ಪ್ರಧಾನ ಮಂತ್ರಿಯವರ ಕಛೇರಿ

ಹಿಮಾಚಲ ಪ್ರದೇಶದ ಸೊಲಾಂಗ್ ನಲ್ಲಿ ಅಭಿನಂದನ್ ಸಭಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 03 OCT 2020 5:07PM by PIB Bengaluru

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ರಾಜ್ ನಾಥ್ ಸಿಂಗ್ ಜೀ, ಹಿಮಾಚಲ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಭಾಯಿ ಜೈ ರಾಮ್ ಠಾಕೂರ್ ಜೀ, ಹಿಮಾಚಲದ ಸಂಸತ್ ಸದಸ್ಯರು ಮತ್ತು ಕೇಂದ್ರ ಸರಕಾರದಲ್ಲಿ ನನ್ನ ಸಹೋದ್ಯೋಗಿಯಾಗಿರುವ, ಹಿಮಾಚಲದ ಯುವಕ ಶ್ರೀ ಅನುರಾಗ್ ಠಾಕೂರ್ ಜೀ, ಹಿಮಾಚಲ ಸರಕಾರದ ಸಚಿವರಾದ ಭಾಯಿ ಗೋವಿಂದ ಠಾಕೂರ್ ಜೀ, ಇತರ ಸಚಿವರೇ, ಸಂಸತ್ ಸದಸ್ಯರೇ, ಶಾಸಕರೇ, ಸಹೋದರಿಯರೇ ಮತ್ತು ಸಹೋದರರೇ

ನಮ್ಮ ಪೂಜ್ಯ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಕನಸಾದ ಈ ಸುರಂಗದ ಕೊಡುಗೆಗಾಗಿ ಕುಲ್ಲು, ಲಾಹೌಲ್, ಲೇಹ್ ಮತ್ತು ಲಡಾಖಿನ ಎಲ್ಲಾ ಜನತೆಗೆ ಬಹಳ ಬಹಳ ಅಭಿನಂದನೆಗಳು.

ಹಿಡಿಂಭಾ ತಾಯಿಯ ದೈವೀ ನೆಲಕ್ಕೆ ನಾನು ಶಿರಬಾಗಿ ನಮಿಸುತ್ತೇನೆ. ಪ್ರತೀ ಗ್ರಾಮದಲ್ಲಿಯೂ ಮುನಿಗಳ , ದೇವ ದೇವತೆಗಳ ರೋಮಾಂಚಕ ಮತ್ತು ವಿಶಿಷ್ಟ ಸಂಪ್ರದಾಯಗಳಿವೆ, ಕಥೆಗಳಿವೆ. ಮತ್ತು ಕಾಂಚನಗಂಗಾದ ಈ ನೆಲ...ನಮ್ಮ ಮುಖ್ಯಮಂತ್ರಿ ಜೈರಾಮ್ ಜೀ ಅವರು ನನ್ನ ಪ್ಯಾರಾಗ್ಲೈಡಿಂಗ್ ಹವ್ಯಾಸದ ಬಗ್ಗೆ ಪ್ರಸ್ತಾಪಿಸಿದರು. ಹಾರಾಟ ನಡೆಸುವುದು ಬಹಳ ಸುಂದರವಾಗಿ ಕಾಣುತ್ತದೆ, ಆದರೆ ಇಡೀಯ ಕಿಟ್ ಹೊತ್ತುಕೊಂಡು ನಡೆಯುವಾಗ ನನಗೆ ಶ್ವಾಸೋಚ್ಚಾಸದ ಸಮಸ್ಯೆ ಎದುರಾಗುತ್ತಿತ್ತು. ಮತ್ತು ಒಮ್ಮೆ ಇಂತಹದ್ದು ಸಂಭವಿಸಿದ ನಂತರ ಜಗತ್ತಿನಲ್ಲಿ ಇನ್ಯಾರಾದರೂ ಅದನ್ನು ಮಾಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅಟಲ್ ಜೀ ಅವರು ಮನಾಲಿಗೆ ಬಂದಿದ್ದರು. ನಾನು ಸಂಘಟನೆಯ ಉಸ್ತುವಾರಿ ವಹಿಸಿಕೊಂಡದ್ದರಿಂದ ಸ್ವಲ್ಪ ಬೇಗ ಬಂದಿದ್ದೆ. ನಾವು ಕಾರ್ಯಕ್ರಮ ಆಯೋಜಿಸಿದ್ದೆವು. ಅಟಲ್ ಜೀ ಬರುತ್ತಿದ್ದಂತೆ , 11 ಪ್ಯಾರಾಗ್ಲೈಡರುಗಳು ಮತ್ತು ಪೈಲೆಟ್ ಗಳು ಮನಾಲಿಯ ಆಕಾಶದಿಂದ ಅವರ ಮೇಲೆ ಹೂಮಳೆಗರೆದರು. ಪ್ಯಾರಾಗ್ಲೈಡಿಂಗ್ ನ್ನು ವಿಶ್ವದಲ್ಲಿ ಎಲ್ಲಿಯೂ ಈ ರೀತಿಯಲ್ಲಿ ಬಳಕೆ ಮಾಡಿರಲಿಕ್ಕಿಲ್ಲ. ಆದರೆ ನಾನು ಸಂಜೆ ಅಟಲ್ ಜೀ ಅವರನ್ನು ಭೇಟಿಯಾಗಲು ಹೋದಾಗ , ನಾನು ಯಾಕೆ ಇಂತಹ ಸಾಹಸಗಳನ್ನು ಮಾಡುತ್ತೇನೆ ಎಂದು ಕೇಳಿದರು. ಆದರೆ ನನ್ನ ಮನಾಲಿಯ ದಿನಗಳಲ್ಲಿ ಇದು ಬಹಳ ಸ್ಮರಣೀಯವಾಗಿತ್ತು , ವಾಜಪೇಯಿ ಜೀ ಅವರನ್ನು ಪ್ಯಾರಾಗ್ಲೈಡಿಂಗ್ ಮೂಲಕ ಹೂಮಳೆಗರೆದು ಸ್ವಾಗತ ಮಾಡುವ ಚಿಂತನೆಯೇ ಬಹಳ ರೋಮಾಂಚಕಾರಿಯಾಗಿತ್ತು.

