ಪ್ರಧಾನ ಮಂತ್ರಿಯವರ ಕಛೇರಿ

ಸ್ವಮಿತ್ವ ಯೋಜನೆಯಡಿ ಆಸ್ತಿ ಕಾರ್ಡ್‌ಗಳ ಭೌತಿಕ ವಿತರಣೆಯ ಮಹತ್ವದ ಕಾರ್ಯಕ್ರಮ


ಅಕ್ಟೋಬರ್ 11 ರಂದು ಚಾಲನೆ ನೀಡಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ

ಗ್ರಾಮೀಣ ಭಾರತದ ಮೇಲೆ ಪರಿವರ್ತಕ ಪರಿಣಾಮ ಮತ್ತು ನಾಲ್ಕು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ 6.62 ಲಕ್ಷ ಗ್ರಾಮಗಳು ಯೋಜನೆಯ ವ್ಯಾಪ್ತಿಗೆ

ಗ್ರಾಮಸ್ಥರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಿಕೊಳ್ಳಲು ದಾರಿ ಮಾಡಿಕೊಡುತ್ತದೆ

Posted On: 09 OCT 2020 1:26PM by PIB Bengaluru

ಗ್ರಾಮೀಣ ಭಾರತದಲ್ಲಿ ಪರಿವರ್ತನೆ ಮತ್ತು ಲಕ್ಷಾಂತರ ಭಾರತೀಯರ ಸಬಲೀಕರಣಕ್ಕೆ ಕಾರಣವಾಗುವ ಐತಿಹಾಸಿಕ ಕ್ರಮವಾದ ಸ್ವಾಮಿತ್ವ ಯೋಜನೆಯಡಿ ಆಸ್ತಿ ಕಾರ್ಡ್ಗಳ ಭೌತಿಕ ವಿತರಣೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಕ್ಟೋಬರ್ 11 ರಂದು ಚಾಲನೆ ನೀಡಲಿದ್ದಾರೆ.

ಯೋಜನೆಯ ಚಾಲನೆಯಿಂದಾಗಿ ಸುಮಾರು ಒಂದು ಲಕ್ಷ ಆಸ್ತಿ ಮಾಲೀಕರು ತಮ್ಮ ಮೊಬೈಲ್ ಎಸ್ಎಂಎಸ್ ಲಿಂಕ್ ಮೂಲಕ ತಮ್ಮ ಆಸ್ತಿ ಕಾರ್ಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರ ನಂತರ ಆಯಾ ರಾಜ್ಯ ಸರ್ಕಾರಗಳು ಆಸ್ತಿ ಕಾರ್ಡ್ಗಳನ್ನು ಭೌತಿಕವಾಗಿ ವಿತರಿಸುತ್ತವೆ. ಆರು ರಾಜ್ಯಗಳ 763 ಗ್ರಾಮಗಳ ಜನರು ಫಲಾನುಭವಿಗಳಾಗಿದ್ದಾರೆ. ಇದರಲ್ಲಿ ಉತ್ತರ ಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44, ಉತ್ತರಾಖಂಡದ 50 ಮತ್ತು ಕರ್ನಾಟಕದಿ 2 ಹಳ್ಳಿಗಳು ಸೇರಿವೆ. ಮಹಾರಾಷ್ಟ್ರವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳ ಫಲಾನುಭವಿಗಳು ಒಂದೇ ದಿನದಲ್ಲಿ ಆಸ್ತಿ ಕಾರ್ಡ್ಗಳ ಭೌತಿಕ ಪ್ರತಿಗಳನ್ನು ಸ್ವೀಕರಿಸುತ್ತಾರೆ. ಮಹಾರಾಷ್ಟ್ರವು ಆಸ್ತಿ ಕಾರ್ಡ್ ಅತ್ಯಲ್ಪ ವೆಚ್ಚವನ್ನು ಪಡೆಯುವ ವ್ಯವಸ್ಥೆಯನ್ನು ಹೊಂದಿದ್ದು, ಇದು ಕಾರ್ಡ್ ವಿತರಿಸಲು ಒಂದು ತಿಂಗಳ ಸಮಯ ತೆಗೆದುಕೊಳ್ಳುತ್ತದೆ.

ಸಾಲ ಮತ್ತು ಇತರ ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಗ್ರಾಮಸ್ಥರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಕ್ರಮವು ದಾರಿ ಮಾಡಿಕೊಡುತ್ತದೆ. ಅಲ್ಲದೆ, ಲಕ್ಷಾಂತರ ಗ್ರಾಮೀಣ ಆಸ್ತಿ ಮಾಲೀಕರಿಗೆ ಅನುಕೂಲ ಕಲ್ಪಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಇಷ್ಟು ದೊಡ್ಡ ಪ್ರಮಾಣದ ಕ್ರಮ ಇದೇ ಮೊದಲಾಗಿದೆ.

