರಣಗಳನ್ನು ಎಲ್ಲಾ ಕೆಲಸದ ದಿನಗಳ ಅವಧಿಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ,ಮುಖತಹ ಭೇಟಿಯಾಗಿ ಅಥವಾ ಸೌಲಭ್ಯ ಕೇಂದ್ರಗಳಲ್ಲಿರುವ ದೂರವಾಣಿ ಸಂಖ್ಯೆ 011-23385271, 011-23098543 ಅಥವಾ 011-23381125 ಗಳ ಮೂಲಕ ಪಡೆಯಬಹುದು.

Click here for the results:

***


(Release ID: 1667367) Visitor Counter : 206