ಅಟಲ್ ಸುರಂಗ ಉದ್ಘಾಟನೆಯಾದುದಕ್ಕೆ ಹಿಮಾಚಲ ಪ್ರದೇಶದ ನನ್ನ ಪ್ರೀತಿಯ ಸಹೋದರರಿಗೆ ಮತ್ತು ಸಹೋದರಿಯರಿಗೆ ಅನೇಕಾನೇಕ ಅಭಿನಂದನೆಗಳು. ನಾನು ಈ ಮೊದಲು ಹೇಳಿದಂತೆ , ಸಾರ್ವಜನಿಕ ಸಭೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಸಮರ್ಪಕವಾಗಿ ಆಯೋಜಿಸಿರುವುದನ್ನು ಇಲ್ಲಿ ಕಾಣಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ಕೈಗಳನ್ನು ಮೇಲೆತ್ತಿ ಶುಭಾಶಯ ಹೇಳುತ್ತಿರುವ ಜನತೆಯ ಅಭಿನಂದನೆಯನ್ನು ಸ್ವೀಕರಿಸುವ ಅವಕಾಶ ನನಗೆ ಬಂದಿದೆ. ಇದು ನನಗೆ ಬಹಳ ಪರಿಚಿತ ಪ್ರದೇಶ. ನಾನು ಯಾವುದೇ ಸ್ಥಳದಲ್ಲಿ ಬಹಳ ಧೀರ್ಘ ಕಾಲ ಉಳಿಯುವ ಮನುಷ್ಯ ಅಲ್ಲ. ನಾನು ಬಿರುಗಾಳಿ ಪ್ರವಾಸ ಮಾಡುವವನು. ಆದರೆ ಅಟಲ್ ಜೀ ಅವರು ಇಲ್ಲಿಗೆ ಭೇಟಿ ನೀಡಿದಾಗ ಅವರು ಇಲ್ಲಿ ತಂಗಿರುವಷ್ಟು ಕಾಲ ನಾನು ಇಲ್ಲೇ ಇರುತ್ತಿದ್ದೆ. ನಾನು ನಿಮ್ಮೆಲ್ಲರೊಂದಿಗಿನ ನಿಕಟ ಬಾಂಧವ್ಯದ ಅನುಭವ ಪಡೆದಿದ್ದೇನೆ. ಅಲ್ಲಿ ಹಿಮಾಚಲ ಪ್ರದೇಶ ಮತ್ತು ಮನಾಲಿ ಅಭಿವೃದ್ದಿ ಕುರಿತಂತೆ ಅವರೊಂದಿಗೆ ಚರ್ಚೆಗಳಾಗುತ್ತಿದ್ದವು.

ಅಟಲ್ ಜೀ ಅವರು ಮೂಲಸೌಕರ್ಯ, ಸಂಪರ್ಕ ಮತ್ತು ಈ ವಲಯದ ಪ್ರವಾಸೋದ್ಯಮದ ಬಗ್ಗೆ ಬಹಳ ಕಾಳಜಿ ಹೊಂದಿದ್ದರು.

ಅವರು ಆಗಾಗ ತಮ್ಮ ಜನಪ್ರಿಯ ಕವನವನ್ನು ಮೆಲುಕು ಹಾಕುತ್ತಿದ್ದರು. ಅವರು ಕವನ ಓದುತ್ತಿದ್ದುದನ್ನು ಹಲವಾರು ಬಾರಿ ಮನಾಲಿಯ ಜನತೆ ಕೇಳಿದ್ದಾರೆ . ಅಟಲ್ ಜೀ ಅವರು ಇಲ್ಲಿದ್ದಾಗ ಮನೆಯಲ್ಲಿದ್ದಂತೆ ಇರುತ್ತಿದ್ದರು ಮತ್ತು ಪಾರಿಣಿ ಗ್ರಾಮದಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದರು ಹಾಗು ಇಲ್ಲಿಯ ಜನತೆಯನ್ನು ಅವರು ಪ್ರೀತಿಸುತ್ತಿದ್ದರು ಮತ್ತು ಹಾಗಾಗಿ ಅವರು ತಮ್ಮ ಕವನವನ್ನು ಹಂಚಿಕೊಳ್ಳುತ್ತಿದ್ದರು.

