ಗೃಹ ವ್ಯವಹಾರಗಳ ಸಚಿವಾಲಯ

ಶೈಕ್ಷಣಿಕ ಸಂಸ್ಥಗಳ ಪುನಾರಂಭಕ್ಕೆ ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ


ಶಾಲೆಗಳ ಪುನಾರಂಭಕ್ಕೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ನಿರ್ಧಾರ

ಕಂಟೈನ್ಮೆಂಟ್ ವಲಯಗಳ ಹೊರಗೆ ಹೆಚ್ಚಿನ ಚಟುವಟಿಕೆಗೆ ಅವಕಾಶ

2020ರ ಅಕ್ಟೋಬರ್ 31ರವರೆಗೆ ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ

Posted On: 30 SEP 2020 7:56PM by PIB Bengaluru

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್..) ಕಂಟೈನ್ಮೆಂಟ್ ವಲಯಗಳ ಹೊರಗೆ ಹೆಚ್ಚಿನ ಚಟುವಟಿಕೆ ನಡೆಸಲು ಇಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಗಳು 2020 ಅಕ್ಟೋಬರ್ 1ರಿಂದ ಜಾರಿಗೆ ಬರಲಿದ್ದು, ಪುನಾರಂಭದ ಪ್ರಕ್ರಿಯೆಗಳು ಮತ್ತಷ್ಟು ವಿಸ್ತರಿಸಲಿವೆ. ಹೊರಡಿಸಲಾಗಿರುವ ಹೊಸ ಮಾರ್ಗಸೂಚಿಗಳನ್ನು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಪ್ರತ್ರಿಕ್ರಿಯಾತ್ಮಕ ಮಾಹಿತಿಗಳಿಗೆ ಅನುಗುಣವಾಗಿ, ಕೇಂದ್ರ ಸರ್ಕಾರದ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ವ್ಯಾಪಕ ಚರ್ಚೆಯ ಬಳಿಕ ರೂಪಿಸಲಾಗಿದೆ.

ಹೊಸ ಮಾರ್ಗಸೂಚಿಗಳ ಮುಖ್ಯಾಂಶಗಳು

ಕಂಟೈನ್ಮೆಂಟ್ ವಲಯಗಳ ಹೊರಗೆ 2020 ಅಕ್ಟೋಬರ್ 15ರಿಂದ ಅನುಮತಿಸಲಾಗಿರುವ ಚಟುವಟಿಕೆಗಳು.

  • ಸಿನಿಮಾಗಳು/ ಥಿಯೇಟರ್ ಗಳು/ ಮಲ್ಟಿಫ್ಲೆಕ್ಸ್ ಗಳು ಅವುಗಳ ಆಸನಗಳ ಸಾಮರ್ಥ್ಯದ ಶೇ.50ರೊಂದಿಗೆ ತೆರೆಯಲು ಅನುಮತಿಸಲಾಗಿದೆ, ಇದಕ್ಕಾಗಿ ಎಸ್..ಪಿ.ಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊರಡಿಸಲಿದೆ.
  • ವ್ಯಾಪಾರದಿಂದ ವ್ಯಾಪಾರ (ಬಿ2ಬಿ) ವಸ್ತುಪ್ರದರ್ಶನಗಳನ್ನು ತೆರೆಯಲು ಅನುಮತಿಸಲಾಗಿದ್ದು, ಇದಕ್ಕಾಗಿ ವಾಣಿಜ್ಯ ಇಲಾಖೆ ಎಸ್..ಪಿ. ಹೊರಡಿಸಲಿದೆ.
  • ಕ್ರೀಡಾಪಟುಗಳಿಗೆ ತರಬೇತಿ ನೀಡಲು ಬಳಸಲಾಗುವ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್..ಪಿ.) ಹೊರಡಿಸಲಿದೆ.
  • ಮನರಂಜನಾ ಪಾರ್ಕ್ ಗಳು ಮತ್ತು ಅದೇ ತೆರನಾದ ತಾಣಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದ್ದು, ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ..ಎಚ್.ಎಫ್.ಡಬ್ಲ್ಯು) ಎಸ್..ಪಿ. ಹೊರಡಿಸಲಿದೆ.

ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳ ಆರಂಭ

  • ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಪುನಾರಂಭಿಸುವ ಕುರಿತಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸರ್ಕಾರಗಳಿಗೆ ನಮ್ಯತೆ ನೀಡಲಾಗಿದ್ದು 2020 ಅಕ್ಟೋಬರ್ 15 ನಂತರ ಹಂತ ಹಂತವಾಗಿ ನಿರ್ಧಾರ ಕೈಗೊಳ್ಳಬಹುದಾಗಿದೆ. ಪರಿಸ್ಥಿತಿಯ ಅವಲೋಕನದೊಂದಿಗೆ ಮತ್ತು ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸಂಬಂಧಿತ ಶಾಲೆಗಳು/ಸಂಸ್ಥೆಗಳ ಆಡಳಿತದೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬಹುದಾಗಿದೆ.
  • ಆನ್ ಲೈನ್/ದೂರ ಶಿಕ್ಷಣ ಆದ್ಯತೆಯ ಬೋಧನಾ ವಿಧಾನವಾಗಿ ಮುಂದುವರಿಯುತ್ತದೆ ಮತ್ತು ಪ್ರೋತ್ಸಾಹಿಸಲಾಗುವುದು.
  • ಎಲ್ಲಿ ಶಾಲೆಗಳು ಆನ್ ಲೈನ್ ತರಗತಿ ನಡೆಸುತ್ತಿವೆಯೋ ಮತ್ತು ಕೆಲವು ವಿದ್ಯಾರ್ಥಿಗಳು ಬೌದ್ಧಿಕವಾಗಿ ಶಾಲೆಗೆ ಬರುವ ಬದಲು ಆನ್ ಲೈನ್ ತರಗತಿಗೆ ಹಾಜರಾಗಲು ಇಚ್ಛಿಸಿದಲ್ಲಿ, ಅವರಿಗೆ ಹಾಗೆ ಮಾಡಲು ಅವಕಾಶ ನೀಡಬಹುದು.
  • ವಿದ್ಯಾರ್ಥಿಗಳು ಶಾಲೆಗಳು/ಶಿಕ್ಷಣ ಸಂಸ್ಥೆಗಳಿಗೆ ಪೋಷಕರ ಲಿಖಿತ ಅನುಮತಿಯೊಂದಿಗೆ ಮಾತ್ರವೇ ಹಾಜರಾಗಬೇಕು.
  • ಹಾಜರಾತಿಗಾಗಿ ಒತ್ತಾಯಿಸಬಾರದು ಮತ್ತು ಸಂಪೂರ್ಣವಾಗಿ ಪೋಷಕರ ಅನುಮೋದನೆಗೆ ಅವಲಂಬಿತವಾಗಿರಬೇಕು.
  • ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳು ಶಾಲೆಗಳು /ಶಿಕ್ಷಣ ಸಂಸ್ಥೆಗಳನ್ನು ಪುನಾರಂಭಿಸಲು ಆರೋಗ್ಯ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಡಿಓಎಸ್..ಎಲ್.) ಹೊರಡಿಸಿರುವ ಎಸ್..ಪಿ. ಆಧಾರದ ಮೇಲೆ ತಮ್ಮದೇ ಸ್ವಂತ ಎಸ್..ಪಿ. ರೂಪಿಸಿಕೊಳ್ಳಬಹುದು.
