ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೇಂದ್ರ ರಸಗೊಬ್ಬರ ಇಲಾಖೆಗೆ ದತ್ತಾಂಶ ಆಡಳಿತ ಗುಣಮಟ್ಟ ಸೂಚ್ಯಂಕ ಸಮೀಕ್ಷೆಯಲ್ಲಿ 2 ನೇ ಸ್ಥಾನ


16 ಆರ್ಥಿಕ ಸಚಿವಾಲಯ/ ಇಲಾಖೆಗಳ ಸಮೀಕ್ಷೆಯಲ್ಲಿ 2 ನೇ ಸ್ಥಾನ ಮತ್ತು 65 ಸಚಿವಾಲಯ/ ಇಲಾಖೆಗಳಲ್ಲಿ 3 ನೇ ಸ್ಥಾನ

Posted On: 02 OCT 2020 11:12AM by PIB Bengaluru

ದತ್ತಾಂಶ ಆಡಳಿತ ಗುಣಮಟ್ಟ ಸೂಚ್ಯಂಕ (ಡಿಜಿಕ್ಯುಐ) ಸಮೀಕ್ಷಾ ವರದಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ಎರಡನೇ ಸ್ಥಾನ ಪಡೆದಿದೆ.

16 ಆರ್ಥಿಕ ಸಚಿವಾಲಯಗಳು/ ಇಲಾಖೆಗಳ ಪೈಕಿ 2 ನೇ ಸ್ಥಾನ ಮತ್ತು 65 ಸಚಿವಾಲಯಗಳು / ಇಲಾಖೆಗಳಲ್ಲಿ 3 ನೇ ಸ್ಥಾನ ಗಳಿಸಿರುವ ರಸಗೊಬ್ಬರ ಇಲಾಖೆಯು ಸಮೀಕ್ಷೆಯಲ್ಲಿ 5 ಕ್ಕೆ 4.11 ಅಂಕಗಳನ್ನು ಪಡೆದಿದೆ.

ಕೇಂದ್ರೀಯ ವಲಯ ಯೋಜನೆಗಳು (ಸಿಎಸ್) ಮತ್ತು ಕೇಂದ್ರೀಯ ಪ್ರಾಯೋಜಿತ ಯೋಜನೆಗಳ (ಸಿಎಸ್ಎಸ್) ಅನುಷ್ಠಾನ ಕುರಿತು ವಿವಿಧ ಸಚಿವಾಲಯಗಳು/ ಇಲಾಖೆಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ನೀತಿ ಆಯೋಗದ ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿ (ಡಿಎಂಇಒ) ಯು ಸಮೀಕ್ಷೆ ನಡೆಸಿದೆ.

ನೀತಿ ಆಯೋಗದ ಡಿಎಂಇಒ, ಡಿಜಿಕ್ಯುಐ ಸ್ಕೋರ್ ಕಾರ್ಡ್ ತಯಾರಿಸಲು ಸಚಿವಾಲಯಗಳು/ ಇಲಾಖೆಗಳಾದ್ಯಂತ ದತ್ತಾಂಶ ಸಿದ್ಧತೆ ಮಟ್ಟಗಳ ಸ್ವಯಂ-ಮೌಲ್ಯಮಾಪನ ಆಧಾರಿತ ಪರಿಶೀಲನೆ ನಡೆಸಿದೆ. ಅಂತೆಯೇ, ಆರೋಗ್ಯಕರ ಸ್ಪರ್ಧೆಯನ್ನು ಹೆಚ್ಚಿಸಲು ಮತ್ತು ಉತ್ತಮ ಅಭ್ಯಾಸಗಳ ಪರಸ್ಪರ ಕಲಿಕೆಯನ್ನು ಉತ್ತೇಜಿಸಲು ಪ್ರಮಾಣೀಕೃತ ಚೌಕಟ್ಟಿನ ಮೇಲೆ ಸಚಿವಾಲಯಗಳು/ಇಲಾಖೆಗಳ ದತ್ತಾಂಶ ಸಿದ್ಧತೆಯನ್ನು ನಿರ್ಣಯಿಸುವ ಉದ್ದೇಶದಿಂದ ಸಮೀಕ್ಷೆಯನ್ನು ನಡೆಸಲಾಯಿತು.