मनाली मत जइयो,

राजा के राज में।

जइयो तो जइयो,

उड़िके मत जइयो,

अधर में लटकीहौ,

वायुदूत के जहाज़ में।

जइयो तो जइयो,

सन्देसा न पइयो,

टेलिफोन बिगड़े हैं,

मिर्धा महाराज में।

ಮನಾಲಿಗೆ ಹೋಗಬೇಡ;

ದೊರೆಯ ರಾಜ್ಯದಲ್ಲಿ

ನಿನಗೆ ಹೋಗಬೇಕೆಂದಿದ್ದರೆ

ಗಾಳಿಯ ಮೂಲಕ ಹೋಗಬೇಡ

ನೀನು ಅಲ್ಲೇ ಉಳಿಯಬೇಕಾಗುತ್ತದೆ

ವಿಮಾನದಲ್ಲಿ

ನೀನು ಹೋಗಬೇಕೆಂದಿದ್ದರೆ

ನಿನಗೆ ಯಾವುದೇ ಸಂದೇಶ ಸಿಗುವುದಿಲ್ಲ

ದೂರವಾಣಿಗಳು ಸತ್ತಿರುತ್ತವೆ

ಮಿರ್ಧಾ ದೊರೆಯ ಆಡಳಿತದಲ್ಲಿ

ಸ್ನೇಹಿತರೇ,

ಅಟಲ್ ಜೀ ಅವರು ಮನಾಲಿಯನ್ನು ಬಹಳ ಇಷ್ಟಪಡುತ್ತಿದ್ದರು. ಇಲ್ಲಿಯ ಪರಿಸ್ಥಿತಿ ಬದಲಾಗಬೇಕು ಎಂಬ ಪ್ರಬಲೇಚ್ಛೆಯನ್ನು ಅವರು ಹೊಂದಿದ್ದರು. ಸಂಪರ್ಕ ಸುಧಾರಿಸಬೇಕು ಎಂಬ ಆಶಯ ಅವರಿಗಿತ್ತು. ಈ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ರೋಹ್ಟಾಂಗ್ ನಲ್ಲಿ ಸುರಂಗ ನಿರ್ಮಿಸಲು ಅವರು ನಿರ್ಧರಿಸಿದರು.

ಅಟಲ್ ಜೀ ಅವರ ಕನಸು ಇಂದು ನನಸಾದುದಕ್ಕೆ ನಾನು ಬಹಳ ಸಂತೋಷಪಡುತ್ತೇನೆ. ಈ ಸುರಂಗವು ಪರ್ವತದ ಬಹಳ ದೊಡ್ಡ ಭಾರವನ್ನು ಹೊತ್ತಿದೆ. (ಈ ಸುರಂಗದ ಮೇಲೆ ಎರಡು ಕಿಲೋಮೀಟರಿನಷ್ಟು ಎತ್ತರದ ಪರ್ವತವಿದೆ. ) ಒಂದೊಮ್ಮೆ ಲಾಹೌಲ್ –ಸ್ಪಿಟಿಯ ಜನರು ಹೊತ್ತುಕೊಂಡಿದ್ದ ಹೊರೆಯನ್ನು ಈಗ ಸುರಂಗ ಹೊತ್ತುಕೊಂಡಿದೆ. ಈ ರೀತಿಯಲ್ಲಿ ಸುರಂಗವು ಇಲ್ಲಿಯ ಜನತೆಯ ಹೊರೆಯನ್ನು ನಿವಾರಿಸಿದೆ. ಇದು ತೃಪ್ತಿ, ಹೆಮ್ಮೆ, ಮತ್ತು ಸಂತೋಷದ ವಿಷಯ . ಲಾಹೌಲ್ –ಸ್ಪಿಟಿಯ ಜನತೆ ಈಗ ಸುಲಭದಲ್ಲಿ ಸಂಚಾರ ಮಾಡಬಹುದು.

ಪ್ರವಾಸಿಗರು ಕುಲು ಮನಾಲಿಯ”ಸಿದ್ದು’ ಉಪಹಾರ ಸೇವಿಸಿ , ಲೌಹಾಲಿನಲ್ಲಿ ತಮ್ಮ ಭೋಜನದಲ್ಲಿ “ದುಮಾರ್’ ಮತ್ತು”ಚಿಲ್ಡೆ’ ಸವಿಯಬಹುದಾದ ದಿನಗಳು ಬಹಳ ದೂರವಿಲ್ಲ. ಇದು ಈ ಹಿಂದೆ ಸಾಧ್ಯವಿರಲಿಲ್ಲ.

ಸ್ನೇಹಿತರೇ ,

ಒಳ್ಳೆಯದು, ಅಲ್ಲಿ ಕೊರೋನಾ ಇದೆ, ಆದರೆ ದೇಶವೀಗ ನಿಧಾನವಾಗಿ ತೆರವು ಮೂಲಕ ತೆರೆದುಕೊಳ್ಳುತ್ತಿದೆ. ದೇಶದಲ್ಲಿ ಇತರ ರಂಗಗಳು ಚೇತರಿಸಿಕೊಂಡಂತೆ ಪ್ರವಾಸೋದ್ಯಮ ಕೂಡಾ ಚೇತರಿಸಿಕೊಳ್ಳಬಹುದೆಂಬ ಭರವಸೆ ನನಗಿದೆ, ಮತ್ತು ಕುಲು ದಸರಾಕ್ಕಾಗಿ ಭರ್ಜರಿ ತಯಾರಿಗಳು ನಡೆಯುತ್ತವೆ.

