ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರದಡಿ ಬಡವರು/ನಗರ ವಲಸಿಗರಿಗೆ ರೂಪಿಸಿರುವ ಎಆರ್ ಎಚ್ ಸಿ ಯೋಜನೆಯಡಿ ಭಾಗವಾಗಿ ಎಫ್ ಎಆರ್, ಯೋಜನೆಗೆ ಹಣಕಾಸು ರಿಯಾಯ್ತಿ, ಬೃಹತ್ ಮೂಲಸೌಕರ್ಯ ವೃದ್ಧಿ: ಹರ್ದೀಪ್ ಸಿಂಗ್ ಪುರಿ


ನಡವಳಿಕೆ ಬದಲಿಸಲು ಅಂಗೀಕಾರ್ ಅಭಿಯಾನ ಕುರಿತ ರಾಷ್ಟ್ರೀಯ ವರದಿ ಮತ್ತು ಎಆರ್ ಎಚ್ ಸಿ ವೆಬ್ ಸೈಟ್ ಬಿಡುಗಡೆ- ಎಆರ್ ಎಚ್ ಸಿ ಕುರಿತ ಆಸಕ್ತಿ ವ್ಯಕ್ತಪಡಿಸುವಿಕೆ ಪ್ರಕಟ

ಸರ್ಕಾರ ಹೂಡಿರುವ ವಸತಿ ಯೋಜನೆಗಳಲ್ಲಿ ಖಾಲಿ ಇರುವುದನ್ನು ಎಆರ್ ಎಚ್ ಸಿಯಾಗಿ ಪರಿವರ್ತಿಸುವ ಮೂಲಕ ಎಆರ್ ಎಚ್ ಸಿ ಅನುಷ್ಠಾನ: ಲಭ್ಯವಿರುವ ಖಾಲಿ ಜಾಗದಲ್ಲಿ ಸಾರ್ವಜನಿಕ/ಖಾಸಗಿ ಸಂಸ್ಥೆಗಳಿಂದ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ

Posted On: 14 OCT 2020 5:25PM by PIB Bengaluru

ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಅಡಿಯಲ್ಲಿ ಬಡವರು ಮತ್ತು ವಲಸೆ ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಬಾಡಿಗೆ ವಸತಿ ಸಂಕೀರ್ಣಗಳು (ಎಆರ್ ಎಚ್ ಸಿ)ಗಳ ನಿರ್ಮಾಣದ ಭಾಗವಾಗಿ ಉಚಿತ ಎಫ್ ಎಆರ್ (ವಸತಿ ಪ್ರದೇಶ ಪ್ರಮಾಣ ನಿಗದಿ), ಹಣಕಾಸು ರಿಯಾಯತಿ, ಉಚಿತವಾಗಿ ಬೃಹತ್ ಮೂಲಸೌಕರ್ಯ ವೃದ್ಧಿ ಸೇರಿದಂತೆ ಹಲವು ಅಂಶಗಳು ಒಳಗೊಂಡಿವೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ (ಸ್ವತಂತ್ರ ಹೊಣೆಗಾರಿಕೆ) ರಾಜ್ಯ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಮಾರುಕಟ್ಟೆ/ವ್ಯಾಪಾರಿ ಒಕ್ಕೂಟಗಳಲ್ಲಿ, ಶಿಕ್ಷಣ/ಆರೋಗ್ಯ ಸಂಸ್ಥೆಗಳು, ಆತಿಥ್ಯ ವಲಯ, ದೀರ್ಘಾವಧಿ ಪ್ರವಾಸಿಗರು/ವೀಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ನಗರ ಪ್ರದೇಶದ ಬಡವರು ಮತ್ತು ವಲಸೆ ಕಾರ್ಮಿಕರು ನಾನಾ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಗೌರವಯುತವಾಗಿ ಬಾಳ್ವೆ ನಡೆಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅವರು ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣ (ಎಆರ್ ಎಚ್ ಸಿ) ಕುರಿತ ಪೋರ್ಟಲ್ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾಶಂಕರ್ ಮಿಶ್ರಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಎಆರ್ ಎಚ್ ಸಿ ಕುರಿತಂತೆ ಆಸಕ್ತಿ ವ್ಯಕ್ತಪಡಿಸುವಿಕೆ ಪ್ರಕಟಿಸಲಾಯಿತು.