ಸಮೀಕ್ಷೆಯಲ್ಲಿ, ಡಿಜಿಕ್ಯುಐನ ಆರು ಪ್ರಮುಖ ವಿಷಯಗಳ ಅಡಿಯಲ್ಲಿ ಆನ್ಲೈನ್ ಪ್ರಶ್ನಾವಳಿಯನ್ನು ತಯಾರಿಸಲಾಗಿತ್ತು. ಅವುಗಳೆಂದರೆ: ದತ್ತಾಂಶ ಉತ್ಪಾದನೆ; ದತ್ತಾಂಶ ಗುಣಮಟ್ಟ; ತಂತ್ರಜ್ಞಾನದ ಬಳಕೆ; ದತ್ತಾಂಶ ವಿಶ್ಲೇಷಣೆ, ಬಳಕೆ ಮತ್ತು ಪ್ರಸಾರ; ದತ್ತಾಂಶ ಭದ್ರತೆ ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯ ಮತ್ತು ಪ್ರಕರಣ ಅಧ್ಯಯನಗಳು. ಪ್ರತಿ ವಿಷಯಕ್ಕೆ 0 ರಿಂದ 5 ರವರೆಗಿನ ಅಂತಿಮ ಡಿಜಿಕ್ಯುಐ ಸ್ಕೋರ್ಗಳನ್ನು ಪಡೆಯಲು ಪ್ರತಿ ವಿಷಯದ ಪ್ರತಿಯೊಂದು ಪ್ರಶ್ನೆಗೆ ಅಂಕಗಳನ್ನು ನಿಗದಿಪಡಿಸಲಾಯಿತು. ಅಪ್ರಸ್ತುತ ಹೋಲಿಕೆಗಳನ್ನು ತಪ್ಪಿಸಲು, ಸಚಿವಾಲಯಗಳು/ ಇಲಾಖೆಗಳನ್ನು ಆಡಳಿತಾತ್ಮಕ, ಕಾರ್ಯತಂತ್ರ, ಮೂಲಸೌಕರ್ಯ, ಸಾಮಾಜಿಕ, ಆರ್ಥಿಕ ಮತ್ತು ವೈಜ್ಞಾನಿಕ ಎಂದು ಆರು ವಿಭಾಗಗಳಲ್ಲಿ ವರ್ಗೀಕರಿಸಲಾಗಿತ್ತು:

ಸಿಎಸ್/ ಸಿಎಸ್ಎಸ್ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸಚಿವಾಲಯಗಳು/ ಇಲಾಖೆಗಳಿಗೆ ಪ್ರಶ್ನಾವಳಿಯನ್ನು ಕಳುಹಿಸಲಾಯಿತು. 250 ಸಿಎಸ್ / ಸಿಎಸ್ಎಸ್ ಯೋಜನೆಗಳನ್ನು ಅನುಷ್ಠಾನಗೊಳಿಸುವ 65 ಸಚಿವಾಲಯಗಳು/ ಇಲಾಖೆಗಳಿಂದ ಸ್ವೀಕೃತಿಗಳನ್ನು ಸಂಗ್ರಹಿಸಲಾಯಿತು ಮತ್ತು ಅವುಗಳ ಅಂಕಗಳನ್ನು ಅದಕ್ಕೆ ಅನುಗುಣವಾಗಿ ಲೆಕ್ಕಹಾಕಲಾಯಿತು. ರಸಗೊಬ್ಬರಗಳ ಇಲಾಖೆಯು 16 ಆರ್ಥಿಕ ಸಚಿವಾಲಯಗಳು / ಇಲಾಖೆಗಳಲ್ಲಿ 2 ನೇ ಸ್ಥಾನದಲ್ಲಿದೆ ಮತ್ತು 65 ಸಚಿವಾಲಯಗಳು / ಇಲಾಖೆಗಳಲ್ಲಿ 3 ನೇ ಸ್ಥಾನದಲ್ಲಿದೆ ಮತ್ತು 5 ಅಂಕಗಳ ಪ್ರಮಾಣದಲ್ಲಿ 4.11 ಅಂಕ ಗಳಿಸಿದೆ.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಕುರಿತು ಪ್ರತಿಕ್ರಿಯಿಸಿ, "ಸಚಿವಾಲಯಗಳು /ಇಲಾಖೆಗಳ ಇಂತಹ ವರದಿ ಕಾರ್ಡ್ ತಯಾರಿಸಿರುವ ನೀತಿ ಆಯೋಗದ ಡಿಎಂಇಒ ಪ್ರಯತ್ನವು ಹೆಚ್ಚು ಪ್ರಶಂಸನೀಯವಾಗಿದೆ. ಇದು ಸರ್ಕಾರದ ನೀತಿಗಳ ಅನುಷ್ಠಾನದ ಚೌಕಟ್ಟನ್ನು ಸುಧಾರಿಸಲು ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಪೇಕ್ಷಿತ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ " ಎಂದು ಹೇಳಿದ್ದಾರೆ.

***


(Release ID: 1661006) Visitor Counter : 244