ಸ್ನೇಹಿತರೇ

ಅಟಲ್ ಸುರಂಗವಲ್ಲದೆ ಹಿಮಾಚಲದ ಜನತೆಗಾಗಿ ದೊಡ್ಡ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹಮೀರ್ಪುರದಲ್ಲಿ 66 ಮೆಗಾವಾಟ್ ಧೌಲಸಿದ್ದ ಜಲ ವಿದ್ಯುತ್ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಈ ಯೋಜನೆಯಿಂದ ದೇಶವು ವಿದ್ಯುತ್ ಪಡೆಯುವುದು ಮಾತ್ರವಲ್ಲ ಹಿಮಾಚಲದ ಹಲವು ಯುವ ಜನರಿಗೆ ಉದ್ಯೋಗ ಕೂಡಾ ದೊರೆಯಲಿದೆ.

ಸ್ನೇಹಿತರೇ,

ದೇಶಾದ್ಯಂತ ಆಧುನಿಕ ಮೂಲಸೌಕರ್ಯ ನಿರ್ಮಾಣ ಮಾಡುವ ಯೋಜನೆಗಳಲ್ಲಿ ಹಿಮಾಚಲ ಪ್ರದೇಶ ಕೂಡಾ ದೊಡ್ಡ ಭಾಗವನ್ನು ಹೊಂದಿದೆ. ಗ್ರಾಮೀಣ ರಸ್ತೆಗಳು, ಹೆದ್ದಾರಿಗಳು, ವಿದ್ಯುತ್ ಯೋಜನೆಗಳು, ರೈಲು ಸಂಪರ್ಕ ಮತ್ತು ವಾಯು ಸಂಪರ್ಕಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳು ಹಿಮಾಚಲ ಪ್ರದೇಶಗಳಲ್ಲಿ ಪ್ರಗತಿಯಲ್ಲಿವೆ.

ಕಿರಾತಪುರ-ಕುಲ್ಲು-ಮನಾಲಿ ರಸ್ತೆ ಕಾರಿಡಾರ್ , ಝಿರಾಕ್ಪುರ –ಪರ್ವಾನೂ-ಸೋಲನ್-ಕೈತ್ಲಿಘಾಟ್ ರಸ್ತೆ ಕಾರಿಡಾರ್ , ನಂಗಲ್ ಡ್ಯಾಂ-ತಲ್ವಾರ ರೈಲ್ ಮಾರ್ಗ ಮತ್ತು ಭಾನುಪಲ್ಲಿ-ಭಿಲಾಸ್ಪುರ ಬೇರಿ ರೈಲ್ ಮಾರ್ಗ ಭರದಿಂದ ಸಾಗುತ್ತಿದೆ. ಈ ಯೋಜನೆಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ, ಹಿಮಾಚಲ ಪ್ರದೇಶದ ಜನತೆಯ ಸೇವೆಗೆ ಒದಗಿಸಿಕೊಡಲು ಪ್ರಯತ್ನಗಳು ಸಾಗಿವೆ.

ಸ್ನೇಹಿತರೇ,

ಹಿಮಾಚಲ ಪ್ರದೇಶದ ಜನತೆಯ ಜೀವನವನ್ನು ಅನುಕೂಲಕರವಾಗಿಸಲು ರಸ್ತೆ ಮತ್ತು ವಿದ್ಯುತ್ ನಂತಹ ಮೂಲ ಸೌಕರ್ಯಗಳ ಜೊತೆಗೆ ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕ ಕೂಡಾ ಬಹಳ ಮುಖ್ಯ. ಪ್ರವಾಸೀ ತಾಣಗಳಿಗೆ ಇದು ಬಹು ಮುಖ್ಯ ಆವಶ್ಯಕತೆಯಾಗಿದೆ. ಗಿರಿ ಪ್ರದೇಶವಾಗಿರುವುದರಿಂದ , ಹಿಮಾಚಲದ ಹಲವು ಪ್ರದೇಶಗಳು ನೆಟ್ವರ್ಕ್ ಸಮಸ್ಯೆಯನ್ನು ಎದುರಿಸುತ್ತಿವೆ. ಇದಕ್ಕೆ ಖಾಯಂ ಪರಿಹಾರವನ್ನು ಕಂಡು ಹುಡುಕಲು ದೇಶದ 6 ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಜಾಲವನ್ನು ಹಾಕುವ ಕಾಮಗಾರಿ ಆರಂಭಿಸಲಾಗಿದೆ. ಇದನ್ನು ಆಂದೋಲನದೋಪಾದಿಯಲ್ಲಿ ಮುಂದಿನ 1000 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಯೋಜನೆ ಅಡಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ವೈ-ಫೈ ಹಾಟ್ ಸ್ಪಾಟ್ ಗಳು ಇರುತ್ತವೆ ಮತ್ತು ಮನೆಗಳಿಗೆ ಅಂತರ್ಜಾಲ ಸಂಪರ್ಕ ಲಭಿಸಲಿದೆ. ಇದರೊಂದಿಗೆ ಹಿಮಾಚಲ ಪ್ರದೇಶ ಪ್ರತಿಯೊಂದು ರೀತಿಯಲ್ಲೂ ಪ್ರಯೋಜನಗಳನ್ನು ಪಡೆಯಲಿದೆ. ಅದು ಮಕ್ಕಳ ಶಿಕ್ಷಣ ಇರಲಿ, ರೋಗಿಗಳಿಗೆ ಔಷಧಿ, ವೈದ್ಯಕೀಯ ಇರಲಿ, ಅಥವಾ ಪ್ರವಾಸೋದ್ಯಮದ ಮೂಲಕ ಆದಾಯ ಇರಲಿ ಪ್ರತಿಯೊಂದರಲ್ಲೂ ಪ್ರಯೋಜನಗಳಾಗಲಿವೆ.

