ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್ 2ರಂದು ವೈಭವ್ ಶೃಂಗಸಭೆ ಉದ್ಘಾಟಿಸಲಿರುವ ಪ್ರಧಾನಮಂತ್ರಿ

Posted On: 01 OCT 2020 9:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 2ರಂದು ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಾಗತಿಕ ಭಾರತೀಯ ವೈಜ್ಞಾನಿಕ ಶೃಂಗಸಭೆ (ವೈಭವ್) ಉದ್ಘಾಟಿಸಲಿದ್ದಾರೆ.

ವೈಭವ್ ಶೃಂಗಸಭೆಯು ಸಾಗರೋತ್ತರ ಮತ್ತು ನಿವಾಸಿ ಭಾರತೀಯ ಸಂಶೋಧಕರು ಮತ್ತು ಶಿಕ್ಷಣ ತಜ್ಞರ ಜಾಗತಿಕ ವರ್ಚುವಲ್ ಶೃಂಗಸಭೆಯಾಗಿದ್ದು, ಇದನ್ನು 2020 ಅಕ್ಟೋಬರ್ 2 ರಿಂದ ಅಕ್ಟೋಬರ್ 31 ರವರೆಗೆ ಆಯೋಜಿಸಲಾಗುತ್ತಿದೆ. ಜಾಗತಿಕ ಅಭಿವೃದ್ಧಿಗಾಗಿ ಭಾರತದಲ್ಲಿ ಶೈಕ್ಷಣಿಕ ಮತ್ತು ಎಸ್ ಮತ್ತು ಟಿ ನೆಲೆಯನ್ನು ಬಲಪಡಿಸುವ ಸಹಯೋಗದ ಕಾರ್ಯವಿಧಾನಗಳ ಕುರಿತು ಚರ್ಚಿಸಲು ವಿಶ್ವದಾದ್ಯಂತದ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಲ್ಲಿ ಭಾರತೀಯ ಮೂಲದ ಖ್ಯಾತನಾಮರು ಮತ್ತು ನಿವಾಸಿ ಸಹವರ್ತಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಶೃಂಗಸಭೆಯ ಉದ್ದೇಶವಾಗಿದೆ.

ಉದ್ಘಾಟನೆಯ ಬಳಿಕ ಆನ್ ಲೈನ್ ಸಮಾಲೋಚನಾ ಗೋಷ್ಠಿಗಳು ನಡೆಯಲಿವೆ. ಉಪಕ್ರಮವು ಒಂದು ತಿಂಗಳ ಕಾಲ ನಡೆವ ವೆಬಿನಾರ್ಗಳು, ವಿಡಿಯೋ ಸಮ್ಮೇಳನಗಳು ಇತ್ಯಾದಿಗಳು ಸಾಗರೋತ್ತರ ತಜ್ಞರು ಮತ್ತು ಭಾರತೀಯ ಸಹವರ್ತಿಗಳ ನಡುವೆ ಅನೇಕ ಹಂತದ ಸಂವಾದಗಳನ್ನು ಒಳಗೊಂಡಿರುತ್ತದೆ. 55 ದೇಶಗಳ 3000 ಕ್ಕೂ ಹೆಚ್ಚು ಸಾಗರೋತ್ತರ ಭಾರತೀಯ ಮೂಲದ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ಮತ್ತು 10,000 ಕ್ಕೂ ಹೆಚ್ಚು ನಿವಾಸಿ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ನೇತೃತ್ವದಲ್ಲಿ ಸುಮಾರು 200 ಶೈಕ್ಷಣಿಕ ಸಂಸ್ಥೆಗಳು ಮತ್ತು ಎಸ್ ಮತ್ತು ಟಿ ವಿಭಾಗಗಳು ಅಕ್ಟೋಬರ್ ತಿಂಗಳಲ್ಲಿ ನಡೆಯುವ ಶೃಂಗಸಭೆಯನ್ನು ನಡೆಸುತ್ತಿವೆ.

40 ದೇಶಗಳು, 1500 ಕ್ಕೂ ಹೆಚ್ಚು ಪ್ಯಾನಲಿಸ್ಟ್ಗಳು, 200 ಪ್ರಮುಖ ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಂಸ್ಥೆಗಳು 18 ವಿವಿಧ ಕ್ಷೇತ್ರಗಳಲ್ಲಿ ಮತ್ತು 200 ಕ್ಕೂ ಹೆಚ್ಚು ಚರ್ಚಾ ಗೋಷ್ಠಿಗಳಲ್ಲಿ 80 ವಿಷಯಗಳ ಮೇಲೆ ವರ್ಚುಯಲ್ ಮೂಲಕ ಚರ್ಚೆ ನಡೆಸಿಲಿದ್ದಾರೆ. ಸರ್ದಾರ್ ಪಟೇಲ್ ಅವರ ಜಯಂತಿ ಸಂದರ್ಭದಲ್ಲಿ 2020 ಅಕ್ಟೋಬರ್ 31 ರಂದು ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

***


(Release ID: 1660940) Visitor Counter : 201