  • ತೆರೆಯಲು ಅನುಮತಿಸಲಾಗಿರುವ ಶಾಲೆಗಳು ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆ ಹೊರಡಿಸಿರುವ ಎಸ್..ಪಿ.ಯನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ (ಡಿಎಚ್.), ಪರಿಸ್ಥಿತಿಯನ್ನು ಅವಲೋಕನದ ಆಧಾರದ ಮೇಲೆ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್..)ದೊಂದಿಗೆ ಸಮಾಲೋಚಿಸಿ ಕಾಲೇಜುಗಳು /ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಸಮಯದ ಕುರಿತಂತೆ ನಿರ್ಧಾರ ಕೈಗೊಳ್ಳಬಹುದು. ಆನ್ ಲೈನ್ /ದೂರ ಶಿಕ್ಷಣ ಮುಂದುವರಿಕೆಗೆ ಆದ್ಯತೆ ನೀಡಿ, ವಿಧಾನದ ಶಿಕ್ಷಣವನ್ನು ಉತ್ತೇಜಿಸಬಹುದು.
  • ಆದಾಗ್ಯೂ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಯೋಗಾಲಯಗಳು/ಪ್ರಾಯೋಗಿಕ ಕಾರ್ಯದ ಅಗತ್ಯದ ಹಿನ್ನೆಲೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು (ಪಿಎಚ್.ಡಿ) ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮಾತ್ರವೇ 2020 ಅಕ್ಟೋಬರ್ 15ರಿಂದ ಉನ್ನತ ಶಿಕ್ಷಣ ಸಂಸ್ಥೆಗಳು ತೆರೆಯಲು ಕೆಳಗೆ ತಿಳಿಸಿರುವ ರೀತ್ಯ ಅನುಮತಿಸಬಹುದು:
  • i. ಆರ್ಥಿಕ ನೆರವಿನ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಆಕೆಗೆ/ಆತನಿಗೆ ಸಂಶೋಧನಾ ವಿದ್ಯಾರ್ಥಿಗಳು (ಪಿಎಚ್.ಡಿ.) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಿಜಕ್ಕೂ ಪ್ರಯೋಗಾಲಯ/ಪ್ರಾಯೋಗಿಕ ಕಾರ್ಯ ಅಗತ್ಯ ಇದೆ ಎಂಬುದು ಸ್ವಯಂ ಮನವರಿಕೆಯಾದರೆ.
  • ii. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಉದಾ. ರಾಜ್ಯಗಳ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು ಇತ್ಯಾದಿಗಳು ತಮ್ಮ ಸಂಶೋಧನಾ ವಿದ್ಯಾರ್ಥಿಗಳು (ಪಿಎಚ್‌ಡಿ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ / ಪ್ರಾಯೋಗಿಕ ಕಾರ್ಯಗಳ ಅಗತ್ಯವಿದ್ದರೆ ಮಾತ್ರವೇ ಆಯಾ ರಾಜ್ಯ / ಕೇಂ.ಪ್ರ. ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರದ ಪ್ರಕಾರ ಸಂಸ್ಥೆ ತೆರೆಯಬಹುದು.

