ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಪ್ರಧಾನಮಂತ್ರಿ ಸ್ವನಿಧಿ ಸಾಲದ ಅರ್ಜಿ ಸ್ವೀಕರಣೆ ಮತ್ತು ಸಾಲ ಪ್ರಕ್ರಿಯೆ ಸರಳೀಕೃತ
ಸ್ಟೇಟ್ ಬಾಂಕ್ ಆಫ್ ಇಂಡಿಯಾ ಪೋರ್ಟಲ್ ನಡುವೆ ಎಪಿಐ ವಿಲೀನಕ್ರಿಯೆ
ಎಸ್.ಬಿ.ಐ ಇ ಮುದ್ರಾ ಪೋರ್ಟಲ್ ಮತ್ತು ಪಿಎಂ ಸ್ವನಿಧಿ ನಡುವಿನ ಸರಾಗ ವ್ಯವಹಾರಕ್ಕೆ ದಾಖಲೆಗಳ ಸಮಗ್ರ ವಿಲೀನ
ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಈ ವರೆಗೆ 20.50 ಲಕ್ಷ ಸಾಲದ ಅರ್ಜಿಗಳು ಸ್ವೀಕೃತವಾಗಿವೆ. 7.85 ಲಕ್ಷ ಸಾಲಗಳು ಮಂಜೂರಾಗಿವೆ
Posted On:
07 OCT 2020 11:08AM by PIB Bengaluru
ಪ್ರಧಾನ ಮಂತ್ರಿಗಳ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯ ಅನ್ವಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ಅವರು ಪಿಎಂ ಸ್ವನಿಧಿ ಪೋರ್ಟಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಕೀಕರಣವನ್ನು ಪ್ರಾರಂಭಿಸಿದರು. ಎರಡು ಪೋರ್ಟಲ್‌ಗಳ ನಡುವೆ ದತ್ತಾಂಶಗಳು ಯಾವುದೇ ಅಡೆತಡೆ ಇಲ್ಲದಂತಹ ಹರಿವನ್ನು ಕಂಡುಕೊಳ್ಳುತ್ತವೆ. ಪಿಎಂಸ್ವನಿಧಿ ಮತ್ತು ಇ ಮುದ್ರಾ ಪೋರ್ಟಲ್‌ಗಳಲ್ಲಿರುವ ಕಡತಗಳು ಒಟ್ಟಿಗೆ ಸಿಗುವುದರಿಂದ ಸಾಲದ ಪ್ರಕ್ರಿಯೆ ಸರಳವಾಗುತ್ತದೆ. ಸಾಲ ಮಂಜೂರಾತಿ ಹಾಗೂ ವಿತರಣೆ ಕ್ರಿಯೆಗಳೆರಡೂ ತ್ವರಿತಗತಿಯಲ್ಲಿ ಸಾಗುತ್ತವೆ. ಇದು ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯದ ಬಂಡವಾಳವನ್ನು ಸಾಲದ ರೂಪದಲ್ಲಿ ನೀಡಲು ಸಹಾಯ ಮಾಡುತ್ತದೆ. ಇದೇ ರೀತಿಯಲ್ಲಿ ಸಹಾಯವಾಗುವಂತೆ ಇತರ ಬ್ಯಾಂಕುಗಳೊಡನೆಯೂ ಏಕೀಕೃತ ಕಾರ್ಯವೈಖರಿಯ ವ್ಯವಸ್ಥೆ ತರಲು ಚಿಂತಿಸುತ್ತಿದೆ. ಸದ್ಯದಲ್ಲಿಯೇ ಉಳಿದ ಬ್ಯಾಂಕುಗಳೊಡನೆಯೂ ಚರ್ಚಿಸಲಾಗುವುದು.