ಸಂದರ್ಭದಲ್ಲಿ ಪ್ರಧಾನಿ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಂದರ್ಭದಲ್ಲಿ ಕೇಂದ್ರ ಪಂಚಾಯತಿ ರಾಜ್ ಸಚಿವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ.

ಸ್ವಮಿತ್ದದ ಬಗ್ಗೆ

ಸ್ವಮಿತ್ವ ಪಂಚಾಯತಿ ರಾಜ್ ಸಚಿವಾಲಯದ ಕೇಂದ್ರ ವಲಯ ಯೋಜನೆಯಾಗಿದ್ದು, ಇದಕ್ಕೆ ಪ್ರಧಾನ ಮಂತ್ರಿಯವರು ಏಪ್ರಿಲ್ 24, 2020 ರಂದು ರಾಷ್ಟ್ರೀಯ ಪಂಚಾಯತಿ ರಾಜ್ ದಿನಾಚರಣೆಯಂದು ಚಾಲನೆ ನೀಡಿದರು. ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ 'ಹಕ್ಕುಗಳ ದಾಖಲೆಯನ್ನು' ಒದಗಿಸುವ ಮತ್ತರು ಆಸ್ತಿ ಕಾರ್ಡ್ಗಳು ವಿತರಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.

ಯೋಜನೆಯನ್ನು ನಾಲ್ಕು ವರ್ಷಗಳ (2020-2024) ಅವಧಿಯಲ್ಲಿ ಹಂತಹಂತವಾಗಿ ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ ಮತ್ತು ಅಂತಿಮವಾಗಿ ದೇಶದ ಸುಮಾರು 6.62 ಲಕ್ಷ ಗ್ರಾಮಗಳನ್ನು ಿದು ಒಳಗೊಳ್ಳುತ್ತದೆ. ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಾಖಂಡ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸುಮಾರು 1 ಲಕ್ಷ ಗ್ರಾಮಗಳು ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಗಡಿ ಗ್ರಾಮಗಳು, ಜೊತೆಗೆ ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ನಿರಂತರ ಕಾರ್ಯಾಚರಣಾ ವ್ಯವಸ್ಥೆ (ಸಿಒಆರ್ಎಸ್) ಕೇಂದ್ರ ಜಾಲಗಳು ಪೈಲಟ್ ಹಂತದಲ್ಲಿ (2020-21) ಸೇರಿವೆ.

ಎಲ್ಲಾ ಆರು ರಾಜ್ಯಗಳು ಗ್ರಾಮೀಣ ಪ್ರದೇಶಗಳ ಡ್ರೋನ್ ಸಮೀಕ್ಷೆ ಮತ್ತು ಯೋಜನೆಯ ಅನುಷ್ಠಾನಕ್ಕಾಗಿ ಸರ್ವೆ ಆಫ್ ಇಂಡಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿವೆ. ರಾಜ್ಯಗಳು ಡಿಜಿಟಲ್ ಆಸ್ತಿ ಕಾರ್ಡ್ ಸ್ವರೂಪ ಮತ್ತು ಡ್ರೋನ್ ಆಧಾರಿತ ಸಮೀಕ್ಷೆಗೆ ಒಳಪಡಬೇಕಾದ ಗ್ರಾಮಗಳನ್ನು ಅಂತಿಮಗೊಳಿಸಿವೆ. ಭವಿಷ್ಯದ ಡ್ರೋನ್ ಹಾರಾಟ ಚಟುವಟಿಕೆಗಳಿಗೆ ಸಹಾಯ ಮಾಡಲು CORS ನೆಟ್ವರ್ಕ್ ಸ್ಥಾಪನೆಗಾಗಿ ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳು ಸರ್ವೆ ಆಫ್ ಇಂಡಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿವೆ.

ವಿವಿಧ ರಾಜ್ಯಗಳು ಆಸ್ತಿ ಕಾರ್ಡ್ಗಳಿಗೆ ವಿಭಿನ್ನ ನಾಮಕರಣ ಮಾಡಿವೆ. ಹರಿಯಾಣದಲ್ಲಿದಾಖಲೆ ಪತ್ರ, ಕರ್ನಾಟಕದಲ್ಲಿಗ್ರಾಮೀಣ ಆಸ್ತಿ ಮಾಲೀಕತ್ವದ ದಾಖಲೆಗಳು (ಆರ್ಪಿಒಆರ್)’, ಮಧ್ಯಪ್ರದೇಶದಲ್ಲಿಅಧಿಕಾರ ಅಭಿಲೇಖ್, ಮಹಾರಾಷ್ಟ್ರದಲ್ಲಿಸನ್ನಾದ್, ಉತ್ತರಾಖಂಡದಲ್ಲಿಸ್ವಾಮಿತ್ವ ಅಭಿಲೇಖ್, ಉತ್ತರಪ್ರದೇಶದಘರೌನಿಎಂದು ಹೆಸರಿಸಲಾಗಿದೆ.

***


(Release ID: 1663146) Visitor Counter : 421