ಕೂಟಗಳಿಗೆ ನಿಯಂತ್ರಣ

  • ಸಾಮಾಜಿಕ / ಶೈಕ್ಷಣಿಕ / ಕ್ರೀಡೆ / ಮನರಂಜನೆ / ಸಾಂಸ್ಕೃತಿಕ / ಧಾರ್ಮಿಕ / ರಾಜಕೀಯ ಕಾರ್ಯಕ್ರಮಗಳು ಮತ್ತು ಇತರ ಸಭೆಗಳಿಗೆ ಈಗಾಗಲೇ ಕಂಟೈನ್ಮೆಂಟ್ ವಲಯಗಳ ಹೊರಗೆ ಮಾತ್ರ 100 ಜನರ ಮಿತಿಯೊಂದಿಗೆ ಅನುಮತಿ ನೀಡಲಾಗಿದೆ. ಈಗ ರಾಜ್ಯ/ಕೇಂ.ಪ್ರ ಸರ್ಕಾರಗಳಿಗೆ ಕಂಟೈನ್ಮೆಂಟ್ ವಲಯದ ಹೊರಗೆ 2020 ಅಕ್ಟೋಬರ್ 15 ತರುವಾಯ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಇಂಥ ಕೂಟಗಳಿಗೆ 100 ಜನರಿಗಿಂತ ಹೆಚ್ಚಿನ ಸಂಖ್ಯೆಗೆ ಅನುಮತಿಸುವ ಅಧಿಕಾರ ನೀಡಲಾಗಿದೆ:
  • ಕಟ್ಟಡದೊಳಗಿನ ಪ್ರದೇಶಗಳಲ್ಲಿ ಗರಿಷ್ಠ 200 ಮಿತಿಯೊಂದಿಗೆ ಹಜಾರದ ಸಾಮರ್ಥ್ಯದ ಶೇ.50ರಷ್ಟು ಅನುಮತಿಸಬಹುದು. ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು , ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈ ತೊಳೆಯಲು ಸೌಲಭ್ಯ ಅಥವಾ ಸ್ಯಾನಿಟೈಸರ್ ಒದಗಿಸುವುದು ಕಡ್ಡಾಯ.
  • ಬಯಲು ಪ್ರದೇಶಗಳಲ್ಲಿನ ಕಾರ್ಯಕ್ರಮಗಳಲ್ಲಿ, ಮೈದಾನ/ಪ್ರದೇಶದ ಅಳತೆಯನ್ನು ಗಮನದಲ್ಲಿಟ್ಟುಕೊಂಡು, ವ್ಯಕ್ತಿಗತ ಅಂತರದ ಕಟ್ಟುನಿಟ್ಟಿನ ಪಾಲನೆಯೊಂದಿಗೆ, ಕಡ್ಡಾಯವಾಗಿ ಮಾಸ್ಕ್ ಧಾರಣೆ, ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈತೊಳೆಯಲು ಇಲ್ಲವೇ ಸ್ಯಾನಿಟೈಸರ್ ನೊಂದಿಗೆ ಅನುಮತಿ.

ಅಂತಹ ಕೂಟಗಳು ಕೋವಿಡ್-19 ಹರಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯ/ ಕೇಂ.ಪ್ರ ಸರ್ಕಾರಗಳು ಅಂತಹ ಸಭೆಯನ್ನು ನಿಯಂತ್ರಿಸಲು ವಿವರವಾದ ಎಸ್‌.ಒಪಿಗಳನ್ನು ಹೊರಡಿಸುತ್ತವೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಕೆಳಗಿನವುಗಳನ್ನು ಹೊರತುಪಡಿಸಿ, ಎಲ್ಲ ಚಟುವಟಿಕೆಗಳಿಗೆ ಕಂಟೈನ್ಮೆಂಟ್ ವಲಯದ ಹೊರಗೆ ಅನುಮತಿಸಬಹುದು:

  1. ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿಸಿದ್ದನ್ನು ಹೊರತು ಪಡಿಸಿ, ಅಂತಾರಾಷ್ಟ್ರೀಯ ವಿಮಾನ ಯಾನ.
    • ಕಂಟೈನ್ಮೆಂಟ್ ವಲಯಗಳಲ್ಲಿ 2020 ಅಕ್ಟೋಬರ್ 31ರವರೆಗೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿ ಮಾಡಬೇಕು.
    • ಸೋಂಕು ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ತುಂಡರಿಸುವ ಉದ್ದೇಶದಿಂದ ಎಂ..ಎಚ್.ಎಫ್.ಡಬ್ಲ್ಯು. ಮಾರ್ಗಸೂಚಿಗಳನ್ನು ಪರಿಗಣಿಸಿ ಕಂಟೈನ್ಮೆಂಟ್ ವಲಯಗಳನ್ನು ಜಿಲ್ಲಾ ಅಧಿಕಾರಿಗಳು ಸೂಕ್ಷ್ಮ ಮಟ್ಟದಲ್ಲಿ ಗುರುತಿಸುತ್ತಾರೆ. ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಾದ ಕಂಟೈನ್ಮೆಂಟ್ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಮತ್ತು ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ.
    • ಕಂಟೈನ್ಮೆಂಟ್ ವಲಯಗಳನ್ನು ಆಯಾ ಜಿಲ್ಲಾಧಿಕಾರಿಗಳು ಮತ್ತು ರಾಜ್ಯಗಳು/ಕೇಂ. ಪ್ರ. ಅಂತರ್ಜಾಲ ತಾಣಗಳಲ್ಲಿ ಅಧಿಸೂಚಿಸಿ, ಅದನ್ನು ಎಂ..ಎಚ್.ಎಫ್.ಡಬ್ಲ್ಯು.ನೊಂದಿಗೆ ಹಂಚಿಕೊಳ್ಳಬೇಕು.