ಇದಕ್ಕೂ ಮುನ್ನ ಎಆರ್ ಎಚ್ ಸಿ ಜ್ಞಾನಾಧಾರಿತ ಒಪ್ಪಂದಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹಿ ಹಾಕಿದವು. ಕಾರ್ಯಾಚರಣೆ ಮಾರ್ಗಸೂಚಿಗಳು ಆಂಗ್ಲ ಭಾಷೆಯಲ್ಲಿದ್ದವು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ನಗರ ಸ್ಥಳೀಯ ಸಂಸ್ಥೆಗಳು(ಮಾದರಿ-1ರಡಿ) ರಿಯಾಯಿತಿದಾರರನ್ನು ಆಯ್ಕೆ ಮಾಡಲು ಮನವಿ ಪ್ರಸ್ತಾಪ ಮಾದರಿ (ಮಾಡಲ್ ಫಾರ್ ರಿಕ್ವೆಸ್ಟ್- ಆರ್ ಎಫ್ ಪಿ), ಮಾದರಿ-2 ರಡಿ ಸಂಸ್ಥೆಗಳ ಹೆಸರುಗಳನ್ನು ಅಂತಿಮಗೊಳಿಸಲು ಕರಡು ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ) ಮತ್ತು ಮತ್ತೆ ಮತ್ತೆ ಕೇಳಲಾಗುವ ಪ್ರಶ್ನೆಗಳಿಗೆ (ಪ್ರಶ್ನೋತ್ತರ-ಎಫ್ಎ ಕ್ಯೂ) ಅನ್ನು 2020 ಜುಲೈ31ರಂದೇ ಬಿಡುಗಡೆ ಮಾಡಲಾಗಿತ್ತು.

ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ದೇಶದಲ್ಲಿ ನಗರ ಪ್ರದೇಶಗಳಲ್ಲಿ ಬಡವರು/ ಕಾರ್ಮಿಕರು ಭಾರಿ ಪ್ರಮಾಣದಲ್ಲಿ ವಲಸೆ ಹೋಗಿದ್ದಾರೆ. ಇದು ವಸತಿ ಸಮಸ್ಯೆಯನ್ನು ಮುನ್ನೆಲೆಗೆ ತಂದಿದೆ. ಗೌರವಾನ್ವಿತ ಪ್ರಧಾನಮಂತ್ರಿಯವರಆತ್ಮನಿರ್ಭರ ಭಾರತಕರೆಗೆ ಪೂರಕವಾಗಿ, ಕೇಂದ್ರ ಸಚಿವ ಸಂಪುಟ ನಗರ ಪ್ರದೇಶಗಳಲ್ಲಿನ ಬಡವರು/ವಲಸೆ ಕಾರ್ಮಿಕರ ಜೀವನ ಸುಗಮಗೊಳಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ)ದಡಿ ಕೈಗೆಟುಕುವ ದರದಲ್ಲಿ ಬಾಡಿಗೆ ವಸತಿ ಸಂಕೀರ್ಣ (ಎಆರ್ ಎಚ್ ಸಿ) ಎಂಬ ಉಪಯೋಜನೆಗೆ 2020 ಜು.8ರಂದು ಅನುಮೋದನೆ ನೀಡಿತ್ತು.

ಎಆರ್ ಎಚ್ ಸಿ ಯೋಜನೆಯನ್ನು ಕೇಂದ್ರದ ಎಲ್ಲ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಮತ್ತು ಸಾರ್ವಜನಿಕ ಪಾಲುದಾರರೊಂದಿಗೆ ಸರಣಿ ಸಮಾಲೋಚನೆ ನಡೆಸಿದ ನಂತರ ರೂಪಿಸಲಾಗಿದೆ. ಎಆರ್ ಎಚ್ ಸಿ ಅನುಷ್ಠಾನಕ್ಕೆ ಎಲ್ಲ ಸಂಬಂಧಿಸಿದವರಿಗೆ ಬೆಂಬಲ ನೀಡಲು ಎಕೆಪಿಯನ್ನು (ಜ್ಞಾನದ ಪ್ಯಾಕ್ )ನ್ನಾಗಿ ಒದಗಿಸಲಾಗಿದೆ. ಯೋಜನೆಯ ಯಶಸ್ವಿ ಅನುಷ್ಠಾನದಿಂದ ಕೇವಲ ನಗರ ಪ್ರದೇಶದ ಬಡವರು/ವಲಸೆ ಕಾರ್ಮಿಕರಿಗೆ ಮಾತ್ರ ಉಪಯೋಗವಾಗುವುದಿಲ್ಲ, ಬಾಡಿಗೆ ವಸತಿ ಮಾರುಕಟ್ಟೆಯಲ್ಲಿ ಹೂಡಿಕೆಗೆ ಮತ್ತು ಉದ್ಯಮಗಳ ಉತ್ತೇಜನ ದೊರಕಲಿದೆ ಹಾಗೂ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಇದು ಪರಸ್ಪರ ಎಲ್ಲರಿಗೂ ಪ್ರಯೋಜನವಾಗಲಿದ್ದು, ಖಾಸಗಿ ಸಂಸ್ಥೆಗಳಿಂದ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ.