ಸ್ನೇಹಿತರೇ,

ಜನರ ಬದುಕನ್ನು ಸುಲಭ ಸಾಧ್ಯಗೊಳಿಸಬೇಕು ಎಂಬುದು ಸರಕಾರದ ಪ್ರಯತ್ನ. ಮತ್ತು ಅವರಿಗೆ ಅವರ ಹಕ್ಕುಗಳ ಪೂರ್ಣ ಪ್ರಯೋಜನ ಸಿಗಬೇಕು ಎಂಬುದೂ ಅದರ ನಿರ್ಧಾರ. ಇದಕ್ಕಾಗಿ. ಬಹುತೇಕ ಎಲ್ಲಾ ಸರಕಾರಿ ಸೇವೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈಗ ಯಾರು ಕೂಡಾ ವೇತನ , ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತಹ ಸೇವೆಗಳಿಗೆ ಸರಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ.

ಈ ಮೊದಲು ನಮ್ಮ ಯುವ ಸಹೋದ್ಯೋಗಿಗಳು ಮತ್ತು ನಿವೃತ್ತರು ಹಿಮಾಚಲದ ದೂರ ಪ್ರದೇಶಗಳಿಂದ ದಾಖಲೆಗಳ ದೃಢೀಕರಣಕ್ಕಾಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹಿಂದೆ ಓಡಬೇಕಾಗುತ್ತಿತ್ತು. ಈಗ ದೃಢೀಕರಣದ ಆವಶ್ಯಕತೆಯನ್ನು ಬಹುತೇಕ ನಿವಾರಿಸಲಾಗಿದೆ.

ಕಲ್ಪಿಸಿಕೊಳ್ಳಿ, ಈ ಮೊದಲು ವಿದ್ಯುತ್ ಬಿಲ್ ಪಾವತಿ ಮತ್ತು ಟೆಲಿಫೋನ್ ಬಿಲ್ ಪಾವತಿಗಾಗಿ ಇಡೀ ದಿನ ವ್ಯಯವಾಗುತ್ತಿತ್ತು. ಈಗ ನೀವಿದನ್ನು ನಿಮ್ಮ ಮನೆಯಲ್ಲಿಯೇ ಕುಳಿತು ಒಂದು ಕ್ಲಿಕ್ ಮೂಲಕ ಮಾಡಬಹುದು. ಈ ಮೊದಲು ಬ್ಯಾಂಕುಗಳಿಗೆ ಹೋಗಿ ಪಡೆಯಬಹುದಾಗಿದ್ದ , ಬ್ಯಾಂಕ್ ಗಳಿಗೆ ಸಂಬಂಧಿಸಿದ ಎಲ್ಲಾ ಸವಲತ್ತುಗಳು ಈಗ ಮನೆಯಲ್ಲಿಯೇ ಸುಲಭವಾಗಿ ದೊರೆಯುತ್ತವೆ.

ಸ್ನೇಹಿತರೇ,

ಇಂತಹ ಹಲವು ಸುಧಾರಣೆಗಳೊಂದಿಗೆ , ಅಲ್ಲಿ ಸಮಯದ ಉಳಿತಾಯ ಮತ್ತು ಹಣಕಾಸಿನ ಉಳಿತಾಯ ಆಗುತ್ತಿದೆ ಮತ್ತು ಭ್ರಷ್ಟಾಚಾರದ ಅವಕಾಶ ಕೂಡಾ ಕೊನೆಗೊಂಡಿದೆ. ಕೊರೊನಾದ ಈ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಜನ ಧನ ಖಾತೆಗಳಲ್ಲಿ ಜಮಾ ಮಾಡಲಾಗಿದೆ. ಹಿಮಾಚಲ ಪ್ರದೇಶದ 5 ಲಕ್ಷ ನಿವೃತ್ತಿ ವೇತನದಾರರ ಮತ್ತು ಸುಮಾರು 6 ಲಕ್ಷ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಒಂದು ಕ್ಲಿಕ್ಕಿನ ಮೂಲಕ ಹಣವನ್ನು ಜಮಾ ಮಾಡಲಾಗಿದೆ. ಉಜ್ವಲಾ ಅಡಿಯಲ್ಲಿ 1.25 ಲಕ್ಷಕ್ಕೂ ಅಧಿಕ ಬಡ ಸಹೋದರಿಯರು ಉಚಿತ ಸಿಲಿಂಡರುಗಳನ್ನು ಪಡೆದಿದ್ದಾರೆ.