ಕಂಟೈನ್ಮೆಂಟ್ ವಲಯದ ಹೊರಗೆ ರಾಜ್ಯಗಳು ಯಾವುದೇ ಸ್ಥಳೀಯ ಲಾಕ್ ಡೌನ್ ವಿಧಿಸುವಂತಿಲ್ಲ

  • ರಾಜ್ಯ/ಕೇಂ.ಪ್ರ. ಸರ್ಕಾರಗಳು, ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ಇಲ್ಲದೆ ಕಂಟೈನ್ಮೆಂಟ್ ವಲಯಗಳ ಹೊರಗೆ, ಯಾವುದೇ ಸ್ಥಳೀಯ ಲಾಕ್ ಡೌನ್ ಅನ್ನು (ರಾಜ್ಯ/ಜಿಲ್ಲೆ/ಉಪ ವಿಭಾಗ/ನಗರ/ಗ್ರಾಮ ಮಟ್ಟದಲ್ಲಿ) ವಿಧಿಸುವಂತಿಲ್ಲ.

ರಾಜ್ಯದೊಳಗೆ ಮತ್ತು ಅಂತಾರಾಜ್ಯ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ

  • ಜನ ಮತ್ತು ಸರಕುಗಳ ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಹ ಸಂಚಾರಕ್ಕೆ ಪ್ರತ್ಯೇಕ ಅನುಮತಿ / ಅನುಮೋದನೆ / -ಪರ್ಮಿಟ್ ಅಗತ್ಯವಿರುವುದಿಲ್ಲ.

ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು

  • ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವುದರ ಖಾತ್ರಿಗಾಗಿ ಕೋವಿಡ್ -19 ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳನ್ನು ದೇಶದಾದ್ಯಂತ ಪಾಲಿಸಬೇಕು. ಅಂಗಡಿಗಳು ಗ್ರಾಹಕರ ನಡುವೆ ಸೂಕ್ತ ವ್ಯಕ್ತಿಗತ ಅಂತರ ನಿರ್ವಹಣೆ ಮಾಡಬೇಕು. ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ನಿರ್ದೇಶನಗಳ ಸಮರ್ಥ ಅನುಷ್ಠಾನದ ನಿಗಾ ವಹಿಸಲಿದೆ.

ಸೂಕ್ಷ್ಮ ವ್ಯಕ್ತಿಗಳ ಸುರಕ್ಷತೆ

  • ಸೂಕ್ಷ್ಮ ವ್ಯಕ್ತಿಗಳು ಅಂದರೆ, 65 ವರ್ಷ ಮೇಲ್ಪಟ್ಟವರು, ಅನ್ಯ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ತೀರಾ ಅನಿವಾರ್ಯತೆ ಇಲ್ಲದಿದ್ದಲ್ಲಿ ಮತ್ತು ಆರೋಗ್ಯದ ಉದ್ದೇಶ ಹೊರತಾಗಿ ಮನೆಯಲ್ಲಿಯೇ ಇರುವಂತೆ ಸಲಹೆ ಮಾಡಲಾಗಿದೆ

ಆರೋಗ್ಯ ಸೇತು ಬಳಸಿ

  • ಆರೋಗ್ಯ ಸೇತು ಮೊಬೈಲ್ ಆನ್ವಯಿಕದ ಬಳಕೆಯ ಮುಂದುವರಿಕೆಗೆ ಪ್ರೋತ್ಸಾಹಿಸಲಾಗುವುದು.

***


(Release ID: 1660642) Visitor Counter : 361