ಎಆರ್ ಎಚ್ ಸಿ ಯನ್ನು ಎರಡು ಮಾದರಿಗಳ ಮೂಲಕ ಅನುಷ್ಠಾನಗೊಳಿಸಲಾಗುವುದು.

ಮಾದರಿ-1: ಸರ್ಕಾರದ ನಿಧಿ ಬಳಸಿ ನಿರ್ಮಿಸಿರುವ ಹಾಲಿ ಖಾಲಿ ಇರುವ ವಸತಿಗಳನ್ನು ಎಆರ್ ಎಚ್ ಸಿ ಗಳನ್ನಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 25 ವರ್ಷಗಳವರಗೆ ಒಪ್ಪಂದ ಮಾಡಿಕೊಂಡು ಪರಿವರ್ತನೆ ಮಾಡಬಹುದು. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಾನಾ ಯೋಜನೆಗಳಡಿ ನಿರ್ಮಿಸಿರುವ ಖಾಲಿ ಇರುವ ವಸತಿಗಳನ್ನು ಎಆರ್ ಎಚ್ ಸಿಗಳನ್ನಾಗಿ ಪರಿವರ್ತಿಸಲು ಅವಕಾಶ ನೀಡಲಿದೆ. ಮಾದರಿ ಆರ್ ಎಫ್ ಪಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ವಿತರಣೆ ಮಾಡಲು ಫಲಾನುಭವಿಗಳ ಆಯ್ಕೆಗೆ ಎಲ್ಲ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಮಾದರಿ-2: ಇದರಲ್ಲಿ ಖಾಸಗಿ/ಸಾರ್ವಜನಿಕ ಸಂಸ್ಥೆಗಳು ತಮ್ಮ ಖಾಲಿ ಜಾಗದಲ್ಲಿ 25 ವರ್ಷಗಳ ಅವಧಿಗೆ ತಾವೇ ನಿರ್ಮಾಣ ಮಾಡಿ, ಕಾರ್ಯಾಚರಣೆ ನಡೆಸಿ, ನಿರ್ವಹಣೆ ಮಾಡಲು ಅವಕಾಶವಿದೆ. ನಾನಾ ಕೈಗಾರಿಕಾ ಸಂಸ್ಥೆಗಳು, ವ್ಯಾಪಾರಿ ಒಕ್ಕೂಟಗಳು, ಉತ್ಪಾದನಾ ಕಂಪನಿಗಳು, ಶಿಕ್ಷಣ/ಆರೋಗ್ಯ ಸಂಸ್ಥೆಗಳು, ಅಭಿವೃದ್ಧಿ ಪ್ರಾಧಿಕಾರಿಗಳು, ವಸತಿ ನಿಗಮಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಒಡೆತನದ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಿಗೆ ಸೇರಿದ ಭೂಮಿ ಬಳಕೆಯಾಗದೆ ಖಾಲಿಯೇ ಇದೆ.

ಅಂತಹ ಸಂಸ್ಥೆಗಳಿಗೆ ಸೂಕ್ತ ನೀತಿ ಬೆಂಬಲ, ಸೂಕ್ತ ವಿಧಾನಗಳು ಮತ್ತು ರಿಯಾಯಿತಿಗಳನ್ನು ನೀಡಿ ಬಡವರು/ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯಗಳನ್ನು ಕೈಗೆಟುಕುವ ದರದಲ್ಲಿ ಅಭಿವೃದ್ಧಿಪಡಿಸಲು ಖಾಲಿ ಜಾಗಗಳನ್ನು ಸರ್ಮಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ, ತಮ್ಮದೇ ಜಾಗದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಎಆರ್ ಎಚ್ ಸಿಗಳನ್ನು ನಿರ್ಮಿಸಲು, ನಿರ್ವಹಣೆ ಮಾಡಲು ಎಂಎಚ್ ಯುಎ ಆಸಕ್ತಿ ವ್ಯಕ್ತಪಡಿಸುವುದನ್ನು ಕರೆಯಲಿದ್ದು, ವೇಳೆ ಸಂಸ್ಥೆಗಳ ಪಟ್ಟಿಯನ್ನು ಮಾಡಲಿದೆ.