ಪಿಎಂಸ್ವನಿಧಿ ಯೋಜನೆಯನ್ನು ಸಚಿವಾಲಯವು ಜೂನ್ 1 2020ರಿಂದ ಜಾರಿಗೆ ತಂದಿದೆ. ಬಂಡವಾಳವನ್ನು ಸರಳ ರೀತಿಯಲ್ಲಿ ಸಾಲದ ರೂಪದಲ್ಲಿ ನೀಡಿ, ಅವರ ಜೀವನ ಪ್ರಕ್ರಿಯೆ ಸರಳಗೊಳಿಸಲು ಯೋಜಿಸಲಾಗಿದೆ. ಕೋವಿಡ್ 19 ದಿನಗಳಲ್ಲಿ ಜೀವನೋಪಾಯ ಕಷ್ಟವಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ನೀಡಲು ಯೋಜನೆಯನ್ನು ರೂಪಿಸಲಾಯಿತು. ದೇಶದ ಸುಮಾರು 50 ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಅನುಕೂಲವಾಗುವ ಗುರಿ ಈ ಯೋಜನೆಗಿದ್ದು, 2020ರ ಮಾರ್ಚ್ ತಿಂಗಳಿಗಿಂದ ಮೊದಲು ಬೀದಿ ಬದಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಎಲ್ಲ ವ್ಯಾಪಾರಿಗಳಿಗೆ ಇದು ಅನ್ವಯವಾಗುತ್ತದೆ. ನಗರ ಪ್ರದೇಶ, ಉಪನಗರ, ಗ್ರಾಮೀಣ ಪ್ರದೇಶದ ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೂ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ವ್ಯಾಪಾರಿಯು ₹ 10,000ವನ್ನು ಬಂಡವಾಳವಾಗಿ ಸಾಲದ ರೂಪದಲ್ಲಿ ಪಡೆಯಬಹುದಾಗಿದೆ. ಶೇ 7ರ ಬಡ್ಡಿ ದರದಲ್ಲಿ ಒಂದು ವರ್ಷದ ಅವಧಿಯಲ್ಲಿ ಹಿಂದಿರುಗಿಸಬಹುದಾಗಿದೆ. ಈ ಬಂಡವಾಳದ ಹಣವನ್ನು ನೇರ ಫಲಾನುಭವಿಯ ಅಕೌಂಟುಗಳಿಗೆ ಜಮೆಯಾಗಲಿದೆ. ತ್ರೈಮಾಸಿಕ ಲಾಭದ ಆಧಾರದ ಮೇಲೆ ಶೇ 7ರ ಬಡ್ಡಿದರದಲ್ಲಿ ಸಹಾಯ ಧನ ಜಮೆಯಾಗುತ್ತದೆ. ಸಾಲ ಮರುಪಾವತಿಸುವಾಗ, ಅವಧಿ ಮುನ್ನವೇ ಮರುಪಾವತಿಸಿದರೆ ಯಾವ ದಂಡವೂ ಅನ್ವಯವಾಗುವುದಿಲ್ಲ. ನಗದು ರಹಿತ ವ್ಯಾಪಾರ ಮತ್ತು ವ್ಯವಹಾರವನ್ನು ಪ್ರೋತ್ಸಾಹಿಸಲು ಪ್ರತಿ ಫಲಾನುಭವಿಗೂ ಪ್ರತಿ ವರ್ಷಕ್ಕೆ ₹1200ರಷ್ಟು ಹಣವನ್ನು ಪ್ರೋತ್ಸಾಹ ಧನವಾಗಿ ಪಡೆಯುವ ಸಾಧ್ಯತೆಗಳೂ ಇವೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವುದರಿಂದ ಮತ್ತೆ ಮುಂದಿನ ಸಾಲಗಳಲ್ಲಿ ಬಂಡವಾಳದ ಮೊತ್ತವನ್ನು ಹೆಚ್ಚಿಸಿಕೊಳ್ಳಲೂ ಬಹುದಾಗಿದೆ.
ಅಕ್ಟೋಬರ್ 6ರವರೆಗೆ 20.50 ಲಕ್ಷ ಸಾಲದ ಅರ್ಜಿಗಳ ಸ್ವೀಕೃತವಾಗಿವೆ. 7.85 ಲಕ್ಷ ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, 2.40 ಲಕ್ಷ ಸಾಲ ವಿತರಣೆಯಾಗಿದೆ.
***
(Release ID: 1662313)
Visitor Counter : 247
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Tamil
,
Telugu
,
Malayalam