ಸ್ನೇಹಿತರೇ,

ದೇಶದಲ್ಲಿ ಜಾರಿ ಮಾಡಲಾಗುತ್ತಿರುವ ಸುಧಾರಣೆಗಳಿಂದಾಗಿ ತಮ್ಮದೇ ರಾಜಕೀಯ ಹಿತಾಸಕ್ತಿಗಳಿಗಾಗಿ ಸದಾ ಕಾರ್ಯನಿರತರಾಗಿದ್ದ ಕೆಲವು ಜನರು ಉದ್ವಿಗ್ನರಾಗಿದ್ದಾರೆ. ಶತಮಾನ ಬದಲಾಗಿದೆ, ಆದರೆ ಅವರ ಚಿಂತನೆ ಆಗಿಲ್ಲ. ಈಗ ಶತಮಾನ ಬದಲಾಗಿರುವುದರಿಂದ ಮತ್ತು ಚಿಂತನೆಯೂ ಬದಲಾಗಬೇಕಾದ ಅಗತ್ಯವಿದೆ. ಹೊಸ ಶತಮಾನಕ್ಕೆ ಅನ್ವಯವಾಗುವಂತೆ ನಾವು ದೇಶವನ್ನು ಬದಲಾಯಿಸಬೇಕಾಗಿದೆ. ಮಧ್ಯವರ್ತಿಗಳ ವ್ಯವಸ್ಥೆಯನ್ನು ಮತ್ತು ದಲ್ಲಾಳಿಗಳ ವ್ಯವಸ್ಥೆಯನ್ನು ರೂಪಿಸಿದವರು ಹತಾಶರಾಗಿದ್ದಾರೆ. ಮಧ್ಯವರ್ತಿಗಳನ್ನು ಪ್ರೋತ್ಸಾಹಿಸಿದವರಿಂದಾಗಿ ರೈತರ ಪರಿಸ್ಥಿತಿ ಏನಾಗಿದೆ ಎಂಬುದು ಹಿಮಾಚಲ ಪ್ರದೇಶದ ಜನತೆಗೆ ತಿಳಿದಿದೆ.

ನಿಮಗೆ ಗೊತ್ತಿದೆ, ಹಿಮಾಚಲವು, ದೇಶದ ಅತಿ ದೊಡ್ಡ ಹಣ್ಣು ಉತ್ಪಾದಕ ಪ್ರದೇಶಗಳಲ್ಲಿ ಒಂದಾಗಿದೆ, ಎಂಬ ಸಂಗತಿ. ಹಿಮಾಚಲದ ಟೊಮ್ಯಾಟೋ ಮತ್ತು ಅಣಬೆಗಳು ಹಲವಾರು ನಗರಗಳ ಆವಶ್ಯಕತೆಗಳನ್ನು ಪೂರೈಸುತ್ತಿವೆ. ಆದರೆ ಪರಿಸ್ಥಿತಿ ಏನಿದೆ ?. ಕುಲ್ಲು, ಶಿಮ್ಲಾ ಅಥವಾ ಕಿನ್ನೌರ್ ಗಳ ರೈತರಿಂದ ಕಿಲೋ ಒಂದಕ್ಕೆ 40-50 ರೂಪಾಯಿ ನೀಡಿ ಖರೀದಿಸುವ ಆಪಲ್ ದಿಲ್ಲಿಯಲ್ಲಿ ಕಿಲೋ ಒಂದಕ್ಕೆ 100-150 ರೂಪಾಯಿಗಳಂತೆ ಮಾರಾಟವಾಗುತ್ತದೆ. ಈ ನೂರು ರೂಪಾಯಿಗಳ ವ್ಯತ್ಯಾಸ ಎಲ್ಲಿ ಹೋಗುತ್ತದೆ ?. ರೈತರಾಗಲೀ ಅಥವಾ ಖರೀದಿದಾರರಾಗಲೀ ಇದರಿಂದ ಲಾಭ ಪಡೆಯುವುದಿಲ್ಲ. ಇದು ರೈತರಿಗೆ ನಷ್ಟ ಮಾತ್ರವಲ್ಲ, ನಗರಗಳಲ್ಲಿ ಖರೀದಿಸುವವರಿಗೂ ನಷ್ಟ. ಇದು ಮಾತ್ರವಲ್ಲ, ನಮ್ಮ ರೈತ ಮಿತ್ರರಿಗೆ ಗೊತ್ತಿದೆ, ಆಪಲ್ ಹಂಗಾಮು ಉಚ್ಛ ಸ್ಥಿತಿಯಲ್ಲಿರುವಂತೆ ಬೆಲೆಯೂ ಭಾರೀ ಪ್ರಮಾಣದಲ್ಲಿ ಕುಸಿಯುತ್ತದೆ. ಸಣ್ಣ ತೋಟ ಇರುವ ರೈತರು ಭಾರೀ ತೊಂದರೆ ಅನುಭವಿಸುತ್ತಾರೆ.

ಸ್ನೇಹಿತರೇ,

ಕೃಷಿ ಸುಧಾರಣಾ ವಿಧೇಯಕಗಳ ವಿರುದ್ದ ಪ್ರತಿಭಟನೆ ನಡೆಸುವವರು ಯಥಾಸ್ಥಿತಿ ಇರಬೇಕು ಎಂದು ಬಯಸುತ್ತಿದ್ದಾರೆ. ಜನರು ಹಿಂದಿನ ಶತಮಾನದಲ್ಲಿ ಬದುಕಿದಂತೆ ಬದುಕಲಿ ಎಂದಾಶಿಸುತ್ತಿದ್ದಾರೆ. ಆದರೆ ದೇಶವು ಬದಲಾವಣೆಗೆ ಬದ್ದವಾಗಿದೆ. ಮತ್ತು ಅದರಿಂದಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾನೂನುಗಳಲ್ಲಿ ಚಾರಿತ್ರಿಕ ಸುಧಾರಣೆಗಳನ್ನು ಮಾಡಲಾಗಿದೆ. ಅವರೂ ಈ ಸುಧಾರಣೆಗಳ ಬಗ್ಗೆ ಚಿಂತನೆ ನಡೆಸಿದ್ದರು, ಅವರೂ ಇದೇ ರೀತಿ ಚಿಂತಿಸಿದ್ದರು, ಆದರೆ ಅವರಿಗೆ ಧೈರ್ಯ ಇರಲಿಲ್ಲ. ನಮಗೆ ಧೈರ್ಯವಿದೆ. ಅವರಿಗೆ ಚುನಾವಣೆಗಳು ಆದ್ಯತೆಯಾಗಿದ್ದವು. ನಮಗೆ ನಮ್ಮ ದೇಶ , ನಮ್ಮ ರೈತ, ನಮ್ಮ ರೈತರ ಉಜ್ವಲ ಭವಿಷ್ಯ ಆದ್ಯತೆಗಳಾಗಿವೆ ಮತ್ತು ಅದರಿಂದಾಗಿ ನಾವು ರೈತರ ಪ್ರಗತಿಗಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ.