ಇದನ್ನು ಸಂಸ್ಥೆಗಳಿಗೆ ಆಕರ್ಷಕ ಮತ್ತು ಕಾರ್ಯಸಾಧುವಾದ ವಾಣಿಜ್ಯ ಅವಕಾಶವನ್ನಾಗಿ ಮಾಡಲು ಕೇಂದ್ರ ಸರ್ಕಾರ ಕೈಗೆಟುಕುವ ವಸತಿ ನಿಧಿ (ಎಎಚ್ ಎಫ್ ) ಮತ್ತು ಆದ್ಯತಾ ವಲಯದ ಸಾಲ(ಪಿಎಸ್ ಎಲ್ ) ನಿಂದ ರಿಯಾಯಿತಿ ದರದಲ್ಲಿ ಹಣಕಾಸು ಸೌಲಭ್ಯ ಒದಗಿಸಲಿದೆ ಮತ್ತು ಆದಾಯತೆರಿಗೆ ಮತ್ತು ಜಿಎಸ್ ಟಿಯಿಂದ ವಿನಾಯ್ತಿ ನೀಡಲಾಗಿದೆ ಹಾಗೂ ಎಆರ್ ಎಚ್ ಸಿಗಳಲ್ಲಿ ನಾವಿನ್ಯ ತಂತ್ರಜ್ಞಾನಗಳ ಬಳಕೆಗೆ ಉತ್ತೇಜನ ನೀಡಲು ತಾಂತ್ರಿಕ ಆನ್ವೇಷಣಾ ನಿಧಿಯಿಂದಲೂ ಸಹ ಅನುದಾನ ನೀಡಲಾಗುವುದು. ಅಲ್ಲದೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಳಕೆದಾರರ ಅನುಮತಿ ಬದಲಾವಣೆಗೆ ಅವಕಾಶ ನೀಡಲಿವೆ, ಶೇ.50ರಷ್ಟು ಹೆಚ್ಚುವರಿ ಎಫ್ ಎಆರ್/ಎಫ್ ಎಸ್ ಅನ್ನು ಉಚಿತವಾಗಿ ನೀಡಲಾಗುವುದು, 30 ದಿನಗಳಲ್ಲಿ ಏಕಗವಾಕ್ಷಿ ಯೋಜನೆಯಡಿ ಅನುಮೋದನೆಗಳನ್ನು ನೀಡಲಾಗುವುದು, ಬೃಹತ್ ಪ್ರಮಾಣದಲ್ಲಿ ಮೂಲಸೌಕರ್ಯ ವೃದ್ಧಿ ಮಾಡಲಾಗುವುದು, ಮುನಿಸಿಪಲ್ ಶುಲ್ಕ ಸಾಮಾನ್ಯ ವಸತಿಗಳಿಗೆ ಇರುವಂತೆಯೇ ಇರಲಿದೆ.

ಇದೇ ವೇಳೆ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು, ಪಿಎಂಎವೈ-(ಯು) ಫಲನಾನುಭವಿಗಳನ್ನು ಮೂರು ಸಿ ಕಾರ್ಯತಂತ್ರದ ಸಿ-ಸಮುದಾಯದ ಸಹಭಾಗಿತ್ವ (ಕಮ್ಯುನಿಟಿ ಎಂಜೇಗ್ ಮೆಂಟ್ ) ಸಿ-ಸಮನ್ವಯತೆ (ಕನ್ವರ್ಜನ್ಸ್ ) ಮತ್ತು ಸಂವಹನ (ಕಮ್ಯುನಿಕೇಷನ್ ) ನಡವಳಿಕೆ ಬದಲಿಸುವ ಅಂಗೀಕಾರ್ ಕುರಿತ ರಾಷ್ಟ್ರೀಯ ವರದಿಯನ್ನೂ ಸಹ ಬಿಡುಗಡೆ ಮಾಡಿದರು. ವರದಿ ಅಭಿಯಾನದಡಿ ನಡೆಸಿದ ನಾನಾ ಚಟುವಟಿಕೆಗಳ ಕುರಿತು ಒಳಗೊಂಡಿದೆ. ಅಭಿಯಾನ ಈವರೆಗೆ ಸಾಗಿ ಬಂದಿರುವ ಪಯಣವನ್ನು ತೋರಿಸುವ ಕಿರು ಚಿತ್ರಅಂಗೀಕಾರ್ 2019” ಸ್ಮರಣೆಯನ್ನು ಬಿಡುಗಡೆ ಮಾಡಲಾಯಿತು.