ಈಗ ಸಣ್ಣ ರೈತರು ತಮ್ಮದೇ ಸಂಘಟನೆ ಕಟ್ಟಿಕೊಂಡು , ಇತರ ರಾಜ್ಯಗಳಲ್ಲಿ ಆಪಲ್ ಗಳನ್ನು ನೇರ ಮಾರಾಟ ಮಾಡಬಹುದು. ಅವರಿಗೆ ಆ ಸ್ವಾತಂತ್ರ್ಯ ಸಿಕ್ಕಿದೆ. ಅವರಿಗೆ ಸ್ಥಳೀಯ ಮಂಡಿಗಳಲ್ಲಿ (ಮಾರುಕಟ್ಟೆ) ಮೊದಲಿನ ವ್ಯವಸ್ಥೆ ಮೂಲಕ ಪ್ರಯೋಜನ ಲಭಿಸುವುದಾದರೆ , ಅವರಿಗೆ ಆ ಆಯ್ಕೆ ಅಲ್ಲಿದೆ. ಅದನ್ನು ತೆಗೆದು ಹಾಕುವುದಿಲ್ಲ. ವಾಸ್ತವವಾಗಿ ಈ ಸುಧಾರಣೆಗಳನ್ನು ರೈತರಿಗೆ ಗರಿಷ್ಟ ಪ್ರಯೋಜನಗಳನ್ನು ದೊರಕಿಸಿಕೊಡುವುದಕ್ಕಾಗಿ ಮಾಡಲಾಗಿದೆ.

ಸ್ನೇಹಿತರೇ,

ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ದವಾಗಿದೆ ಮತ್ತು ಕೃಷಿಗೆ ಸಂಬಂಧಿಸಿದ ಅವರ ಸಣ್ಣ ಆವಶ್ಯಕತೆಗಳನ್ನು ಈಡೇರಿಸಲು ಬದ್ಧವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಅಡಿಯಲ್ಲಿ ಇದುವರೆಗೆ 1 ಲಕ್ಷ ಕೋ.ರೂ. ಗಳನ್ನು ಸುಮಾರು 10.25 ಕೋಟಿ ರೈತ ಕುಟುಂಬಗಳ ಖಾತೆಗಳಿಗೆ ಜಮಾ ಮಾಡಲಾಗಿದೆ. ಮತ್ತು ಇದರಲ್ಲಿ ಹಿಮಾಚಲದ 9 ಲಕ್ಷ ರೈತ ಕುಟುಂಬಗಳು ಸೇರಿವೆ, ಅವುಗಳು ಒಟ್ಟು ಸುಮಾರು 1000 ಕೋ.ರೂ. ಗಳನ್ನು ಪಡೆದಿವೆ.

ಕಲ್ಪಿಸಿಕೊಳ್ಳಿ, ಹಿಂದಿನ ಸರಕಾರಗಳು ಹಿಮಾಚಲಕ್ಕೆ 1000 ಕೋ.ರೂ.ಗಳ ಪ್ಯಾಕೇಜ್ ಘೋಷಿಸಿದ್ದರೆ ಹಣ ಎಲ್ಲಿ ಹೋಗುತ್ತಿತ್ತು ಮತ್ತು ಯಾರ ಕಿಸೆಗೆ ಹೋಗುತ್ತಿತ್ತು. ಆಗ ಅಲ್ಲಿ ಅದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಗಳಾಗುತ್ತಿದ್ದವು. ಇಲ್ಲಿ ಹಣ ಯಾವುದೇ ಮಧ್ಯವರ್ತಿ ಇಲ್ಲದೆ ಸಣ್ಣ ರೈತರ ಖಾತೆಗಳಿಗೆ ಹೋಗಿದೆ.

ಸ್ನೇಹಿತರೇ,

ಇತ್ತೀಚೆಗೆ ಕಾರ್ಮಿಕ ಶಕ್ತಿಗೆ ಅದರಲ್ಲೂ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಹಕ್ಕುಗಳನ್ನು ಕೊಡಲು ನಮ್ಮ ದೇಶದಲ್ಲಿ ದೊಡ್ಡ ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಿಮಾಚಲದ ಪುತ್ರಿಯರು ಮತ್ತು ಸಹೋದರಿಯರು ಯಾವುದೇ ವಲಯದ ಯಾವುದೇ ಕಷ್ಟದ ಕೆಲಸಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಆದರೆ ಇಲ್ಲಿಯವರೆಗೆ , ಮಹಿಳೆಯರಿಗೆ ಕೆಲಸಕ್ಕೆ ಅವಕಾಶ ನೀಡದ ಹಲವು ಕ್ಷೇತ್ರಗಳಿದ್ದವು. ಇತ್ತೀಚಿಗೆ ಜಾರಿಗೆ ತರಲಾದ ಕಾರ್ಮಿಕ ಸುಧಾರಣೆಗಳು ಸಮಾನ ವೇತನದ ಹಕ್ಕು ಮತ್ತು ಈಗಾಗಲೇ ಪುರುಷರು ಕೆಲಸ ಮಾಡುತ್ತಿರುವ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಅವಕಾಶ ಒದಗಿಸುತ್ತವೆ.