ಗೌರವಾನ್ವಿತ ಪ್ರಧಾನಮಂತ್ರಿಗಳು ಪಿಎಂಎವೈ(ಯು) ಅಡಿಯಲ್ಲಿ ಎಲ್ಲ ಮೂಲಸೌಕರ್ಯಗಳನ್ನು ಒಳಗೊಂಡ 2022ರೊಳಗೆಸರ್ವರಿಗೂ ಸೂರು’’ ಒದಗಿಸುವ ಸಂಕಲ್ಪ ಮಾಡಿದ್ದಾರೆ ಮತ್ತು ಮೂಲಕ ಫಲಾನುಭವಿಗಳು ಪಕ್ಕಾ ಮನೆಗೆ ಸ್ಥಳಾಂತರಗೊಂಡಾಗ ಜೀವನದಲ್ಲಿ ಆಗುವ ಬದಲಾದಣೆಗಳನ್ನು ಎದುರಿಸಲು ಒತ್ತು ನೀಡಲಾಗುತ್ತಿದೆ. ಅವರ ದೂರದೃಷ್ಟಿಗೆ ಅನುಗುಣವಾಗಿ 2019 ಆಗಸ್ಟ್ 29ರಂದು ಅಂಗೀಕಾರ್ಅಭಿಯಾನವನ್ನು ಆರಂಭಿಸಲಾಗಿತ್ತು.

ಅಂಗೀಕಾರ್ ಅಭಿಯಾನದ ದೇಯೋದ್ದೇಶ ಮತ್ತು ಗುರಿಗಳು ಗಾಂಧಿಯ ತತ್ವಗಳಾದ ಸ್ವಚ್ಛತೆ, ನೈರ್ಮಲ್ಯ ಮತ್ತು ಶುಚಿತ್ವ. ಹೊಸ ಪರಿಸರದಲ್ಲಿ ಎಲ್ಲ ಸೌಕರ್ಯಗಳನ್ನು ಫಲಾನುಭವಿಗಳಿಗೆ ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ. ಅಲ್ಲದೆ, ನಗರಾಭಿವೃದ್ಧಿ ಯೋಜನೆಗಳು ಹಾಗೂ ಇತರೆ ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು ಸಾಮಾಜಿಕ ನಡವಳಿಕೆ ಬದಲಾವಣೆಗೆ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಲವು ಕೇಂದ್ರ ಸಚಿವಾಲಯದ ಯೋಜನೆಗಳು ಮತ್ತು ನಗರಾಭಿವೃದ್ಧಿ ಯೋಜನೆಗಳನ್ನು ಒಗ್ಗೂಡಿಸಿಕೊಂಡು ಫಲಾನುಭವಿಗಳಿಗೆ ನಾನಾ ಸೇವೆಗಳನ್ನು ನೀಡಬಹುದು. ಸುಮಾರು 20ಲಕ್ಷಕ್ಕೂ ಅಧಿಕ ಫಲಾನುಭವಿಗಳು ನಾನಾ ಯೋಜನೆಗಳ ಲಾಭವನ್ನು ಪಡೆದುಕೊಂಡಿದ್ದಾರೆ ಮತ್ತು ಅತ್ಯುತ್ತಮ ಆರೋಗ್ಯ ಪದ್ದತಿ, ನೈರ್ಮಲ್ಯ, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಉತ್ತಮ ಪರಿಸರ, ನೀರು ಮತ್ತು ಇಂಧನ ಸಂರಕ್ಷಣೆ ಸೇರಿ ಹಲವು ಪದ್ದತಿಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಪಿಎಂಎವೈ(ಯು) ಅಡಿಯಲ್ಲಿ 4427 ನಗರಗಳಲ್ಲಿ ಸುಮಾರು 2,200 ನಗರ ಮಟ್ಟದ ತಾಂತ್ರಿಕ ಕೋಶದ ತಜ್ಞರಿಂದ 18,500 ಅಂಗೀಕಾರ್ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ. ಅಭಿಯಾನದಿಂದ ನಡವಳಿಕೆಯಲ್ಲಿ ಬದಲಾವಣೆ ಆಗಿರುವುದು ಮಾತ್ರವಲ್ಲದೆ, ಕೋವಿಡ್-19 ಸಾಂಕ್ರಾಮಿಕ ಸ್ಥಿತಿಯಿಂದ ಎದುರಾಗಿರುವ ಸಮಸ್ಯೆಗಳ ನಿವಾರಣೆಗೂ ಸಹ ಸಹಕಾರಿಯಾಗಿವೆ.

***


(Release ID: 1664671) Visitor Counter : 289