ಸ್ನೇಹಿತರೇ,

ದೇಶದ ಪ್ರತಿಯೊಬ್ಬ ನಾಗರಿಕರ ಆತ್ಮ ವಿಶ್ವಾಸವನ್ನು ಜಾಗೃತ ಮಾಡುವ ನಿಟ್ಟಿನಲ್ಲಿ ಸುಧಾರಣೆಗಳ ಪರ್ವ ಮುಂದುವರೆಯುತ್ತದೆ. ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವಲ್ಲಿ ತನ್ನದೇ ಪಾತ್ರವನ್ನು ವಹಿಸುತ್ತದೆ. ಹಿಂದಿನ ಶತಮಾನದ ನಿಯಮ –ನಿರ್ಬಂಧಗಳ ಅಡಿಯಲ್ಲಿ ನಾವು ಹೊಸ ಶತಮಾನಕ್ಕೆ ಸಾಗಲಾರೆವು. ಸಮಾಜದಲ್ಲಿ ಮತ್ತು ವ್ಯವಸ್ಥೆಯಲ್ಲಿ ಅರ್ಥಪೂರ್ಣ ಬದಲಾವಣೆಗಳಿಗೆ ವಿರೋಧ ಮಾಡುವ ಸ್ವಾರ್ಥದ ರಾಜಕೀಯವನ್ನು ಬದಿಗಿಟ್ಟು ಈ ದೇಶ ಮುನ್ನಡೆಯುವುದನ್ನು ಯಾರೂ ತಡೆಯಲಾರರು.

ಹಿಮಾಚಲದ ಪ್ರತಿಯೊಬ್ಬ ಯುವ ಜನತೆಯ ಕನಸು ಮತ್ತು ಆಶೋತ್ತರಗಳು ಮತ್ತು ದೇಶದ ಆಶೋತ್ತರಗಳು ಅತ್ಯುನ್ನತ ಮಟ್ಟದಲ್ಲಿವೆ . ಮತ್ತು ನಾವು ದೇಶವನ್ನು ಈ ಆಶೋತ್ತರಗಳೊಂದಿಗೆ ಅಭಿವೃದ್ಧಿಯ ಹೊಸ ಔನ್ನತ್ಯಕ್ಕೆ ಕೊಂಡೊಯ್ಯುವುದನ್ನು ಮುಂದುವರೆಸುತ್ತೇವೆ.

ಸ್ನೇಹಿತರೇ,

ಅಟಲ್ ಸುರಂಗದ ಮೂಲಕ ಬರುವ ದೊಡ್ಡ ಬದಲಾವಣೆಯನ್ನು ನೀವು ಕಲ್ಪಿಸಬಹುದು. ಹಲವಾರು ಅವಕಾಶಗಳ ಬಾಗಿಲುಗಳನ್ನು ಇದು ತೆರೆದಿದೆ. ಅದರ ಗರಿಷ್ಟ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬೇಕು.

ನಿಮ್ಮೆಲ್ಲರಿಗೂ ಬಹಳ ಬಹಳ ಅಭಿನಂದನೆಗಳು ಮತ್ತು ಶುಭಾಶಯಗಳು.

ಇದು ಕೊರೊನಾದ ಸಮಯ. ಹಿಮಾಚಲ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದೆ. ಆದರೂ , ಈ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ದೇವರ ಈ ನಾಡಿನಲ್ಲಿ , ಕಾಂಚನ ನಾಗ್ ನ ಈ ಸ್ಥಳದಲ್ಲಿ ನಿಮ್ಮನ್ನು ಮತ್ತೆ ಭೇಟಿ ಮಾಡಲು ನನಗೊಂದು ಅವಕಾಶ ಲಭಿಸಿದೆ, ದೇವರಿಗೆ ನಾನು ಕೃತಜ್ಞ. ಕೊರೊನಾ ಇಲ್ಲದಿದ್ದರೆ ನಾನು ನಿಮ್ಮನ್ನು ಭೇಟಿಯಾಗಬಹುದಿತ್ತು. ನನ್ನೆದುರು ಪರಿಚಿತ ಮುಖಗಳು ಹಲವಾರು ಇವೆ. ಆದರೆ ನಾನು ನಿಮ್ಮನ್ನು ಭೇಟಿಯಾಗದಂತಹ ಸ್ಥಿತಿ ಇದೆ. ಆದರೆ ನಿಮ್ಮನ್ನು ನೋಡಿದ್ದಕ್ಕೆ ನನಗೆ ಸಂತೋಷವಿದೆ. ನಾನು ಬಹಳ ಬೇಗ ಇಲ್ಲಿಂದ ನಿರ್ಗಮಿಸಬೇಕಾಗಿದೆ. ಆದುದರಿಂದ , ನಿಮ್ಮ ಅನುಮತಿಯೊಂದಿಗೆ, ಬಹಳ ಬಹಳ ಅಭಿನಂದನೆಗಳು ಮತ್ತು ನಿಮ್ಮೆಲ್ಲರಿಗೂ ಧನ್ಯವಾದಗಳು



(Release ID: 1662673) Visitor Counter : 174